Advertisement

ಬರದ ನಾಡಿನ ಭಗೀರಥ ಖ್ಯಾತಿಯ ಟಿ.ಬಿ ಜಯಚಂದ್ರರ ಗೆಲುವು ಖಚಿತ: ಪಿ.ಆರ್. ಮಂಜುನಾಥ್

Advertisement

ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ವಿರೋಧಿಗಳು ಸೃಷ್ಟಿಸಿದ ಕ್ಷುಲ್ಲಕವಾದ ಸುಳ್ಳು ಅಪಪ್ರಚಾರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಟಿ‌.ಬಿ ಜಯಚಂದ್ರರವರು ಸೋತಿರಬಹುದು ಆದರೆ ಅವರು ಶಾಸಕರಾಗಿ ಆಯ್ಕೆಯಾದ ನಂತರ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಸೃಷ್ಟಿಸಿದ ಇತಿಹಾಸ ಮಾತ್ರ ಎಂದಿಗೂ ಸುಳ್ಳಾಗಲಾರದು. ಅದು ಮತದಾರರ ಮನಸ್ಸಿನಲ್ಲಿ ಅಜರಾಮರ. ದೂರದ ಹೇಮಾವತಿ ನದಿಯ ನೀರನ್ನು ಸಹಜ ಕಾಲುವೆಗಳ ಮೂಲಕ ಕಳ್ಳಂಬೆಳ್ಳ ಮತ್ತು ಶಿರಾ ಕೆರೆಗಳಿಗೆ ಹರಿಸುವ ಕುರಿತಾಗಿ ಜಯಚಂದ್ರರವರು ದಣಿವರಿಯದೆ ಪ್ರಯತ್ನಿಸುತ್ತಿದ್ದಾಗ ಅದು ಸಾಧ್ಯವಾಗದ ಮಾತು, ವ್ಯರ್ಥ ಪ್ರಯತ್ನ ಎಂದು ಹಾದಿಬೀದಿಯಲ್ಲಿ ಅಪಹಾಸ್ಯ ಮಾಡಿ ನಕ್ಕವರೇ ಆ ಕೆಲಸ ಪೂರ್ಣಗೊಂಡು ನೀರು ಹರಿದಾಗ ಜಯಚಂದ್ರರನ್ನು ಅಭಿನಂದಿಸಿದ್ದರು. ಮದಲೂರು ಕೆರೆಗೆ ನೀರನ್ನು ತಲುಪಿಸಿದಾಗ ರಾಜ್ಯದ ದೊಡ್ಡ ದೊಡ್ಡ ಮಾಧ್ಯಮಗಳು 'ಬರದ ನಾಡಿನ ಭಗೀರಥ' ಎಂದು ಹೊಗಳಿದ್ದವು. ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಛಲ ಹೊಂದಿರುವ ಈ ನಾಯಕ ಮತ್ತೊಮೆ ಶಾಸಕನಾಗಬೇಕು, ಆ ಮೂಲಕ ಈ ವಿಧಾನಸಭಾ ಕ್ಷೇತ್ರದಲ್ಲಿ ಅವರ ಸೋಲಿನ ನಂತರ ನೆನೆಗುದಿಗೆ ಬಿದ್ದಿರುವ ಹಲವಾರು ಅಮೂಲಾಗ್ರ ಕಾಮಗಾರಿಗಳು ನೆರವೇರುವಂತಾಗಬೇಕು ಎಂಬುವುದು ಕ್ಷೇತ್ರದ ಜನರ ಬಯಕೆಯಾಗಿದೆ ಎಂದು ಶಿರಾ ನಗರ ವಿಧಾನಸಭಾ ಕ್ಷೇತ್ರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್ ಮಂಜುನಾಥ್ ಹೇಳಿದ್ದಾರೆ. ಅವರು ಶಿರಾದ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ www.kannadamedia.com ಜೊತೆ ಮಾತನಾಡುತ್ತಿದ್ದರು. ತನ್ನ ಶಾಸಕತ್ವದ ಅವಧಿಯಲ್ಲಿ 2800ಕೋಟಿ ರೂಪಾಯಿಗಳ ಅನುದಾನವನ್ನು ತಂದು ಕೃಷಿ, ಶಿಕ್ಷಣ, ಹೈನುಗಾರಿಕೆ, ನೀರಾವರಿ, ರಸ್ತೆ, ಚರಂಡಿ, ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ಸಮಾಜ ಕಲ್ಯಾಣ, ದೇವಸ್ಥಾನಗಳ ಅಭಿವೃದ್ಧಿ ಇತ್ಯಾದಿ ಇತ್ಯಾದಿಯಾಗಿ ಶಿರಾ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಕಾರಣೀಭೂತರಾದ ಕೀರ್ತಿ ಟಿ.ಬಿ ಜಯಚಂದ್ರರವರದ್ದು. ಪಶುಸಂಗೋಪನಾ ಸಚಿವರಾಗಿ, ಕಾನೂನು ಸಚಿವರಾಗಿ, ಮುಜರಾಯಿ ಸಚಿವರಾಗಿ, ಸಣ್ಣ ನೀರಾವರಿ ಸಚಿವರಾಗಿ, ಉನ್ನತ ಶಿಕ್ಷಣ ಸಚಿವರಾಗಿ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಇಡೀ ರಾಜ್ಯದ ಗಮನಸೆಳೆದ ಜಯಚಂದ್ರರವರು ಶಿರಾ ಕ್ಷೇತ್ರಕ್ಕೆ ಬಹುದೊಡ್ಡ ಆಸ್ತಿ ಎಂದರೆ ಅದು ಅತಿಶಯೋಕ್ತಿಯಲ್ಲ ಎಂದವರು ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಜಯಚಂದ್ರರವರು ಪಶುಸಂಗೋಪನಾ ಸಚಿವರಾಗಿ ಜಾರಿಗೆ ತಂದ ಕ್ಷೀರಭಾಗ್ಯ, ಕ್ಷೀರಧಾರೆ, ಪಶುಭಾಗ್ಯ, ಪಶುರೋಗ ನಿರ್ಣಯ ಪ್ರಯೋಗಾಲಯ, ಹೈಟೆಕ್ ಸೂಪರ್ ಸ್ಪೇಷಾಲಿಟಿ ಪಶು ಆಸ್ಪತ್ರೆ ನಿರ್ಮಾಣ ಹಾಗೂ ಕಾನೂನು ಸಚಿವರಾಗಿ ಮೌಢ್ಯ ನಿಷೇಧ ಕಾಯ್ದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅನುಕೂಲಕ್ಕಾಗಿ SCP ಮತ್ತು TSP ಯೋಜನೆಗಳ ಅನುಷ್ಠಾನ ಮತ್ತು ಅನೇಕ ಜನಪರ ಕಾನೂನು ವಿದೇಯಕಗಳನ್ನು ಸದನದಲ್ಲಿ ಮಂಡಿಸಿದ ಹೆಗ್ಗಳಿಕೆ ಇವರದ್ದು. ಮುಜರಾಯಿ ಸಚಿವರಾಗಿ ರಾಜ್ಯದ ಪ್ರಮುಖ ದೇವಾಲಯಗಳ ಅಭಿವೃದ್ಧಿ ಹಾಗೂ ಆಸ್ತಿಗಳ ರಕ್ಷಣೆಗೆ ಜಾರಿಗೊಳಿಸಲಾದ ಕ್ರಮಗಳು ಶ್ಲಾಘನೀಯ. ಸಣ್ಣ ನೀರಾವರಿ ಸಚಿವರಾಗಿ ರಾಜ್ಯಾದ್ಯಂತ ಬ್ಯಾರೇಜ್‌ಗಳು ಹಾಗೂ ಚೆಕ್ ಡ್ಯಾಮ್ ‌ಗಳನ್ನು ನಿರ್ಮಿಸಿ ಅಂತರ್ಜಲ ವೃದ್ಧಿಸಿ ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ನಾಲಾ ಅನುಷ್ಠಾನದ ರೂವಾರಿಯಾಗಿ ಹೇಮಾವತಿ ನಾಲಾ ಅಗಲೀಕರಣ ಕೈಗೊಂಡು ಹೇಮೆ- ಭದ್ರೆಯರ ಸಂಗಮದ ಸಂಕಲ್ಪ ಮಾಡಿರುವ ಕೀರ್ತಿ ಇವರದ್ದಾಗಿದೆ. ಉನ್ನತ ಶಿಕ್ಷಣ ಸಚಿವರಾಗಿ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅನೇಕ ಮಹನೀಯರ ಅಧ್ಯಯನ ಪೀಠ, ಪ್ರತಿಭಾವಂತ ಪದವಿ ಅಧ್ಯಯನದ ವಿಧ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸುವ ಮಹತ್ತರ ಯೋಜನೆಗೆ ಚಾಲನೆ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಅವರು ಮಾಡಿರುವ ಕಾರ್ಯಗಳನ್ನು ಈ ಕ್ಷೇತ್ರದ ಜನ ಖಂಡಿತವಾಗಿಯೂ ಮರೆಯಲಾರರು. ಅವರು ಕನಿಷ್ಠ 30ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮಂಜುನಾಥ್ ರವರು ಹೇಳಿದ್ದಾರೆ. ►► ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►► ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement