Advertisement

ಅತ್ತ ಉಪಚುನಾವಣೆ ಸಿದ್ದತೆ ಆರಂಭಗೊಳ್ಳುತ್ತಿದ್ದಂತೆಯೇ ಇತ್ತ ಸಿಬಿಐ ನಿಂದ ಡಿ.ಕೆ.ಶಿ ಮನೆಯ ಮೇಲೆ ದಾಳಿ!

Advertisement

ವರದಿ: ಕಮಲಾಕರ ಕಾರಣಗಿರಿ. ಚುನಾವಣೆಗೆ ಸಿದ್ದತೆ ಆರಂಭ ಗೊಳ್ಳುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕರ ಮನೆಗಳ ಮೇಲೆ ಐ.ಟಿ., ಇ.ಡಿ., ಸಿಬಿಐ ದಾಳಿ ಮಾಡಿಸುವ, ಅವರುಗಳು ಚುನಾವಣೆಯಲ್ಲಿ ಸಕ್ರೀಯರಾಗದಂತೆ ತಡೆಯುವ ಬಿಜೆಪಿಯ ಹಳೆಯ ಪದ್ಧತಿ ಇದೀಗ ಇಂದು ಬೆಳಿಗ್ಗೆ ಮತ್ತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಮನೆಯ ಮೇಲೆ ದಾಳಿ ನಡೆಸುವ ಮೂಲಕ ಮುಂದುವರಿದಂತಿದೆ. ಉಪಚುನಾವಣೆಯ ಹಿನ್ನಲೆಯಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ವಿವಿಧ ಪಕ್ಷಗಳ ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಗೊಳಿಸಿಕೊಂಡು ಪಕ್ಷ ಸಂಘಟನೆ ನಡೆಸುವ ಮೂಲಕ ಅಬ್ಬರದ ಸಿದ್ದತೆ ನಡೆಸುತ್ತಿದ್ದಂತೆಯೇ ಆಡಳಿತ ಪಕ್ಷ ಬಿಜೆಪಿ ತನ್ನದೇ ಶೈಲಿಯ ಚುನಾವಣಾ ಸಿದ್ದತೆ ಆರಂಭಿಸಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನೆಯ ಮೇಲೆ ಸಿಬಿಐ ಮೂಲಕ ದಾಳಿ ನಡೆಸಿದೆ. ಇಂದು ನಸುಕಿನ 6 ಗಂಟೆಯ ವೇಳೆಗೆ ಸಿಬಿಐನ 60ಅಧಿಕಾರಿಗಳ ತಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಅವರ ಸಹೋದರ, ಸಂಸದ ಡಿ.ಕೆ ಸುರೇಶ್ ಮನೆಗಳ ಮೇಲೆ ಮತ್ತಿತರ ಅವರ ಕುಟುಂಬದ ವಿವಿಧ 14 ಸ್ಥಳಗಳಲ್ಲಿ ದಾಳಿ ನಡೆಸಿದೆ ಎನ್ನಲಾಗಿದೆ. ಈ ಹಿಂದೆ ಡಿ.ಕೆ ಶಿವಕುಮಾರ್ ಅವರು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಕುರಿತು ಜಾರಿ ನಿರ್ದೇಶನಾಲಯದಿಂದ ತನಿಖೆಗೆ ಒಳಪಟ್ಟಿದ್ದರು ಮತ್ತು ಹೆಚ್ಚಿನ ತನಿಖೆಯ ಹೆಸರಲ್ಲಿ ಬಂದಿಸಲ್ಪಟ್ಟು, ಬಿಡುಗಡೆ ಹೊಂದಿದ್ದರು ಮತ್ತು ಆ ನಂತರ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಕೂಡಾ ನೇಮಕಗೊಂಡಿದ್ದರು. ಇದೇ ಸಮಯದಲ್ಲಿ ಅವರ ವಿರುದ್ಧ ರಾಜ್ಯದ ಬಿಜೆಪಿ ಸರ್ಕಾರ ತನಿಖೆಗೆ ಅನುಮತಿಯನ್ನು ನೀಡಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಲೇರಿದ್ದರು ತದನಂತರ ಹೈಕೋರ್ಟ್ ಆ ಅರ್ಜಿಯನ್ನು ವಜಾಗೊಳಿಸುತ್ತಿದ್ದಂತೆಯೆ ಡಿಕೆಶಿ ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದರು. ಅದಿನ್ನೂ ವಿಚಾರಣೆಯ ಹಂತದಲ್ಲಿದೆ. ಆದರೆ ಪಕ್ಷವನ್ನು ಮಿಂಚಿನ ರೀತಿಯಲ್ಲಿ ಸಂಘಟಿಸುವುದರ ಮೂಲಕ ಬಿಜೆಪಿ ಪಕ್ಷಕ್ಕೆ ತಲೆನೋವಾಗಿರುವ ಡಿ.ಕೆ ಶಿವಕುಮಾರ್ ಅವರನ್ನು ಹಣಿಯಲು ಇದೀಗ ಸಿಬಿಐ ಅಸ್ತ್ರವನ್ನು ಬಳಸುತ್ತಿದೆ. ಅದಲ್ಲವಾದರೆ ಎಂದೂ ಇಲ್ಲದ ಈ ತನಿಖೆ ಚುನಾವಣೆ ಸಿದ್ದತೆ ಆರಂಭಿಸುತ್ತಿದ್ದಂತೆ ಹೇಗೆ ಆರಂಭವಾಯಿತು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಪಕ್ಷದ ನಾಯಕರ ಮನೆಯ ಮೇಲಿನ ಈ ದಡೀರ್ ದಾಳಿ ಮುಂತಾದ ಅನಿರೀಕ್ಷಿತ ಬೆಳವಣಿಗೆಗಳ ಹಿನ್ನಲೆಯಲ್ಲಿ ಅಪಾರ ಪ್ರಮಾಣದ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಡಿ.ಕೆ.ಶಿ ಮತ್ತು ಡಿ.ಕೆ ಸುರೇಶ್ ರವರ ಮನೆಗಳ ಮುಂದೆ ಜಮಾಯಿಸುತ್ತಿದ್ದಾರೆ ಮತ್ತು ಡಿಕೆಶಿ ಯವರ ವಕೀಲರು ಕೂಡ ಇದೀಗ ಸ್ಥಳಕ್ಕೆ ಆಗಮಿಸಿರುವ ಕುರಿತು ವರದಿಯಾಗಿದೆ. "ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಅದರಲ್ಲಿ ಯಾವುದೇ ಅಕ್ರಮಗಳೂ ನಡೆದಿಲ್ಲ. ಪೈಸೆ ಪೈಸೆಗೂ ಕೂಡಾ ನಾನು ತೆರಿಗೆ ಪಾವತಿಸಿದ್ದೇನೆ ಮತ್ತು ಆ ಕುರಿತು ಸೂಕ್ತ ದಾಖಲೆಗಳನ್ನು ಅಧಿಕಾರಿಗಳಿಗೆ ಒದಗಿಸಿದ್ದೇನೆ" ಎಂದು ಡಿ.ಕೆ ಶಿವಕುಮಾರ್ ಹಲವು ಬಾರಿ ಪತ್ರಿಕಾ ಹೇಳಿಕೆ ನೀಡಿರುವುದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ⚫ ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ⚫ ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ಹಾಗೂ E-mail ID: kannadamedia1947@gmail.com ಗೆ ಸಂಪರ್ಕಿಸಿ. ⚫ ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement