Advertisement

ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ. ಬೆಳಗಾವಿ ಲೋಕಸಭೆ: ಸತೀಶ್ ಜಾರಕಿಹೊಳಿ ಅಭ್ಯರ್ಥಿ

Advertisement

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಬಿ. ನಾರಾಯಣ ರಾವ್‌ರವರ ಪತ್ನಿ ಮಲ್ಲಮ್ಮ ಮತ್ತು ಮಸ್ಕಿಗೆ ಬಸವನ ಗೌಡ ತುರುವಿಹಾಳ್ ಹಾಗೂ ಇನ್ನೂ ಚುನಾವಣಾ ದಿನಾಂಕವನ್ನು ಘೋಷಿಸಲ್ಪಡದಿರುವ ಸಿಂದಗಿ ಕ್ಷೇತ್ರಕ್ಕೆ ಅಶೋಕ್ ಮನಗೂಳಿಯವರನ್ನು ಅಭ್ಯರ್ಥಿಗಳನ್ನಾಗಿ ಕಾಂಗ್ರೆಸ್ ಘೋಷಿಸಿದೆ. ಬಸವನ ಗೌಡ ತುರುವಿಹಾಳ್ ರವರು ಈ ಹಿಂದೆ ಬಿಜೆಪಿಯಿಂದ ಸ್ಪರ್ಧಿಸಿದ್ದಾಗ ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಕೇವಲ 213ಮತಗಳ ಅತ್ಯಲ್ಪ ಅಂತರದಿಂದ ಸೋಲು ಕಂಡಿದ್ದರು. ಪ್ರತಾಪ್‌ ಗೌಡ ಪಾಟೀಲ್‌ ರಾಜೀನಾಮೆಯಿಂದ ಮಸ್ಕಿ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಪ್ರತಾಪ್‌ಗೌಡ ಪಾಟೀಲ್‌ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಕೋವಿಡ್ ಮಹಾಮಾರಿಗೆ ಎಂ. ನಾರಾಯಣರಾವ್ ಬಲಿಯಾಗುವುದರೊಂದಿಗೆ ತೆರವುಗೊಂಡಿದ್ದ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ ಅವರ ಹೆಸರು ಅಂತಿಮಗೊಂಡಿರುವುದು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಾರಾಯಣ ರಾವ್ ಅಭಿಮಾನಿಗಳ ವಲಯದಲ್ಲಿ ಹರ್ಷದ ವಾತಾವರಣವನ್ನು ಮೂಡಿಸಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ: ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿ? ಪ್ರತಿಷ್ಠೆಯ ಕ್ಷೇತ್ರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಮೂವರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಂಡಿದೆ. ನಿರೀಕ್ಷೆಯಂತೆ ಸತೀಶ್ ಜಾರಕಿಹೊಳಿ, ಪ್ರಕಾಶ್ ಹುಕ್ಕೇರಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜು ಹಟ್ಟಿಹೊಳಿ ಅವರ ಹೆಸರು ಈ ಪಟ್ಟಿಯಲ್ಲಿದೆ. ವಿಶ್ವಾಸಾರ್ಹ ಮೂಲಗಳ ಪ್ರಕಾರ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರೇ ಅಂತಿಮವಾಗಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ್‌ ಅಂಗಡಿ ಕೊರೋನಾ ಮಹಾಮಾರಿಗೆ ಬಲಿಯಾದ ಕಾರಣದಿಂದ ಬೆಳಗಾವಿ ಲೋಕಸಭಾ ಸ್ಥಾನ ತೆರವಾಗಿತ್ತು. ಸುರೇಶ್‌ ಅಂಗಡಿಯವರು ಬೆಳಗಾವಿ ಕ್ಷೇತ್ರದಿಂದ 4 ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಉಪಚುನಾವಣೆ ವೇಳಾಪಟ್ಟಿ ಇಂತಿದೆ: ಮಾರ್ಚ್ 23ಕ್ಕೆ ಅಧಿಸೂಚನೆ ಪ್ರಕಟ, ಮಾರ್ಚ್ 30: ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ ಮಾರ್ಚ್ 31: ನಾಮಪತ್ರಗಳ ಪರಿಶೀಲನೆ. ಏಪ್ರಿಲ್ 03: ನಾಮಪತ್ರ ವಾಪಸ್‌ಗೆ ಕೊನೆ ದಿನ. ಏಪ್ರಿಲ್ 17: ಮತದಾನ‌ ಮೇ 02: ಫಲಿತಾಂಶ ಪ್ರಕಟ. __________________________________

Advertisement
Advertisement
Recent Posts
Advertisement