Advertisement

ಹತ್ರಾಸ್ ಅತ್ಯಾಚಾರಕ್ಕೊಳಗಾದ ಯುವತಿಯನ್ನು ಜೀವಂತ ಸುಡಲಾಗಿದೆಯೇ?

Advertisement

ಈ ಮೇಲಿನ ಪ್ರಶ್ನೆ ಮೂಡಲು ಸಾಕಷ್ಟು ಕಾರಣಗಳಿವೆ. ಅಗತ್ಯವಾಗಿ ಈ ಕೆಳಗಿನ ಬರಹವನ್ನು ಸಂಪೂರ್ಣವಾಗಿ ಓದಿ. ದರೋಡೆ, ಅತ್ಯಾಚಾರ, ಕೊಲೆ, ದೊಂಬಿ ಮುಂತಾದ ದುಷ್ಕೃತ್ಯಗಳು ಯಾವುದೇ ಸರಕಾರಗಳು ಅಧಿಕಾರದಲ್ಲಿದ್ದರೂ ನಡೆಯುತ್ತಲೇ ಇರುತ್ತವೆ ಎಂಬ ವಿಚಾರದಲ್ಲಿ ಎರಡು ಮಾತಿಲ್ಲ. ಆದರೆ ಆಡಳಿತ ನಡೆಸುವ ಸರಕಾರಗಳು ಜನಪರವಾಗಿದ್ದಷ್ಟು, ಸಂವಿಧಾನ ಪರವಾಗಿದ್ದಷ್ಟು ಇಂತಹ ದುಷ್ಕೃತ್ಯಗಳ ಸಂಖ್ಯೆ ಅತಿ ಕಡಿಮೆಯಾಗಿರುತ್ತದೆ ಎಂಬುದು ಕೂಡಾ ಅಷ್ಟೇ ಸತ್ಯ. ಆಡಳಿತ ನಡೆಸುವ ಸರ್ಕಾರವೇ ದುಷ್ಕರ್ಮಿಗಳ ಜೊತೆ ಕೈಜೋಡಿಸಿದರೆ ಮಾತ್ರ ಅಂತಹ ಆಡಳಿತದ ದೇಶವನ್ನು ಆ ಪರಮಾತ್ಮ ಕೂಡ ಕಾಪಾಡಲಾರ. ಹಾಗೆಯೇ ಉತ್ತರ ಪ್ರದೇಶದ ಹತ್ರಾಸ್‌ನ ಅತ್ಯಾಚಾರ, ಕೊಲೆ ಮತ್ತು ಅನಂತರ ಸರ್ಕಾರವೇ ಹೆಣಸುಟ್ಟ ಪ್ರಕರಣದ ಕುರಿತು ಯೋಚಿಸಿದರೆ ಈ ಮೇಲಿನ ನಮ್ಮ ಅನುಮಾನಕ್ಕೆ ಸಾಕಷ್ಟು ಸಾಕ್ಷ್ಯ ದೊರಕುತ್ತದೆ. ಆ ಕುರಿತು ಅರಿಯಲು ಈ ಕೆಳಗಿನ ಕೆಲವು ಪ್ರಮುಖ ವಿಚಾರಗಳತ್ತ ಗಮನ ಹರಿಸೋಣ. ವಿಚಾರ 1: ಅತ್ಯಾಚಾರಕ್ಕೊಳಗಾಗಿ ತೀವ್ರತರವಾದ ಹಲ್ಲೆಗೊಳಗಾದ ಆ ದಲಿತ ಯುವತಿ ಸ್ವತಃ ಹತ್ರಾಸ್ ನ ಜಿಲ್ಲಾಧಿಕಾರಿಗಳ ಮುಂದೆ ತನ್ನ ಮೇಲೆ ಅತ್ಯಾಚಾರ ನಡೆದಿರುವ ಕುರಿತು, ನಾಲಿಗೆ ಕತ್ತರಿಸಿರುವ ಕುರಿತು ಮತ್ತು ಮಾರಾಣಾಂತಿಕ ಹಲ್ಲೆ ನಡೆಸಿರುವ ಕುರಿತು ಮತ್ತು ಆ ಆರೋಪಿಗಳ ಕುರಿತು ಸ್ಪಷ್ಟ ಮಾಹಿತಿ ನೀಡಿದ್ದರೂ ಉತ್ತರಪ್ರದೇಶದ ಪೋಲಿಸರು ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಳ್ಳಲು ಹಿಂಜರಿಯುತ್ತಾರೆ. ವಿಚಾರ 2: ನಂತರ ಆ ಸಂತೃಸ್ತೆ ಆಸ್ಪತ್ರೆಯಲ್ಲಿ ವಾರಗಳಷ್ಟು ಕಾಲ ಜೀವನ್ಮರಣ ಹೋರಾಟ ನಡೆಸುತ್ತಿದ್ದರೂ ಅತ್ಯಾಚಾರಿ, ಹಲ್ಲೆಕೋರರ ಬಂಧನಕ್ಕೆ ಮೀನಮೇಷ ಎಣಿಸುತ್ತಾರೆ. ವಿಚಾರ 3: ಪೋಲಿಸರ ಈ ವರ್ತನೆ ಖಂಡಿಸಿ ಉತ್ತರಪ್ರದೇಶ ರಾಜ್ಯಾದ್ಯಂತ ಪ್ರತಿಭಟನೆ ಆರಂಭವಾದ ನಂತರ ಆರೋಪಿಗಳನ್ನು ಬಂದಿಸಲಾಗುತ್ತದೆ. ವಿಚಾರ 4: ಅದೇ ಸಮಯದಲ್ಲಿ ಮಂಗಳವಾರ ಬೆಳಗ್ಗಿನ ಜಾವ ಆರು ಗಂಟೆಗೆ ಆಕೆ ಚಿಕಿತ್ಸೆ ಸ್ಪಂದಿಸದೆ ಸತ್ತಿರುವುದಾಗಿ ಘೋಷಿಸುತ್ತಾರೆ. ವಿಚಾರ 5: ಮೃತದೇಹವನ್ನು ಪಡೆಯಲು ಆಕೆಯ ಹೆತ್ತವರು ಬೆಳಗ್ಗಿನಿಂದ ಕಾಯುತ್ತಿದ್ದರಾದರೂ ಮರಣೋತ್ತರ ಪರೀಕ್ಷೆಯ ನೆಪದಲ್ಲಿ ರಾತ್ರಿಯ ತನಕವೂ ಮೃತದೇಹ ಹಸ್ತಾಂತರ ಆಗುವುದಿಲ್ಲ. ವಿಚಾರ 6: ರಾತ್ರಿ ಎರಡೂವರೆಗೆ ಕುಟುಂಬಿಕರ ವಿರೋಧದ ನಡುವೆಯೂ ಆಕೆಯ ಹೆತ್ತವರನ್ನು, ಒಡಹುಟ್ಟಿದವರನ್ನು ಗೃಹ ಬಂಧನದಲ್ಲಿಟ್ಟು ಪೋಲಿಸರೆ ಶವಸಂಸ್ಕಾರ ನಡೆಸುತ್ತಾರೆ ಮತ್ತು ಆ ಮೂಲಕ ಎರಡನೆ ಬಾರಿ ಪೋಸ್ಟ್ ಮಾರ್ಟಂ ಮಾಡದಂತೆ ಸಾಕ್ಷ್ಯನಾಶ ಮಾಡುತ್ತಾರೆ. (ತನುಶ್ರೀ ಪಾಂಡೆ ಎಂಬ ಆಜ್‌ತಕ್‌ನ ವರದಿಗಾರ್ತಿ ನಡುರಾತ್ರಿ ಎಚ್ಚರವಾಗಿದ್ದು ಪೋಲಿಸರನ್ನು ಹಿಂಬಾಲಿಸಿ ವರದಿ ಮಾಡಿರದಿದ್ದರೆ ಈ ಪ್ರಕರಣ ಬೆಳಕಿಗೆ ಬರುತ್ತಲೇ ಇರಲಿಲ್ಲ) ವಿಚಾರ 7: ಇಷ್ಟಾದ ನಂತರವೂ ಅಲ್ಲಿನ ಆಡಳಿತ ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರವೇ ನಡೆದಿಲ್ಲ ಎಂದು ಘೋಷಿಸುತ್ತದೆ. ವಿಚಾರ 8: ಇದೀಗ ಅಲ್ಲಿನ ಸರ್ಕಾರವೇ ನ್ಯಾಯಾಲಯಕ್ಕೆ ಆಕೆಯ ಕುಟುಂಬದ ಒಪ್ಪಿಗೆಯ ಮೇಲೆಯೆ ಮೃತಶರೀರವನ್ನು ಸುಡಲಾಗಿದೆ ಎಂದು ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ. ಜೊತೆಗೆ ಆ ಯುವತಿಯ ಮನೆಯವರಿಗೆ ಸರ್ಕಾರದ ವಿರುದ್ಧ ಹೇಳಿಕೆ ನೀಡಲು ಕೆಲವು ವ್ಯಕ್ತಿಗಳು ಐವತ್ತು ಲಕ್ಷ ರೂ. ಅಮಿಷ ಒಡ್ಡಿದ್ದರು‌ ಎಂಬಂತೆ ಬಿಂಬಿಸುವ ಕೆಲಸ ದೇಶದಾದ್ಯಂತ ನಡೆಯುತ್ತಿದೆ. ವಿಚಾರ 9: ಹಾಗೆಯೇ ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಹೆತ್ತವರನ್ನು, ಕುಟುಂಬಿಕರನ್ನು, ಗ್ರಾಮಸ್ಥರನ್ನು