ರಾಷ್ಟ್ರೀಯ

ಪ್ರಧಾನಿಗೆ ಐಷಾರಾಮಿ ವಿಮಾನ, ಗಡಿ ಕಾಯುವ ಯೋಧರಿಗೆ ಬುಲೆಟ್ ಪ್ರೂಫ್ ರಹಿತ ಟ್ರಕ್‌ಗಳು..!

‘ಪ್ರಧಾನಿ ಮೋದಿಯವರು ತನ್ನ ಪ್ರಯಾಣಕ್ಕೆ 8,400 ಕೋಟಿ ರೂಪಾಯಿ ಪಾವತಿಸಿ ಐಷಾರಾಮಿ ವಿಮಾನ ಖರೀದಿಸಿ, ಗಡಿ ಕಾಯುವ ಸೈನಿಕರನ್ನು ಬುಲೆಟ್ ಪ್ರೂಫ್ ರಹಿತ ಟ್ರಕ್‌ಗಳಲ್ಲಿ ಹುತಾತ್ಮರಾಗಲು ಕಳುಹಿಸುವುದು ನ್ಯಾಯವೇ?’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮೂಲಕ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಟ್ವಿಟ್ ಜೊತೆಗೆ ಸೈನಿಕರಿಗೆ ಸಂಬಂದಿಸಿದ್ದೆನ್ನಲಾದ ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ ಅವರು ‘ಸೈನಿಕರಿಗಿರುವ ಅಪಾಯ ಪ್ರಧಾನಿಗೆ ಅರ್ಥವಾಗುತ್ತಿಲ್ಲ, ಅವರ ಸುತ್ತಲಿರುವವರಿಗೆ ಯಾರಿಗೂ ಆ ಕುರಿತು ತಿದ್ದಿ ಹೇಳಲು ಧೈರ್ಯವಿಲ್ಲ’ ಎಂದು ಹೇಳಿದ್ದಾರೆ.

ಶನಿವಾರ ಪೋಸ್ಟ್‌ ಮಾಡಲಾದ ಎರಡು ನಿಮಿಷಗಳ ಈ ವಿಡಿಯೋದಲ್ಲಿ ಟ್ರಕ್‌ಗಳಲ್ಲಿ ಕುಳಿತ ಸೈನಿಕರು ಪರಸ್ಪರ ಮಾತನಾಡುತ್ತಿರುವ ದೃಶ್ಯಗಳಿವೆ. ಸೇನೆಯ ಸಮವಸ್ತ್ರದಲ್ಲಿ ಚಲಿಸುವ ಟ್ರಕ್‌ನಲ್ಲಿ ಕುಳಿತಿರುವ ಅವರು ‘ಬುಲೆಟ್ ಪ್ರೂಫ್ ಟ್ರಕ್‌ನಲ್ಲಿ ಪ್ರಯಾಣಿಸುವುದು ಕೂಡ ಅಪಾಯಕಾರಿಯಾಗಿರುವ ಈ ಸಂದರ್ಭದಲ್ಲಿ ಬುಲೆಟ್ ಪ್ರೂಫ್ ಹೊಂದಿಲ್ಲದ, ಯಾವುದೇ ಸುರಕ್ಷತೆ ಇಲ್ಲದ ಇಂತಹ ಟ್ರಕ್ ಗಳಲ್ಲಿ ಪ್ರಯಾಣಿಸುವುದು ಬಹು ಅಪಾಯಕಾರಿ, ಅವರು ನಮ್ಮ ಜೀವದ ಜೊತೆ ಆಟವಾಡುತ್ತಿರುವಂತೆ ಕಾಣಿಸುತ್ತಿದೆ ಹಾಗೆಯೇ ನಾವು ನಮ್ಮ ಜೀವನವನ್ನು ವ್ಯರ್ಥಗೊಳಿಸಿಕೊಳ್ಳುತ್ತಿದ್ದೇವೆ ಎಂದೆನಿಸುತ್ತಿದೆ’ ಎಂದಿದ್ದಾರೆ.

ಬಹುಶಃ ಈ ಮೇಲಿನ ವಿಚಾರವು ಈ ದೇಶದ ವಾಸ್ತವ ಪರಿಸ್ಥಿತಿಯಾಗಿದೆ. ಅದೇನೆಂದರೆ, ಗಡಿ ಕಾಯುವ ಯೋಧರಿಗೆ ಆದುನಿಕ ಶಸ್ತ್ರಾಸ್ತ್ರಗಳು ಮುಂತಾದ ಯಾವುದೇ ಸವಲತ್ತುಗಳನ್ನು ನೀಡದೆ ಅಭದ್ರತೆಯ ಸ್ಥಿತಿಗೆ ತಳ್ಳುವುದು ಮತ್ತು ಅವರಿಗೆದುರಾಗುವ ಅಪಾಯಗಳನ್ನು ಬಳಸಿಕೊಂಡು ಮತ್ತೆ ಅಧಿಕಾರಕ್ಕೆ ಬರುವುದಾಗಿದೆ.

ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ.

⚫ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ಹಾಗೂ E-mail ID: kannadamedia1947@gmail.com ಗೆ ಸಂಪರ್ಕಿಸಿ.

ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

0Shares