Advertisement

60ವರ್ಷಗಳ ತನ್ನ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಈ ದೇಶಕ್ಕೇನು ಕೊಟ್ಟಿದೆ?

Advertisement

ಬರಹ; ಡಾ. ಜೆ ಎಸ್ ಪಾಟೀಲ. (ಲೇಖಕರು ಜನಪರ ಚಿಂತಕರು ಹಾಗೂ ಸಮಾಜವಾದಿ ) ಈ ಹಿಂದೆ ದೇಶದ ಆಡಳಿತ ಚುಕ್ಕಾಣಿ ಹಿಡಿದವರು ಯಾವ ಅಭಿವೃದ್ಧಿಯನ್ನೂ ಮಾಡಿಲ್ಲ ಎಂಬ ಒಂದು ವ್ಯವಸ್ಥಿತ ಸುಳ್ಳನ್ನು ಸನಾತನಿ ಆರ್ಯ ಮೂಢಮತಿಗಳು ಹೇಳುತ್ತ ಬರುತ್ತಿದ್ದಾರೆ. ಈ ಅಭಿಮಾನಶೂನ್ಯರು ಹಾಗು ದೇಶದ್ರೋಹಿಗಳು ಐತಿಹಾಸಿಕ ಕಾಲದಿಂದಲೂ ದೇಶ ವಿರೋಧಿ ಕಾರ್ಯಗಳನ್ನೇ ಮಾಡಿಕೊಂಡು ಬಂದವರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆರ್ಯ ಸನಾತನಿಗಳ ಈ ಕಪೋಲಕಲ್ಪಿತ ಸುಳ್ಳು ಪ್ರಲಾಪವು ಒಂದು ದೋಷಪೂರಿತ ಹಾಗು ದ್ವೇಷದಿಂದ ಕೂಡಿದ ಕಥೆ ಎನ್ನುವುದು ನಾವು ಜನತೆಗೆ ತಿಳಿಸಬೇಕಿದೆ. ದೇಶವು ಸ್ವಾತಂತ್ರಾ ನಂತರ ತನ್ನ ಕೆಲಸ ಕಾರ್ಯಗಳನ್ನು ಶೂನ್ಯದಿಂದ ಆರಂಭಿಸಿತು. ಅಂದಿನ ಕಾಲದ ದೂರದ್ರಷ್ಟಿಯುಳ್ಳ ನಾಯಕರು ಸನಾತನಿ ಆರ್ಯರು ಹಾಳು ಮಾಡಿಟ್ಟಿದ್ದ ರಾಷ್ಟ್ರವನ್ನು ಜಗತ್ತಿನ ಒಂದು ಅಧುನಿಕˌ ಶಕ್ತಿಶಾಲಿ ರಾಷ್ಟ್ರವನ್ನಾಗಿ ರೂಪಿಸಿದರು. ಹಿಂದಿನ ಆಡಳಿತಗಾರರು ದೇಶವನ್ನು ಅಭಿವ್ರದ್ದಿಯೇ ಮಾಡಲಿಲ್ಲ ಎಂದು ಹಲಬುವ ಈ ಸನಾತನಿ ಆರ್ಯರು ಮೋಘಲರಿಂದ ಬ್ರಿಟೀಷ ಆಳರಸ ಕಾಲದ ವರೆಗೂ ಅವರ ದಿವಾನಗಿರಿˌ ಗುಲಾಮಗಿರಿ ಮಾಡಿಕೊಂಡು ತಮ್ಮ ಸ್ವಹಿತಾಸಕ್ತಿಯನ್ನು ಕಾಯ್ದುಕೊಳ್ಳುತ್ತ ದೇಶವನ್ನು ಇನ್ನಿಲ್ಲದಂತೆ ಹಾಳು ಮಾಡಿ ಬಿಟ್ಟಿದ್ದರು. ಸ್ವಾತಂತ್ರ್ಯಾ ನಂತರ ಆರ್ಯ ಸನಾತನಿಗಳನ್ನು ಭಾಗಶಃ ಆಡಳಿತದ ನೀತಿ ನಿರೂಪಣಾ ಕಾರ್ಯಗಳಿಂದ ದೂರವಿಟ್ಟ ಅಂದಿನ ನಾಯರು ದೇಶದ ಅಭಿವೃದ್ಧಿ ಕೆಲಸವನ್ನು ಆರಂಭಿಸಿದರು. ಅಂದಿನ ನಾಯಕರು ಮಾಡಿದ ಅಸಂಖ್ಯಾತ ಅಭಿವೃದ್ಧಿ ಕಾರ್ಯಗಳ ಒಂದು ಸಣ್ಣ ಸೂಚಿಯನ್ನು ನಾನೀಗ ನಿಮ್ಮೆಲ್ಲರ ಮುಂದಿಡುತ್ತಿದ್ದೇನೆ. 1. ಒಂದು ಸಾರ್ವಭೌಮ ರಾಷ್ಟ್ರದ ಮೂಲಭೂತ ಬುನಾದಿ ಮತ್ತು ಹೃದಯವಾಗಿರುವ ಭಾರತದ ಸಂವಿಧಾನದ ರಚನೆˌ ಅಂಗೀಕಾರ ಮತ್ತು ಅನುಷ್ಠಾನ. 2. ಸುಮಾರು 600 ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಅರಸು ಸಂಸ್ಥಾನಗಳನ್ನು ಸ್ವತಂತ್ರ ಭಾರತದಲ್ಲಿ ವಿಲೀನಗೊಳಿಸಿದ್ದು. (ಈ ರಾಜಸತ್ತೆಗಳಲ್ಲಿ ಆಡಳಿತದ ಮುಖ್ಯ ಹುದ್ದೆಗಳಲ್ಲಿ ಮೆರೆಯುತ್ತಿದ್ದವರು ಇದೇ ಸನಾತನಿ ಆರ್ಯರು ಎಂದು ಬೇರೆ ಹೇಳುವ ಅಗತ್ಯವಿಲ್ಲ.) 3. ಜಮೀನ್ದಾರಿ ಪದ್ದತಿಯ ನಿರ್ಮೂಲನೆ ಮತ್ತು ಹಿಂದೂ ಕೋಡ್ ಬಿಲ್ಲಿನ ಅನುಷ್ಠಾನ. ಇದು ಸನಾತನಿ ಆರ್ಯರ ಜಂಘಾಬಲವನ್ನೇ ತಗ್ಗಿಸಿತು. 4. ಯೋಜನಾ ಆಯೋಗದ ಸ್ಥಾಪನೆ. ಇದು ದೇಶದ ಸಮಗ್ರ ಅಭಿವೃದ್ಧಿಗೆ ಒಂದು ನೀಲನಕ್ಷೆಯಾಗಿ ಸಹಕರಿಸುವ ಶಾಸನಾತ್ಮಕ ಸ್ವಾಯತ ಸಂಸ್ಥೆ. ಈಗ ಅದನ್ನು ಅದ್ಯಾವುದೋ ಶಬ್ಧಾಲಾಂಕಾರಿಕ ಹೆಸರನ್ನಿಟ್ಟು ಸಂಪೂರ್ಣವಾಗಿ ನಾಶಗೊಳಿಸಲಾಗಿದೆ. 5. ಭಾಕ್ರಾˌ ಹೀರಾಕೂಡ್ ಸೇರಿ ಅನೇಕ ಬ್ರಹತ್ ಆಣೆಕಟ್ಟುಗಳ ನಿರ್ಮಾಣ. ಈಗ ಹಿಂದಿನ ಸರಕಾರಗಳು ಸ್ಥಾಪಿಸಿದ ಸಂಸ್ಥೆಗಳ ಹೆಸರು ಬದಲಾಯಿಸುವ ಕೆಲಸ ಸನಾತನಿಗಳು ಮಾಡುತ್ತಿದ್ದಾರೆ. 