ಸಂಪಾದಕೀಯ

ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗಂದಿದ್ದವರು ರಾಹುಲ್ ಅಲ್ಲ ಮೋದಿ..!

ನಿಮಗೆ ಗೊತ್ತೆ? ‘ಈ ಕಡೆಯಿಂದ ಆಲೂಗಡ್ಡೆ ಹಾಕಿದರೆ ಆ ಕಡೆಯಿಂದ ಚಿನ್ನ ಬರುತ್ತದೆ’ -ಹಾಗಂದಿದ್ದವರು ರಾಹುಲ್ ಅಲ್ಲ ಮೋದಿ.

ಇದು 2017ರಲ್ಲಿ ಗುಜರಾತಿನಲ್ಲಿ ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ಭಾಗವಹಿಸಿದ ವೇಳೆಯ ಒಂದು ಘಟನೆ. ಆ ಸಂದರ್ಭದಲ್ಲಿ ರಾಹುಲ್ ಆಲೂಗಡ್ಡೆ ಮೆಷೀನ್ ಬಗ್ಗೆ ಹೇಳಿದ್ದಾರೆ ಎನ್ನಲಾದ ವಿಡಿಯೊವೊಂದನ್ನು ಬಿಜೆಪಿ ಐ.ಟಿ ಸೆಲ್ ಸಾಮಾಜಿಕ ತಾಣದಲ್ಲಿ ಎಡಿಟ್ ಮಾಡಿ ಅಪಪ್ರಚಾರಕ್ಕೆ ಬಳಸಿಕೊಳ್ಳುವ ದೃಷ್ಟಿಯಿಂದ ವೈರಲ್ ಮಾಡಿತ್ತು. ಇದಾದ ನಂತರ ರಾಜಸ್ಥಾನದಲ್ಲಿಯೂ ಕೂಡ ವಿಧಾನಸಭಾ ಚುನಾವಣೆ ವೇಳೆ ರಾಹುಲ್ ಗಾಂಧಿಯವರದ್ದೆನ್ನಲಾದ ಈ ಆಲೂ ಫ್ಯಾಕ್ಟರಿ ಕುರಿತಾದ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬರೋಬ್ಬರಿ 20 ನಿಮಿಷಗಳ ಅವಧಿಯ ಆ ವಿಡಿಯೊ ದೃಶ್ಯವನ್ನು 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೂ ಕೂಡ ಬಳಸಿಕೊಂಡು ಯಶಸ್ಸು ಸಾದಿಸಿತ್ತು ಬಿಜೆಪಿ.ವಿಡಿಯೊದಲ್ಲಿ “ಯಾವ ರೀತಿಯ ಮೆಷೀನ್ ಸ್ಥಾಪಿಸುವೆ ಎಂದರೆ ಈ ಕಡೆಯಿಂದ ಆಲೂಗಡ್ಡೆ ಹಾಕಿದರೆ ಇನ್ನೊಂದು ಕಡೆಯಿಂದ ಚಿನ್ನ ಬರುತ್ತದೆ” ಎಂದು ರಾಹುಲ್ ಹೇಳುತ್ತಿರುವ ರೀತಿಯಲ್ಲಿ ಎಡಿಟ್ ಮಾಡಲಾಗಿತ್ತು. ಆ ನಂತರ ಈ ಬಗ್ಗೆ ಫ್ಯಾಕ್ಟ್‌ಚೆಕ್ ಮಾಡಿದ ದಿ ಕ್ವಿಂಟ್ ವಿಡಿಯೊ ಹಿಂದಿನ ಸತ್ಯಾಸತ್ಯತೆಗಳು ಏನು ಎಂಬುದನ್ನು ವರದಿ ಮಾಡಿತು.

ಹಾಗಾದರೆ ನಿಜ ಏನು? ನಿಜಕ್ಕೂ ‘ಈ ಕಡೆಯಿಂದ ಆಲೂಗಡ್ಡೆ ಹಾಕಿದರೆ ಇನ್ನೊಂದು ಕಡೆಯಿಂದ ಚಿನ್ನ ಬರುತ್ತದೆ’ ಎಂದು ರಾಹುಲ್ ಗಾಂಧಿಯವರು ಹೇಳಿದ್ದು ಅರ್ಧ ಸತ್ಯ. ವಿಷಯ ಏನೆಂದರೆ ರಾಹುಲ್ ಗಾಂಧಿಯವರ ಭಾಷಣದ ಅರ್ಧ ಭಾಗ ಮಾತ್ರ ಬಳಸಿ ಈ ರೀತಿ ಅಪಪ್ರಚಾರ ಮಾಡಲಾಗಿದೆ. ಅದೇ ಭಾಷಣದ ಮುಂದುವರಿದ ಭಾಗವನ್ನು ಕೇಳಿಸಿಕೊಂಡರೆ ರಾಹುಲ್ ಏನು ಹೇಳಿದ್ದು ಎಂಬುವುದರ ಸತ್ಯಾಂಶದ ಅರಿವಾಗುತ್ತದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಗುಜರಾತಿನ ರೈತರನ್ನುದ್ದೇಶಿಸಿ ಮಾಡಿರುವ ಭಾಷಣ ಇದಾಗಿದ್ದು ಇದರಲ್ಲಿ ರಾಹುಲ್ ನಿಜಕ್ಕೂ ಹೇಳಿದ್ದೇನೆಂದರೆ ” ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಭರವಸೆ ನೀಡಿದ್ದರು. ಯಾವ ರೀತಿಯ ಮೆಷೀನ್ ಬಳಕೆಗೆ ತರುತ್ತೇನೆ ಅಂದರೆ ಅದರ ಒಂದು ಕಡೆ ಆಲೂಗಡ್ಡೆ ಹಾಕಿದರೆ ಇನ್ನೊಂದು ಕಡೆ ಚಿನ್ನ ಬರುತ್ತದೆ. ಎಷ್ಟು ಹಣ ಬರುತ್ತದೆ ಎಂಬುದು ನಿಮಗೇ ಅಂದಾಜು ಇರಲಾರದು. ಆದರೆ ಇದು ನಾನು ಹೇಳಿದ್ದಲ್ಲ, ನರೇಂದ್ರ ಮೋದಿ ಹೇಳಿದ್ದು” ಎಂದು ರಾಹುಲ್ ತಮ್ಮ ಭಾಷಣದಲ್ಲಿ ಹೇಳುತ್ತಾರೆ ಮತ್ತು ಮುಂದುವರಿಸಿ ಆ ಕುರಿತಾಗಿ ವಿವರವಾಗಿ ಹೇಳುತ್ತಾರೆ ಆದರೆ ಆ ಮುಂದುವರಿದ ಭಾಗವನ್ನು ತುಂಡರಿಸಿದ ಬಿಜೆಪಿ ರಾಹುಲ್ ಗಾಂಧಿಯವರೆ ಹಾಗೆ ಬಾಲಿಷವಾಗಿ ಹೇಳುತ್ತಿದ್ದಾರೆ ಎಂಬಂತೆ ಅಪಪ್ರಚಾರ ನಡೆಸಿತ್ತು. ನೈಜ ವಿವರಗಳಿಗಾಗಿ ವಿಡಿಯೋ ಕ್ಲಿಕ್ ಮಾಡಿ.