ಸುದ್ದಿ ವಿಶ್ಲೇಷಣೆ

ಆರ್ಟಿಕಲ್ 370 ಪ್ರಮಾದವಲ್ಲ, ಅದು ನೆಹರೂ ಸರ್ಕಾರದ ಮುತ್ಸದ್ದಿತನ…

1947ರಲ್ಲಿ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಸುಮಾರು 562 ರಾಜಾಡಳಿತ ಪ್ರದೇಶಗಳನ್ನು ಆಯಾಯ ರಾಜರುಗಳ ಮನ‌ವೊಲಿಸಿ ಅಥವಾ ಒತ್ತಡ ಹೇರಿ ಈಗಿನ ಭಾರತ ದೇಶವನ್ನು ರೂಪಿಸಿದ ಕೀರ್ತಿ ಬಹುಮುಖ್ಯವಾಗಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರಿಂದ ಹಿಡಿದು ಅಂದಿನ ಪ್ರದಾನಿ ಚಾಚಾ ನೆಹರೂ, ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್‌ ಮುಂತಾದ ಕಾಂಗ್ರೆಸ್ ನಾಯಕರಿಗೆ ಸಲ್ಲುತ್ತದೆ..

ಪ್ರಮುಖ ಇತಿಹಾಸಕಾರರ ಪ್ರಕಾರ ಶೇಖ್ ಅಬ್ದುಲ್ಲಾರ ಆ ಪ್ರಯತ್ನವೇ ಇಂದು ಕಾಶ್ಮೀರದ ಭೂಭಾಗ ಭಾರತದ ಜೊತೆ ಉಳಿದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂಬುವುದು ಮತ್ತು ಹಾಗೆ ಭಾರತದ ಜೊತೆ ಉಳಿದುಕೊಳ್ಳುವ ಕಠಿಣ ನಿಲುವು ತಳೆಯಲು ಕಾರಣವಾದ್ದು ನೆಹರೂ ಜೊತೆಗಿನ ಶೇಖ್ ‌ರ ಆತ್ಮೀಯ ಗೆಳೆತನ ಹಾಗೂ ಆ ಗೆಳೆತನವನ್ನು ಬಳಸಿಕೊಂಡು ಕಾಶ್ಮೀರವನ್ನು ಈ ದೇಶದ ಜೊತೆ ಉಳಿಸಿಕೊಂಡ ನೆಹರೂರವರ ಆ ಕ್ರಮ ಮುತ್ಸದ್ಧಿತನವನ್ನು ಎತ್ತಿ ತೋರಿಸುತ್ತದೆ ಎಂಬುವುದಾಗಿದೆ. ಇಷ್ಟಾಗಿಯೂ ನೆಹರೂಜಿಯ ಈ ಎಲ್ಲಾ ಪ್ರಯತ್ನಗಳು ದೇಶವನ್ನು ಕಟ್ಟುವ ನಿಟ್ಟಿನಲ್ಲಾಗಿತ್ತೆ ಹೊರತೂ ಅದು ಅವರ ಯಾವುದೇ ಸ್ವಾರ್ಥ ಸಾಧನೆಗಾಗಿ ಆಗಿರಲಿಲ್ಲ.

ಆ ಕಾಲಕ್ಕೆ ಬ್ರಿಟಿಷರ ಜೊತೆ ಸೇರಿ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಮಾಹಿತಿದಾರರಾಗಿ ಕೆಲಸಮಾಡಿ ಸ್ವಾತಂತ್ರ್ಯ ಹೋರಾಟಗಾರರ ಗಲ್ಲುಶಿಕ್ಷೆಗೆ ಕಾರಣರಾಗಿದ್ದ ಬಲಪಂಥೀಯರು ಕಾಶ್ಮೀರವನ್ನು ಭಾರತದ ಜೊತೆ ಉಳಿಸಿಕೊಳ್ಳುವ ವಿಚಾರದಲ್ಲಿ ಅಥವಾ ಇನ್ನಿತರ ರಾಜಸಂಸ್ಥಾನಗಳು ಭಾರತದ ಜೊತೆ ಸೇರಿಕೊಳ್ಳುವಲ್ಲಿ ಹೋರಾಟ ನೀಡಿದ ಉದಾಹರಣೆಗಳು ಇಲ್ಲವೇ ಇಲ್ಲ. ಇಷ್ಟಾಗಿಯೂ ಆ ಬಲಪಂಥೀಯರ ವಂಶಜರಾದ ಬಿಜೆಪಿಗರು ಮತ್ತವರ ಎಂಜಲು ಕಾಸು ತಿಂದು ಋಣ ತೀರಿಸಿಕೊಳ್ಳುತ್ತಿರುವ ಕೆಲವು ದ್ರಶ್ಯ ಹಾಗೂ ಮುದ್ರಣ ಮಾಧ್ಯಮಗಳಿಂದು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಜೀವನದ ಬಹುಮುಖ್ಯವಾದ 9ವರ್ಷಗಳಷ್ಟು ಕಾಲ ಜೈಲು ಶಿಕ್ಷೆ ಅನುಭವಿಸಿ ಸ್ವಾತಂತ್ರ್ಯ ನಂತರ ರಾಜ ಸಂಸ್ಥಾನಗಳನ್ನು ಒಟ್ಟು ಸೇರಿಸಿ ದೇಶಕಟ್ಟಿದ ಚಾಚಾ ನೆಹರೂರಂತಹ ನಾಯಕರುಗಳ ಕುರಿತಾಗಿ ಅಪಪ್ರಚಾರದಲ್ಲಿ ತೊಡಗಿರುವುದು, ಆ ಕಾಲಕ್ಕೆ ಕಾಶ್ಮೀರವನ್ನು ಭಾರತದ ಜೊತೆ ಉಳಿಸಿಕೊಳ್ಳುವ ಏಕೈಕ ಉದ್ದೇಶದಿಂದ ಅನಿವಾರ್ಯವಾಗಿ ಸಂವಿಧಾನದ ಮೂಲಕ ನೀಡಲಾಗಿದ್ದ 370ನೆ ವಿಧಿಯ ಕುರಿತಾಗಿ ಅದೊಂದು ಐತಿಹಾಸಿಕ ಪ್ರಮಾದ, ಅದು ಮುಸ್ಲಿಮರ ಓಲೈಕೆಗಾಗಿ ನೆಹರೂರವರು ಶೇಖ್ ಅಬ್ದುಲ್ಲಾರ ಜೊತೆ ಸೇರಿ ದೇಶದ ಹಿತಾಸಕ್ತಿಗೆ ವಿರುದವಾಗಿ ತಗೆದುಕೊಂಡ ತೀರ್ಮಾನ ಎಂದು ಅಪಪ್ರಚಾರದಲ್ಲಿ ತೊಡಗಿರುವುದು ಅದು ಅವರುಗಳ ನೀಚತನವನ್ನು ಮತ್ತು ಅವಕಾಶವಾದಿತನವನ್ನು ಪ್ರದರ್ಶಿಸುತ್ತದೆ. ಅವರುಗಳು ಮೊದಲಿಗೆ ಇತಿಹಾಸವನ್ನು ಓದಿಕೊಂಡು ಆ ನಂತರ ಪ್ರತಿಕ್ರಿಯಿಸಲಿ.

ಚಂದ್ರಶೇಖರ್ ಶೆಟ್ಟಿ


0Shares