Advertisement

ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ದಿಸುತ್ತಿರುವ ವಿಶ್ವನಾಥ್. ಪಿ

Advertisement

ಬರಹ: ಕಮಲಾಕರ ಕಾರಣಗಿರಿ ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಕ್ವಾಡಿ ಗ್ರಾಮದ ಸಾಮಾನ್ಯ ಕುಟುಂಬದಿಂದ ಬಂದ ವಿಶ್ವನಾಥ್ .ಪಿ ಇವರು ವಿದ್ಯಾರ್ಥಿ ದೆಸೆಯಿಂದಲೂ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ವಿಧ್ಯಾರ್ಥಿ ನಾಯಕರಾಗಿ ಹೆಸರು ಗಳಿಸಿದವರು. ಇವರು ಕಳೆದ 15 ವರ್ಷ ಗಳಿಂದಲೂ ಕಾಂಗ್ರೆಸ್ ಪಕ್ಷದ ವಿಧ್ಯಾರ್ಥಿ ಘಟಕವಾದ ಎನ್‌ಎಸ್‌ಯುಐ ನ ಸದಸ್ಯನಾಗಿ, ಎನ್ ಎಸ್ ಯುಐ ಘಟಕದ ಚುನಾಯಿತ ರಾಜ್ಯ ಉಪಾಧ್ಯಕ್ಷನಾಗಿ ತನ್ನ ಹುದ್ದೆಯ ಜವಾಬ್ದಾರಿಯನ್ನು ನಿಷ್ಠೆಯಿಂದ ಕಾರ್ಯ ನಿರ್ವಹಿಸಿ ಹೆಸರು ಗಳಿಸಿದ್ದಾರೆ. ತದನಂತರ ಇವರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್‌ನ ಚುನಾಯಿತ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ, ಯುವಕರನ್ನು ಸಂಘಟಿಸುವ ಮೂಲಕ ಜನಪ್ರಿಯರಾಗಿದ್ದಾರೆ. ಆ ನಂತರ ಬೆಂಗಳೂರು ಜಿಲ್ಲಾ ಉಪಾಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರಾಗಿ ರೈತಪರ, ಕಾರ್ಮಿಕ ಪರ, ಯುವಕರ ಪರ, ಮಹಿಳೆಯರ ಪರ, ರೈತಪರ, ಹೀಗೆ ಸುಮಾರು ಮುನ್ನೂರೈವತ್ತಕ್ಕೂ ಹೆಚ್ಚು ಹೋರಾಟಗಳನ್ನು ಪ್ರತಿಭಟನೆಗಳನ್ನು ಯಶಸ್ವಿಯಾಗಿ ಸಂಘಟಿಸಿದ ಕೀರ್ತಿ ಇವರದ್ದಾಗಿದೆ. ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆ ಇಲ್ಲದೆ ಸಾಮಾನ್ಯ ಕುಟುಂಬದಿಂದ ಬಂದಂತಹ ಇವರು ವಿದ್ಯಾರ್ಥಿದೆಸೆಯಿಂದಲೂ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸುತ್ತಾ, ಜನಪರ- ಪ್ರಗತಿಪರ ಹೋರಾಟಗಳನ್ನು ನಡೆಸುತ್ತಾ ತದನಂತರ ಕಾಂಗ್ರೆಸ್ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ, ಯುವ ಕಾಂಗ್ರೆಸ್ ನಾಯಕನಾಗಿ ಪಕ್ಷದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆ ಮೂಲಕ ಪಕ್ಷದ ಹೆಚ್ಚಿನೆಲ್ಲಾ ಹಿರಿಯ- ಕಿರಿಯ ನಾಯಕರುಗಳ ಸಂಪರ್ಕವನ್ನು, ಪ್ರೀತಿಯನ್ನು ಗಳಿಸಿದ್ದಾರೆ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಓರ್ವ ಸಾಮಾನ್ಯ ಯುವಕ ಕೂಡಾ ಜನನಾಯಕನಾಗಿ ಬೆಳೆಯಬಹುದು ಎಂಬುವುದಕ್ಕೆ ಉದಾಹರಣೆಯಾಗಿ ರಾಜ್ಯಮಟ್ಟದಲ್ಲಿ ಬೆಳೆದು ನಿಂತಿದ್ದಾರೆ. ಮುಂಬರುವ ರಾಜ್ಯ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಇವರು ಸಾಮಾನ್ಯ ಯುವಕರ ಧ್ವನಿಯಾಗಿ ಸ್ಪರ್ಧಿಸಬೇಕು ಎಂಬುವುದು ಎಲ್ಲಾ ಯುವ ಕಾಂಗ್ರೆಸ್ ಘಟಕದ ನಾಯಕರುಗಳ ಅಪೇಕ್ಷೆಯಾಗಿದೆ. ಆ ಕುರಿತು ಈಗಾಗಲೇ ರಾಜ್ಯಾದ್ಯಂತ ಪ್ರವಾಸದಲ್ಲಿ ತೊಡಗಿರುವ ಇವರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. __________________________________ ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement