ರಾಜ್ಯ

ಪ್ರಿಯಾಂಕ್ ಖರ್ಗೆಯವರಿಗೆ ಕೊರೊನಾ ಪಾಸಿಟಿವ್!

ಇಂದು ನಡೆಸಿದ ಕೊರೊನಾ ಪರೀಕ್ಷಾ ವರದಿಯ ಪ್ರಕಾರ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಕೋವಿಡ್ ಪಾಸಿಟಿವ್ ಎಂಬುವುದು ದೃಢಪಟ್ಟಿದೆ.‘ಕಳೆದ ಕೆಲ ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಐಸೊಲೇಷನ್ ಗೆ ಒಳಪಟ್ಟು, ಕೊರೋನಾ ಪರೀಕ್ಷೆಗೆ ಒಳಪಡಬೇಕೆಂದು ವಿನಂತಿಸಿಕೊಳ್ಳುತ್ತೇನೆ’ ಎಂದವರು ಸಾರ್ವಜನಿಕರಲ್ಲಿ, ಪಕ್ಷ ಕಾರ್ಯಕರ್ತರಲ್ಲಿ ವಿನಂತಿಸಿದ್ದಾರೆ.

‘ಕೆಲ ದಿನಗಳವರೆಗೆ ನನ್ನನ್ನು ಯಾರೂ ಭೇಟಿಯಾಗುವ ಪ್ರಯತ್ನ ಮಾಡುವುದು ಬೇಡ ಎಂದು ಕೇಳಿಕೊಳ್ಳುತ್ತೇನೆ. ನಾನು ಸಂಪೂರ್ಣವಾಗಿ ಗುಣಮುಖನಾದ ನಂತರ ಪ್ರತಿಯೊಬ್ಬರನ್ನೂ ಭೇಟಿಯಾಗುತ್ತೇನೆ’ ಎಂದಿದ್ದಾರೆ.

‘ನಿಮ್ಮೆಲ್ಲರ ಹಾರೈಕೆಗಳೊಂದಿಗೆ ಆದಷ್ಟು ಶೀಘ್ರವೇ ಗುಣಮುಖನಾಗಿ, ಮತ್ತೆ ನನ್ನ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವ ವಿಶ್ವಾಸವಿದ್ದು, ಯಾರೂ ಆತಂಕ ಪಡುವ ಆಗತ್ಯವಿಲ್ಲ ಎಂದವರು ಈ ಕುರಿತು ಸ್ಪಷ್ಟೀಕರಿಸಿದ್ದಾರೆ.

0Shares