ರಾಜ್ಯ

ಮುನಿರತ್ನ ಬಳಿ 20,000 ಮತದಾರರ ಗುರುತು ಚೀಟಿ: ಯಡಿಯೂರಪ್ಪ! ಬಿಜೆಪಿ ಜಾತಿ, ಧರ್ಮದ ಹೆಸರಿನಲ್ಲಿ ಮತ ಕೇಳುತ್ತಿದೆ: ಮುನಿರತ್ನ!“ರಾಜರಾಜೇಶ್ವರಿ ನಗರದ ಅಭ್ಯರ್ಥಿ ಮುನಿರತ್ನ ಬಳಿ 20,000 ಮತದಾರರ ಗುರುತುಚೀಟಿ ದೊರೆತಿರುವುದು ಅಘಾತಕಾರಿ. ಅವರು ಅಕ್ರಮದ ಮೂಲಕ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಚುನಾವಣಾ ಆಯೋಗ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಪ್ರಜಾಪ್ರಭುತ್ವವನ್ನು ಉಳಿಸಬೇಕು” ಎಂದು ಮಾನ್ಯ ಯಡಿಯೂರಪ್ಪನವರು ಮಾಡಿರುವ ಟ್ವೀಟ್ ಹಾಗೂ ‘ಬಿಜೆಪಿ ಒಂದು ಕೋಮುವಾದಿ ಪಕ್ಷ. ಅವರು ಧರ್ಮ, ದೇವರು, ಸೈನಿಕರು ಮುಂತಾದ ಭಾವನಾತ್ಮಕ ವಿಚಾರಗಳನ್ನು ಪ್ರಚಾರ ಮಾಡಿ ಮತ ಕೇಳುತ್ತಾರೆ. ಸೈನಿಕರ ಸಾಧನೆಯನ್ನು ತೋರಿಸಿ ಹಾಗೂ ಜಾತಿ ಧರ್ಮದ ಹೆಸರಿನಲ್ಲಿ ಮತ ಕೇಳುವುದು ನೈತಿಕತೆ ಅಲ್ಲ. ದೇಶ ರಕ್ಷಣೆ ಪ್ರಧಾನಿ ಮೋದಿಯವರ ಸಾಧನೆ ಅಲ್ಲ ಅದು ಪ್ರತಿಯೊಬ್ಬ ಆಡಳಿತ ನಡೆಸುವವರ ಕರ್ತವ್ಯ’ ಎಂಬ ಬಿಜೆಪಿ ಅಭ್ಯರ್ಥಿ ಮುನಿರತ್ನ ರವರ ಹೇಳಿಕೆಯ ವಿಡಿಯೋ ಇದೀಗ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಾದ್ಯಂತ ಮತದಾರರ ನಡುವೆ ವೈರಲ್ ಆಗತೊಡಗಿದ್ದು ಚರ್ಚಾ ವಸ್ತುವಾಗಿದೆ.2018ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮುನಿರತ್ನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾಗ ಮತದಾರರ ದಿಕ್ಕು ತಪ್ಪಿಸಲು ಯಡಿಯೂರಪ್ಪ ಮಾಡಿರುವ ಟ್ವೀಟ್ ಹಾಗೂ ಈ ಹಿಂದೆ ಬಿಜೆಪಿ ವಿರುದ್ಧ ಮನಿರತ್ನ ಮಾಡಿದ್ದ ಭಾಷಣದ ವಿಡಿಯೋ ಇದಾಗಿದ್ದರೂ ಕೂಡ ಇದೀಗ ಚುನಾವಣಾ ಅಕ್ರಮ ಮಾಡಿದ್ದರು ಎಂದು ಸ್ವತಃ ಆರೋಪಿಸಿದ್ದ ಯಡಿಯೂರಪ್ಪನವರು ಅದೇ ವ್ಯಕ್ತಿಗೆ ಟಿಕೇಟು ನೀಡಿರುವುದರ ಕುರಿತು, ಅವರ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿರುವುದರ ಕುರಿತು, ಅವರನ್ನು ಇಂದ್ರ,ಚಂದ್ರ ಎಂದು ಹಾಡಿ ಹೊಗಳುತ್ತಿರುವುದರ ಕುರಿತು ‘ಇವರು ಅಂದು ಹೇಳಿದ್ದು ಸತ್ಯವೇ ಆಗಿದ್ದರೆ ಇಂದೇಕೆ ಅದೇ ವ್ಯಕ್ತಿಗೆ ಟಿಕೇಟು ಕೊಟ್ಟರು, ಅಂದು ಹೇಳಿದ್ದು ಸುಳ್ಳಾಗಿದ್ದರೆ ಇಂದು ಅವರು ಹೇಳುತ್ತಿರುವ ಮಾತುಗಳನ್ನು ನಾವು ನಂಬುವುದಾದರೂ ಹೇಗೆ? ಹಿರಿಯ ರಾಜಕಾರಣಿ ಆಗಿರುವ ಯಡಿಯೂರಪ್ಪ ಈ ಮಟ್ಟದ ನೈತಿಕ ದಿವಾಳಿಕೋರತನಕ್ಕೆ ಈಡಾಗಬಾರದಿತ್ತು! ಕಾಂಗ್ರೆಸ್ ಎಂದೂ ಇಂತಹ ಈ ಮಟ್ಟದ ರಾಜಕಾರಣ ಮಾಡಿರಲಿಲ್ಲ’ ಎಂದು ಹಾಗೂ ‘ಮುನಿರತ್ನ ರವರಿಗೆ ಅಂದು ಅಪಥ್ಯವಾಗಿದ್ದ, ನೈತಿಕತೆ ಇಲ್ಲದ ಪಕ್ಷವಾಗಿದ್ದ ಬಿಜೆಪಿ ಇಂದು ಪಥ್ಯವಾಗಿದ್ದು ಹೇಗೆ?’ ಎಂದು kannadamedia. com ನ ವರದಿಗಾರರ ಬಳಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತದಾರರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

⚫ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ⚫ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ಹಾಗೂ E-mail ID: kannadamedia1947@gmail.com ಗೆ ಸಂಪರ್ಕಿಸಿ. ⚫ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

0Shares