Advertisement

ಕೊಲ್ಲೂರು: ನವಶಕ್ತಿ ಮಹಿಳಾ ವೇದಿಕೆಯಿಂದ ಪರಾಕ್ರಮ ದಿನ ಆಚರಣೆ

Advertisement

ವರದಿ: ವಿನಾಯಕ ಆಚಾರ್ಯ., ಕೊಲ್ಲೂರು. ಭಾರತ ಸರ್ಕಾರ ಯುವ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ ಮತ್ತು ನವಶಕ್ತಿ ಮಹಿಳಾ ವೇದಿಕೆ. ( ರಿ.) ಕೊಲ್ಲೂರು ಇವರ ಸಂಯುಕ್ತ ಆಶ್ರಯದಲ್ಲಿ ಪರಾಕ್ರಮ ದಿನ ಆಚರಿಸಲಾಯಿತು. ನೀವು ನನಗೆ ರಕ್ತವನ್ನು ಕೊಡಿ ನಾನು ನಿಮಗೆ ಸ್ವಾತಂತ್ರ್ಯವನ್ನು ತಂದು ಕೊಡುತ್ತೇನೆ ಎಂದು ಘೋಷಿಸಿದ ಭಾರತದ ಸ್ವಾತಂತ್ರ್ಯ ಹೋರಾಟಗಾರ , ಮಹಾನ್ ದೇಶ ಭಕ್ತರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಇವರ 125ನೇಯ ಜನ್ಮದಿನವನ್ನು ಜನವರಿ 23 ರಂದು ಪರಾಕ್ರಮ ದಿನವೆಂದು ಈ ವರ್ಷದಿಂದ ಆಚರಿಸಲು ಸರ್ಕಾರ ಆದೇಶಿಸಿದೆ. ರಾಷ್ಟಕ್ಕೆ ನೇತಾಜಿ ಅವರ ಅದಮ್ಯ ಮನೋಭಾವ ಮತ್ತು ನಿಸ್ವಾರ್ಥ ಸೇವೆಯನ್ನು ಗೌರವಿಸುವ ಮತ್ತು ನೆನಪಿಸುವ ಮತ್ತು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಜನನಾಯಕರಲ್ಲಿ ನೇತಾಜಿಯೂ ಒಬ್ಬರು ಇವರ ಶೌರ್ಯ, ದೃಢ ನಿಶ್ಚಯ ಮತ್ತು ತ್ಯಾಗವನ್ನು ಎಂದಿಗೂ ಮರೆಯಲು ಅಸಾಧ್ಯ ಆದರೆ ಇವರು ನೀಡಿದ ಅಪಾರ ಕೊಡುಗೆಗೆ ರಾಷ್ಟವು ಎಂದೆಂದಿಗೂ ಕೃತಜ್ಞರಾಗಿರಬೇಕು ಎಂದು ಶ್ರೀಮತಿ ಯಶೋದ ಅವರು ದೀಪ ಬೆಳಗಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಯೆ ಮತ್ತು ನವಶಕ್ತಿ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಗ್ರೀಷ್ಮಾ ಗಿರಿಧರ ಭಿಡೆ, ಕಾರ್ಯದರ್ಶಿ ಸುಜಾತ ಆಚಾರಿ, ರತ್ನ, ಶಾರದಾ ಆಚಾರಿ, ಪೂಜಾ ಆಚಾರಿ, ಮತ್ತು ಪುಟಾಣಿ ಮಕ್ಕಳು ಉಪಸ್ಥಿತರಿದ್ದರು. ಸದಸ್ಯೆ ಜ್ಯೋತಿ ಸ್ವಾಗತಿಸಿದರು. ಸುಗುಣ ವಂದಿಸಿದರು. ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement