Advertisement

'ಸಿದ್ದರಾಮಯ್ಯನವರನ್ನು ಆರೆಸ್ಸೆಸ್ ಕಚೇರಿಗೆ ಆಹ್ವಾನಿಸಿದ ಸಿ.ಟಿ ರವಿಗೆ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಸಂವಿಧಾನದ ಪಾಠ ಆಲಿಸುವಂತೆ ಕರೆಕೊಟ್ಟ ಕರ್ನಾಟಕ ಕಾಂಗ್ರೆಸ್'

Advertisement

ಬಿಜೆಪಿ, ಆರೆಸ್ಸೆಸ್‌ಗಳು ಮೂಲಭೂತವಾಗಿ ಸಂವಿಧಾನ ವಿರೋಧಿ. ಅವುಗಳು ಮೀಸಲಾತಿ, ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ ಎಲ್ಲವನ್ನೂ ವಿರೋಧಿಸುತ್ತವೆ: ಸಿದ್ದರಾಮಯ್ಯ ಗೋಹತ್ಯೆ ನಿಷೇಧ ಮತ್ತು ಲವ್ ಜಿಹಾದ್ ವಿಚಾರವಾಗಿ ಸಿದ್ದರಾಮಯ್ಯನವರು ಬಿಜೆಪಿ ಮತ್ತು ಆರೆಸ್ಸೆಸ್ ಕುರಿತು ನೀಡಿದ್ದ ಹೇಳಿಕೆಗೆ 'ಸಿದ್ದರಾಮಯ್ಯ ನವರಿಗೆ ಆರೆಸ್ಸೆಸ್ ಕುರಿತು ಅರಿವಿಲ್ಲ, ಸಂಘದ ರಾಷ್ಟ್ರೀಯವಾದವನ್ನು ಅರಿಯಲು ಸಿದ್ದರಾಮಯ್ಯ ನವರು ಆರೆಸ್ಸೆಸ್ ಕಚೇರಿಗೆ ಬರಲಿ' ಎಂದು ಆಹ್ವಾನಿಸಿದ ಸಿ.ಟಿ ರವಿಗೆ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಪ್ರತಿಕ್ರಿಯಿಸಿ 'ಆರ್ ಎಸ್ ಎಸ್ ಶಾಖೆಗೆ ಹೋಗಿ ನಾನು ಕಲಿಯುವಂತಹದ್ದು ಏನೂ ಇಲ್ಲ. ಅದರ ಬಗ್ಗೆ ತಿಳಿದುಕೊಂಡೇ ವಿರೋಧಿಸುತ್ತಿದ್ದೇನೆ. ಆಡಳಿತ ನಡೆಸುವವರಿಗೆ ಸಂವಿಧಾನ ಗೊತ್ತಿರಬೇಕು, ಆರೆಸ್ಸೆಸ್ ಅಲ್ಲ. ಬಿಜೆಪಿ ನಾಯಕರು ಮೊದಲು ಸಂವಿಧಾನವನ್ನು ಓದಲಿ. ಬೇಕಾದರೆ ನಾನೇ ಸಂವಿಧಾನದ ಪಾಠ ಮಾಡ್ತೇನೆ. ಬಿಜೆಪಿ ಮತ್ತು ಆರ್ ಎಸ್ ಎಸ್ ಮೂಲಭೂತವಾಗಿ ಸಂವಿಧಾನ ವಿರೋಧಿ. ಅದು ಮೀಸಲಾತಿ, ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ ಎಲ್ಲವನ್ನೂ ವಿರೋಧಿಸುತ್ತದೆ. ಅವರು 'ಮಿಲ್ಲರ್ ವರದಿ'ಯಿಂದ 'ಮಂಡಲ್ ವರದಿ' ವರಗೆ ಮೀಸಲಾತಿಯನ್ನು ವಿರೋಧಿಸುತ್ತಾ ಬಂದವರು, 'ಮನುಸ್ಮೃತಿ'ಗೆ ಬದ್ಧರಾಗಿರುವವರು. ಲವ್ ಜಿಹಾದ್, ಗೋಹತ್ಯೆ ನಿಷೇಧದ ಮಾತುಗಳೆಲ್ಲ ತಮ್ಮ ಆಡಳಿತ ವೈಫಲ್ಯದಿಂದ ಜನಮನವನ್ನು ಬೇರೆಡೆ ಸೆಳೆಯುವ ಬಿಜೆಪಿ ನಾಯಕರ ಹತಾಶ ಪ್ರಯತ್ನ. ಅವರಿಗೆ ಸಾಧನೆಯ ಬಲದಿಂದ ಚುನಾವಣೆ ಗೆಲ್ಲುವ ಆತ್ಮವಿಶ್ವಾಸ ಇಲ್ಲ. ಇದಕ್ಕಾಗಿ ಕೋಮುದ್ವೇಷ ಹುಟ್ಟಿಸಲು‌‌ ಈ‌ ಕುತಂತ್ರ. ಮದುವೆಗೆ ಜಾತಿ-ಧರ್ಮಗಳ ನಿರ್ಬಂಧ ಕಾನೂನಿನಲ್ಲಿ ಇಲ್ಲ. ದೇಶದ ಯಾವ ಕಾನೂನು ಕೂಡಾ ಲವ್ ಜೆಹಾದ್ ಎಂದರೆ ಏನು ಎಂದು ವ್ಯಾಖ್ಯಾನಿಸಿಲ್ಲ ಎಂದು ಕೇಂದ್ರ ಗೃಹಸಚಿವರೇ ಸಂಸತ್ ನಲ್ಲಿ ಹೇಳಿದ್ದಾರೆ. ಈ ಕುರಿತು ಸಿ.ಟಿ ರವಿಯವರು ಗೃಹಸಚಿವರನ್ನು ಕೇಳಿಕೊಂಡು ಬಂದು ಮಾತನಾಡಲಿ' ಎಂದು ಹೇಳಿದ್ದಾರೆ 'ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಅಂತರಧರ್ಮೀಯ ಮದುವೆ ಅಕ್ರಮ ಎಂದು ಹೇಳಿಲ್ಲ. ಆ ತೀರ್ಪನ್ನು ಉಲ್ಲೇಖಿಸುವವರು ಮೊದಲು ಅದನ್ನು ಓದಿಕೊಳ್ಳಲಿ. ಇಷ್ಟಪಟ್ಟವರನ್ನು ವಿವಾಹವಾಗುವ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ. ಗೂಂಡಾರಾಜ್ಯವಾದ ಉತ್ತರಪ್ರದೇಶ ನಮಗೆ ಮಾದರಿ ಅಲ್ಲ. ಗೋಹತ್ಯೆಯ ಬಗ್ಗೆ ಬಿಜೆಪಿ ನಾಯಕರದ್ದು ದಂದ್ವ ನಿಲುವು. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಗೋಮಾಂಸ ರಫ್ತು ಹಲವು ಪಟ್ಟು ಹೆಚ್ಚಾಗಿದೆ. ಅತೀ ಹೆಚ್ಚು ಗೋಮಾಂಸ ರಫ್ತು ನಡೆಯುತ್ತಿರುವುದು ಉತ್ತರಪ್ರದೇಶದಲ್ಲಿ. ಹೆಚ್ಚಿನ ಗೋಮಾಂಸ ವ್ಯಾಪಾರಿಗಳು ಬಿಜೆಪಿ ಪಕ್ಷಕ್ಕೆ ಸೇರಿದವರು. ಗೋಹತ್ಯೆ ನಿಷೇಧದ ಕುರಿತಾದ ನಮ್ಮ ನಿಲುವಿನಲ್ಲಿ ಬದಲಾವಣೆಯಿಲ್ಲ. ಬಿಜೆಪಿ ಸರ್ಕಾರ 1964ರ ಗೋಹತ್ಯೆ ನಿಷೇಧ ಕಾಯ್ದೆಗೆ ತಂದಿದ್ದ ತಿದ್ದುಪಡಿಯನ್ನು ನಮ್ಮ ಸರ್ಕಾರ ರದ್ದುಗೊಳಿಸಿ ಮೂಲ ಕಾಯ್ದೆಯನ್ನು ಉಳಿಸಿಕೊಂಡಿದೆ. ಈ ನಿಲುವಿಗೆ ನಾವು ಬದ್ಧರಾಗಿದ್ದೇವೆ ಮತ್ತು ಸಂವಿಧಾನವನ್ನು ಪಾಲಿಸುತ್ತೇವೆ' ಎಂದು ಹೇಳಿದ್ದಾರೆ. 'ಸಿದ್ದರಾಮಯ್ಯನವರನ್ನು ಆರೆಸ್ಸೆಸ್ ಕಚೇರಿಗೆ ಆಹ್ವಾನಿಸಿದ ಸಿ.ಟಿ ರವಿಗೆ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಸಂವಿಧಾನದ ಪಾಠ ಆಲಿಸುವಂತೆ ಕರೆಕೊಟ್ಟ ಕರ್ನಾಟಕ ಕಾಂಗ್ರೆಸ್' ಈ ಕುರಿತು ಸಿದ್ದರಾಮಯ್ಯನವರ ಜೊತೆ ಧ್ವನಿಗೂಡಿಸಿ, ಖಾರವಾಗಿ ಪ್ರತಿಕ್ರಿಯಿಸಿರುವ ಕರ್ನಾಟಕ ಕಾಂಗ್ರೆಸ್ ತಮ್ಮ ಪಕ್ಷದ ಕಚೇರಿಗೆ ಭೇಟಿ ನೀಡಿ ಸಂವಿಧಾನದ ಪಾಠ ಆಲಿಸುವಂತೆ ಕರೆ ನೀಡಿದೆ. 'ಮಾನ್ಯ ಸಿ.ಟಿ ರವಿಯವರೆ, ನಿಮ್ಮನ್ನು ಕಾಂಗ್ರೆಸ್ ಕಛೇರಿಗೆ ಆಹ್ವಾನಿಸುತ್ತೇವೆ. ದೇಶದ ಇತಿಹಾಸ, ದೇಶಕ್ಕೆ ಕಾಂಗ್ರೆಸ್ ಕೊಡುಗೆ, ಜಾತ್ಯತೀತ ಸಿದ್ದಾಂತ, ಬಹುತ್ವ ಭಾರತದ ಅಂತಃಶಕ್ತಿ, ಸೌಹಾರ್ದತೆಯ ಅಗತ್ಯತೆ, ಸಂವಿಧಾನದ ಆಶಯಗಳ ಬಗ್ಗೆ ನೀವು ತಿಳಿದುಕೊಳ್ಳುವ ಅಗತ್ಯವಿದೆ, ಆ ಕುರಿತು ನಾವು ನಿಮಗೆ ಅರಿವು ನೀಡುತ್ತೇವೆ. ಆರೆಸ್ಸೆಸ್ ಚಿಂತನೆಗಳನ್ನ ಬಿಟ್ಟು ನಮ್ಮ ಕಚೇರಿಗೆ ಬನ್ನಿ. ಗಾಂಧಿ ಹತ್ಯೆಯಲ್ಲಿ ಕೈವಾಡವಿರುವ ವಿಚಾರದಲ್ಲಿ ಸರ್ದಾರ್ ವಲ್ಲಭಾಯ್ ಪಟೇಲ್ ಅವರಿಂದ ನಿಷೇಧಕ್ಕೊಳಪಟ್ಟಿದ್ದ, ತ್ರಿವರ್ಣ ಧ್ವಜವನ್ನ ಒಪ್ಪದಿದ್ದ, ಸಂವಿಧಾನವನ್ನು, ಅದರ ಆಶಯಗಳನ್ನು ಗೌರವಿಸದ ಸಂಘಟನೆಯಿಂದ ನಾವು ಕಾಂಗ್ರೆಸಿಗರು ಕಲಿಯುವಂತಹುದು ಏನೂ ಇಲ್ಲ. ಆ ಕಾರಣಕ್ಕಾಗಿ ನೀವು ಆರೆಸ್ಸೆಸ್‌ನ ಕೋಮುವಾದಿ, ಮನುವಾದಿ ಮನಸ್ಥಿತಿಯನ್ನು ಬಿಟ್ಟು ನಮ್ಮ ಕಾಂಗ್ರೆಸ್ ಕಚೇರಿಗೆ ಅಗತ್ಯವಾಗಿ ಬನ್ನಿ, ಸಂವಿಧಾನದ ಪಾಠವನ್ನು ನಾವು ಕಲಿಸುತ್ತೇವೆ' ಎಂದು ಕರೆ ನೀಡಿದೆ. ___________________________________ ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement