ಉಡುಪಿ

ಎನ್.ಎಸ್.ಯು.ಐ ಉಡುಪಿ ಜಿಲ್ಲಾಧ್ಯಕ್ಷರಾಗಿ ಸೌರಭ್ ಬಲ್ಲಾಳ್ ಹಾಗೂ ರಾಷ್ಟೀಯ ಸಂಯೋಜಕರಾಗಿ ಕ್ರಿಸ್ಟನ್‌ ಅಲ್ಮೇಡಾ ನೇಮಕ!

www.kannadamedia.com Newsಎನ್.ಎಸ್.ಯು.ಐ. ರಾಷ್ಟೀಯ ಕಾರ್ಯದರ್ಶಿಗಳು, ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಉಸ್ತುವಾರಿಗಳಾದ ಎರಿಕ್ ಸ್ಟೀಫನ್‌ರವರು,ಉಡುಪಿ ಜಿಲ್ಲಾಕಾಂಗ್ರೆಸ್‌ ಅಧ್ಯಕ್ಷ ಶ್ರೀ ಅಶೋಕ್‌ ಕುಮಾರ್‌ ಕೊಡವೂರುರವರ ಶಿಫಾರಸಿನ ಮೇರೆಗೆಉಡುಪಿ ಜಿಲ್ಲಾ ಎನ್.ಎಸ್.ಯು.ಐ. ಅಧ್ಯಕ್ಷರಾಗಿ ಸೌರಭ್ ಬಲ್ಲಾಳ್‌ರವರನ್ನು ನಿಯುಕ್ತಿಗೊಳಿಸಿ ಜಿಲ್ಲೆಯಾದ್ಯಂತ ವಿದ್ಯಾರ್ಥಿ ಸಂಘಟನೆಯನ್ನು ಬಲಗೊಳಿಸಲು ಕಾಯೋನ್ಮುಖರಾಗುವಂತೆ ಆದೇಶಿಸಿದ್ದಾರೆ. ಹಾಗೆಯೇ ಎನ್.ಎಸ್.ಯು.ಐ ರಾಷ್ಟೀಯ ಅಧ್ಯಕ್ಷರಾದ ಶ್ರೀ ನೀರಜ್‌ ಕುಂದನ್‌ ರವರು ಉಡುಪಿ ಜಿಲ್ಲಾ ಮಾಜಿ ಎಸ್.ಎಸ್.ಯು.ಐ. ಅಧ್ಯಕ್ಷರಾದ ಶ್ರೀ ಕ್ರಿಸ್ಟನ್‌ಅಲ್ಮೇಡಾ ರವರನ್ನು ರಾಷ್ಟೀಯ ಸಂಯೋಜಕರನ್ನಾಗಿ ನೇಮಕ ಮಾಡಿ ಆದೇಶಿಸಿರುತ್ತಾರೆ. ಇವರುಗಳನ್ನು ಉಡುಪಿ ಜಿಲ್ಲಾಕಾಂಗ್ರೆಸ್‌ ಅಧ್ಯಕ್ಷರಾದ ಶ್ರೀ ಅಶೋಕ್‌ಕುಮಾರ್‌ ಕೊಡವೂರು ಅವರು ಅಭಿನಂದಿಸಿದ್ದಾರೆ.

0Shares