ಹಾಗೂ ಆಕೆ ಸತ್ತಿಲ್ಲ ಎಂದು ಹೇಳಿಕೆ ನೀಡಿದ್ದ ಆಕೆಯ ಅತ್ತೆಯನ್ನು ಅಕ್ಷರಶಃ ಗೃಹಬಂಧನಕ್ಕೆ ಒಳಪಡಿಸಲಾಗಿದೆ. ಪ್ರತಿಭಟನೆಯಲ್ಲಿ ತೊಡಗಿರುವ ಕಾಂಗ್ರೆಸ್ ನಾಯಕರಾದ ರಾಹುಲ್, ಪ್ರಿಯಾಂಕಾ ಸೇರಿದಂತೆ ಭೀಮ್ ಆರ್ಮಿಯ ನಾಯಕ ಚಂದ್ರಶೇಖರ ಅಝಾದ್ ಮುಂತಾದ ಪ್ರತಿಭಟನಾಕಾರರ ಮೇಲೆ ಕೇಸು ದಾಖಲಿಸುತ್ತಿದ್ದಾರೆ ಮತ್ತು ಇದು ಯೋಗಿ ಸರ್ಕಾರಕ್ಕೆ ಮಸಿ ಬಳಿಯಲು ನಡೆಯುತ್ತಿರುವ ಅಂತರ್ರಾಷ್ಟ್ರೀಯ ಸಂಚು ಎಂದು ಬಿಂಬಿಸುವ ಮೂಲಕ ಪ್ರತಿಭಟನಾಕಾರರಲ್ಲಿ ಕೇಸಿನ ಭಯ ಮೂಡಿಸಲು ಯತ್ನಿಸುತ್ತಿದ್ದಾರೆ. ಇಷ್ಟೆಲ್ಲಾ ವಿಚಾರಗಳ ಜೊತೆಗೆ ಇಲ್ಲಿ ನಾವೀಗ ಯೋಚಿಸ ಬೇಕಿರುವ ವಿಚಾರ ಏನೆಂದರೆ ಆ ಸಂತ್ರಸ್ತೆಯ ಮತ್ತು ಆಕೆಯ ಹೆತ್ತವರ ವಿಚಾರದಲ್ಲಿ ಇಷ್ಟೆಲ್ಲಾ ಅಮಾನುಷವಾಗಿ ವರ್ತಿಸಿರುವ ಅಲ್ಲಿನ ಜಿಲ್ಲಾಡಳಿತ ಅರ್ಥಾತ್ ಯೋಗಿ ಸರ್ಕಾರ ಆಸ್ಪತ್ರೆಯಲ್ಲಿ ಆಕೆಗೆ ಸರಿಯಾದ ಚಿಕಿತ್ಸೆ ನೀಡಿ ಬದುಕಿಸಲು ಪ್ರಯತ್ನ ಪಟ್ಟಿದೆ ಎನ್ನುವುದನ್ನು ನಂಬಲಾದೀತೇ ಅಥವಾ ಆಕೆ ಬದುಕುಳಿದರೆ ಆಕೆ ಹೆಸರಿಸಿರುವ ಆರೋಪಿಗಳಿಗೆ ಮತ್ತು ಅವರ ಪರವಾಗಿರುವ ರಾಜಕಾರಣಿಗಳಿಗೆ ಉಳಿಗಾಲವಿಲ್ಲ ಎಂಬ ಕಾರಣಕ್ಕಾಗಿ, ಆ ಕುರಿತಾದ ಸಾಕ್ಷ್ಯನಾಶಕ್ಕಾಗಿ ಆಕೆಯನ್ನು ಜೀವಂತವಾಗಿ ಸುಟ್ಟಿಲ್ಲ ಎನ್ನಲಾದೀತೇ? ಹಾಗೆಯೇ ಇಂತಹ ಅನುಮಾನಗಳನ್ನು ವ್ಯಕ್ತಪಡಿಸುವ, ಪ್ರಶ್ನೆಗಳನ್ನು ಕೇಳುವ ಸಾಂವಿಧಾನಿಕ ಹಕ್ಕು ಹೊಂದಿರುವ ನಾವು ಹಾಗೆ ಮಾಡದೇ ಕೈಕಟ್ಟಿ ಕುಳಿತುಕೊಳ್ಳುವುದು ಆ ದುಷ್ಕರ್ಮಿಗಳಿಗೆ ಪರೋಕ್ಷವಾಗಿ ಬೆಂಬಲಿಸಿದಂತಲ್ಲವೇ? ⚫ನಿಮಗೆ ಈ ಬರಹ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ⚫ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ E-mail ID: kannadamedia1947@gmail.com ಗೆ ಸಂಪರ್ಕಿಸಿ. ⚫ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement