ಉಡುಪಿ

ಗರಿಗೆದರಿದ ಯುವ ಕಾಂಗ್ರೆಸ್ ಚುನಾವಣೆ: ಉಡುಪಿ ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಬಯಸಿರುವ ವಿಶ್ವಾಸ್ ಅಮೀನ್!

ಇದೇ ಜನವರಿ 10,11, ಹಾಗೂ12 ರಂದು ಆನ್‌ಲೈನ್ ಮೂಲಕ ರಾಜ್ಯಾದ್ಯಂತ ನಡೆಯಲಿರುವ ಯುವ ಕಾಂಗ್ರೆಸ್ ಚುನಾವಣೆಯು ಮತದಾನದ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ಕಾವು ಪಡೆದುಕೊಳ್ಳುತ್ತಿದ್ದು ಯುವ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಪಕ್ಷದ ಆಂತರಿಕ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿರುವ ವಿಶ್ವಾಸ್ ವಿಜಯ್ ಅಮೀನ್ ಪತ್ರಿಕಾ ಪ್ರಕಟಣೆಯ ಮೂಲಕ ಯುವ ಕಾಂಗ್ರೆಸ್ ಸದಸ್ಯರಲ್ಲಿ ಮತ ನೀಡುವಂತೆ ವಿನಂತಿಕೊಂಡಿದ್ದಾರೆ.ಕಾಂಗ್ರೇಸ್ ಪಕ್ಷದ ಗೌರವಾನ್ವಿತ ಹಿರಿಯ ನಾಯಕರೆ ಹಾಗೂ ಅತ್ಮೀಯ ಯುವ ಕಾಂಗ್ರೆಸ್ ಸಹೋದರ ಸಹೋದರಿಯರೆ,

ಇದೇ ಬರುವ ಜನವರಿ 12ರಂದು ರಾಜ್ಯ ಯುವ ಕಾಂಗ್ರೇಸ್ ಸಮಿತಿಗೆ ಚುನಾವಣೆ ನಡೆಯಲ್ಲಿದ್ದು‌ ಉಡುಪಿ ಜಿಲ್ಲಾ ಯುವ ಕಾಂಗ್ರೇಸ್ ಸಮಿತಿಯ ಅದ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಬಯಸಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ನಿಮ್ಮೆಲ್ಲ ಸಹಕಾರ ಮತ್ತು ಆಶೀರ್ವಾದದಿಂದ ಮತ್ತೊಮ್ಮೆ ಪಕ್ಷದ ಸೇವೆ ಸಲ್ಲಿಸಲು ಅವಕಾಶ ಸಿಗಬಹುದು ಎಂಬ ಬಲವಾದ ನಂಬಿಗೆ ನನ್ನದು. ಕಾಂಗ್ರೇಸ್ ಕುಟುಂಬದ ಹಿನ್ನಲೆಯಲ್ಲಿ ಬಂದ ನಾನು ಕಾಂಗ್ರೆಸೇ ನಮ್ಮ ಕುಟಂಬ ಎಂಬ ಅಚಲವಾದ ನಂಬಿಕೆಯೊಂದಿಗೆ ಬೆಳೆದಿದ್ದೇನೆ, ಕಾಪು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ಅದ್ಯಕ್ಷನಾಗಿ ನನ್ನ‌ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿದ್ದು ಅದರ ಫಲವಾಗಿ ಉಡುಪಿ ಜಿಲ್ಲಾ ಯುವ ಕಾಂಗ್ರೇಸ್ ಅದ್ಯಕ್ಷನಾಗುವ ಅವಕಾಶ ನನ್ನದಾಯಿತು. ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ನೀಡಿದ ಜವಾಬ್ದಾರಿಯನ್ನು ‌ನಿಷ್ಠೆ‌ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದೇನೆ. ಪಕ್ಷದ ಎಲ್ಲಾ ಯುವ ಹಾಗೂ ಹಿರಿಯ ನಾಯಕರ ಸಲಹೆ ಮತ್ತು ಮಾರ್ಗದರ್ಶನದಂತೆ ಜಿಲ್ಲೆಯಲ್ಲಿ ಯುವಕರನ್ನು ಸಂಘಟಿಸುವಲ್ಲಿ ಶ್ರಮವಹಿಸಿರುತ್ತೇನೆ. ಪಕ್ಷದ ನಾಯಕರ ಸೂಚನೆಯಂತೆ ಕೇಂದ್ರ ಬಿಜೆಪಿ ಸರಕಾರದ ಎಲ್ಲಾ ಜನವಿರೋದಿ‌ ನೀತಿಗಳ ವಿರುದ್ಧದ ಪ್ರತಿಭಟನೆ ಮತ್ತು ಹೋರಾಟದಲ್ಲಿ ಜವಾಬ್ದಾರಿಯೊಂದಿಗೆ ಕರ್ತವ್ಯವನ್ನು ನಿರ್ವಹಿಸಿರುತ್ತೇನೆ. ನಾಯಕರ ನೇತೃತ್ವದಲ್ಲಿ ನಡೆದ ಹೆಜಮಾಡಿ ಟೋಲ್ ವಿರುದ್ಧ ನಡೆದ ನಿರಂತರ ಹೋರಾಟದಲ್ಲಿ ಯಶಸ್ವಿಯಾಗಿ ಜಿಲ್ಲೆಗೆ ಒಂದು ವರ್ಷ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕಾಪು ತಾಲೂಕು ರಚನೆಯಲ್ಲಿ ನಮ್ಮ ನಾಯಕರ ನೇತೃತ್ವದ ಹೋರಾಟದಲ್ಲಿ ಸಂಪೂರ್ಣ ಜವಾಬ್ದಾರಿಯೊಂದಿಗೆ ಭಾಗಿಯಾಗಿ ಯಶಸ್ವಿಯಾಗಿದ್ದೇವೆ. ಉಡುಪಿಯ ಸ್ವರ್ಣಾ ನದಿಯ ಅಕ್ರಮ‌ ಮರಳುಗಾರಿಕೆಯನ್ನು ಬಯಲಿಗೆಳೆದು ರಾಜ್ಯದ ಗಮನ‌ ಸೆಳೆದಿದ್ದೇವೆ. ಇಷ್ಟೇ ಅಲ್ಲದೆ ಉಡುಪಿ ಮೀನುಗಾರಿಕೆ ಡಿಸೇಲ್ ಹಗರಣ, ಕಾರ್ಕಳ ಶಾಸಕರ ಸಿಮೆಂಟ್ ಹಗರಣ ಬಯಲಿಗೆಳೆದಿದ್ದು ಇದೆಲ್ಲವೂ‌ ನಿಮ್ಮೆಲ್ಲರ ಸಹಕಾರದಿಂದ ಸಾದ್ಯವಾಗಿದೆ.‌ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಕರ್ತವ್ಯವನ್ನು ಅರಿತು ಯಾವುದೇ ಪ್ರಚಾರವಿಲ್ಲದೆ ಮಾನವೀಯ‌ ಸ್ಪಂದನೆಯನ್ನು‌ ನೀಡಿದ್ದೇವೆ. ಕರಾವಳಿಯ ಎಲ್ಲಾ ಟಿವಿ ‌ಮಾದ್ಯಮಗಳಲ್ಲಿ ಪಕ್ಷದ ಪರ ಭಾಗವಹಿಸಿ ಪಕ್ಷವನ್ನು ಸಮರ್ಥಿಸುವಲ್ಲಿ ಯಶಸ್ವಿಯಾಗಿದ್ದೇನೆ. ಕಾರಾವಳಿ‌ಯ ಅವಳಿ ಜಿಲ್ಲೆಯಲ್ಲಿ ಯುವಕರನ್ನು ಸಂಘಟಿಸುವ ನಿಟ್ಟಿನಲ್ಲಿ ನಾಯಕರ ಜೊತೆಗೂಡಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು ಇದೆಲ್ಲವು ನಿಮ್ಮ ಸಹಕಾರದಿಂದ ‌ಸಾದ್ಯವಾಗಬೇಕಿದೆ ಯಾವುದೇ ಸಂದರ್ಭದಲ್ಲೂ ಒತ್ತಡ, ಬೆದರಿಕೆಗಳಿ ಜಗ್ಗದೆ, ಸಿದ್ದಾಂತದೊಂದಿಗೆ ರಾಜಿಯಾಗದೆ, ವೈಯಕ್ತಿಕ ‌ವಿಚಾರಗಳಿಗೆ‌ ಅಧಿಕಾರವನ್ನು ದುರುಪಯೋಗಗೊಳಿಸದೆ ಪಕ್ಷದ ಯಾವುದೇ ನಾಯಕರಿಗೆ ಮತ್ತು ‌ಕಾರ್ಯಕರ್ತರಿಗೆ ಮುಜುಗರವಾಗದ ರೀತಿಯಲ್ಲಿ ಕೇವಲ ಪಕ್ಷ ‌ಮಾತ್ರ, ಪಕ್ಷವಿಲ್ಲದೆ ಬೇರೇನಿಲ್ಲ ಎಂಬ ಸಿದ್ದಾಂತದಲ್ಲಿ ನಂಬಿಕೆ ಇರಿಸಿದ ನನಗೆ ಮತ್ತೊಮ್ಮೆ ನಿಮ್ಮ ಸಹಾಯ ಮತ್ತು ಆಶೀರ್ವಾದ ಅಗತ್ಯವಿದೆ. ಅದ್ದರಿಂದ ಜಿಲ್ಲಾ ಯುವ ಕಾಂಗ್ರೇಸ್ ಸಮಿತಿಗೆ ನಡೆಯುವ ಚುನಾವಣೆಯಲ್ಲಿ ಕ್ರಮ ಸಂಖ್ಯೆ 6 ರಲ್ಲಿರುವ ಕಿರೀಟದ ಚಿನ್ಹೆಗೆ ನಿಮ್ಮ ಆಂಡ್ರಾಯ್ಡ್ ಮೊಬೈಲ್ ಮೂಲಕ ತಮ್ಮ ‌ ಮತ ಚಲಾಯಿಸುದರೊಂದಿಗೆ ನನ್ನನ್ನು ಮರು ಆಯ್ಕೆ ಮಾಡುವಂತೆ ವಿನಂತಿಸುತ್ತೇನೆ .ವೋಟ್ ಮಾಡಲು ನಿಮ್ಮ ಆಡ್ರಾಯ್ಡ್ ಫೋನ್ ಮೂಲಕ ಈ app ( https://play.google.com/store/apps/details?id=iyc.online.voting ) ಡೌನಲೋಡ್ ಮಾಡಿ ತಾರೀಕು 12ರಂದು ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ಮೂಲಕ ಮತ ಚಲಾಯಿಸಿ ಎಂದವರು ತಿಳಿಸಿದ್ದಾರೆ.__________________________________

►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

0Shares