Advertisement

ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ... ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ)

Advertisement

ಪ್ರಧಾನಿ ಮೋದಿಯವರ ವಿದ್ಯಾರ್ಹತೆ ಬಹಿರಂಗ ಪಡಿಸುವಂತೆ ದೆಹಲಿ ಸಿಎಂ ಕೇಜ್ರಿವಾಲ್ 2016ರಲ್ಲಿ ಮಾಹಿತಿ ಆಯುಕ್ತ ಶ್ರೀಧರ್ ಆಚಾರ್ಯುಲು ಅವರಿಗೆ ಅರ್ಜಿ ಸಲ್ಲಿಸಿದ್ದರು. ಆ ಪ್ರಕಾರ ಮೋದಿಯವರ ವಿದ್ಯಾರ್ಹತೆಯ ಬಗ್ಗೆ ಮಾಹಿತಿ ನೀಡುವಂತೆ ಸಿಸಿಐ ದೆಹಲಿ ಗುಜರಾತ್ ವಿಶ್ವವಿದ್ಯಾಲಯಗಳಿಗೆ ಸೂಚಿಸಿತ್ತು. ಗುಜರಾತ್ ವಿವಿ ನೀಡಿರುವ ಮಾಹಿತಿ ಪ್ರಕಾರ ಮೋದಿ, ಮೊದಲ ವರ್ಷದ ಎಂಎನಲ್ಲಿ 400ಕ್ಕೆ 237, 2ನೇ ವರ್ಷದಲ್ಲಿ 400ಕ್ಕೆ 262 ಅಂಕ ಪಡೆದು, ಒಟ್ಟಾರೆಯಾಗಿ 800 ಅಂಕಗಳಿಗೆ 499 ಅಂಕಗಳಿಸಿದ್ದಾರೆಂದು ವಿಶ್ವವಿದ್ಯಾಲಯ ಮಾಹಿತಿ ನೀಡಿತ್ತು. ಎರಡು ವರ್ಷಗಳ ಸ್ನಾತಕೋತ್ತರ ಪದವಿಯಲ್ಲಿ ಮೋದಿ ರಾಜಕೀಯ ವಿಶ್ಲೇಷಣೆ, ರಾಜಕೀಯ ಮನಃಶಾಸ್ತ್ರ ಐರೋಪ್ಯ ರಾಜಕೀಯದ ವಿಷಯಗಳನ್ನು ಅಭ್ಯಾಸ ಮಾಡಿದ್ದಾರೆಂದು ವಿವಿ ನೀಡಿದ ಮಾಹಿತಿಯಲ್ಲಿ ಉಲ್ಲೇಖಿಸಲಾಗಿತ್ತು. ಮತ್ತೊಂದೆಡೆ ಮೋದಿ ಅವರು ದೆಹಲಿ ವಿಶ್ವ ವಿದ್ಯಾಲಯದಿಂದ ಬಿಎ ಮತ್ತು ಗುಜರಾತ್ ವಿಶ್ವ ವಿದ್ಯಾಲಯದಿಂದ ಎಂಎ ಪದವಿ ಗಳಿಸಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಸರ್ಟಿಫಿಕೇಟ್‌ಗಳನ್ನು ಅಮಿತ್ ಶಾ ಬಿಡುಗಡೆ ಮಾಡಿದ್ದರು. ಈ ನಡುವೆ ಬಿಜೆಪಿ ಐಟಿ ಸೆಲ್ ಮೋದಿಯವರು ಎಂಟಯರ್ ಪೊಲಿಟಿಕಲ್ ಸಾಯನ್ಸ್ ಓದಿರುವ ಕುರಿತು ಪ್ರಚಾರ ಮಾಡಿತ್ತು. ಆದರೆ ಆ ನಂತರ ನವದೆಹಲಿಯಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ಆಪ್ ನಾಯಕ ಅಶುತೋಷ್, ಮೋದಿಯವರ ಶೈಕ್ಷಣಿಕ ಸರ್ಟಿಫಿಕೇಟ್ ನಕಲಿ ಮತ್ತು ಅಲ್ಲಿ ನಮೂದಿಸಿರುವ ಹೆಸರು ಹೊಂದಿಕೆಯಾಗಿಲ್ಲ ಎಂದಿದ್ದರು. ಆದರೆ ಈ ಘಟನೆಗೂ ಬಹು ವರ್ಷಗಳ ಹಿಂದೆಯೇ ಸ್ವತಃ ಮೋದಿಯವರೆ ಟಿವಿ ಸಂದರ್ಶನವೊಂದರಲ್ಲಿ ತಾನು ಹೈಸ್ಕೂಲ್ ತನಕ ಮಾತ್ರವೇ ಓದಿರುವ ಕುರಿತು ಹೇಳಿಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಇದೀಗ ಹುಟ್ಟಿಕೊಂಡಿರುವ ಪ್ರಶ್ನೆ ಅದೇನೆಂದರೆ, ಸ್ವತಃ ಮೋದಿಯವರು ಮಾಧ್ಯಮದ ಮುಂದೆ ತನ್ನ ಬಗ್ಗೆ ತಾನು ಹೇಳಿಕೊಂಡಿರುವ ವಿಚಾರ ಸುಳ್ಳೋ ಅಥವಾ ಗುಜರಾತ್ ವಿವಿ ಕೊಟ್ಟಿರುವ ದಾಖಲೆ ಸುಳ್ಳೋ? ಎಂಬ ಕುರಿತಾದುದಾಗಿದೆ. ವಿಡಿಯೋಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಹಾಗೂ ಕನ್ನಡ ಮೀಡಿಯಾ ಡಾಟ್ ಕಾಂ ಯೂಟ್ಯೂಬ್ ಚಾನಲ್ subscribe ಮಾಡಿ. __________________________________ ►► ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ ಆರ್‌.ಜಿ-) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►► ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement