ಉಡುಪಿ

ವಕ್ವಾಡಿಯಲ್ಲಿ ಬಿಗ್ ಫೈಟ್: ಮತದಾರರ ಒಲವು ಯುವ ಮುಖಂಡ ರಮೇಶ್ ಶೆಟ್ಟಿಯವರ ತಂಡದತ್ತ.

ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಕ್ವಾಡಿ ಗ್ರಾಮದ ಮೂರು ವಾರ್ಡಗಳ 7 ಸ್ಥಾನ ಗಳಿಗೆ 14 ಅಭ್ಯರ್ಥಿಗಳು ಸ್ಪರ್ದಿಸಿದ್ದು. ಕುತೂಹಲ ಮೂಡಿಸಿದ್ದು, ಆಡಳಿತ ವಿರೋಧಿ ಅಲೆಯ ವಿರುದ್ಧ ನರಸಿಂಹ ಪೂಜಾರಿ ನಿಂಗಿ ಮನೆ, ಸತ್ಯರಂಜನ್ ಹೆಗ್ಡೆ , ಸೀತರಾಮ ಶೆಟ್ಟಿ, ಮಲ್ಯಾಡಿ ರಾಜೀವ ಶೆಟ್ಟಿಯವರ ನೇತ್ರತ್ವದಲ್ಲಿ ಯುವ ಪಡೆ ಅಭಿವೃದ್ಧಿಯ ಮಂತ್ರ ದೊಂದಿಗೆ ಕಣಕ್ಕಿಳಿದಿದೆ.ಯುವ ಪಡೆಯಲ್ಲಿ ವಕ್ವಾಡಿ ರಮೇಶ್ ಶೆಟ್ಟಿ ಕೇಂದ್ರ ಬಿಂದುವಾಗಿದ್ದಾರೆ. 2 ನೇ ವಾರ್ಡ್ ನಲ್ಲಿ ಸತತ ಎರಡು ಬಾರಿ ಸೋತಿರುವ ರಮೇಶ ಶೆಟ್ಟಿ ಈ ಬಾರಿ ಭರವಸೆಯನ್ನು ಮೂಡಿಸಿದ್ದಾರೆ. ಸೋತರೂ ಕ್ಷೇತ್ರದಲ್ಲಿ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಗ್ರಾ.ಪಂನಲ್ಲಿ ಜರುಗಿದ ಎಲ್ಲಾ ಗ್ರಾಮ ಸಭೆಗಳಲ್ಲಿ ಭಾಗವಹಿಸಿ ಜನಪರ ಧ್ವನಿಯಾಗಿದ್ದಾರೆ. ಗ್ರಾಮದ ನೀರಿನ ಸಮಸ್ಯೆ, ಹಕ್ಕುಪತ್ರಗಳ ವಿತರಣೆಗೆ ಆಗ್ರಹಿಸಿ ಧರಣಿ ನಡೆಸಿದ್ದಾರೆ. ಜನರ ಸುಖ ದುಃಖಗಳಲ್ಲಿ ಭಾಗಿಯಾಗಿದ್ದಾರೆ

ಇದೀಗ ಶೆಟ್ಟರು ವಕ್ವಾಡಿಯ ಅಭಿವೃದ್ಧಿಗಾಗಿ ಈ ಕೆಳಗಿನ ಸೂತ್ರದೊಂದಿಗೆ ಕಣಕ್ಕಿಳಿದಿದ್ದಾರೆ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪ್ರಥಮ ಆದ್ಯತೆ, ಪಂಚಾಯತ್ ಕಛೇರಿಯಲ್ಲಿ ಜನರನ್ನು ಯಾವುದೇ ಕಾರಣಕ್ಕೂ ಕಾಯಿಸದೆ ಮತ್ತು ಅಲೆಸದೆ ಜನಪರ ಸೇವೆಗೆ ಆದ್ಯತೆ, ಜನರ ಮನೆಯ ಬಾಗಿಲಿಗೆ ಸರಕಾರಿ ಸೌಲಭ್ಯಗಳನ್ನು ಒದಗಿಸುವ ಕುರಿತು ಆದ್ಯತೆ. ಪಂಚಾಯತ್ ಕಾಮಗಾರಿಗಳಲ್ಲಿ ಪಾರದರ್ಶಕತೆ, ಪಂಚಾಯತ್ ನಲ್ಲಿ ದೊರಕಿಸಿದ ಮತ್ತು ದೊರೆಯುವ ಸೌಲಭ್ಯಗಳ ಬಗ್ಗೆ ಪ್ರತಿ ಮನೆಗೆ ಕೈಪಿಡಿ ಒದಗಿಸುವುದು,ರಸ್ತೆ ಅಭಿವೃದ್ದಿ ‌ಮತ್ತು ಬೀದಿ ದೀಪ ಅಳವಡಿಕೆ ಮತ್ತು ನಿರ್ವಹಣೆಗೆ ಆದ್ಯತೆ, ಕುಡಿಯುವ ನೀರಿನ ಅಭಾವಕ್ಕೆ ಶಾಶ್ವತ ಪರಿಹಾರ, ವಕ್ವಾಡಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿ ನಿರ್ಮಾಣಕ್ಕೆ ಆದ್ಯತೆ ಮತ್ತು ಜನಸಾಮಾನ್ಯ ಅರ್ಜಿಗಳ ವಿಲೇವಾರಿಗೆ ಅಲ್ಲಿಯೇ ಅವಕಾಶ ಕಲ್ಪಿಸುವುದು,ವಕ್ವಾಡಿಯಲ್ಲಿ ಸಹಕಾರಿ ಬ್ಯಾಂಕ್ ನಿರ್ಮಾಣಕ್ಕೆ ಆದ್ಯತೆ, ಬ್ರಷ್ಟಾಚಾರ ರಹಿತ ದಕ್ಷ ಆಡಳಿತ, ವಕ್ವಾಡಿಯಲ್ಲಿ ಸಾರ್ವಜನಿಕ ಸ್ಮಶಾನ ನಿರ್ಮಾಣ, ಪಶು ಆಸ್ಪತ್ರೆ ನಿರ್ಮಾಣ, ಕೆರೆಗಳ ಮತ್ತು ವಕ್ವಾಡಿ ಹೊಳೆಯ ಹೂಳೆತ್ತುವುದು, ಗ್ರಾಮಪಂಚಾಯತ್ ಅದಾಲತ್ ವಕ್ವಾಡಿಯಲ್ಲಿ ಮಾಡುವುದು, ಹಕ್ಕು ಪತ್ರ ವಿತರಣೆಗೆ ಕ್ರಮ… ಇಂಥಹ ಹಲವಾರು ಬದಲಾವಣೆಯ ಮೂಲಕ ಸುಂದರ , ಜನಸ್ನೇಹಿ ಮಾದರಿ ಗ್ರಾಮವನ್ನಾಗಿ ಮಾಡುವ ಪರಿಕಲ್ಪನೆ ಯೊಂದಿಗೆ ರಮೇಶ್ ಶೆಟ್ಟರ ತಂಡ ಕಣಕ್ಕೆ ಇಳಿದಿದೆ.

ಈ ಬಾರಿ ಗ್ರಾಮದಲ್ಲಿ ರಮೇಶ ಶೆಟ್ಟಿಯವರ ಪರ ಒಲವು ಹೆಚ್ಚಿದ್ದು, ಇವರು ಜಾತ್ಯಾತೀತ ನಾಯಕನಾಗಿ ಬೆಳೆದಿದ್ದು, ಗೆದ್ದೆ ಗೆಲ್ಲುತ್ತಾರೆ ಎನ್ನುತ್ತಾರೆ ಸ್ಥಳೀಯರು. ಅಲ್ಲದೆ ಅವರ ತಂಡದ 7 ಅಭ್ಯರ್ಥಿಗಳು ಗೆಲುವಿನ ನಗೆ ಬೀರುವ ಲಕ್ಷಣವಿದೆ. ವಕ್ವಾಡಿ ಗ್ರಾಮ ಪಂಚಾಯತ್ ಅನ್ನು ಭ್ರಷ್ಟಾಚಾರ ಮುಕ್ತ ಮಾಡಿಯೇ ಸಿದ್ದ ಎನ್ನುತ್ತಾರೆ ರಮೇಶ ಶೆಟ್ಟಿ ವಕ್ವಾಡಿ

_________________________________________

►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

0Shares