Advertisement

ಅಕ್ಟೋಬರ್ 10 ರಿಂದ 30: ರೈತ ವಿರೋಧಿ ಮಸೂದೆ ಹಿಂಪಡೆಯುವಂತೆ ಸಹಿ ಸಂಗ್ರಹ ಅಭಿಯಾನ; ಡಿಕೆಶಿ ಘೋಷಣೆ.

Advertisement

ಕೇಂದ್ರ, ರಾಜ್ಯ‌ ಬಿಜೆಪಿ ಸರ್ಕಾರಗಳು ಜಾರಿಗೊಳಿಸಿರುವ ರೈತ ವಿರೋಧಿ ಕೃಷಿ ಮಸೂದೆಗಳ ವಿರುದ್ಧ ಅಕ್ಟೋಬರ್ 2 ರಂದು ರಾಷ್ಟ್ರಾದ್ಯಂತ ನಡೆಯುವ ಹೋರಾಟದ ಭಾಗವಾಗಿ ರಾಜ್ಯದಲ್ಲಿಯೂ ಪ್ರತಿಭಟನೆಗಳು ನಡೆಯಲಿವೆ.ಅದರ ಅಂಗವಾಗಿ ರಾಜ್ಯದ ಎಲ್ಲಾ ಜಿಲ್ಲೆ, ಬ್ಲಾಕ್ ಹಾಗೂ ಬೂತ್ ಮಟ್ಟದಲ್ಲಿ ಪ್ರತಿಭಟನೆಗಳು ನಡೆಯಲಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಈ ಹೋರಾಟದ ಮುಂದುವರಿದ ಭಾಗವಾಗಿ ಅಕ್ಟೋಬರ್ 10 ರಿಂದ 30 ರವರೆಗೆ 'ರೈತರ ಸಹಿ‌ ಸಂಗ್ರಹ' ಚಳವಳಿ ನಡೆಸಲು ತೀರ್ಮಾನಿಸಲಾಗಿದೆ. ನಾವು ಜಾತಿ, ಧರ್ಮ, ವರ್ಗ, ಪಕ್ಷಾತೀತವಾಗಿ ರಾಜ್ಯದ ಪ್ರತಿ‌ ರೈತರಿಂದ ಸಹಿ‌ ಸಂಗ್ರಹಿಸಲಿದ್ದೇವೆ. ಪ್ರತಿ ಬೂತ್ ನಿಂದ ಪಕ್ಷದ ಕಾರ್ಯಕರ್ತರು‌ ಸಹಿ ಸಂಗ್ರಹಿಸುವ ಕೆಲಸವನ್ನು ಮಾಡಲಿದ್ದಾರೆ. ಅತಿ ಹೆಚ್ಚು ಸಹಿಗಳನ್ನು ಕರ್ನಾಟಕದಿಂದ ಸಂಗ್ರಹಿಸಿಲು ತೀರ್ಮಾನಿಸಲಾಗಿದೆ ಎಂದವರು ಘೋಷಿಸಿದ್ದಾರೆ. ನಿಮಗೆ ಈ ಬರಹ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ಹಾಗೂ E-mail ID: kannadamedia1947@gmail.com ಗೆ ಸಂಪರ್ಕಿಸಿ. ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement