ಸುದ್ದಿ ವಿಶ್ಲೇಷಣೆ

ನರೇಂದ್ರ ಮೋದಿಯವರ ಸರ್ಕಾರವನ್ನು ಸದಾ ಟೀಕಿಸುವವರೆ ಇತ್ತ ಕೇಳಿ…!

ನರೇಂದ್ರ ಮೋದಿಯವರ ಸರ್ಕಾರವನ್ನು ಸದಾ ಟೀಕಿಸುವವರೆ ಇತ್ತ ಕೇಳಿ! ಇದೀಗ ಅದೇ ಸರ್ಕಾರ ಮತ್ತೊಂದು ಮಹತ್ಸಾಧನೆ ಮಾಡಿದೆ. ಇದು ಕೇಂದ್ರದ ಮೋದಿ ಸರ್ಕಾರದ ಸಚಿವ ಅನುರಾಗ್ ಸಿಂಗ್ ಲೋಕಸಬೆಗೆ ನೀಡಿರುವ ಮಾಹಿತಿ:

ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಕಳೆದ ಆರ್ಥಿಕ ವರ್ಷವೊಂದರಲ್ಲೆ (2017-18) ತಮ್ಮ ಉಳಿತಾಯ ಖಾತೆಯಲ್ಲಿ ಕನಿಷ್ಟ ಬ್ಯಾಲೆನ್ಸ್ ಇಟ್ಟುಕೊಳ್ಳಲಾಗದ ಬಡ ಖಾತೆದಾರರಿಂದ ಮೋದಿ ಸರ್ಕಾರ ದಂಡದ ರೂಪದಲ್ಲಿ ವಸೂಲು ಮಾಡಿದ ಹಣ ಬರೋಬ್ಬರಿ 3,368.42ಕೋಟಿ ರೂಪಾಯಿ. ಹಾಗೆಯೇ ಈ ಆರ್ಥಿಕ ವರ್ಷ (2018-19)ರಲ್ಲಿ ವಸೂಲಿ ಮಾಡಿದ ಹಣ 1996.46 ಕೋಟಿ ರೂಪಾಯಿಗಳು.

ಒಂದೊತ್ತಿನ ಊಟಕ್ಕೆ ಪರದಾಡುವ ಕಡುಬಡವರಿಂದ ಇಷ್ಟೊಂದು ದೊಡ್ಡ ಮೊತ್ತದ ದಂಡ ವಸೂಲಿ ಮಾಡಿದ ಸ್ವತಂತ್ರ ಭಾರತದ ಮೊತ್ತ ಮೊದಲ ಸರ್ಕಾರಕ್ಕೆ ಜೈ ಎನ್ನಿ!

0Shares