6. ಬ್ರಿಟೀಷರು ಮಾಡಿಟ್ಟಿದ್ದ ರೈಲು ಸಂಪರ್ಕ ವ್ಯವಸ್ಥೆಯ ಸಮಗ್ರವಾಗಿ ವಿಸ್ತರಣೆ. ಕೋಂಕಣˌ ಉದಮಪೂರ-ಶ್ರೀನರ-ಬಾರಾಮುಲ್ಲಾ ಸಂಪರ್ಕ. ಇದಲ್ಲದೆ ದೇಶಾದ್ಯಂತ ರೈಲು ಸಂಪರ್ಕ ಜಾಲದ ವ್ಯಾಪಕ ವಿಸ್ತರಣೆ. 7. ಚಂಡಿಗಡˌ ಭುವನೇಶ್ವರ ನಗರಗಳ ಜೊತೆಗೆ ಅನೇಕ ರಾಜ್ಯಗಳ ಸಚಿವಾಲಯ ಮತ್ತು ನಿರ್ದೇಶನಾಲಯಗಳ ನಿರ್ಮಾಣ. ಅನೇಕ ರಾಜ್ಯಗಳಲ್ಲಿ ಆಡಳಿತ ಕಟ್ಟಡಗಳ ನಿರ್ಮಾಣ. 8. ದೇಶದ ಎಲ್ಲ ನದಿಗಳಿಗೆ ಬ್ರಹತ್ ಸೇತುವೆಗಳ ನಿರ್ಮಾಣ. ಅವುಗಳಲ್ಲಿ ಬಾಂದ್ರಾ-ವರಳಿ ಸಮುದ್ರ ಸೇತುಗಳೂ ಸೇರಿವೆ. ರಸ್ತೆ ˌ ರೈಲು ಮತ್ತಿತರ ಎಲ್ಲ ಸಂಪರ್ಕ ಮಾಧ್ಯಗಳ ಸ್ಥಾಪನೆ ಮತ್ತು ವಿಸ್ತಾರ. 9. ಅನೇಕ ಬಂದರುಗಳ ನಿರ್ಮಾಣ ಮತ್ತು ವಿಸ್ತಾರ. 10. ಗ್ರಾಮೀಣ ಮತ್ತು ನಗರ ಭಾಗಗಳ ಅನೇಕ ಬ್ರಹತ್ ಹೆದ್ದಾರಿಗಳ ನಿರ್ಮಾಣ ಮತ್ತು ವಿಸ್ತರಣೆ. ಅವುಗಳಲ್ಲಿ ಬರ್ಮಾ ಹೆದ್ದಾರಿಯೂ ಸೇರಿದೆ. 11. ಉನ್ನತ ಶಿಕ್ಷಣ ಸಂಸ್ಥೆಗಳಾದ IITs, IIMs, AIMS, IISc, IART, ಇತ್ಯಾದಿಗಳ ಸ್ಥಾಪನೆ. ಅನೇಕ ವಿಶ್ವವಿದ್ಯಾಲಯಗಳ ಸ್ಥಾಪನೆ ಮತ್ತು ಅಭಿವ್ರದ್ಧಿ. ಮಾನವ ಸಂಪನ್ಮೂಲ ಸಂಸ್ಥೆಗಳ ವ್ಯಾಪಕ ವಿಸ್ತರಣೆ. 12. ಬಾಹ್ಯಾಕಾಶˌ ವೈದ್ಯಕೀಯˌ ಮತ್ತಿತರ ಮೂಲ ಮತ್ತು ಅನ್ವಯಿಕ ವಿಜ್ಞಾನಗಳ ಸಂಶೋಧನಾ ಸಂಸ್ಥೆಗಳಾದ ISRO, DRDO, IFTR, CSIR, ICMR, BARC ಮುಂತಾದವುಗಳ ಸ್ಥಾಪನೆ. 13. ಶಿಕ್ಷಣ ನಿಯಂತ್ರಣ ಸಂಸ್ಥೆಗಳಾದ MCI, UGC, AICTE, PCI, Ayush, NCI, NCERT, CBSE, ಇತ್ಯಾದಿಗಳ ಸ್ಥಾಪನೆ. ಈಗ ಈ ಎಲ್ಲ ಸಂಸ್ಥೆಗಳನ್ನು ಸಂಪೂರ್ಣ ಹಾಳುಗೆಡವಲಾಗುತ್ತಿದೆ. 14. ಆರ್ಡಿನನ್ಸ್ ಫ್ಯಾಕ್ಟರಿಗಳ ತೀವ್ರ ವಿಸ್ತರಣೆ. 15. ಭಾರತೀಯ ವಿಮಾನತಳ ಪ್ರಾಧಿಕಾರˌ ಭಾರತೀಯ ಅಣುಶಕ್ತಿ ಆಯೋಗˌ ಭಾರತೀಯ ಮಿಲಿಟರಿ ಅಕ್ಯಾಡಮಿˌ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರˌ ಸ್ಟೀಲ್ ಪ್ರಾಧಿಕಾರˌ ಡಿಫೆನ್ಸ್ ಅಕ್ಯಾಡಮಿˌ ಕ್ರಷಿ ಸಂಶೋಧನಾ ಸಂಸ್ಥೆ ಇತ್ಯಾದಿಗಳ ಸ್ಥಾಪನೆ. 16. ಬಾರತೀಯ ಹಡಗು ನಿಗಮ ಮತ್ತು ಹಡಗು ನಿರ್ಮಾಣˌ ಸಬ್ಮರೈನ್ˌ ಏರಕ್ರಾಫ್ಟ್ ವಾಹಕಗಳ ನಿರ್ಮಾಣ ಸಂಸ್ಥೆಗಳ ಸ್ಥಾಪನೆ. 17. ಸಾರ್ವಜನಿಕ ಉದ್ಯಮಗಳಾದ HMT, BEML, BHEL, BEL, BGML, HAL, IDPL, ಮುಂತಾದವುಗಳ ಸ್ಥಾಪನೆ. 18. ಭಾರತೀಯ ರಸಗೊಬ್ಬರ ನಿಗಮˌ ಸಿಮೆಂಟ್ ನಿಗಮˌ ಇಂಜನೀಯರಿಂಗ್ ಇಂಡಿಯಾ ನಿಯಮಿತˌ ಭಾರತೀಯ ರಸಗೊಬ್ಬರ ಕಾರ್ಖಾನೆˌ ಕೋಲ್ ಇಂಡಿಯಾ ನಿಯಮಿತˌ ಲೋಕೋಮೋಟಿವ್ ಫ್ಯಾಕ್ಟರಿಗಳುˌ ಹೇವ್ವಿ ಇಂಜಿನೀಯರಿಂಗ್ ನಿಗಮˌ ರಾಜಸ್ಥಾನ ಕ್ಯಾನಲ್ ಪ್ರೊಜೆಕ್ಟ್ ˌ ಇಂಡಿಯನ್ ಸ್ಟ್ಷಾಂಡರ್ಡ್ ಇನ್ಸಿಟ್ಯೂಟ್ˌ ಮುಂತಾದ ಸಂಸ್ಥೆಗಳ ಸ್ಥಾಪನೆ. 19. ಲೋಕಸೇವಾ ಆಯೋಗˌ ಆಡಳಿತ ಸೇವೆಗಳ ತರಬೇತಿ ಸಂಸ್ಥೆˌ ಕ್ರೀಡಾ ಪ್ರಾಧಿಕಾರˌ ರಾಷ್ಟ್ರೀಯ ಸೇವಾ ಅಕಾಡಮಿ ಮುಂತಾದವುಗಳ ಸ್ಥಾಪನೆ. 20. ಐದು ವಲಯ ಸಾಂಸ್ಕ್ರತಿಕ ಕೇಂದ್ರಗಳುˌ ಕೇಂದ್ರ ಸಾಹಿತ್ಯˌ ಲಲಿತಕಲಾˌ ನಾಟಕ ಅಕಾಡಮಿˌ ರಷ್ಟ್ರೀಯ ನಾಟಕ ಶಾಲೆˌ ಮಕ್ಕಳ ಸಿನೇಮಾ ಸಂಸ್ಥೆˌ ರಾಷ್ಟ್ರೀಯ ಗ್ರಂಥಾಲಯˌ ರಾಷ್ಟ್ರೀಯ ವಸ್ತು ಸಗ್ರಹಾಲಯ ಮುಂತಾದವುಗಳ ಸ್ಥಾಪನೆ. 21. ಆಕಾಶವಾಣಿಯ ವಿಸ್ತರಣೆˌ ದೂರದರ್ಶನˌ ಅಂತರಿಕ್ಷ ಮತ್ತು ಉಪಗ್ರಹ ಯೋಜನೆಗಳುˌ ಭಾರತೀಯ ಆಹಾರ ನಿಗಮಗಳ ಸ್ಥಾಪನೆ. 22. ನಾಗರಿಕ ವಿಮಾನಯಾನ ಸೇವೆಯ ವಿಸ್ತರಣೆˌ ಅಧುನಿಕ ವಿಮಾನ ನಿಲ್ದಾಣಗಳ ನಿರ್ಮಾಣ. 23. ಪ್ರವಾಸೋದ್ಯಮ ನಿಗಮˌ ರಾಜ್ಯ ವ್ಯಾಪಾರ ನಿಗಮˌ ಕಟ್ಟಡ ನಿರ್ಮಾಣ ನಿಗಮˌ ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ಆಯೋಗˌ ತೈಲ ಮತ್ತು ಪ್ರಾಕ್ರತಿಕ ಅನಿಲ ನಿಗಮˌ ಗಣಿ ಮತ್ತು ಲೋಹ ವ್ಯಾಪಾರ ನಿಗಮˌ ಶಾಖೋತ್ಪನ್ನ ವಿದ್ಯುತ್ ನಿಗಮˌ ದೂರವಾಣಿ ನಿಗಮˌ ಅನಿಲ ಪ್ರಾಧಿಕಾರˌ ಸಾರ್ವಜನಿಕ ಆಡಳಿತದ ಸಂಸ್ಥೆˌ ಇತ್ಯಾದಿಗಳ ಸ್ಥಾಪನೆ. 24. ಹಿಂದೂಸ್ಥಾನ ಮತ್ತು ಕೊಚ್ಚಿನ ಶಿಪ್ ಯಾರ್ಡ್ˌ ರಾಷ್ಟ್ರೀಯ ಜವಳಿ ಅಭಿವ್ರದ್ಧಿ ನಿಗಮˌ ರಾಷ್ಟ್ರೀಯ ವಿನ್ಯಾಸ ಸಂಸ್ಥೆಗಳ ಸ್ಥಾಪನೆ. 25. ಹೊಸ ಕೇಂದ್ರೀಯ ವಿಶ್ವವಿದ್ಯಾಲಯಗಳುˌ ಕೃಷಿ ವಿಶ್ವವಿದ್ಯಾಲಯಗಳುˌ ಬ್ಯಾಂಕುಗಳ ರಾಷ್ಟ್ರೀಕರಣ ಮತ್ತು ಬ್ಯಾಂಕ್ ಸೇವೆಗಳ ವಿಸ್ತರಣೆˌ Privy Purse ನ ನಿವಾರಣೆˌ ಮುಕ್ತ ವಿಶ್ವವಿದ್ಯಾಲಯದ ಸ್ಥಾಪನೆ. 26. ಹಸಿರು ಕ್ರಾಂತಿˌ ಗಣಕಯಂತ್ರ ಕ್ರಾಂತಿˌ ದೂರಸಂಪರ್ಕ ಕ್ರಾಂತಿˌ ವಯಸ್ಕರ ಶಿಕ್ಷಣ ವ್ಯವಸ್ಥೆˌ ಅಲ್ಪಸಂಖ್ಯಾತರ ಆಯೋಗದ ಸ್ಥಾಪನೆ. 27. ಕೇಂದ್ರೀಯ ವಿದ್ಯಾಲಯˌ ನವೋದಯ ಶಾಲೆಗಳ ಸ್ಥಾಪನೆ 28. ಶಿಕ್ಷಣ ಹಕ್ಕು ˌ ಮಾಹಿತಿ ಹಕ್ಕು ˌ ಆಹಾರ ಹಕ್ಕು ˌ ಭೂ ಪರಿಹಾರ ಪ್ರಾಧಿಕಾರದ ರಚನೆˌ ವಿಶಿಷ್ಠ ಗುರುತಿನ ಚೀಟಿˌ ನರೇಗಾˌ ಉದ್ಯೋಗ ಖಾತ್ರಿˌ ಮಹಿಳಾ ಆಯೋಗದ ರಚನೆˌ ಮಾನವ ಹಕ್ಕು ಆಯೋಗದ ರಚನೆˌ ತೆಂಗು ಮತ್ತು ನಾರಿನ ಅಭಿವ್ರದ್ಧಿ ಮಂಡಳಿ ರಚನೆˌ ಆಹಾರ ಸಂಸ್ಕರಣ ಘಟಕಗಳ ಸ್ಥಾಪನೆ. 29. ಮೊದಲ ಅಣು ಪರೀಕ್ಷೆˌ ಅಣು ಒಪ್ಪಂದˌ ವಿದ್ಯುತ್ ಉತ್ಪಾದನಾಭಿವ್ರದ್ಧಿˌ ಉದಾರೀಕರಣˌ ಜಾಗತೀಕರಣˌ ಇತ್ಯಾದಿ. ಇವುಗಳಲ್ಲದೆˌ ಇಕ್ವಿಟಿ ಮಾರುಕಟ್ಟೆಯ ಮುಕ್ತತೆˌ SERI Act, ಗಣಕೀಕ್ರತ ಸ್ಟಾಕ್ ಎಕ್ಸಚೆಂಜ್ˌ ಆಹಾರ ಉತ್ಪಾದನೆಯಲ್ಲಿ ಎರಡನೇ ದೇಶˌ ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನˌ ಅಫಘಾನ್ˌ ಭೂತಾನ್ˌ ನೇಪಾಳˌ ಬಾಂಗ್ಲಾˌ ಶ್ರೀಲಂಕಾˌ ಮಾಲ್ಡಿವ್ಜ್ˌ ಕೆಲವು ಆಫ್ರಿಕಾ ರಾಷ್ಟ್ರಗಳಿಗೆ ಆರ್ಥಿಕ ನೆರವು. ಬರೆಯಲಾಗದಷ್ಟು ಕೆಲಸಗಳು ಹಿಂದಿನ ಸರಕಾರಗಳು ಮಾಡಿವೆ. ಈ ಯಾವ ಕೆಲಸಗಳೂ ಈ ದುರುಳರ ಕಣ್ಣಿಗೆ ಕಾಣುತ್ತಿಲ್ಲವೊ ಅಥವ ಈ ರೀತಿಯ ಅಭಿವೃದ್ಧಿ ಮಾಡುವ ಮೂಲಕ ಹಿಂದಿನ ಸರಕಾರಗಳು ಭಾರತದ ಶೋಷಿತ ಜನಾಂಗಗಳ ಅಭಿವೃದ್ಧಿಗೆ ಹಾದಿ ಮಾಡಿತು ಅನ್ನುವ ಪರಾವಲಂಬಿ ಸನಾತನಿಗಳ ಆತಂಕವೊ ತಿಳಿಯದಾಗಿದೆ. ಬಹುಶಃ ಹಿಂದಿನ ಆಡಳಿತಗಾರರು ಯಾವ ಅಭಿವ್ರದ್ಧಿಯನ್ನೂ ಮಾಡಿಲ್ಲ ಎನ್ನುವವರ ಹಿರಿಯ ತಲೆಮಾರಿನವರು ಭಾರತದಲ್ಲಿ ವಾಸವಿರಲಿಕ್ಕಿಲ್ಲ ಇಲ್ಲವೆ ಅವರುಗಳ ದ್ರಷ್ಟಿಕೋನವೇ ಸಂಕುಚಿತವಿರಬೇಕು. ಈ ಆರೋಪ ಮಾಡುವವರ ಹಿರಿಯರು ಅಂದು ಬ್ರಿಟೀಷರ ಬೂಟು ನೆಕ್ಕುತ್ತ ಸ್ವತಂತ್ರ ಹೋರಾಟಗಾರರಿಗೆ ಹಿಡಿದುಕೊಟ್ಟವರೇ ಆಗಿದ್ದರು ಎನ್ನುವುದು ಗಮನಿಸಬೇಕಾದ ಸಂಗತಿಯಾಗಿದೆ. ⚫ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ⚫ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ಹಾಗೂ E-mail ID: kannadamedia1947@gmail.com ಗೆ ಸಂಪರ್ಕಿಸಿ. ⚫ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement