Advertisement

ಬೈಂದೂರು ವಿಧಾನಸಭಾ ಕ್ಷೇತ್ರದ ನಾವುಂದ ಗ್ರಾಮ ಪಂಚಾಯತ್ ಚುನಾವಣಾ ಕಣದಲ್ಲಿ ಜನಾನುರಾಗಿ ಯುವಕ ಪ್ರಮೋದ್ ಪೂಜಾರಿ

Advertisement

ಲೇಖನ: ಕಮಲಾಕರ ಕಾರಣಗಿರಿ ನಾವುಂದ ಗ್ರಾಮ ಪಂಚಾಯತ್ ಎಂದೊಡನೆ ತಟ್ಟನೆ ನೆನಪಾಗುವುದು ನರಸಿಂಹ ದೇವಾಡಿಗರು. ಏಕೆಂದರೆ ಆ ಭಾಗದಲ್ಲಿ ಕಳೆದ 40ವರ್ಷಗಳಿಂದ ನಿರಂತರ ಗೆಲುವು ಸಾಧಿಸುವ ಮೂಲಕ 6ಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿ, 2ಬಾರಿ ಅಧ್ಯಕ್ಷರಾಗುವ ಮೂಲಕ ಜನಸೇವೆ ಮಾಡಿಕೊಂಡು ಬಂದಿರುವ ಅವರೊಬ್ಬ ಅಜಾತ ಶತ್ರು ಎಂದರೆ ಅತಿಶಯೋಕ್ತಿಯಾಗಲಾರದು. ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಅಪಾರ ತಿಳುವಳಿಕೆ ಹೊಂದಿರುವ ಇವರು ಗ್ರಾಮದ ಯಾರಾದರೂ ಅಶಕ್ತರು ಫೋನ್ ಮೂಲಕ ತಮ್ಮ ಸಮಸ್ಯೆ ಹೇಳಿದರೂ ಸರ್ಕಾರಿ ಸವಲತ್ತನ್ನು ಅವರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡುವ ಓರ್ವ ನಿಜವಾದ ಜನಸೇವಕ ಅಥವಾ ಜನನಾಯಕ ಎಂಬುವುದು ಪಕ್ಷಾತೀತವಾಗಿ ನರಸಿಂಹ ದೇವಾಡಿಗರ ಕುರಿತು ನಾವುಂದದ ಜನರ ಅಭಿಪ್ರಾಯವಾಗಿದೆ. ತನ್ನ ನಗುಮೊಗ, ಸಾಮಾಜಿಕ ಕಳಕಳಿ, ಕಷ್ಟಕ್ಕೆ ಸ್ಪಂದಿಸುವ ಗುಣಗಳಿಂದ ಹಾಗೂ ಸದಾ ಸಾಮಾಜಿಕ ನ್ಯಾಯದ ಕುರಿತು ಮಾತನಾಡುವ ಮೂಲಕ ಪರಿಸರದ ಜನರ ಗಮನಸೆಳೆದಿರುವ ಪ್ರಮೋದ್ ಪೂಜಾರಿ, ನರಸಿಂಹ ದೇವಾಡಿಗರ ತಂಡದ ಓರ್ವ ಸ್ಪರ್ಧಾಳುವಾಗಿ ನಾವುಂದದ ಅರಹೊಳೆ ವಾರ್ಡ್ ನಿಂದ ಕಣಕ್ಕಿಳಿದಿದ್ದಾರೆ. ಅನಾರೋಗ್ಯದ ಸಮಯದಲ್ಲಿ ನಡುರಾತ್ರಿಯಲ್ಲಿ ಯಾರೇ ಕರೆ ಮಾಡಿದರೂ ಲಗುಬಗೆಯಿಂದ ಓಡೋಡಿ ಬಂದು ತನ್ನದೇ ವಾಹನದಲ್ಲಿ ದೂರದ ಮಣಿಪಾಲ, ಮಂಗಳೂರಿನ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ, ತನ್ನದೇ ಹಣ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿ ವಾಪಾಸು ಕರೆತಂದು ಮನೆತಲುಪಿಸುವ ಪ್ರಮೋದ್ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಹು ಚಿರಪರಿಚಿತ ಹಾಗೂ ಜನಾನುರಾಗಿ ಯುವಕ. ತನ್ನ ರಾಜಕೀಯ ಜೀವನದುದ್ದಕ್ಕೂ ಕಾಂಗ್ರೆಸ್ ಪಕ್ಷದ 'ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು' ಸಿದ್ಧಾಂತವನ್ನು ಪ್ರತಿಪಾದಿಸಿಕೊಂಡಿರುವ ಕಾರಣಕ್ಕೆ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಅಭಿಮಾನಿ ವರ್ಗವನ್ನು ಹೊಂದಿರುವ ನರಸಿಂಹ ದೇವಾಡಿಗರಂತೆ, ಸದಾ ನಗುಮೊಗದ ಯುವ ಮುಖಂಡ ಪ್ರಮೋದ್ ಪೂಜಾರಿ ಕೂಡಾ ಎಲ್ಲಾ ಪಕ್ಷಗಳಲ್ಲೂ ತನ್ನದೇ ಆದ ಸ್ನೇಹಿತರನ್ನು ಹೊಂದಿದ್ದಾರೆ. ಅಭಿಪ್ರಾಯ ವ್ಯತ್ಯಾಸಗಳಿದ್ದರೂ ಆ ಯುವಕರಿಗೆ ತಿದ್ದಿ ತೀಡಿ ಹೇಳುವ ಪ್ರಬುದ್ಧತೆ ಎಳೆ ಪ್ರಾಯದಲ್ಲೇ ಪ್ರಮೋದ್ ರಲ್ಲಿ ಇದೆ. ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವದ ಯುವಕ ಪ್ರಮೋದ್ ಇದೀಗ ಸ್ಪರ್ದೆಗಿಳಿದಿರುವುದು ನಾವುಂದ ಮತ್ತು ಸುತ್ತಮುತ್ತಲಿನ ಜನರಲ್ಲಿ ಸಂತೋಷದ ವಾತಾವರಣ ಸೃಷ್ಟಿಸಿದೆ ಎನ್ನುವುದು ಅವರನ್ನು ಬಲ್ಲವರ ಅಭಿಪ್ರಾಯ. ನಾವುಂದ 2ನೇ ಕ್ಷೇತ್ರದಿಂದ ಸ್ಪರ್ದಿಸುತ್ತಿರುವ ಪ್ರಮೋದ್ 'ಆಟೋ ರಿಕ್ಷಾ' ಚಿಹ್ನೆಯಡಿ ಸ್ಪರ್ದಿಸುತ್ತಿದ್ದರೆ ಅದೇ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಗಳಾಗಿ ಸ್ಪರ್ದಿಸುತ್ತಿರುವ ಗೀತಾ ದೇವಾಡಿಗರವರು 'ಗ್ಯಾಸ್ ಅಂಡೆ' ಚಿಹ್ನೆಯಡಿ ಹಾಗೂ ಮತ್ತೊಬ್ಬ ಸ್ಪರ್ಧಿ ಶಾರಾದಾ ಪೂಜಾರಿಯವರು 'ಕುಕ್ಕರ್' ಚಿಹ್ನೆಯಡಿ ಸ್ಪರ್ದಿಸುತ್ತಿದ್ದಾರೆ. ಜನಸೇವೆಯಲ್ಲಿ ಆಸಕ್ತಿ ಹೊಂದಿರುವ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರುವ ಯುವಕರು ಗೆದ್ದುಬಂದಲ್ಲಿ ಮಾತ್ರವೇ ಗ್ರಾಮದ, ರಾಜ್ಯದ ಅಥವಾ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ. ಪ್ರಮೋದರಂತಹ ಯುವಕರು ಗೆದ್ದುಬಂದಲ್ಲಿ ಮಹಾತ್ಮ ಗಾಂಧಿಯವರು ಕಂಡ ಗ್ರಾಮಸ್ವರಾಜ್ಯದ ಕನಸು ನನಸಾಗಲಿದೆ. -------------------------------------- ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement