ಉಡುಪಿ

ಪಂಚಾಯತ್ ಚುನಾವಣೆ; ಕಾಂಗ್ರೆಸ್ ಆಡಳಿತಾವಧಿಯ ಅಭಿವೃದ್ದಿಗಳನ್ನು ಮರೆಯಲಾಗದು ಅಂತಾರೆ ಬಸ್ರೂರು ಗ್ರಾಮದ ಜನರು!

ಇಂದಿನ ಬಸ್ರೂರು ಗ್ರಾಮ ಬ್ರಿಟಿಷ್ ಕಾಲದ ಐತಿಹಾಸಿಕವಾದ ನಗರವಾಗಿದೆ. ಬ್ರಿಟಿಷ್ ಆಡಳಿತದ ಕಾಲದಲ್ಲಿ ಈ ನಗರ ಮತ್ತು ಬಾರ್ಕೂರುಗಳು ಮುಖ್ಯವಾದ ವ್ಯಾಪಾರ ಕೇಂದ್ರವಾಗಿತ್ತು. ಬಸ್ರೂರಿನಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಶಿಕ್ಷಣಕ್ಕೆ ಮಹತ್ವ ಇತ್ತು ಎನ್ನುವುದಕ್ಕೆ ಇಲ್ಲಿನ 150ವರ್ಷಗಳ ಇತಿಹಾಸವಿರುವ ಬಿ.ಎಮ್ ಶಾಲೆ ಬಹುದೊಡ್ಡ ಉದಾಹರಣೆ ಆಗಿದೆ. ಹಾಗೆಯೇ ಇಲ್ಲಿನ ಪ್ರೌಢ ಶಾಲೆಗೆ ಹಾಗೂ ಶಾರದಾ ಕಾಲೇಜಿಗೆ ಕೂಡ 50ವರ್ಷಗಳ ಇತಿಹಾಸ ಇದೆ. ಇದು ಇಲ್ಲಿನ ಆ ಕಾಲದ ಜನರು ಶಿಕ್ಷಣಕ್ಕೆ ನೀಡುತ್ತಿದ್ದ ಮಹತ್ವವನ್ನು ಎತ್ತಿ ತೋರಿಸುತ್ತದೆ. ಈ ಗ್ರಾಮ ಒಂದು ಮತೀಯ ಸೌಹಾರ್ಧತೆಯ ಮಾದರಿ ಕೇಂದ್ರ ಕೂಡ ಹೌದು. ತಮ್ಮ ರಾಜಕೀಯ ಲಾಭಕ್ಕಾಗಿ ಕೋಮುವಾದಿ ಪಕ್ಷಗಳು ಆಗಾಗ ಸೌಹಾರ್ಧತೆ ಕೆಡಿಸಲು ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರಾದರೂ ಇಲ್ಲಿನ ಹಿಂದೂ ಮುಸಲ್ಮಾನ ಮತ್ತು ಕ್ರೈಸ್ತರ ಸೌಹಾರ್ಧತೆ ಅದೆಷ್ಟು ಗಟ್ಟಿಯಾಗಿದೆ ಎಂದರೆ ದೇಶದೆಲ್ಲೆಡೆ ಗಲಭೆಗಳು ಆದಾಗಲೂ ಇಲ್ಲಿನ ಜನ ಏನೂ ನಡೆದಿಲ್ಲವೆಂಬಂತೆ ಇರುತ್ತಾರೆ ಎಂಬುವುದು ಒಂದು ಸಾರ್ವತ್ರಿಕ ಅಭಿಪ್ರಾಯವಾಗಿದೆ.2010 ರಿಂದ 2015 ರ ಅವಧಿಯ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಬಸ್ರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾಡಲಾದ ಅಭಿವೃದ್ಧಿ ಆ ನಂತರ ಅಥವಾ ಅದಕ್ಕೂ ಮೊದಲು ಯಾವುದೇ ಅವಧಿಯಲ್ಲಿಯೂ ಆಗಿರಲಿಲ್ಲ ಅಂತಾರೆ ಬಸ್ರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮತದಾರರು. ‘2010-15ರ ಆ ಅವಧಿ ಬಸ್ರೂರು ಗ್ರಾಮ ಪಂಚಾಯತ್ ಗೆ ಒಂದು ಸುವರ್ಣ ಅವಧಿ ಎಂದರೆ ತಪ್ಪಾಗದು, ಏಕೆಂದರೆ ಆಗಿನ ಅಧ್ಯಕ್ಷರಾಗಿದ್ದ ಕೋಳ್ಕೆರೆ ವಿಕಾಸ್ ಹೆಗ್ಡೆ ಮತ್ತು ಸುಮತಿ ಶಂಕರ್ ಮೆಂಡನ್ ಹಾಗೂ ಅದೇ ಅವಧಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ದೇವಾನಂದ ಶೆಟ್ಟಿ ಮತ್ತು ಜ್ಯೋತಿ ಪುತ್ರನ್ ರವರು ಜಂಟಿಯಾಗಿ ಬಸ್ರೂರು ಗ್ರಾಮ ಪಂಚಾಯತ್ ಗೆ ಸರ್ಕಾರದಿಂದ ಬರಬೇಕಾದ ಅನುದಾನಗಳನ್ನು ಮಾತ್ರವಲ್ಲದೇ ವಿಧಾನಪರಿಷತ್ ಸದಸ್ಯರ ಅನುದಾನದಿಂದ, ಸಂಸದರ ಅನುದಾನದಿಂದ ಹಾಗೂ ರಾಜ್ಯಸಭಾ ಸದಸ್ಯರ ಅನುದಾನಗಳನ್ನು ತರುವ ಮೂಲಕ ವಿವಿಧ ರೀತಿಯಾಗಿ ಗ್ರಾಮದ ಅಭಿವೃದ್ಧಿಯಲ್ಲಿ ಬಹು ಮುಖ್ಯ ಪಾತ್ರದಾರಿಗಳಾಗಿದ್ದಾರೆ’ ಹಾಗೂ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿದ್ದ ಬಿ.ಎಸ್ ಪ್ರತಾಪ್ ಚಂದ್ರ ಶೆಟ್ಟರ ಅವದಿಯಲ್ಲಿಯೂ ಈ ಗ್ರಾಮ ಉತ್ತಮವಾದ ಅಭಿವೃದ್ಧಿ ಕಂಡಿತ್ತು ಎನ್ನುವುದು ಆ ಗ್ರಾಮದ ಬಹು ಜನರ ಅಭಿಪ್ರಾಯವಾಗಿದೆ.

14.75 ಕೋಟಿ ರೂಪಾಯಿ ಅನುದಾನದ ಮೂಲಕ ಹಟ್ಟಿಕುದ್ರು ಸಂಪರ್ಕ ಸೇತುವೆ, 50ಲಕ್ಷ ಅನುದಾನದಿಂದ ಕುಡಿಯುವ ನೀರಿನ ಟ್ಯಾಂಕ್, ಮನೆಮನೆಗೆ ನೀರಿನ ಸಮಪರ್ಕ, ಬಸ್ರೂರು- ಉಳ್ಳೂರು ಸಂಪರ್ಕ ರಸ್ತೆ, ಗುಂಡಿಗೋಳಿಗೆ ನೂರಕ್ಕೂ ಹೆಚ್ಚು ದಾರಿದೀಪ, ಹತ್ತು ಲಕ್ಷ ರೂಪಾಯಿ ಅನುದಾನದಲ್ಲಿ ಕೋಳ್ಕೆರೆ ಜನತಾ ಕಾಲನಿಗೆ ಸಾರ್ವಜನಿಕ ಬಾವಿ ರಚನೆ, ಗ್ರಾಮದಾದ್ಯಂತ ಕಾಂಕ್ರೀಟ್ ರಸ್ತೆಗಳ ನಿರ್ಮಾಣಗಳ ಮೂಲಕ ಆಗಿನ ಕಾಂಗ್ರೆಸ್ ಆಡಳಿತ ಅಭಿವೃದ್ಧಿ ಮಾಡಿತ್ತು. ಎಲ್ಲಕ್ಕಿಂತ ಹೆಚ್ಚಾಗಿ 2010ರಲ್ಲಿ ವಿಕಾಸ್ ಹೆಗ್ಡೆಯವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡುವ ವೇಳೆಗೆ ಗ್ರಾಮ ಪಂಚಾಯತ್ ನ 7ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಾಕಿ ಇತ್ತು ಹಾಗೆಯೇ 2015ರಲ್ಲಿ ಅವರು ಅಧಿಕಾರ ಬಿಡುವ ವೇಳೆಗೆ ಅದು ಸಂಪೂರ್ಣ ಚುಕ್ತಾ ಮಾಡಲಾಗಿತ್ತು ಎನ್ನುತ್ತಾರೆ ಗ್ರಾಮದ ಹೆಸರು ಹೇಳಲಿಚ್ಚಿಸದ ಓರ್ವ ಹಿರಿಯ ಮತದಾರರು.

