Advertisement

ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯ ಕೋಡಿ, ಕುಂದಾಪುರ: ಬಿ.ಎಡ್. ಪರೀಕ್ಷಾ ಫಲಿತಾಂಶ- ಶೇಕಡಾ 100

Advertisement

ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯ ಕೋಡಿ, ಕುಂದಾಪುರ , ಈ ಸಂಸ್ಥೆಯ ವಿದ್ಯಾರ್ಥಿಗಳು ಬಿ.ಎಡ್ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ಪಡೆದುಕೊಂಡಿದ್ದಾರೆ. ಹಲವು ವರ್ಷಗಳಿಂದ ಸತತವಾಗಿ ಈ ಸಂಸ್ಥೆ, ಈ ಸಾಧನೆಯನ್ನು ದಾಖಲಿಸಿಕೊಂಡು ಬಂದಿದೆ. ಈ ಸಾಧನೆಗಾಗಿ ಸಂಸ್ಥೆಯು ತೃಪ್ತಿ ಹಾಗೂ ಹೆಮ್ಮೆಯನ್ನು ಹೊಂದಿದೆ. ಒಟ್ಟು ಪರೀಕ್ಷೆಗೆ ಹಾಜರಾದ 76 ವಿಧ್ಯಾರ್ಥಿಗಳಲ್ಲಿ 72ವಿಧ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಮತ್ತು ನಾಲ್ಕು ವಿಧ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ‌. ಬ್ಯಾರೀಸ್ ಸಮೂಹದ ಚೇರ್ಮೇನ್‌ರಾದ ಸಯ್ಯದ್ ಮೊಹಮದ್ ಬ್ಯಾರಿ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ.ಎಂ ಅಬ್ದುಲ್ ರೆಹಮಾನ್, ವಿಶ್ವಸ್ಥರು, ನಿರ್ದೇಶಕರು, ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರು, ವಿಧ್ಯಾರ್ಥಿಗಳ ಈ ಸಾಧನೆಗೆ ಅವರನ್ನು ಮನಃಪೂರ್ವಕವಾಗಿ ಅಭಿನಂದಿಸಿ ಅವರಿಗೆ ಶುಭವನ್ನು ಕೋರಿದ್ದಾರೆ. __________________________________ ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.

Advertisement
Advertisement
Recent Posts
Advertisement