ಸಂಪಾದಕೀಯ

ಉತ್ತರಪ್ರದೇಶ: ಮೃತಶರೀರವನ್ನು ಹೆತ್ತವರಿಗೆ ಹಸ್ತಾಂತರಿಸದೆ ಪೋಲಿಸರೆ ಶವಸಂಸ್ಕಾರ ಮಾಡಿದ ಹಿಂದಿನ ಅಸಲಿಯತ್ತೇನು?

ಉತ್ತರ ಪ್ರದೇಶದ ಹಾಥ್ರಸ್‌ನ 19ವರ್ಷದ ದಲಿತ ಯುವತಿಯ ಬರ್ಬರ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಮೃತದೇಹವನ್ನು ಮನೆಯವರಿಗೆ ಹಸ್ತಾಂತರಿಸದೆ ಮನೆಯವರ, ಗ್ರಾಮಸ್ಥರ, ಪತ್ರಕರ್ತರ ವಿರೋಧದ ನಡುವೆಯೂ ಶವವನ್ನು ನಡುರಾತ್ರಿ ಪೋಲಿಸರೆ ಅಂತ್ಯಸಂಸ್ಕಾರ ಮಾಡಿದ ಕುರಿತು ಹಾಗೂ ಮೃತ ಯುವತಿ ತನ್ನ ಮೇಲೆ ಅತ್ಯಾಚಾರ ಹಾಗೂ ಹಲ್ಲೆ ನಡೆಸಿದವರ ಕುರಿತು ಪೋಲಿಸರಿಗೆ ಹೇಳಿಕೆ ನೀಡಿದ್ದಾಗ್ಯೂ ಇದೀಗ ಪೋಲಿಸರು ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂಬ ಹೇಳಿಕೆ ನೀಡಿರುವುದು ಇದೀಗ ಇದರ ಹಿಂದಿನ ಅಸಲಿಯತ್ತೇನು ಎಂಬ ಕುರಿತು ದೇಶಾದ್ಯಂತ ಅನುಮಾನವನ್ನು ಹುಟ್ಟು ಹಾಕಿದೆ ಮತ್ತು ಆರೋಪಿಗಳನ್ನು ರಕ್ಷಿಸಲು ಯತ್ನಿಸಲಾಗುತ್ತಿದೆಯೇ ಎಂಬ ಪ್ರಶ್ನೆಯನ್ನು ಮೂಡಿಸಿದೆ.ಈ ಕುರಿತು ಮೃತ ಯುವತಿಯ ತಾಯಿ ಮತ್ತಿತರ ಸಂಬಂಧಿಕರು ಮೃತದೇಹವನ್ನು ಹಸ್ತಾಂತರಿಸುವಂತೆ ಒತ್ತಾಯಿಸುವ ಅರ್ಥಾತ್ ಗೋಳಿಡುವ, ಹಿಂದೂ ಸಂಪ್ರದಾಯದಂತೆ ಶವಸಂಸ್ಕಾರ ನಡೆಸಲು ಅವಕಾಶ ಕೋರುವ, ಶವ ಹೊತ್ತ ಅಂಬುಲೆನ್ಸ್ ಮುಂದೆ ಸಾಗದಂತೆ ತಡೆಯುವ, ಶವವನ್ನು ಅದ್ಯಾಕೆ ಮೃತ ಯುವತಿಯ ಮನೆಯವರಿಗೆ ಹಸ್ತಾಂತರಿಸದೆ ನೀವೇ ಶವಸಂಸ್ಕಾರ ನಡೆಸುತ್ತಿದ್ದೀರಿ ಎಂದು ಪತ್ರಕರ್ತರು ಪ್ರಶ್ನಿಸುವ ಹಾಗೂ ಆ ಪ್ರಶ್ನೆಗೆ ಪೋಲಿಸರು ಹಾರಿಕೆಯ ಹಾಗು ಬಾಲಿಷವಾದ ಉತ್ತರ ಕೊಡುವ ಹಲವು ಮನಕಲಕುವ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿದೆ.

ಹಾಗೆಯೇ, ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕಿ, ಉತ್ತರಪ್ರದೇಶದ ಉಸ್ತುವಾರಿ ಪ್ರಿಯಾಂಕಾ ಗಾಂಧಿ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಬೆನ್ನಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕೂಡ ಸರಣಿ ಟ್ವೀಟ್ ಮಾಡಿ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೂ ಪೋಲಿಸರು ಮೃತ ಯುವತಿಯ ಹೆತ್ತವರನ್ನು, ಒಡಹುಟ್ಟಿದವರನ್ನು ಮತ್ತು ಕುಟುಂಬಿಕರನ್ನು ಗೃಹ ಬಂಧನದಲ್ಲಿರಿಸಿ ರಾತ್ರೋ ರಾತ್ರಿ ಶವಸಂಸ್ಕಾರ ನಡೆಸಿದ ಕ್ರಮದ ಕುರಿತು ಪ್ರಶ್ನಿಸಿದ್ದಾರೆ. ‘ಭಾರತಾಂಬೆಯ ಪುತ್ರಿಯ ಮೇಲೆ ಅತ್ಯಾಚಾರ ನಡೆಸಲಾಗಿದೆ, ಸತ್ಯವನ್ನು ಮುಚ್ಚಿಡುವ ಭಾಗವಾಗಿ ಇದೀಗ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸದೆ ಆಕೆಯ ಕುಟುಂಬದ ಅಂತ್ಯಸಂಸ್ಕಾರದ ಹಕ್ಕನ್ನು ಕೂಡ ಕಸಿದುಕೊಳ್ಳಲಾಗಿದೆ. ಇದು ಭಾರತ ಮಾತೆಗೆ ಮಾಡಿದ ಘೋರ ಅವಮಾನ ಹಾಗೂ ಅನ್ಯಾಯ’ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ.

ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ಹಾಗೂ E-mail ID: kannadamedia1947@gmail.com ಗೆ ಸಂಪರ್ಕಿಸಿ.

ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

0Shares