ಇದೀಗ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ 4ನೆ ಅವಧಿಗೆ ಸ್ಪರ್ಧಿಸುತ್ತಿರುವ ವಿಜಯಧರ ಪೂಜಾರಿ, 2ನೇ ಅವಧಿಗೆ ಸ್ಪರ್ಧಿಸುತ್ತಿರುವ ಅಬ್ಬಾಸ್ ಬ್ಯಾರಿ, 4ನೇ ಅವಧಿಗೆ ಸ್ಪರ್ಧಿಸುತ್ತಿರುವ ಶಶಿಕಲಾ, ಕೋಳ್ಕೆರೆ ಅರುಣ್ ಕುಮಾರ್ ಶೆಟ್ಟಿ, ಹಟ್ಟಿಕುದ್ರು ನರಸಿಂಹ ಪೂಜಾರಿ, ಮಾಜಿ ಅಧ್ಯಕ್ಷರಾದ ಸುಮತಿ ಶಂಕರ್ ಮೆಂಡನ್, ಮಾಜಿ ಉಪಾಧ್ಯಕ್ಷರಾದ ಸುಶೀಲಾ ನಾಗರಾಜ್, ಗಿರಿಜಾ ರತ್ನಾಕರ್ ಶೆಟ್ಟಿ, ಗಿರಿಜಾ ವೀರ, ಬಿ.ವಿ ಶ್ರೀಧರ್, ಸುಶೀಲಾ ಎಂ. ಪೂಜಾರಿ, ಅಂಜುಮ್ ಆರಾ ಇಮ್ತಿಯಾಝ್, ಗೋಪಾಲ ಪೂಜಾರಿ, ಶಾಲಿನಿ ಮೋಗವೀರ, ಮೊಸೆಸ್ ಮನೋಹರ್ ಸ್ಪರ್ಧಿಸುತ್ತಿದ್ದಾರೆ.

ನಾವು ಅಧಿಕಾರಕ್ಕೆ ಬಂದರೆ ಬಸ್ರೂರು ಗ್ರಾಮದ ಅಭಿವೃದ್ಧಿಯ ಕುರಿತು ತಮ್ಮ ನೀಲನಕ್ಷೆಯನ್ನು ಈ ರೀತಿಯಾಗಿ ಬಿಚ್ಚಿಡುತ್ತಾರೆ ಕಾಂಗ್ರೆಸ್ ಬೆಂಬಲಿತ ಮೇಲಿನ ಅಭ್ಯರ್ಥಿಗಳು. •ರೈಲ್ವೆ ಸೇತುವೆಯಿಂದ ಮಂಡಿಬಾಗಿಲು ತನಕ ರಿಂಗ್ ರಸ್ತೆ ನಿರ್ಮಾಣ. • ಬಸ್ ನಿಲ್ದಾಣ ಮತ್ತಿತರ ಮುಖ್ಯರಸ್ತೆಗಳಲ್ಲಿ ಚರಂಡಿ ರಚನೆ. •ಸರಕಾರಿ ಪಿ.ಯು ಕಾಲೇಜು ಹಾಗೂ ಸರ್ಕಾರಿ ಪದವಿ ಕಾಲೇಜು ನಿರ್ಮಾಣಕ್ಕೆ ಹೋರಾಟ. •ಕೊಳ್ಕೆರೆ ಮತ್ತು ಕೃಷಿತೋಡು ಹೂಳೆತ್ತುವಿಕೆ.•ಸುಮಾರು ಐವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಶಿಥಿಲಗೊಂಡಿರುವ ಮೂಡ್ಕೆರೆ ವೆಂಟೆಡ್ ಡ್ಯಾಂ ಹೊಸದಾಗಿ ನಿರ್ಮಾಣದ ಗುರಿ. •ಮೂಡ್ಕರೆ ರಸ್ತೆ ಕಾಂಕ್ರೀಟಿಕರಣ. •ಸರ್ಕಾರಿ ಜಾಗವನ್ನು ನಿವೇಶನಗಳನ್ನಾಗಿ ಮಾಡಿ ಗ್ರಾಮದ ನೈಜ ಭೂರಹಿತರಿಗೆ ಹಂಚುವಿಕೆ. •ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಹೈನುಗಾರಿಕಾ ಇಲಾಖೆಗಳ ಅಧಿಕಾರಿಗಳನ್ನು ಪಂಚಾಯತ್ ಗೆ ಕರೆಸಿ ಅಲ್ಲಿಂದಲೇ ಸರ್ಕಾರಿ ಸೌಲಭ್ಯಗಳನ್ನು ವಿತರಿಸುವ ಮೂಲಕ ಕಚೇರಿಗಳಿಂದ ಕಚೇರಿಗಳಿಗೆ ಜನಸಾಮಾನ್ಯರ ಅನಗತ್ಯವಾದ ಅಲೆದಾಟವನ್ನು ತಪ್ಪಿಸುವುದು ಮುಂತಾದವುಗಳನ್ನು ನಾವು ಪ್ರಾಮಾಣಿಕವಾಗಿ ಮಾಡುವುದೇ ನಮ್ಮ ಗುರಿಯಾಗಿದೆ ಎಂದು.

_________________________________________

►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

0Shares