ಶಿವಮೊಗ್ಗ

ಕಾಂಗ್ರೆಸ್ ಸೇವಾದಳ ಸೋಶಿಯಲ್ ಮೀಡಿಯಾ ಶಿವಮೊಗ್ಗ ಸಂಚಾಲಕರಾಗಿ ಸುಭಾಷ್ ಕುಲಾಲ್ ನೇಮಕ

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸೇವಾದಳದ ಸಾಮಾಜಿಕ ಜಾಲತಾಣಗಳ ಸಂಚಾಲಕರನ್ನಾಗಿ ತೀರ್ಥಹಳ್ಳಿಯ ಕ್ರಿಯಾಶೀಲ ಯುವಕ ಸುಭಾಷ್ ಕುಲಾಲ್ ಅವರನ್ನು ನೇಮಕ ಮಾಡಲಾಗಿದೆ.ರಾಷ್ಟ್ರೀಯ ಕಾಂಗ್ರೆಸ್ ಸೇವಾದಳದ ಸೋಷಿಯಲ್ ಮೀಡಿಯಾ ಕೋ ಆರ್ಡಿನೆಟರ್ ಸುಭಾಷ್ ಬಾಬುರವರು ಸುಭಾಷ್ ರವರ ನೇಮಕವನ್ನು ಪ್ರಕಟಿಸಿದ್ದಾರೆ. ಕುಲಾಲ್ ರವರು ಕಾಂಗ್ರೆಸ್ ತತ್ವ ಸಿದ್ದಾಂತಗಳ ಕುರಿತು ಹೊಂದಿರುವ ಕಾಳಜಿ ಮತ್ತು ಪಕ್ಷ ಪ್ರೇಮವನ್ನು ಪರಿಗಣಿಸಿ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.