Advertisement

ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ 'ಟೂಲ್‌ಕಿಟ್' ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್!

Advertisement

'ಅವರೆ' ಕಾಂಗ್ರೆಸ್ ಪಕ್ಷದ ನಕಲಿ ಲೆಟರ್ ಹೆಡ್ ಮುದ್ರಿಸಿತ್ತಾರೆ. 'ಅವರೆ' ಅದರಲ್ಲಿ ತಮಗೆ ಬೇಕಾದಂತೆ ಮುದ್ರಿಸುತ್ತಾರೆ. ಒಂದೇ ಸಮಯದಲ್ಲಿ ದೇಶದಾದ್ಯಂತ 'ಅವರೆ' ಪತ್ರಿಕಾಗೋಷ್ಠಿ ಮಾಡಿ, 'ಅವರೆ' ಮುದ್ರಿಸಿದ ಆ ಲೆಟರ್ ಹೆಡ್ ತೋರಿಸಿ, ನೋಡಿ ಇದು ಕಾಂಗ್ರೆಸ್ ದೇಶವನ್ನು ಅಸ್ಥಿರಗೊಳಿಸಲು ತಯಾರಿಸಿದ ಟೂಲ್‌ಕಿಟ್ ಎನ್ನುತ್ತಾರೆ ಮತ್ತು ಕಾಂಗ್ರೆಸ್ ಪಕ್ಷವನ್ನು ದೇಶದ್ರೋಹಿ ಪಕ್ಷ ಎಂಬಂತೆ ಬಿಂಬಿಸಲು ಪ್ರಯತ್ನಿಸುತ್ತಾರೆ. ಅದೇ ಸಮಯದಲ್ಲಿ ದೇಶದಾದ್ಯಂತ ಇರುವ 'ಅವರ' ಪಕ್ಷದ ಐಟಿ ಸೆಲ್ ಸದಸ್ಯರು ಫೇಸ್‌ಬುಕ್‌, ಟ್ವಿಟರ್, ಇನ್ಸ್ಟಾಗ್ರಾಮ್, ವಾಟ್ಸ್ಯಾಪ್ ಮೂಲಕ ಈ ನಕಲಿ 'ಟೂಲ್ ಕಿಟ್' ನಿಜ ಎಂಬಂತೆ ಪ್ರಚಾರ ಮಾಡ್ತಾರೆ. ಇದನ್ನೇ ಸತ್ಯ ಎಂದು ಜನ ಬಾವಿಸುವಂತೆ, ನಂಬುವಂತೆ ಪ್ರಯತ್ನಿಸುತ್ತಾರೆ'. ಇದುವೇ ಅವರ 'ಟೂಲ್‌ಕಿಟ್'! ಈ 'ಅವರು' ಬೇರಾರೂ ಅಲ್ಲ. ಅವರು ಅಪರೇಷನ್ ಕಮಲ ಪಕ್ಷದವರು ಅರ್ಥಾತ್ ಬಿಜೆಪಿಗರು. 'ಸತ್ಯ ಹೊರಬರುವುದರೊಳಗೆ ಸುಳ್ಳು ಊರೆಲ್ಲಾ ಸುತ್ತಾಡಿ ಬಂದಿರುತ್ತೆ' ಇದು ಜನಪ್ರಿಯ ಕನ್ನಡ ಗಾದೆ ಮಾತು. ಈ ಗಾದೆಯನ್ನು ಇಲ್ಲೇಕೆ ಉಲ್ಲೇಖಿಸುತ್ತಿದ್ದೆನೆಂದರೆ.. ಸುಳ್ಳಿನ ನಡುವೆ ಜನಿಸಿ, ಸುಳ್ಳಿನ ನಡುವೆಯೇ ಬೆಳೆದು, ಸುಳ್ಳಿನ ನಡುವೆಯೇ ಗೆದ್ದು, ಸುಳ್ಳಿನ ನಡುವೆಯೇ ಆಡಳಿತ ನಡೆಸಿ, ಸುಳ್ಳಿನ ನಡುವೆಯೇ ದೇಶವನ್ನು ಕೊಳ್ಳೆ ಹೊಡೆದು, ಸುಳ್ಳಿನ ನಡುವೆಯೇ ತನ್ನ ಪಕ್ಷದ ಚುನಾವಣಾ ವೆಚ್ಚ ಭರಿಸುವ ಉಧ್ಯಮಿಗಳಿಗೆ ಸರ್ಕಾರಿ ಆಸ್ತಿಗಳನ್ನು ದಾನವಾಗಿ ನೀಡಿ, ಸುಳ್ಳಿನ ನಡುವೆಯೇ ದೇಶದ ಸಮಗ್ರತೆ, ಆರ್ಥಿಕತೆ, ದೇಶದ ಜನರ ಸಾಮಾಜಿಕ ಬದುಕು ಮುಂತಾದವುಗಳನ್ನು ನಾಶಪಡಿಸುತ್ತಿರುವ ಮನುವಾದಿ ಟೂಲ್‌ಕಿಟ್ (ಹಿಡೆನ್ ಅಜೆಂಡಾ) ಹೊಂದಿರುವ ಬಿಜೆಪಿ ಎಂಬ ರಾಷ್ಟ್ರೀಯ ಪಕ್ಷವೊಂದು ಈ ಗಾದೆಯ ಆದಾರದಲ್ಲಿ ತನ್ನ ಕಾರ್ಯತಂತ್ರಗಳನ್ನು ರೂಪಿಸುತ್ತಿರುವುದು ನಿಜಕ್ಕೂ ಖೇದಕರವಾದ ವಿಚಾರ! ಬಿಜೆಪಿಯ ತಂತ್ರಗಾರಿಕೆ ಇದೇ ಮೊದಲಲ್ಲ, ಈ ಹಿಂದೆಯೂ ಕೂಡ ಚುನಾವಣಾ ಸಮಯದಲ್ಲಿ ಮತ್ತಿತರ ಸಮಯದಲ್ಲಿ ಇಂತಹ ಹಲವಾರು ತಂತ್ರಗಾರಿಕೆ ಪ್ರದರ್ಶಿಸಿ ಯಶಸ್ಸು ಕಂಡಿತ್ತು ಈ ಪಕ್ಷ . ಅದರಲ್ಲೊಂದು ತಾಜಾ ಉದಾಹರಣೆ ಎಂದರೆ: 'ಈ ಕಡೆಯಿಂದ ಆಲೂ ಹಾಕಿದರೆ ಆಚೆ ಕಡೆಯಿಂದ ಚಿನ್ನ ಬರುತ್ತದೆ' ಎಂದು ಬಿಜೆಪಿ ನಾಯಕ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಆಗಿದ್ದ ವೇಳೆ ಹೇಳಿದ್ದ ಮಾತನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು 2014ರ ಚುನಾವಣಾ ರ‌್ಯಾಲಿಯೊಂದರಲ್ಲಿ ಹೇಳಿದ್ದರು ಮತ್ತು 'ಇದನ್ನು ನಾನು ಹೇಳಿದ್ದಲ್ಲ, ನರೇಂದ್ರ ಮೋದಿಯವರು ಹೇಳಿದ್ದು' ಎಂದು ಕೂಡ ಹೇಳಿದ್ದರು ಮತ್ತು ಆ ಮೂಲಕ ಮೋದಿಯವರ ಬಾಲಿಷತೆಯನ್ನು ಜಗಜ್ಜಾಹೀರುಗೊಳಿಸಿದ್ದರು. (ಆ ಕುರಿತಾದ ವಿಡಿಯೋ 'ಕನ್ನಡ ಮೀಡಿಯಾ ಡಾಟ್ ಕಾಮ್' ಯೂಟ್ಯೂಬ್ ಚಾನಲ್‌ನಲ್ಲಿ ಲಭ್ಯವಿದೆ) ಆದರೆ ಮೋದಿಯವರು ಹೇಳಿದ್ದ ಮೇಲಿನ ಮಾತನ್ನು ರಾಹುಲ್ ಹೇಳಿದ್ದಾರೆ ಎಂಬ ರೀತಿಯಲ್ಲಿ 'ಇದನ್ನು ನಾನು ಹೇಳಿದ್ದಲ್ಲ, ಮೋದಿ ಹೇಳಿದ್ದು' ಎಂಬ ಮಾತನ್ನು ತುಂಡರಿಸಿ ತನ್ನ ಐಟಿ ಸೆಲ್ ಮೂಲಕ ಏಕಕಾಲದಲ್ಲಿ ದೇಶದಾದ್ಯಂತ ಬಿತ್ತರಿಸುವ ಮೂಲಕ 'ರಾಹುಲ್ ಗಾಂಧಿಯವರು ಬಾಲಿಷವಾಗಿ ಮಾತನಾಡುತ್ತಾರೆ, ಅವರೊಬ್ಬ ಅಪ್ರಬುದ್ಧ ವ್ಯಕ್ತಿ' ಎಂಬಂತೆ ಬಿಂಬಿಸಿ ಅಧಿಕಾರದ ಸೂತ್ರ ಹಿಡಿಯುವಲ್ಲಿ ಸಫಲತೆ ಕಂಡಿದ್ದರು ಬಿಜೆಪಿಗರು. ಆದರೆ ಇದಾವುದರ ಅರಿವು ಇಲ್ಲದ ಕಾಂಗ್ರೆಸ್ ಆ ಅತಿ ಅಮೂಲ್ಯವಾದ ಚುನಾವಣಾ ಸಮಯದಲ್ಲಿ ಪ್ರತ್ಯುತ್ತರ ನೀಡುವಲ್ಲಿ ಅಥವಾ ಸತ್ಯ ಏನೆಂದು ಮತದಾರರಿಗೆ ತಿಳಿಸುವಲ್ಲಿ ವಿಫಲವಾದ ಕಾರಣಕ್ಕಾಗಿ ಚುನಾವಣೆಯಲ್ಲಿ ಸೋಲು ಕಂಡಿತ್ತು. ದೇಶದಾದ್ಯಂತ ಕೊರೊನಾ ಎರಡನೆಯ ಅಲೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಮೊದಲ ಅಲೆ ಮತ್ತು ಎರಡನೆಯ ಅಲೆಯ ನಡುವೆ ಬರೋಬ್ಬರಿ ಒಂದು ವರ್ಷ ಅಂತರವಿತ್ತಾದರೂ, ಎರಡನೆಯ ಅಲೆ ಬಂದೇ ಬರುತ್ತದೆ ಮುಂಜಾಗ್ರತೆ ವಹಿಸಿ ಎಂಬ ವೈಧ್ಯಕೀಯ ವರದಿ ಕೇಂದ್ರ ಸರ್ಕಾರದ ಮುಂದೆ ಇತ್ತಾದರೂ, ಆ ಕುರಿತು ಕಿಂಚಿತ್ ತಲೆಕೆಡಿಸಿಕೊಳ್ಳದೆ, ಅಸಡ್ಡೆ ತೋರಿಸಿ, ಕೊರೊನಾ ಎದುರಿಸಲು ಯಾವುದೇ ಪೂರ್ವಸಿದ್ಧತೆ ಮಾಡಿಕೊಳ್ಳದೇ ಅದಕ್ಕೆ ಬದಲಾಗಿ ಮೊದಲ ಅಲೆಯ ಸಂಧರ್ಭದಲ್ಲಿ ದೇಶದ ಜನರಿಗೆ ಚಪ್ಪಾಳೆ ತಟ್ಟುವಂತೆ, ಕ್ಯಾಂಡಲ್ ಬೆಳಗಿಸುವಂತೆ ಕರೆ ಕೊಟ್ಟಿದ್ದ ಪ್ರಧಾನಿ ಮೋದಿಯವರು ಈ ನಡುವೆ ಅದೇ ಮಾದರಿಯಲ್ಲಿ ಅವೈಜ್ಞಾನಿಕವಾಗಿ ಚುನಾವಣಾ ರ‌್ಯಾಲಿಗಳನ್ನು ಏರ್ಪಡಿಸಿ 'ಇಷ್ಟೊಂದು ಜನಸಂಖ್ಯೆ' ಯನ್ನು ನಾನೆಲ್ಲೂ ನೋಡಿರಲಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಕುಂಭಮೇಳದಲ್ಲಿ ಸುಮಾರು ಎಪ್ಪತ್ತೈದು ಲಕ್ಷ ಜನ ಸೇರಲು ಅವಕಾಶ ಮಾಡಿ ಕೊಟ್ಟಿತ್ತು ಇವರ ಆಡಳಿತ. ಅಲ್ಲದೇ ದೇಶದಾದ್ಯಂತ ಮದುವೆ, ಗ್ರಹ ಪ್ರವೇಶ, ಯಕ್ಷಗಾನ, ಸಿನೇಮಾ, ನಾಟಕ ಮುಂತಾದ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾವಿರಾರು ಜನ ಸೇರಿ ನಡೆಸಲು ಅನುವು ಮಾಡಿಕೊಟ್ಟಿತ್ತು. ವಿಜ್ಞಾನಿಗಳ ಭವಿಷ್ಯವಾಣಿಯಂತೆ ಇದೀಗ ಮಹಾಮಾರಿ ಕೊರೊನಾ ಎರಡನೆಯ ಅಲೆ ದೇಶಕ್ಕೆ ಅಪ್ಪಳಿಸಿದೆ. ದಿನಕ್ಕೆ ಐದು ಲಕ್ಷಗಳಷ್ಟು ಕೊರೊನಾ ಪಾಸಿಟಿವ್ ವರದಿಯಾಗುತ್ತಿದೆ. ಕಳೆದ 20ದಿನಗಳಲ್ಲಿ ದೇಶದಾದ್ಯಂತ 75ಸಾವಿರ ಕೊರೊನಾ ಸೋಂಕಿತರು ಮರಣ ಹೊಂದಿದ್ದಾರೆ. (ಇದುವರೆಗಿನ ಗರಿಷ್ಠ ಸಾವು ಪ್ರಕರಣ ಎಪ್ರಿಲ್‌ನಲ್ಲಿ ದಾಖಲಾಗಿತ್ತು. ಎಪ್ರಿಲ್ ತಿಂಗಳಲ್ಲಿ 49ಸಾವಿರ ಮಂದಿ ಬಲಿಯಾಗಿದ್ದರು.) ಇಷ್ಟಾದರೂ, ಕೊರೊನಾ ಪಾಸಿಟಿವ್ ಆದವರಿಗೆ ಬೆಡ್ ದೊರೆಯುತ್ತಿಲ್ಲ. ಆಕ್ಸಿಜನ್ ದೊರೆಯುತ್ತಿಲ್ಲ. ಅದರಿಂದಲೇ ಹೆಚ್ಚಿನ ಮರಣಗಳು ಆಗುತ್ತಿವೆ ಎನ್ನುತ್ತಾರೆ ತಜ್ಞರು. ಹೆಚ್ಚಿನ ಸರ್ಕಾರಿ ಆಸ್ಪತ್ರೆಗಳಲ್ಲಿ ವೈಧ್ಯಕೀಯ ಸಿಬ್ಬಂದಿಯ ಕೊರತೆ ಇದೆ. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಬಿಲ್ ಪಾವತಿ ಮಾಡಲಾಗದೆ ಜನ ಗೋಳಾಡುತ್ತಿದ್ದಾರೆ. ಸತ್ತವರ ಅಂತ್ಯ ಸಂಸ್ಕಾರಕ್ಕೆ ಸ್ಮಶಾನಗಳು ಸಾಕಾಗುತ್ತಿಲ್ಲ. ಹೆಣ ಹೊತ್ತುಕೊಂಡು ಸ್ಮಶಾನದಿಂದ ಸ್ಮಶಾನಕ್ಕೆ ಅಲೆಯುವ ಇತಿಹಾಸದಲ್ಲೇ ಕೇಳರಿಯದ ಹೀನ ಸ್ಥಿತಿ ಈ ದೇಶದ ಪ್ರಜೆಗಳಿಗೆ ಎದುರಾಗಿದೆ. ದೇಶದಲ್ಲಿ ಆಡಳಿತ ಸರ್ಕಾರ ಬಿಜೆಪಿಯ ವಿರುದ್ಧ ಕೂಗೆದ್ದಿದೆ. ಜನ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ದೇಶ ವಿದೇಶಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜನರು ಮೋದಿ ಸರ್ಕಾರವನ್ನು ಉಗಿಯುತ್ತಿದ್ದಾರೆ. ಪ್ರತಿದಿನ ಎಂಬಂತೆ ಬಿಜೆಪಿಯ ವಿರುದ್ಧವಾಗಿ ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ದೇಶದ ಯುವ ಜನರು ಹ್ಯಾಶ್​ಟ್ಯಾಗ್‌ ಬಳಸಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ. ಪ್ರತಿ ಹ್ಯಾಶ್​ಟ್ಯಾಗ್‌ ಲಕ್ಷಾಂತರ ರೀಟ್ವಿಟ್ ಗೊಳಗಾಗುತ್ತಿದೆ. ಮೋದಿಯ ಮನ್ ಕಿ ಬಾತ್ ಆರಂಭಗೊಳ್ಳುವ ಗಂಟೆಗಳಷ್ಟು ಮೊದಲೇ ಅವರ ಅಧಿಕೃತ ಯೂಟ್ಯೂಬ್ ಖಾತೆಯಲ್ಲಿ ಡಿಸ್ ಲೈಕ್ ಗಳ ಅಭಿಯಾನ ಆರಂಭಗೊಂಡಿರುತ್ತದೆ. ವಿದೇಶಿ ಪತ್ರಿಕೆಗಳು, ಟಿವಿಗಳು ಕೂಡ ಭಾರತ ಸರ್ಕಾರದ ಅಸಡ್ಡೆಯ ವಿರುದ್ಧ, ಅವರುಗಳ ದುರಾಡಳಿತದ ವಿರುದ್ದ, ಅದರಿಂದ ಎದುರಾಗಿರುವ ದುಸ್ಥಿತಿಯ ವಿರುದ್ದ ಕಾರ್ಯಕ್ರಮಗಳನ್ನು ನಿರಂತರವಾಗಿ ಬಿತ್ತರಿಸುತ್ತಿವೆ. ಇದೆಲ್ಲದರ ನಡುವೆ, ದೇಶದ ಜನಪ್ರಿಯ ಸಂಸ್ಥೆ ಸಿ-ವೋಟರ್ ಮತ್ತು ಅಮೇರಿಕಾದ ಮಾರ್ನಿಂಗ್ ಕನ್ಸಲ್ಟ್ ನಡೆಸಿರುವ ಸಮೀಕ್ಷೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆರಿದ ಈ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜನಪ್ರಿಯತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಬಹುಶಃ ಬಿಜೆಪಿ ಪಕ್ಷ, ಈ ಎಲ್ಲಾ ಬೆಳವಣಿಗೆಗಳಿಂದ ತನ್ನ ಸರ್ಕಾರಕ್ಕೆ, ಪಕ್ಷಕ್ಕೆ ಆಗುತ್ತಿರುವ ಹಾನಿಯನ್ನು ಕಡಿಮೆಗೊಳಿಸಿಕೊಳ್ಳಲು ಕೊರೊನಾ ಪೀಡಿತರಿಗೆ ಸ್ಪಂದಿಸುವ, ಬೆಡ್, ಆಕ್ಸಿಜನ್, ಲಸಿಕೆ, ಅಂಬುಲೆನ್ಸ್, ವೈದ್ಯಕೀಯ ಸೇವೆ ಮುಂತಾದ ಕೊರತೆ ನೀಗಿಸುವ, ಲಾಕ್‌ಡೌನ್ ನಿಂದ ಆರ್ಥಿಕ ತೊಂದರೆಗೊಳಗಾಗಿರುವ ಬಡ ಜನರಿಗೆ ಆಹಾರದ ಕಿಟ್‌ಗಳನ್ನು ವಿತರಿಸುವ ನಿಟ್ಟಿನಲ್ಲಿ ಪ್ರಯತ್ನಿಸುವ ಬದಲು ಇದೀಗ ಕಾಂಗ್ರೆಸ್ ಪಕ್ಷದ ನಕಲಿ ಲೆಟರ್‌ಹೆಡ್ ಸಿದ್ದಗೊಳಿಸಿ ಅದರಲ್ಲಿ ತನ್ನ ಪಕ್ಷಕ್ಕೆ ಬೇಕಾದಂತೆ ಮುದ್ರಿಸಿಕೊಂಡು ಏಕಕಾಲದಲ್ಲಿ ದೇಶದಾದ್ಯಂತ 'ಎಂಜಲುಕಾಸಿ ಮಾಧ್ಯಮ'ಗಳ ಮೂಲಕ ಮತ್ತು ಸಾಮಾಜಿಕ ಜಾಲತಾಣದ ತನ್ನ 'ಪಕ್ಷದ ದಿನಗೂಲಿ ಕಾರ್ಯಕರ್ತ'ರ ಮೂಲಕ ಹರಡುವ ಕೆಲಸದಲ್ಲಿ ಮಗ್ನವಾಗಿದೆ. ಆ ಪಕ್ಷದ ಶಾಸಕರು, ಸಚಿವರು, ಸಂಸದರು ಪತ್ರಿಕಾಗೋಷ್ಠಿ ಮಾಡಿ ಅದೇ ನಕಲಿ ಪತ್ರ ಹಿಡಿದುಕೊಂಡು ಗಂಟಲು ಬಿರಿಯುವಂತೆ ಬೊಬ್ಬಿರಿಯುತ್ತಿದ್ದಾರೆ. ನಕಲಿ ಟೂಲ್‌ಕಿಟ್ ನಲ್ಲಿ ಇರುವ ಪ್ರಮುಖ ಅಂಶಗಳು ಇಂತಿದೆ; ೧) ಕಾಂಗ್ರೆಸ್ ಕಾರ್ಯಕರ್ತರು , ಬೆಂಬಲಿಗರು ‘super spreader Kumbh’ ‘not comment on Eid gatherings’ ಎಂಬ ಹ್ಯಾಶ್​ಟ್ಯಾಗ್‌ ಬಳಸಬೇಕೆಂದು ನಿರ್ದೇಶನ ನೀಡಲಾಗಿದೆ. ೨) ಕೊವಿಡ್ SOS ಸಂದೇಶಗಳು IYC ಹ್ಯಾಂಡಲ್ ಗೆ ಟ್ಯಾಗ್ ಮಾಡಿದ್ದರೆ ಮಾತ್ರ ಪ್ರತಿಕ್ರಿಯಿಸಬೇಕು ಎಂದು ಹೇಳಲಾಗಿದೆ. ೩) ಈಗಾಗಲೇ ವಿದೇಶಿ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಅಂತ್ಯಕ್ರಿಯೆ ಮತ್ತು ಮೃತ ದೇಹಗಳ 'ನಾಟಕೀಯ ಚಿತ್ರ'ಗಳನ್ನು ಬಳಸಬೇಕು, ಮೊದಲಾದ ನಿರ್ದೇಶನಗಳನ್ನು ನೀಡಲಾಗಿದೆ. ೪) ಅದೇ ವೇಳೆ ಭಾರತದಲ್ಲಿ ಪತ್ತೆಯಾಗಿರುವ ಕೊವಿಡ್ ರೂಪಾಂತರಿ ವೈರಸ್​ನ್ನು ಸಾಮಾಜಿಕ ಮಾಧ್ಯಮಗಳಲ್ಲಿ Modi strain ಎಂಬ ಹ್ಯಾಶ್​ಟ್ಯಾಗ್‌ ಬಳಸಲು ಹೇಳಲಾಗಿದೆ. ಈ ಕುರಿತು ಕಾಂಗ್ರೆಸ್ ಸಂಶೋದನಾ ವಿಭಾಗದ ಮುಖ್ಯಸ್ಥರಾದ ರಾಜೀವ್ ಗೌಡ ಮತ್ತು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ವಿಭಾಗದ ಅಧ್ಯಕ್ಷ ರೋಹನ್ ಗುಪ್ತಾ ಅವರು ಪೊರ್ಜರಿ ಮಾಡಿದ ಲೆಟರ್ ಹೆಡ್ ಬಳಸಿ ಕಾಂಗ್ರೆಸ್ ಕುರಿತು ಅಪಪ್ರಚಾರ ಮಾಡುತ್ತಿರುವುದರ ವಿರುದ್ಧ ಬಿಜೆಪಿ ರಾಷ್ಟ್ರೀಯ ಮುಖಂಡರಾದ ಜೆ.ಪಿ.ನಡ್ಡಾ, ಸಂಬೀತ್ ಪಾತ್ರಾ, ಸ್ಮೃತಿ ಇರಾನಿ, ಬಿ.ಎಲ್.ಸಂತೋಷ್ ಮತ್ತು ಇತರರ ವಿರುದ್ಧ ದೆಹಲಿ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. __________________________________ ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG (ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.

Advertisement
Advertisement
Recent Posts
Advertisement