Advertisement

ನೆಹರೂ ಒಬ್ಬ ವ್ಯಕ್ತಿಯಲ್ಲ, ಅವರೊಂದು ಸಿದ್ದಾಂತ, ಅವರೊಂದು ಚಿಂತನೆ - ಹರ್ಷಕುಮಾರ್ ಕುಗ್ವೆ

Advertisement

ಈ ಇಂಟರ್ನೆಟ್ ಯುಗದಲ್ಲಿ ಮೂಲಭೂತವಾದಿಗಳು ದುರುದ್ದೇಶ ಪೂರಿತವಾಗಿ ನೆಹರೂರವರನ್ನು ತುಚ್ಚವಾಗಿ ತಪ್ಪರ್ಥೈಸಿ ಬಿಂಬಿಸುವ ಕೆಲಸವನ್ನು ಸತತವಾಗಿ ಮಾಡಿಕೊಂಡು ಬರುತ್ತಿದ್ದಾರೆ. ನೆಹರೂರವರು ಈ ದೇಶವನ್ನು ಜಾತ್ಯಾತೀತ ನೆಲೆ ಆಧಾರದಲ್ಲಿ ಕಟ್ಟಿದವರು. ಸ್ವಾತಂತ್ರ್ಯದೊರೆತಾಗ ದೇಶವನ್ನು ಧರ್ಮದ ಆಧಾರದಲ್ಲಿ ಪರಿಗಣಿಸದೇ ಜಾತ್ಯಾತೀತ ನೆಲೆಯಲ್ಲಿ ಪರಿಗಣಿಸಿ ಆಡಳಿತ ನಡೆಸಿದ್ದರ ಪರಿಣಾಮವೇ ಇಂದು ದೇಶ ವಿಶ್ವದ ಮೂರನೇ ಸ್ಥಾನದಲ್ಲಿ ನಿಂತಿದೆ. ಧರ್ಮದ ವಿಷಯದಲ್ಲಿ ತಟಸ್ಥವಾಗಿ ಉಳಿಯಬೇಕು ಈ ದೇಶದ ಸಮಸ್ಯೆಗಳಿಗೆ ಸಮಾಜವಾದ ಮದ್ದು ಎಂದು ಈ ದೇಶದಅಭಿವೃದ್ಧಿಗೆ ತಳಪಾಯವನ್ನು ಹಾಕಿದರು.ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದೂ ಮುಸ್ಲಿಂರು ಐಕ್ಯತೆಯಿಂದ ಹೋರಾಡಿದರು.ಆ ಪರಂಪರೆಇಂದೂ ಮುಂದುವರಿಯುತ್ತಿದೆ.ಅದಕ್ಕೆ ನೆಹರೂ ಚಿಂತನೆ ಕಾರಣ. ನೆಹರೂ ಕಟ್ಟಿದ ದೇಶದ ಅಭಿವೃದ್ಧಿಯ ತಳಪಾಯ ಎಷ್ಟು ಭದ್ರವಾಗಿದೆ ಎಂದರೆ ಇವತ್ತಿಗೂ ಅದನ್ನು ಏನೂ ಮಾಡಲು ಸಾಧ್ಯವಿಲ್ಲ. ನೆಹರೂ ವಿರೋಧಿಗಳು ಅದರ ಬಗ್ಗೆ ಎಂತಹ ಅಪಪ್ರಚಾರ ಮಾಡಿದರೂ ಅವರಿಗೇನೂ ಆಗೊದಿಲ್ಲ. ಏಕೆಂದರೆ ನೆಹರೂ ಒಬ್ಬ ವ್ಯಕ್ತಿಯಲ್ಲ ಅದೊಂದು ಐಡಿಯೋಲಜಿ,ಅದೊಂದು ಸಿದ್ದಾಂತ,ಅದೊಂದು ಆಲೋಚನೆ ಎಂದು ಪತ್ರಕರ್ತರೂ, ಸಾಮಾಜಿಕ ಕಾರ್ಯಕರ್ತರೂ ಆದ ಹರ್ಷಕುಮಾರ್ ಕುಗ್ವೆ ಹೇಳಿದ್ದಾರೆ. ಅವರು ಸೇವಾ ಮತ್ತು ಸಾಂಸ್ಕøತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ನ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಹಿನ್ನಲೆಯಲ್ಲಿ ಜರಗಿದ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾವಿದ್ಯಾರ್ಥಿಗಳ ನೆಹರೂ ಬಗ್ಗೆ ವಿಡಿಯೋ ಭಾಷಣ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಬಹುಮಾನ ವಿತರಿಸಿ ನುಡಿದರು. ನಮಗೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಬ್ರಿಟೀಷರು ಈ ದೇಶದ ಕೈಗಾರಿಕೆ, ಕೃಷಿಗಳನ್ನು ಮಾಡಿದೇಶವನ್ನು ವಿನಾಶದ ಅಂಚಿಗೆ ತಳ್ಳಿದ್ದರು.ಕೈಗಾರಿಕೆಯಿಂದ ದೇಶದಲ್ಲಿ ನಿರುದ್ಯೋಗ ಹೆಚ್ಚಾಗುವುದು ಎಂದು ಗಾಂಧಿ ಭಾವಿಸಿದ್ದರೂ ನೆಹರೂರವರು ಕೈಗಾರಿಕೆಗಳನ್ನು ಸ್ಥಾಪಿಸದಿದ್ದರೆ ದೇಶ ಅಭಿವೃದ್ಧಿ ಆಗೋದಿಲ್ಲ ಎಂದು ಮನಗಂಡು ಕೈಗಾರಿಕೆ ಮತ್ತು ಕೃಷಿಗೆ ಒತ್ತುಕೊಟ್ಟ ಆರ್ಥಿಕ ಅಭಿವೃದ್ಧಿಗೆ ಮುನ್ನುಡಿ ಬರೆದರು.ಅದರೊಂದಿಗೆ ಅವರು ವಿದೇಶಾಂಗ ನೀತಿಯನ್ನು ಸಮರ್ಥವಾಗಿ ಬಳಸಿಕೊಂಡು ಎರಡು ಪ್ರಭಾವಿ ಶಕ್ತಿಗಳ ನಡುವೆ ಅನುಸರಿಸಿದ ಅಲಿಪ್ತ ನೀತಿಯಿಂದಾಗಿ ಭಾರತಕ್ಕೊಂದು ಸ್ಥಾನ ಮಾನ ದೊರೆಯಿತು. ವೈವಿದ್ಯತೆಯನ್ನು ಉಳಿಸಿಕೊಂಡು ಪ್ರಜಾಪ್ರಭುತ್ವದ ತಳಹದಿಯೊಳಗೆ ದೇಶವನ್ನು ಕಟ್ಟಿದರೆ ಮಾತ್ರದೇಶಕ್ಕೆ ಭವಿಷ್ಯವಿದೆ ಎಂದು ಗಟ್ಟಿಯಾಗಿ ನಂಬಿದ ನೆಹರೂರವರಿಗೆ ದೇಶದ ಚುಕ್ಕಾಣಿ ಕೈಗೆ ಸಿಕ್ಕಿದಾಗ ಈ ದೇಶ ಎಂತಹ ದುಸ್ಥಿತಿಯಲ್ಲಿತ್ತು ಎಂಬುದು ಇಂದು ನೆಹರೂರವರನ್ನು ಹೀನಾಯಿಸುವ ಮಂದಿಗೆ ಗೊತ್ತಿಲ್ಲ. ದೇಶವನ್ನು ರಾತ್ರೋರಾತ್ರಿ ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ. ಅದು ಹಂತ ಹಂತವಾಗಿ ಆಗಬೇಕಾದ ಪ್ರಕ್ರಿಯೆ ಎಂದು ನೆಹರೂರವರು ನಂಬಿದ್ದರು. ಅಭಿವೃದ್ಧಿ ಎಂಬುದುರಾತ್ರೋರಾತ್ರಿ ಆಗುವಂತದು ಎಂದು ತಪ್ಪುಕಲ್ಪನೆಯಲ್ಲಿರುವವರ ಕೈಯಲ್ಲಿ ಇಂದು ಆಡಳಿತ ಇದೆ.ಇದರಿಂದ ದೇಶಕ್ಕೆ ಹಾನಿ ವಿನಃ ಅಭಿವೃದ್ಧಿ ಅಲ್ಲ ಎಂದರು. ಅಧ್ಯಕ್ಷತೆ ವಹಿಸಿದ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆಕಾಲೇಜಿನ ಸ್ನಾತಕೋತ್ತರ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಡಾ| ಪ್ರಸಾದ್ರಾವ್ ಎಂ ಅವರು, ದೊಡ್ಡದೊಡ್ಡ ಕೈಗಾರಿಕೆಗಳು ಮತ್ತು ಅಣೆಕಟ್ಟುಗಳು ಆಧುನಿಕ ಭಾರತದ ದೇವಸ್ಥಾನಗಳು ಎಂದು ಸ್ಪಷ್ಟವಾಗಿ ನಂಬಿದ ನೆಹರೂರವರು ಒಂದುಹೊಸ ದೇಶಕ್ಕೆ ಬೇಕಾದ ವಿದೇಶಾಂಗ ನೀತಿಯನ್ನುಆಧ್ಯಾತ್ಮದ ನೆಲೆಯಲ್ಲಿ ರೂಪಿಸಿದರು. ಇಂದು ಭಾರತ ಶಾಂತಿ ಪ್ರಿಯದೇಶ ಎಂದು ಕರೆಸಿಕೊಂಡಿದ್ದರೆ ಅದಕ್ಕೆಕಾರಣ ಭಾರತ ರಷ್ಯಾ ಅಥವಾ ಅಮೇರಿಕಾದ ಜೊತೆಗೆ ಹೋಗದೆ ತಟಸ್ಥವಾಗಿದ್ದುದು.ನೆಹರೂ ಅನುಸರಿಸಿದ ಅಲಿಪ್ತ ನೀತಿ ಇಂದು ಭಾರತದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವನ್ನು ವಹಿಸಿದೆ. ಭಾರತದ ಚಾರಿತ್ರಿಕ ಬದಲಾವಣೆಗೆ ನೆಹರೂ ಮತ್ತು ಆ ಕಾಲದ ಚಿಂತಕರ ಕೊಡುಗೆ ಅಪಾರವಾದುದು. ನೆಹರೂ ಚಿಂತನೆಗಳನ್ನು ಇಂದು ಕೆಲವರು ತಪ್ಪು ಅರ್ಥೈಸಿ ಮಾತನಾಡುತ್ತಿದ್ದಾರೆ.ಅದಕ್ಕೆ ಅವರೆಷ್ಟು ಕಾರಣರೋ ಅಷ್ಟೆ ಕಾರಣ ನೆಹರೂ ಚಿಂತನೆಯನ್ನುಒಪ್ಪುವವರು .ಅವರು ನೆಹರೂಚಿಂತನೆಯನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಬದಲಾದ ತಂತ್ರ ಭಾಷೆಯ ಈ ಯುಗದಲ್ಲಿ ನಾವು ಮಕ್ಕಳಿಗೆ ಅದೇ ಭಾಷೆಯಲ್ಲಿ ನೆಹರೂರವರನ್ನು ಕಟ್ಟಿಕೊಡಬೇಕಾಗಿದೆ ಎಂದರು. ಸಮಾರಂಭದಲ್ಲಿ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 41 ವರ್ಷ ಸೇವೆ ಸಲ್ಲಿಸಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಸಂಸ್ಥೆಯ ಹಿತೈಷಿ ಶ್ರೀ ಗಣಪತಿ ಕಾರಂತರನ್ನು ಸಂಮಾನಿಸಲಾಯಿತು. ಪ್ರಾರಂಭದಲ್ಲಿ ನಿಖಿತ್ಯು.ಕರ್ಕೇರ ಪ್ರಾರ್ಥಿಸಿದರು, ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶೇಖರ್ ಕೆ.ಕೋಟ್ಯಾನ್ ಸ್ವಾಗತಿಸಿದರು.ನಿರ್ದೇಶಕರಾದ ಉದ್ಯಾವರ ನಾಗೇಶ್ಕುಮಾರ್ರವರು ಸ್ಪರ್ಧೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಅಧ್ಯಕ್ಷ ಶ್ರೀ ಆಬಿದ್ ಆಲಿಯವರು ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಕೊನೆಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಪಳ್ಳಿ ಧನ್ಯವಾದವಿತ್ತರು. ಮಾಜಿ ಅಧ್ಯಕ್ಷ ಅನುಪ್ಕುಮಾರ್ರವರು ಕಾರ್ಯಕ್ರಮ ನಿರ್ವಹಿಸಿದರು. _____________________________________ ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement