Advertisement

1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.

Advertisement

ಹಲವು ದಶಕಗಳ ಅಯೋದ್ಯೆ ವಿವಾದಕ್ಕೆ ಸುಪ್ರೀಂ ಕೋರ್ಟ್ ಕಳೆದ ವರ್ಷ ತೆರೆ ಎಳೆದು ರಾಮಮಂದಿರ ನಿರ್ಮಾಣ ಕಾರ್ಯದ ಪೂರ್ವಸಿದ್ಧತೆ ಇದೀಗ ಆರಂಭಗೊಂಡಿದೆ. ಹಾಗೆಯೇ ಬಿಜೆಪಿ ಮತ್ತದರ ಮಾತೃಸಂಘಟನೆಯ ಹಾಗೂ ಸಹಸಂಘಟನೆಗಳ ಕಾರ್ಯಕರ್ತರು ದೇಶದಾದ್ಯಂತ ಮನೆಮನೆಗೆ ತೆರಳಿ ಇದೀಗ ಮತ್ತೊಮ್ಮೆ ರಾಮಮಂದಿರದ ಹೆಸರಿನಲ್ಲಿ ಹಣ ಸಂಗ್ರಹಣೆಯಲ್ಲಿ ತೊಡಗಿದ್ದಾರೆ. ಇದೇ ಸಮಯದಲ್ಲಿ 1992ರಲ್ಲಿ ರಾಮಮಂದಿರಕ್ಕಾಗಿ ಸಂಗ್ರಹವಾದ ಸಾವಿರಾರು ಕೋಟಿ ರೂಪಾಯಿ ಹಣ, ಚಿನ್ನ, ಇಟ್ಟಿಗೆ, ಕಬ್ಬಿಣ ಮುಂತಾದ ಪರಿಕರಗಳು ಎಲ್ಲಿ ಹೋಯಿತು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಪ್ರಬಲಗೊಳ್ಳುತ್ತಿದ್ದಂತೆಯೇ ಇದೀಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು 1992ರಲ್ಲಿ ದೇಶದ ಪ್ರತಿಯೊಂದು ಮನೆಯಿಂದಲೂ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಗಳನ್ನು ಬಿಜೆಪಿ ನಾಯಕರುಗಳು ನುಂಗಿ ಹಾಕಿದ್ದಾರೆ ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾ ರಾಷ್ಟ್ರೀಯ ನಾಯಕ ಮಹಾಂತರಿ ದೇವೇಂದರ್ ಪಾಂಡೆಯವರು ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಮಾಡಿದ್ದ ಆರೋಪದ ವಿಡಿಯೋ ವೈರಲ್ ಆಗಿದೆ. ಮಹಾಂತರಿ ದೇವೇಂದರ್ ರವರ ಪತ್ರಿಕಾಗೋಷ್ಠಿಯ ಈ ವಿಡಿಯೋ ನೋಡಿ ಹಾಗೂ kannadamedia ಯೂಟ್ಯೂಬ್ ಚಾನಲ್‌ subscribe ಮಾಡಿ. 2020ರ ಜನವರಿ ಕೊನೆಯ ಭಾಗದಲ್ಲಿ ಉಜ್ಜಯಿನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, 'ಬಿಜೆಪಿಯ ಹಿಂದುತ್ವವು ಅಧಿಕಾರದ ಈಡೇರಿಕೆಗಾಗಿ ಮಾತ್ರವೇ ಇರುವುದಾಗಿದೆ. ಅವರುಗಳದ್ದು ಈ ಮೂಲಕ ರಾಜಕೀಯ ಸ್ವಾರ್ಥದ ಈಡೇರಿಕೆ ಮಾತ್ರವೇ ಆಗಿದೆ‌. ಅವರ ಹಿಂದುತ್ವವು ಚುನಾವಣೆಯೊಂದಿಗೆ ಹುಟ್ಟಿಕೊಂಡು ಅಧಿಕಾರಕ್ಕೆ ಏರುವುದರೊಂದಿಗೆ ಕೊನೆಗೊಳ್ಳುತ್ತದೆ. ಹಾಗಾಗಿ ಅಸಲಿ ಹಿಂದುತ್ವವನ್ನು ಜೀವಂತವಿರಿಸಲು ಅಭಿಯಾನವನ್ನು ಕೈಗೊಡಿದ್ದೇವೆ' ಎಂದು ಅವರು ಆ ವಿಡಿಯೋದಲ್ಲಿ ಹೇಳಿಕೊಂಡಿದ್ದರು. ನರೇಂದ್ರ ಮೋದಿಯವರು ಓರ್ವ ಅತ್ಯುತ್ತಮವಾಗಿ ಮಾರ್ಕೆಟಿಂಗ್ ಮಾಡುವ ವ್ಯಕ್ತಿಯಾಗಿದ್ದಾರೆ. ಮೋದಿ ಅದರಲ್ಲಿ ಎಷ್ಟು ಪರಿಣಿತರೆಂದರೆ, ಬೋಳು ತಲೆಯವನಿಗೂ ಬಾಚಣಿಗೆ ಮಾರುವಷ್ಟು ನಿಪುಣತೆ ಹೊಂದಿದ್ದಾರೆ. ಅವರು ಬಾಚಣಿಗೆಯನ್ನು ಕೈಯಲ್ಲಿಟ್ಟುಕೊಂಡು, ಬೋಳು ತಲೆಯವನನ್ನೂ ತನ್ನ ಜೊತೆಗೆ ಇಟ್ಟುಕೊಂಡು ಎದುರಿಗಿರುವವರನ್ನು ನಂಬಿಸ ಬಲ್ಲರು. ಆ ಬೋಳು ತಲೆ ಬಾಚಿ, 'ಅಮಿತ್ ಶಾರ ಬೋಳು ತಲೆಯನ್ನು ನಾನೆಷ್ಟು ಸುಂದರವಾಗಿ ಬಾಚಿದ್ದೇನೆ ನೋಡಿ' ಎಂದು ಇಡೀ ದೇಶವನ್ನು ಹೌದು ಎಂಬಂತೆ ನಂಬಿಸಬಲ್ಲರು ಎಂದು ಅವರು ಆ ವಿಡಿಯೋದಲ್ಲಿ ವ್ಯಂಗ್ಯವಾಡಿದ್ದಾರೆ. 'ಅಂದು ರಾಮ ಮಂದಿರ ನಿರ್ಮಾಣಕ್ಕಾಗಿ ಇಡೀ ದೇಶದಲ್ಲಿ ರಥಯಾತ್ರೆ ನಡೆಸಿದ್ದೆವು. ಅದರ ಮೂಲಕ ರಾಮ ಮಂದಿರಕ್ಕಾಗಿ ಸಂಗ್ರಹಿಸಿದ್ದ 1400 ಕೋಟಿ ರೂ ಗಳನ್ನು ಬಿಜೆಪಿಗರು ತಿಂದು ತೇಗಿದ್ದಾರೆ. ಅವರು ರಾಮ ಮಂದಿರಕ್ಕಾಗಿ ಸಂಗ್ರಹಿಸಿದ್ದ ಹಣವನ್ನು ತಿಂದು ತೇಗಿದಾಗ ಅದನ್ನು ವಿರೋಧಿಸಿ ಹಿಂದುತ್ವದ ನಾಯಕ ಆಶೋಕ್ ಸಂಘಾಲ್ ರವರಿಗೆ ಈ ಬಗ್ಗೆ ಪತ್ರ ಬರೆದಿದ್ದೆ. ಅದನ್ನು ನಾನು ಮೋದಿಜಿ ಬಳಿ ಪ್ರಶ್ನಿಸುತ್ತೇನೆ ಎಂದು ಅವರು ದಿಲ್ಲಿಗೆ ಹೋಗಿದ್ದರು. ಆದರೆ ನಂತರ ಅರೋಗ್ಯವಂತ ವ್ಯಕ್ತಿಯಾಗಿದ್ದ ಅಶೋಕ್ ಸಿಂಘಾಲ್ ರವರ ಮರಣದ ವಾರ್ತೆ ಬರುತ್ತದೆ. ಹಿಂದುತ್ವಕ್ಕಾಗಿ ಪ್ರಬಲ ನಾಯಕರು ಯಶಸ್ಸು ಕಾಣುತ್ತಲೆ ಸಾವಿಗೀಡಾಗುತ್ತಾರೆ. ಮೂತ್ರ ಮಾಡಲು ಬಾತ್ ರೂಂ ಹೋಗಬೇಕಾದರೂ ಮೊದಲು ಬಾತ್ ರೂಂ ಚೆಕ್ ಮಾಡಿ ಬಾತ್ ರೂಂಗೆ ಹೋಗುವಂತಹ ಝೆಡ್ ಪ್ಲಸ್ ಸಕ್ಯೂರಿಟಿ ಇದ್ದಂತಹ ಪ್ರವೀಣ ತೊಗಾಡಿಯಾರವರು ರಸ್ತೆ ಬದಿಯಲ್ಲಿ ಅನಾಥವಾಗಿ ಪತ್ತೆಯಾಗುತ್ತಾರೆ ಎಂದರೆ ಏನರ್ಥ ಎಂದವರು ಆ ವಿಡಿಯೋದಲ್ಲಿ ಪ್ರಶ್ನಿಸಿದ್ದಾರೆ. ಕಟ್ಟರ್ ಹಿಂದುತ್ವವಾದಿಯಾಗಿದ್ದ ಕಮಲೇಶ್ ತಿವಾರಿಯವರ ಭದ್ರತೆಗಾಗಿ ಹಿಂದೆ 24 ಗಾರ್ಡ್ ನಿಯೋಜಿತರಾಗಿದ್ದರು. ಒಂದು ದಿನ ಅವರ ಸೆಕ್ಯೂರಿಟಿ ಗಾರ್ಡ್‌ಗಳನ್ನು ತೆಗೆದು ಹಾಕಲಾಗುತ್ತದೆ ಮತ್ತು ಆ ನಂತರ ಅವರ ಹತ್ಯೆಯಾಗುತ್ತದೆ. ಬಿಜೆಪಿಯ ಆಡಳಿತದಲ್ಲಿ ಪ್ರಖರ ಹಿಂದುತ್ವವಾದಿಗಳನ್ನು ಒಂದೊಂದಾಗಿ ಹತ್ಯೆ ಮಾಡಲಾಗಿದೆ ಎಂದು ಅವರು ಆ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. ಆ ಪತ್ರಿಕಾಗೋಷ್ಠಿಯ ವರ್ಷದ ಬಳಿಕ ಇದೀಗ 'ಆ ವಿಡಿಯೋದಲ್ಲಿರುವ ಹಿಂದೂ ಮಹಾಸಭಾದ ನಾಯಕ ಮಹಾಂತರಿ ದೇವೇಂದರ್ ಈಗ ಎಲ್ಲಿದ್ದಾರೆ? ಅವರು ಜೀವಂತವಾಗಿದ್ದಾರೆಯೇ ಅಥವಾ ಅವರ ಬಾಯನ್ನು ಬಲವಂತವಾಗಿ ಮುಚ್ಚಿಸಲಾಗಿದೆಯೇ? ಅವರು ಆರೋಪಿಸಿದಂತೆ ಆ ಹಣ ಎಲ್ಲಿಗೆ ಹೋಯಿತು? ಅದು ದುರ್ಬಳಕೆ ಆಗಿಲ್ಲವಾದರೆ ಅದರ ಲೆಕ್ಕವನ್ನು ಅದೇಕೆ ದೇಶದ ಜನರಿಗೆ ನೀಡುತ್ತಿಲ್ಲ? ಆ ಕುರಿತು ತನಿಖೆ ಬೇಡವೇ?' ಮುಂತಾದ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಇದೀಗ ಹುಟ್ಟಿಕೊಂಡಿದೆ. __________________________________ ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement