ರಾಜ್ಯ

ಕೆಪಿಸಿಸಿ ವಕ್ತಾರರಾಗಿ ಐವನ್ ಡಿಸೋಜ ನೇಮಕ.

ವಿಧಾನ ಪರಿಷತ್‌ನ ಮಾಜಿ ಮುಖ್ಯ ಸಚೇತಕ ಐವನ್ ಡಿಸೋಜರವರನ್ನು ಕೆಪಿಸಿಸಿಯ ವಕ್ತಾರರಾಗಿ ನೇಮಕ ಮಾಡಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ ಶಿವಕುಮಾರ್ ರವರು ಆದೇಶ ಹೊರಡಿಸಿ, ಉಭಯ ಸದನಗಳ ಪಕ್ಷದ ಶಾಸಕರುಗಳಿಗೆ ಅಧಿವೇಶನದಲ್ಲಿ ಎತ್ತಬೇಕಾದ ಪ್ರಶ್ನೆಗಳ ಕುರಿತು ಮಾಹಿತಿಗಳನ್ನು ಒದಗಿಸುವ ಜವಾಬ್ದಾರಿಯನ್ನು ವಹಿಸಿ ಆದೇಶ ಹೊರಡಿಸಿದ್ದಾರೆ.ವಿಧಾನ ಪರಿಷತ್ ಮಾಜಿ ಸದಸ್ಯರಾಗಿ ಓರ್ವ ಉತ್ತಮ ಸಂಸದೀಯ ಪಟುವಾಗಿ ಹೆಸರು ಗಳಿಸಿರುವ ಐವನ್‌ರವರು ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ (ಕಂದಾಯ ಇಲಾಖೆ)ಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಓರ್ವ ಖ್ಯಾತ ನ್ಯಾಯವಾದಿಯಾಗಿರುವ ಇವರು ಈ ಹಿಂದೆ ಕಾಪು ಮತ್ತು ಮಂಗಳೂರು ದಕ್ಷಿಣ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಸೋಲನ್ನು ಕಂಡಿದ್ದರು. ಆ ನಂತರ ವಿಧಾನಪರಿಷತ್ ಸದಸ್ಯರಾಗಿ ಅಯ್ಕೆಗೊಂಡಿದ್ದರು. ಇತ್ತೀಚೆಗಷ್ಟೇ ವಿಧಾನಪರಿಷತ್ ನ ಅವಧಿ ಮುಗಿದಿತ್ತು.

ಶ್ರೀಯುತರು ಲಾಕ್‌ಡೌನ್ ಅವಧಿಯಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯಾಧ್ಯಂತ ಸಾವಿರಾರು ಕಡು ಬಡವರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿ ವಿರೋಧಿಗಳಿಂದಲೂ ಸೈ ಎನ್ನಿಸಿಕೊಂಡಿದ್ದರು.

ಈ ಹಿಂದೆ ಮೂರು ಬಾರಿ ಕೆಪಿಸಿಸಿ ವಕ್ತಾರರಾಗಿ ಸೇವೆ ಸಲ್ಲಿಸಿರುವ ಇವರನ್ನು ಇದೀಗ ನಾಲ್ಕನೆಯ ಬಾರಿಗೆ ಆಯ್ಕೆಗೊಳಿಸಿರುವುದು ಕಾಂಗ್ರೆಸ್ ವಲಯದಲ್ಲಿ ಸಂತಸದ ವಾತಾವರಣವನ್ನು ಹುಟ್ಟುಹಾಕಿದೆ.

ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಓದಿರಿ: www.kannadamedia.com News

ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ಹಾಗೂ E-mail ID: kannadamedia1947@gmail.com ಗೆ ಸಂಪರ್ಕಿಸಿ.

0Shares