ಉಡುಪಿ

ಎಪ್ರಿಲ್ 9: ಕುಂದಾಪುರದಲ್ಲಿ ‘ಸಹನಾ ಸಿಲ್ಕ್ ಹೌಸ್’ ಉದ್ಘಾಟನಾ ಕಾರ್ಯಕ್ರಮ

ಕುಂದಾಪುರದ ಸಮೀಪದ ಅಂಕದಕಟ್ಟೆಯ ಪ್ರಖ್ಯಾತ ಸಹನಾ ಗ್ರೂಪ್‌ ಹಾಗೂ ಕುಂದಾಪುರದ ಜನಪ್ರಿಯ ಆಭರಣಗಳ ಮಳಿಗೆ ಉದಯ ಜ್ಯುವೆಲ್ಲರ್ಸ್ ಇದರ ಸಹಯೋಗದೊಂದಿಗೆ ಕುಂದಾಪುರದ ಹಳೆ ಬಸ್ಸು ನಿಲ್ದಾಣದಲ್ಲಿನ ಎ.ಎಸ್ ಟ್ರೇಡ್ ಸೆಂಟರ್ ಕಟ್ಟಡದಲ್ಲಿ ‘ಸಹನಾ ಸಿಲ್ಕ್ ಹೌಸ್’ ವಿಶಿಷ್ಟ ಹಾಗೂ ನವನವೀನ ಮಾದರಿಯ ಮದುವೆ ಸೀರೆಗಳ ಹಾಗೂ ಇನ್ನಿತರ ವಸ್ತ್ರಗಳ ಬ್ರಹತ್ ಮಳಿಗೆ ಎಪ್ರಿಲ್ 9 ರಂದು ಬೆಳಿಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ.ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಯವರು ಉದ್ಘಾಟಿಸಿ, ಆಶೀರ್ವಚನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ, ಚಿತ್ರನಟ ಶೈನ್ ಶೆಟ್ಟಿ, ನಟಿ ಮೇಘಾ ಶೆಟ್ಟಿ, ಪುರಸಬೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ ಪೂಜಾರಿ ಭಾಗವಹಿಸಲಿದ್ದಾರೆ.

ಕುಂದಾಪುರದ ಇತಿಹಾಸದಲ್ಲೇ ವಿವಿಧ ಮಾದರಿಯ ಉತ್ಕೃಷ್ಟ ಶ್ರೇಣಿಯ ಮದುವೆ ಸೀರೆಗಳು ಹಾಗೂ ಇನ್ನಿತರ ವಸ್ತ್ರಗಳ ಅಭೂತಪೂರ್ವ ಸಂಗ್ರಹದ ಬೃಹತ್‌ ಮಳಿಗೆ ಇದಾಗಿದ್ದು ಬಹು ವಿಸ್ತಾರವಾದ ಹವಾ ನಿಯಂತ್ರಿತ ಮಳಿಗೆಯಲ್ಲಿ ವಿಸ್ತೃತ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ. ವಧುವರರ ಅತ್ಯಪೂರ್ವ ವಸ್ತ್ರಗಳು, ಅಲಂಕಾರಿಕ ಹಾಗೂ ವೈವಿಧ್ಯಮಯವಾದ ಸೀರೆಗಳಾದ ಕಾಂಚೀಪುರಂ, ಬನಾರಸಿ, ಮೈಸೂರು ಸಿಲ್ಕ್ಸ್, ಧರ್ಮಾವರಂ, ಫ್ಯಾನ್ಸಿ ಮತ್ತು ನೆಟೆಡ್ ಸಿಲ್ಕ್ಸ್, ವರನಿಗೆ ವಿವಿಧ ಶ್ರೇಣಿಯ ಉತ್ಕೃಷ್ಟ ಮಾದರಿಯ ಧೋತಿಗಳು, ರಾಮರಾಜ್ ಶರ್ಟ್ಸ್, ಶೆರ್ವಾನಿ, ಸೂಟ್, ಬ್ರಾಂಡೆಡ್ ಬಟ್ಟೆಗಳು ಹಾಗೂ ಇನ್ನಿತರ ವೈವಿಧ್ಯಮಯ ಉಡುಪುಗಳ ಸಂಗ್ರಹದ ಮಳಿಗೆ ಇದಾಗಿದೆ.

ಉದ್ಘಾಟನೆಯ ಪ್ರಯುಕ್ತ ಯುಗಾದಿಯ ವರೆಗೆ ಶೇ 15ರಷ್ಟು ರಿಯಾಯಿತಿ ದರದಲ್ಲಿ ಖರೀದಿಸುವ ಸೌಲಭ್ಯ ಒದಗಿಸಲಾಗಿದೆ ಎಂದು ಸಹನಾ ಸಿಲ್ಕ್ ಹೌಸ್ ಇದರ ಪಾಲುದಾರರಾದ ಸಹನಾ ಗ್ರೂಪ್, ಸಹನಾ ಆರ್ಚಿಡ್ ಹೋಟೆಲ್ಸ್, ಸಹನಾ ಕನ್ವೆನ್ಶನ್ ಸೆಂಟರ್ ನ ಸುರೇಂದ್ರ ಶೆಟ್ಟಿ, ಉದಯ ಜ್ಯುವೆಲ್ಲರ್ಸ್ ನ ಉದಯ ಕುಮಾರ್ ಶೇಟ್ ಮತ್ತು ಎ.ಎಸ್ ಟ್ರೇಡರ್ಸ್ ನ ಸಂತೋಷ ಕುಮಾರ್ ಎಸ್. ಶೆಟ್ಟಿ ಅಕ್ಕುಂಜೆ ಇವರುಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.__________________________________

►► ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►► ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

0Shares