Advertisement

ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?

Advertisement

ಮೋದಿ ಪ್ರಧಾನಿಯಾದ ನಂತರದ ದಿನಗಳಲ್ಲಿ ಏರತೊಡಗಿರುವ ಪೆಟ್ರೋಲ್ ಬೆಲೆ ಇದೀಗ 93ರ ಗಡಿ ಮುಟ್ಟಿದೆ. ಇದೀಗ ಈ ಬಾರಿಯ ಬಜೆಟ್ ನಲ್ಲಿ ಡೀಸೆಲ್‌ಗೆ 4ರೂ ಹಾಗು ಪೆಟ್ರೋಲ್ ಗೆ 2.30ರೂ. ಹೆಚ್ಚುವರಿ ಸೆಸ್ ವಿಧಿಸಿದೆ ಮೋದಿ ಸರ್ಕಾರ. ನಿರಂತರವಾದ ಈ ಬೆಲೆಏರಿಕೆಯ ವಿರುದ್ಧವಾಗಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿಯ ಸಂಸದ ಸುಬ್ರಹ್ಮಣ್ಯಂ ಸ್ವಾಮಿ 'ರಾವಣನ ಲಂಕೆಯಲ್ಲಿ ಕೇವಲ 51ರೂ. ಇರುವ ಪೆಟ್ರೋಲ್ ಬೆಲೆ, ಸೀತೆಯ ನೇಪಾಳದಲ್ಲಿ 53ರೂ. ಇದೆ ಆದರೆ ರಾಮನ ಭಾರತದಲ್ಲಿ ಮಾತ್ರ ಆ ಬೆಲೆ ಬರೋಬ್ಬರಿ 93ರೂ. ಯಾಕೆ ಎಂದು ಪ್ರಶ್ನಿಸಿದ್ದಾರೆ. ಈ ಟ್ವೀಟ್ ಕೇವಲ ಕೆಲವೇ ಗಂಟೆಗಳಲ್ಲಿ 35,200 ರೀಟ್ವೀಟ್ ಆಗಿದ್ದರೆ, 12,290 ಲೈಕ್ ಗಳನ್ನು ಪಡೆದಿದೆ ಮತ್ತು ಅತಿ ವೇಗವಾಗಿ ವೈರಲ್ ಆಗುತ್ತಲೇ ಇದೆ. ಕಾಂಗ್ರೆಸ್ ನೇತೃತ್ವದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರ ಆಡಳಿತಾವಧಿಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್‌ಗೆ 147ಡಾಲರ್‌ಗೆ ತಲುಪಿದಾಗಲೂ ಈ ದೇಶದಲ್ಲಿ ಪೆಟ್ರೋಲ್ ಬೆಲೆ 78ರೂಪಾಯಿ ಮೀರಿರಲಿಲ್ಲ. ಡಿಸೇಲ್ ಬೆಲೆ 73 ರೂಪಾಯಿ ಮೀರಿರಲಿಲ್ಲ. ಅಡುಗೆ ಅನಿಲದ ಬೆಲೆ 320ರೂಪಾಯಿ ಮೀರಿರಲಿಲ್ಲ. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಇದೀಗ ಕಚ್ಚಾತೈಲ ಬೆಲೆ ಬ್ಯಾರೆಲ್ ಗೆ ಕೇವಲ 47ಡಾಲರ್ ಇದೆ. ಆದರೆ ಪೆಟ್ರೋಲ್ ಬೆಲೆ 93ರೂಪಾಯಿ. ಡೀಸೆಲ್ ಬೆಲೆ 90ರೂಪಾಯಿ. ಹಾಗೂ ಅಡುಗೆ ಅನಿಲದ ಬೆಲೆ 720ರೂಪಾಯಿಗೆ ಏರಿದೆ. ಕಚ್ಚಾ ತೈಲ ಬೆಲೆ ನಾಲ್ಕು ಪಟ್ಟು ಕಡಿಮೆಯಾದ ಪ್ರಮಾಣದಲ್ಲಿ ನೋಡುವುದಾದರೆ ಇಂದು ಈ ದೇಶದಲ್ಲಿ ಗರಿಷ್ಠ ಎಂದರೆ 30 ರೂಪಾಯಿ ಗಳಿಗೆ ಪೆಟ್ರೋಲ್, 25ರೂ.ಗಳಿಗೆ ಡೀಸೆಲ್, 150ರೂ.ಗಳಿಗೆ ಅಡುಗೆ ಅನಿಲ ದೊರೆಯಬೇಕಾಗಿತ್ತು. ಆದರೆ ದೊರೆಯುತ್ತಿಲ್ಲ. ಹಾಗಾದರೆ ಆ ವ್ಯತ್ಯಾಸದ ಲಾಭದ ಹಣ ಯಾರ ತೀಜೋರಿ ಸೇರುತ್ತಿದೆ ಈ ಹಗಲು ದರೋಡೆಗೂ ಮೋದಿ ಸರ್ಕಾರಕ್ಕೂ ಸಂಬಂಧವೇ ಇಲ್ಲವೇ? ಕಚ್ಚಾತೈಲ ಬೆಲೆ ಏರಿಕೆ ಕಂಡಾಗ ಅದರ ದಂಡ ತೆತ್ತಿದ್ದ ದೇಶದ ಗ್ರಾಹಕರಿಗೆ ಕಚ್ಚಾತೈಲ ಬೆಲೆ ಇಳಿಕೆಯಾದಾಗ ಆ ಇಳಿಕೆಯ ಲಾಭವನ್ನು ನೀಡಬೇಕಿತ್ತಲ್ಲವೇ? ಆದರೆ ಆ ಇಳಿಕೆಯ ಲಾಭವನ್ನು ಮೋದಿ ಸರ್ಕಾರ ಇಂಧನ ಕಂಪೆನಿಗಳಿಗೆ ನೀಡಿದೆ. ಅದು ಹೇಗೆಂದರೆ ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಆಳುವ ಸರ್ಕಾರ ನಿಯಂತ್ರಿಸುತ್ತಿದ್ದರೆ ಮೋದಿ ಆಡಳಿತಾವಧಿಯಲ್ಲಿ ಆ ಬೆಲೆ ನಿಗದಿಪಡಿಸುವ ಅಧಿಕಾರವನ್ನು ಇಂಧನ ಕಂಪನಿಗಳಿಗೆ ನೀಡಿರುವುದರ ಪರಿಣಾಮವೇ ಈ ಅವೈಜ್ಞಾನಿಕವಾದ ಬೆಲೆ ಏರಿಕೆಯಾಗಿದೆ. ಮೋದಿ ಆಡಳಿತಾವಧಿಯಲ್ಲಿ ಈ ಮೂಲಕ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ಸರ್ಕಾರವಾಗಿರದೆ ಕಂಪನಿ ಸರ್ಕಾರವಾಗಿ ಪರಿವರ್ತಿತವಾಗಿರುವುದು ವಿಪರ್ಯಾಸವೇ ಸೈ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾದಾಗ ಸಹಜವಾಗಿಯೇ ಸಾಗಾಟ ವೆಚ್ಚ ಏರಿಕೆಯಾಗಿ ಆಹಾರ ಸಾಮಾಗ್ರಿಗಳ ಬೆಲೆ ಏರಿಕೆಯಾಗುತ್ತದೆ. ಅವೈಜ್ಞಾನಿಕವಾದ ನೋಟ್ ಬ್ಯಾನ್, ಅನಗತ್ಯವಾಗಿದ್ದ ಲಾಕ್‌ಡೌನ್ ಗಳಿಂದ ನಲುಗಿ ಹೋಗಿರುವ ಜನಸಾಮಾನ್ಯರು ಇದೀಗ ಮೋದಿ ಸರ್ಕಾರದ ನೇತೃತ್ವದ ಈ ಬೆಲೆ ಏರಿಕೆಯ ಲೂಟಿಯಿಂದ ಕಂಗಾಲಾಗಿ ಹೋಗಿದ್ದಾರೆ. ಬಹುಶಃ ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೋದಿಯವರ ಆಡಳಿತದಷ್ಟು ಹೀನಾಯ ಮಟ್ಟದಲ್ಲಿ ಅಧಿಕಾರ ನಡೆಸಿದ ಉದಾಹರಣೆಯೇ ಇಲ್ಲ ಎಂದರೆ ಅದು ಖಂಡಿತವಾಗಿಯೂ ತಪ್ಪಾಗಲಾರದು. ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಸ್ವಾಮಿಯವರ ಟ್ವೀಟ್ ನ ಲಿಂಕ್ ಇಲ್ಲಿದೆ: __________________________________ ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement