Advertisement

ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ 'ವಿಶ್ವಗುರು ಭಾರತ'ದ ಬಗ್ಗೆ ನಿಮಗೆಷ್ಟು ಗೊತ್ತು?

Advertisement

ದೇಶದ ಜನರಿಗೆ ಯಾವುದೇ ಕಷ್ಟದ ಅರಿವು ಆಗದಂತೆ ತನ್ನ ಬುದ್ದಿವಂತಿಕೆಯಿಂದ ಆಡಳಿತ ನಡೆಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರವರಿಗೂ ಇದೀಗ ಅತೀ ಸಣ್ಣಸಣ್ಣ ಸಮಸ್ಯೆಗಳನ್ನೂ ನಿಬಾಯಿಸಲಾಗದೆ ದೇಶದ ಜನರನ್ನು ಬಲಿಕೊಡುತ್ತಿರುವ ನರೇಂದ್ರ ಮೋದಿಯವರ ಆಡಳಿತಕ್ಕೂ ಇರುವ ವ್ಯತ್ಯಾಸವನ್ನು ತುಲನೆ ಮಾಡಿ ತೋರಿಸುವ ಒಂದು ಪ್ರಬುದ್ಧ ಲೇಖನ. ನಾಡಿನ ಮೂಲೆಮೂಲೆಗೆ ತಲುಪಿಸುವ ಉದ್ದೇಶದಿಂದ ಇಲ್ಲಿ ಪ್ರಕಟಿಸುತ್ತಿದ್ದೇವೆ... ಅಗತ್ಯವಾಗಿ ಓದಿ! ಈ ಲೇಖನ ಬರೆದ ಲೇಖಕರಿಗೆ ಅನಂತಾನಂತ ವಂದನೆಗಳು. -ಸಂಪಾದಕರು ಕೊರೋನದಂತೆ ಎಚ್1ಎನ್1 ಕೂಡ ಚೀನಾ ದೇಶದಲ್ಲಿ ಜನ್ಮ ತಾಳಿದ ವೈರಸ್. ಮನುಷ್ಯ ಉಸಿರಾಡುವಾಗ ಗಾಳಿಯಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಹಾಗಾಗಿ ಇದು ಹರಡುವ ವಿಧಾನ ಮತ್ತು ಕಾಯಿಲೆಯ ತೀವ್ರತೆ ಎರಡರಲ್ಲೂ ಕೊರೋನ ವೈರಸ್ ಗಿಂತ ಹಲವು ಪಟ್ಟು ಅಪಾಯಕಾರಿ. 2009ರಲ್ಲಿ ಈ ವೈರಸ್ ಚೀನಾದಲ್ಲಿ ಕಂಡು ಬಂತು. ಅಷ್ಟೇ ವೇಗವಾಗಿ ಜಗತ್ತಿನಾದ್ಯಂತ ಹರಡಿತ್ತು. ಪರಿಣಾಮ ಚೀನಾ, ಅಮೆರಿಕಾ, ಬ್ರಿಟನ್, ಕೆನಡ ಮೊದಲಾದ ಜಗತ್ತಿನ ಬಲಾಢ್ಯ ರಾಷ್ಟ್ರಗಳು ನಡುಗಿ ಹೋದವು. ಎಚ್1ಎನ್1 ವೈರಸ್ ನಿಯಂತ್ರಣಕ್ಕೆ ಈಗ ನಾವು ನಮ್ಮ ದೇಶದಲ್ಲಿ ನೋಡುತ್ತಿದ್ದೇವೆ ಅಲ್ವಾ ಅದಕ್ಕೂ ಕಠಿಣ ಲಾಕ್ ಡೌನ್ ಗಳನ್ನು ಕೆಲವು ರಾಷ್ಟ್ರಗಳು ಹೇರಿದವು. ಯಾರಾದರೂ ಮನೆಯಿಂದ ಹೊರ ಬಂದರೆ ಗುಂಡಿಕ್ಕುವಂತೆ ಚೀನಾ ಸರಕಾರ ತನ್ನ ಪೊಲೀಸರಿಗೆ ಆದೇಶ ನೀಡಿತ್ತು. ಆ ಬಳಿಕ ಉಂಟಾದ ಜಾಗತಿಕ ಆರ್ಥಿಕ ಕುಸಿತಕ್ಕೆ ಇಡೀ ವಿಶ್ವ ತತ್ತರಿಸಿ ಹೋಯಿತು. ಎಚ್1ಎನ್1 ಮಾರಕ ವೈರಸ್ ಭಾರತಕ್ಕೂ ಕಾಲಿಟ್ಟಿತು. ಆದರೆ ಅಂದು ನಮ್ಮ ದೇಶದ ಪ್ರಧಾನಿಯಾಗಿದ್ದವರು ಡಾ. ಮನಮೋಹನ್ ಸಿಂಗ್ ಅವರು. ಆರೋಗ್ಯ ಸಚಿವರಾಗಿದ್ದವರು ಗುಲಾಂ ನಬಿ ಆಝಾದ್ ಅವರು. ಎಚ್1ಎನ್1 ನಿಯಂತ್ರಣಕ್ಕೆ ಅಂದು ಮನಮೋಹನ್ ಸಿಂಗ್ ಅವರು ದೇಶದಲ್ಲಿ ಒಂದು ಟಾಸ್ಕ್ ಫೋರ್ಸ್ ಸಮಿತಿ ರಚನೆ ಮಾಡಿದರು. ಅದರ ನೇತೃತ್ವವನ್ನು ಖುದ್ದು ತಾನೆ ವಹಿಸಿದರು. ಆ ಬಳಿಕ ನಡೆದ ಘಟನೆಗಳೆಲ್ಲಾ ಒಂದು ಮ್ಯಾಜಿಕ್ ದಂಡದಲ್ಲಿ ಕಂಟ್ರೋಲ್ ಮಾಡಿದ ಹಾಗೆ. ಎಚ್1ಎನ್1 ನಿಯಂತ್ರಿಸಲು ಜಗತ್ತಿನ ಬಲಾಢ್ಯ ರಾಷ್ಟ್ರಗಳೆಲ್ಲಾ ಲಾಕ್ ಡೌನ್, ಕರ್ಫ್ಯೂ ಜಾರಿ ಮಾಡಿದ್ದರೆ ಭಾರತದಲ್ಲಿ ಒಂದೇ ಒಂದು ದಿನ ಲಾಕ್ ಡೌನ್ ಆಗಲಿ ಕರ್ಫ್ಯೂ ಆಗಲಿ ಜಾರಿ ಆಗಿಲ್ಲ. ಅಂತಾರಾಷ್ಟ್ರೀಯ ವಿಮಾನಗಳೂ ಬಂದ್ ಆಗಿಲ್ಲ. ಶಾಲಾ ಕಾಲೇಜು, ಪ್ರಾರ್ಥನಾ ಮಂದಿರಗಳು, ಸಿನಿಮಾ ಥಿಯೇಟರ್, ಶಾಪಿಂಗ್ ಮಾಲ್ ಗಳು, ಪ್ರವಾಸಿ ತಾಣಗಳು, ಪಾರ್ಕ್ ಗಳು ಕೂಡಾ ಬಂದ್ ಆಗಿಲ್ಲ. ವಲಸೆ ಕಾರ್ಮಿಕರಿಗೆ ಗುಳೆ ಹೋಗುವ ಪರಿಸ್ಥಿತಿಯೂ ನಿರ್ಮಾಣವಾಗಿಲ್ಲ. ಇಂದು ಮೋದಿ ಪದೇ ಪದೇ ದೇಶವನ್ನುದ್ದೇಶಿಸಿ ನಾಟಕದ ಭಾಷಣ ಮಾಡುತ್ತಾರಲ್ಲಾ ಅಂತಹ ಯಾವುದೇ ಒಂದು ಭಾಷಣವನ್ನು ಮನಮೋಹನ್ ಸಿಂಗ್ ಮಾಡಿಲ್ಲ. ಚಪ್ಪಾಳೆ ತಟ್ಟಿ, ಗಂಟೆ, ತಗಟೆ ಬಾರಿಸಿ, ದೀಪ ಬೆಳಗಿಸಿ, ಟಾರ್ಚಿ ಲೈಟ್ ಹತ್ತಿಸಿ ಎಂದೂ ಹೇಳಲಿಲ್ಲ. ತಾನೂ ಅದೇ ರೀತಿ ಮಾಡಿ ಫೋಟೋಗೆ ಪೋಸ್ ಕೊಡಲಿಲ್ಲ. ಟಿವಿ, ಮಾಧ್ಯಮಗಳಿಗೆ ಕೋಟ್ಯಂತರ ರೂಪಾಯಿಗಳ ಜಾಹೀರಾತು ನೀಡಿ ಪ್ರಚಾರವನ್ನೂ ಪಡೆಯಲಿಲ್ಲ. ಅಂದು ಮನಮೋಹನ್ ಸಿಂಗ್ ಮಾಡಿದ್ದು ಇಷ್ಟೇ. ವೈರಸ್ ದೇಶವನ್ನು ಪ್ರವೇಶಿಸುವ ಮೊದಲೇ ಹೈ ಅಲಾರ್ಟ್ ಆದರು. ತನ್ನ ಟಾಸ್ಕ್ ಫೋರ್ಸ್ ನಲ್ಲಿದ್ದ ದೇಶದ ಉನ್ನತ ತಜ್ಞ ವೈದ್ಯರ ಸಲಹೆಗಳನ್ನು ಸ್ವೀಕರಿಸಿದರು. ತನ್ನ ಅಗಾಧ ಬುದ್ದಿವಂತಿಕೆಯನ್ನೂ ಉಪಯೋಗಿಸಿದರು. ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ವೈದ್ಯರು ಆರೋಗ್ಯ ಕಾರ್ಯಕರ್ತರನ್ನು ನೇಮಿಸಿ ವಿದೇಶದಿಂದ ಬಂದ ಪ್ರಯಾಣಿಕರ ತಪಾಸಣೆ ನಡೆಸಿ ಅವರ ಮೇಲೆ ನಿಗಾ ಇರಿಸಲಾಯಿತು. ‌ದೇಶದಲ್ಲಿ ವೈರಸ್ ಚಿಗುರುತ್ತಿದ್ದಂತೆಯೇ ಚಿವುಟಿ ಹಾಕಿದರು. ಎಲ್ಲಾ ಪ್ರಯತ್ನಗಳ ಹೊರತಾಗಿಯೂ ದೇಶದಲ್ಲಿ ಈ ವರೆಗೆ ಎಚ್1ಎನ್1ಗೆ ಹಲವು ಜೀವಗಳು ಹೋದವು. ಆದರೆ ಇಂದಿನಂತೆ ಆಸ್ಪತ್ರೆಯಲ್ಲಿ ಬೆಡ್ ಇಲ್ಲದೆ, ಆಕ್ಸಿಜನ್ ಇಲ್ಲದೆ ಬೀದಿ ಬೀದಿಗಳಲ್ಲಿ ತನ್ನ ಜನರು ಸತ್ತು ಬೀಳುದನ್ನು ತಡೆದರು. ಅಂದು ಭಾರತ ವೈರಸ್ ಅನ್ನು ನಿಯಂತ್ರಿಸಿದ ರೀತಿಗೆ ಜಗತ್ತು ಆಶ್ಚರ್ಯಗೊಂಡಿತ್ತು. ವಿಶ್ವದ ಬಲಾಢ್ಯ ರಾಷ್ಟ್ರಗಳು ಭಾರತದತ್ತ ನೋಡತೊಡಗಿತು‌. ಇಂದು ನಾವು ಹೇಳುತ್ತಿದ್ದೇವೆ ಅಲ್ವಾ 'ಭಾರತ ವಿಶ್ವ ಗುರು' ಅಂತ... ಅದು ಅಂದೇ ಆಗಿತ್ತು. ಅಂದು ವೈದ್ಯಕೀಯ ಮತ್ತು ಸಾಮಾಜಿಕವಾಗಿ ಭಾರತ ಇಂದಿನಷ್ಟು ಮುಂದುವರಿದಿಲಿಲ್ಲ‌. ಆದರೂ ಇರುವ ತಂತ್ರಜ್ಞಾನಗಳನ್ನು ಬಳಸಿದರು ಮನಮೋಹನ್ ಸಿಂಗ್. ಗ್ರಾಮೀಣ ಭಾರತ ವೈರಸ್ ಬಗ್ಗೆ ತಿಳಿಯುವ ಮೊದಲೇ ಅದನ್ನು ದೇಶದಿಂದ ಕಿತ್ತು ಎಸೆದರು. ಸಾವು ನೋವಿನಿಂದ ದೇಶವನ್ನು ರಕ್ಷಿಸಿದರು. ಅಷ್ಟೇ ಅಲ್ಲ ಆ ಬಳಿಕ ಜಗತ್ತು ತುತ್ತಾದ ಮಹಾ ಆರ್ಥಿಕ ಕುಸಿತದಿಂದಲೂ ಭಾರತವನ್ನು ರಕ್ಷಿಸಿದರು. ದೇಶದ ಜನರು ಇದ್ಯಾವುದರ ಅರಿವೇ ಇಲ್ಲದೆ ತಮ್ಮಷ್ಟೆ ಸುಂದರವಾಗಿ ಜೀವಿಸುತ್ತಿದ್ದರು. ಇಡೀ ಜಗತ್ತು ಮನಮೋಹನ್ ಸಿಂಗ್ ಭಾರತದ ಬಳಿ ಸಹಾಯ ಕೇಳುತ್ತಾ ಬಂತು. ವಿಶ್ವ ಗುರು ಅಂತೇವೆ ಅಲ್ವಾ. ಅದುವೇ! ಅಂದು ಮನಮೋಹನ್ ಸಿಂಗ್ ಭಾಷಣ ಮಾಡುತ್ತಾ ಕಾಲ ಹರಣ ಮಾಡಿಲ್ಲ‌. ಫೋಟೋಗೆ ಪೋಸು ಕೊಡಲಿಲ್ಲ. ಕೊರೋನ ನಮ್ಮ ದೇಶಕ್ಕೆ ಕಾಲಿಟ್ಟು 800 ಮಂದಿಯಲ್ಲಿ ಪಾಸಿಟಿವ್ ಆಗಿದ್ದರೂ ಕೇವಲ ಪ್ರಚಾರಕ್ಕಾಗಿ ಹಲವು ಲಕ್ಷ ಜನರನ್ನು ಸೇರಿಸಿ ನಮಸ್ತೆ ಟ್ರಂಪ್ ಕಾರ್ಯಕ್ರಮ ನಡೆಸಿದ ಮೋದಿಯಂತೆ ಮನಮೋಹನ್ ಸಿಂಗ್ ಕಾರ್ಯಕ್ರಮ ನಡೆಸಿಲ್ಲ. ಕೊರೋನ ಒಂದನೇ ಅಲೆಗೆ ದೇಶ ಸಾಕಷ್ಟು ಸಾವು ನೋವು, ಕಷ್ಟ ನಷ್ಟ ಅನುಭವಿಸಿದ್ದರೂ ಎರಡನೇ ಅಲೆ ಬಗ್ಗೆ ತಜ್ಞರು ಪದೇ ಪದೇ ಎಚ್ಚರಿಸುತ್ತಿದ್ದರೂ ಅವರು ಮೋದಿಯಂತೆ ಚುನಾವಣಾ ಪ್ರಚಾರದಲ್ಲಿ ಮುಳುಗಿರಲಿಲ್ಲ. ಅಂತಹ ಅವಿದ್ಯಾವಂತರೂ ಅವರು ಆಗಿರಲಿಲ್ಲ. ವಿಶ್ವ ಗುರು, ಸೂಪರ್ ಇಂಡಿಯಾ ಭಾಷಣದ ಮೋಡಿಗೆ ನಾವು ಮಾರು ಹೋದೆವು. ಮೌನವಾಗಿ ಭಾರತವನ್ನು ವಿಶ್ವ ಗುರು - ಸೂಪರ್ ಇಂಡಿಯಾ ಮಾಡಿದ ಮನಮೋಹನ್ ಸಿಂಗ್ ಅವರನ್ನು ನಾವು ಬದಲಾಯಿಸಿದೆವು. ಅಂದು ವಿಶ್ವ ಗುರು ಆಗಿದ್ದ ಭಾರತ ಇಂದು ವಿಶ್ವದ ಎದುರು ಬೆತ್ತಲೆಯಾಗಿದೆ. ಮಾನ ಮರ್ಯಾದೆ ಕಳೆದುಕೊಂಡೆವು‌. ವೈರಸ್ ನಿಯಂತ್ರಿಸುವುದು ಬಿಡಿ ವೈರಸ್ ಪೀಡಿತರಿಗೆ ಕನಿಷ್ಠ ಆಕ್ಸಿಜನ್ ನೀಡಲೂ ನಾವು ಇಂದು ವಿವಿಧ ರಾಷ್ಟ್ರಗಳೊಂದಿಗೆ ಬೇಡುವಂತಾಗಿದೆ. ಹೆಣಗಳನ್ನು ಸುಡಲೂ ಪರದಾಡುತ್ತಿದ್ದೇವೆ. ಬಣ್ಣ ಬಣ್ಣದ ಮಾತಿಗೆ, ವರ್ಣರಂಜಿತ ಕೋಟು ಬೂಟಿಗೆ, ಭಾಷಣದ ಮೋಡಿಗೆ, ನಮ್ಮ ಕೆಟ್ಟ ನಿರ್ಧಾರಕ್ಕೆ ಕೇವಲ ಏಳು ವರ್ಷಗಳಾಗಿವೆ ಅಷ್ಟೇ. ಇಡೀ ಭಾರತ ಮತ್ತೆ ಮನಮೋಹನ್ ಸಿಂಗ್ ಅವರನ್ನು ನೆನಪಿಸುತ್ತಿದೆ. ಬರಹ: ಅನಾಮಿಕ. (ಕೃಪೆ: ಸಾಮಾಜಿಕ ಜಾಲತಾಣ.)

Advertisement
Advertisement
Recent Posts
Advertisement