ಉಡುಪಿ

‘ಆಪತ್ಬಾಂದವ’ ಖ್ಯಾತಿಯ ಸ್ಟೀವನ್ ನೇತೃತ್ವದಲ್ಲಿ ಈ ಬಾರಿ ಕಾಂಗ್ರೆಸ್ ತೆಕ್ಕೆ ಸೇರಲಿದೆ ಹಂಗಳೂರು ಗ್ರಾಮ ಪಂಚಾಯತ್!

ಕುಂದಾಪುರದ ಶಾಸ್ತ್ರೀ ಸರ್ಕಲ್‌ ಪರಿಸರದಲ್ಲಿ ಯಾವುದೇ ಅಪಘಾತ ನಡೆಯಲಿ ದಡೀರ್ ಪ್ರತ್ಯಕ್ಷರಾಗಿ ಸಣ್ಣ ಗಾಯವಾಗಿದ್ದರೆ ಗಾಯಾಳುವನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗಳಿಗೆ, ದೊಡ್ಡ ಹಾಗೂ ಮಾರಣಾಂತಿಕ ಗಾಯವಾಗಿದ್ದರೆ ಮಣಿಪಾಲಕ್ಕೆ ತತ್‌ಕ್ಷಣವೇ ಕೊಂಡೊಯ್ದು ಗಾಯಾಳುಗಳ ಸಂಬಂಧಿಕರು ಬರುವ ತನಕವೂ ಎಲ್ಲಾ ಖರ್ಚುವೆಚ್ಚಗಳನ್ನು ಭರಿಸಿ, ಆ ನಂತರವಷ್ಟೇ ಅಲ್ಲಿಂದ ನಿರ್ಗಮಿಸುವ ಕುಂದಾಪುರ ಶಾಸ್ತ್ರೀ ಸರ್ಕಲ್ ನ ವೈಶಾಲಿ ಬೇಕರಿಯ ಮಾಲಕ ಸ್ಟೀವನ್ ಡಿ’ ಕೋಸ್ಟಾ ಕುಂದಾಪುರ ಪರಿಸರದ ಜನರಿಗೆ ‘ಆಪತ್ಬಾಂದವ’ ಎಂದೇ ಪರಿಚಿತರಾಗಿರುವ ವ್ಯಕ್ತಿ.ಇತ್ತೀಚಿಗೆ ಕೊರೊನಾ ಲಾಕ್‌ಡೌನ್ ಘೋಷಿಸಲ್ಪಟ್ಟಾಗ ಹಂಗಳೂರು ಮತ್ತದರ ಸುತ್ತಮುತ್ತಲಿನ ಮೂನ್ನೂರಕ್ಕೂ ಹೆಚ್ಚು ಕಡು ಬಡಜನರ ಮನೆಗಳಿಗೆ ದಿನಸಿ ಸಾಮಾನುಗಳ ಕಿಟ್ ಗಳನ್ನು ಉಚಿತವಾಗಿ ಪೂರೈಸುವ ಮೂಲಕ ಪರಿಸರದಲ್ಲಿ ‘ನಮ್ಮ ಸ್ಟೀವನಣ್ಣ’ ಎಂದೇ ಆತ್ಮೀಯರಾಗಿರುವ ಶ್ರೀಯುತರು ನಡುರಾತ್ರಿ ಹೊತ್ತಿನಲ್ಲಿ ಅನಾರೋಗ್ಯ ಪೀಡಿತರು ಸಹಾಯಯಾಚಿಸಿ ಕರೆ ಮಾಡಿದರೆ ತನ್ನದೇ ವಾಹನದಲ್ಲಿ ಆಸ್ಪತ್ರೆ ಮುಟ್ಟಿಸುವ ಇವರು ಇದೀಗ ಹಂಗಳೂರು ಗ್ರಾಮ ಪಂಚಾಯತ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ತನ್ನ 12 ಕ್ರೀಯಾಶೀಲ, ವಿದ್ಯಾವಂತ, ಯುವ ಸದಸ್ಯರ ತಂಡದೊಂದಿಗೆ ಸ್ಪರ್ದೆಗಿಳಿದಿದ್ದಾರೆ

ಈ ಹಿಂದಿನ ಬಾರಿ ಹಂಗಳೂರು ಪಂಚಾಯತ್ ನ ಉಪಾಧ್ಯಕ್ಷರಾಗಿ ಜನಸಾಮಾನ್ಯರಿಗೆ ಸ್ಪಂದಿಸುವ ಕೆಲಸ ಮಾಡಿರುವ ಇವರು ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಂಗಳೂರು ಗ್ರಾಮ ಪಂಚಾಯತನ್ನು ಸಮಸ್ಯೆ ರಹಿತ ಸುವ್ಯವಸ್ಥಿತ ಪಂಚಾಯತ್ ಆಗಿ ರೂಪಿಸುವ ಕನಸು ಹೊತ್ತಿದ್ದಾರೆ.

__________________________________

►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

0Shares