Advertisement

ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಫಲಿತಾಂಶ: 25 ವರ್ಷಗಳ ಬಿಜೆಪಿ ಆಡಳಿತಕ್ಕೆ ಅಂತ್ಯ!

Advertisement

ತೀವ್ರವಾದ ಹಣಾಹಣಿಯ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಕಾಂಗ್ರೆಸ್ ಪಕ್ಷದ ವಶವಾಗಿದೆ. ಇಂದು ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು ಕಳೆದ 25 ವರ್ಷಗಳಿಂದ ಬಿಜೆಪಿ ಆಡಳಿತಲ್ಲಿದ್ದ ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧಿಕಾರ ಇದೀಗ ಕೈತಪ್ಪಿದೆ. ಪಟ್ಟಣ ಪಂಚಾಯಿತಿಯ ಒಟ್ಟು 15 ವಾರ್ಡ್ ಗಳಲ್ಲಿ ಬರೋಬ್ಬರಿ 9 ವಾರ್ಡ್ ಗಳಲ್ಲಿ ಕಾಂಗ್ರೆಸ್ ಗೆದ್ದು ಸ್ಪಷ್ಟವಾದ ಬಹುಮತವನ್ನು ಗಳಿಸಿದೆ. ಬಿಜೆಪಿ ಕೇವಲ 6 ವಾರ್ಡ್‌ಗಳಲ್ಲಿ ಗೆಲ್ಲುವ ಮೂಲಕ ಅಧಿಕಾರವನ್ನು ಕಳೆದುಕೊಂಡಿದೆ. ಕಳೆದ 25 ವರ್ಷದಿಂದ ನಿರಂತರವಾಗಿದ್ದ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧಿಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ ಮತ್ತು ಶಾಸಕ ಅರಗ ಜ್ಞಾನೇಂದ್ರ ಮುಂತಾದ ಬಿಜೆಪಿಯ ಘಟಾನುಘಟಿ ನಾಯಕರುಗಳು ಹಗಲು ರಾತ್ರಿ ಚುನಾವಣಾ ಕಾರ್ಯತಂತ್ರ ರೂಪಿಸಿದ್ದರಾದರೂ ಗೆಲುವು ಇದೀಗ ಕಾಂಗ್ರೆಸ್ ಪಕ್ಷದ ಪಾಲಾಗಿದೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಕಿಮ್ಮನೆ ರತ್ನಾಕರ್,ಇತ್ತೀಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಆರ್.ಎಂ ಮಂಜುನಾಥ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್‌ಎಸ್ ಸುಂದರೇಶ್ ರವರುಗಳಂತಹ ನಾಯಕರುಗಳು ಮನೆಮನೆಗೆ ತೆರಳಿ ಪ್ರಚಾರ ನಡೆಸಿದ ಪರಿಣಾಮವಾಗಿ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ನಾಯಕರುಗಳ ಕ್ಷೇತ್ರದ ಜನರೊಂದಿಗಿನ ನಿರಂತರ ಸಂಪರ್ಕ ಮತ್ತು ನೀಡಿದ್ದ ಸೇವೆಯು ಪಟ್ಟಣ ಪಂಚಾಯತ್ ಅಧಿಕಾರವನ್ನು ಕಾಂಗ್ರೆಸ್ ಮುಡಿಗೇರಿಸಿದೆ ಎನ್ನುತ್ತಾರೆ ಕಾಂಗ್ರೆಸ್ ಕಾರ್ಯಕರ್ತರುಗಳು. ಗೆಲುವು ಸಾಧಿಸಿದ ಅಭ್ಯರ್ಥಿಗಳ ಪಟ್ಟಿ : ವಾರ್ಡ್ ನಂ. 1 ಸೊಪ್ಪುಗುಡ್ಡೆ ರಾಘವೇಂದ್ರ (ಬಿಜೆಪಿ), ವಾರ್ಡ್ ನಂ. 2 ಯತಿರಾಜ್ (ಬಿಜೆಪಿ), ವಾರ್ಡ್ ನಂ. 3 ದತ್ತಣ್ಣ (ಕಾಂಗ್ರೆಸ್), ವಾರ್ಡ್ ನಂ. 4 ನಮ್ರತ್(ಕಾಂಗ್ರೆಸ್), ವಾರ್ಡ್ ನಂ. 5 ಸುಶಿಲಾ ಶೆಟ್ಟಿ (ಕಾಂಗ್ರೆಸ್), ವಾರ್ಡ್ ನಂ. 6 ಶಬ್ನಮ್ (ಕಾಂಗ್ರೆಸ್), ವಾರ್ಡ್ ನಂ.7 ಜೈಯು ಶೆಟ್ಟಿ (ಕಾಂಗ್ರೆಸ್), ವಾರ್ಡ್ ನಂ. 8 ಜ್ಯೋತಿ ಗಣೇಶ (ಬಿಜೆಪಿ), ವಾರ್ಡ್ ನಂ. 9 ಸಂದೇಶ ಜವಳಿ (ಬಿಜೆಪಿ), ವಾರ್ಡ್ ನಂ.10 ಗಣಪತಿ (ಕಾಂಗ್ರೆಸ್), ವಾರ್ಡ್ ನಂ. 11 ಜ್ಯೋತಿ ಮೋಹನ್(ಬಿಜೆಪಿ), ವಾರ್ಡ್ ನಂ.12 ಬಾಬಿ ರವೀಶ (ಬಿಜೆಪಿ), ವಾರ್ಡ್ ನಂ. 13 ಗೀತಾ ರಮೇಶ (ಕಾಂಗ್ರೆಸ್), ವಾರ್ಡ್ ನಂ.14 ಮಂಜುಳಾ ನಾಗೇಂದ್ರ (ಕಾಂಗ್ರೆಸ್), ವಾರ್ಡ್ ನಂ.15 ಅಸಾದಿ (ಕಾಂಗ್ರೆಸ್) ಜಯಗಳಿಸಿದ್ದಾರೆ.

Advertisement
Advertisement
Recent Posts
Advertisement