Advertisement

ಕೂಲಿ ಕಾರ್ಮಿಕರಿಗೆ, ಆಟೋ ಟ್ಯಾಕ್ಸಿ ಚಾಲಕರಿಗೆ, ಆಶಾ ಕಾರ್ಯಕರ್ತೆಯರಿಗೆ, ದಾದಿಯರಿಗೆ ಕನಿಷ್ಠ 10 ಸಾವಿರ ಹಣ ಬಿಡುಗಡೆ ಮಾಡಬೇಕು: ಸುಂದರೇಶ್ ಆಗ್ರಹ

Advertisement

ರಾಜ್ಯಸರ್ಕಾರವು ಬಿಡುಗಡೆ ಮಾಡಿರುವ ಪ್ಯಾಕೇಜ್ ಕೇವಲ ಮೂಗಿನ ಮೇಲೆ ತುಪ್ಪ ಸವರುವ ಕೆಲಸ, ಆಶಾ ಕಾರ್ಯಕರ್ತೆಯರಿಗೆ ಅಂಗನವಾಡಿಯ ದಾದಿಯರಿಗೆ, ಹೋಟೆಲ್/ಕ್ಯಾಂಟೀನ್ ಮಾಲಿಕರು ಮತ್ತು ಕೆಲಸಗಾರರಿಗೆ, ಸಣ್ಣ ವ್ಯಾಪಾರಿಗಳಿಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಇವರು ಕೊಡಬೇಕೆಂದಿರುವ ಹಣ ಅರೆಕಾಸಿನ ಮಜ್ಜಿಗೆಗೂ ಸಾಕಾಗುವುದಿಲ್ಲ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಹೆಚ್.ಎಸ್.ಸುಂದರೇಶ್ ರವರು ಹೇಳಿದ್ದಾರೆ. ಅವರು ಇಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಝೂಮ್ ಆ್ಯಪ್ ಮೂಲಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಪಟ್ಟಣಗಳಲ್ಲಿ ವಾಸಿಸುತ್ತಿರುವವರ ಮನೆ ಬಾಡಿಗೆ ತಿಂಗಳಿಗೆ 5 ರಿಂದ 8 ಸಾವಿರ ಇರುವಾಗ ಇವರು ಕೊಡುವ 2 ಸಾವಿರ 3 ಸಾವಿರ ರೂಗಳು ಎಲ್ಲಿಗೂ ಸಾಕಾಗುವುದಿಲ್ಲ ಹಾಗಾಗಿ ಕೂಲಿ ಕಾರ್ಮಿಕರಿಗೆ ಆಟೋ ಟ್ಯಾಕ್ಸಿ ಚಾಲಕರಿಗೆ ಆಶಾ ಕಾರ್ಯಕರ್ತೆಯರಿಗೆ ದಾದಿಗಳಿಗೆ ಕನಿಷ್ಠ 10 ಸಾವಿರ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ಇದೇ ಸಂಧರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ 18 ದಿನಗಳಿಂದ ಸತತವಾಗಿ ಆಸ್ಪತ್ರೆಯ ರೋಗಿಗಳಿಗೆ ಅವರ ಸಂಬಂಧಿಕರಿಗೆ ಮತ್ತು ಕ್ವಾರೆಂಟೈನಲ್ಲಿರುವ ಮನೆಗಳಿಗೆ ಊಟ ಮತ್ತು ಶುದ್ಧ ಕುಡಿಯುವ ನೀರಿನ ಬಾಟಲ್ ಗಳನ್ನು ವಿತರಿಸುತ್ತಿರುವುದಾಗಿಯೂ ತಿಳಿಸಿದರು. __________________________________ ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG (ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.

Advertisement
Advertisement
Recent Posts
Advertisement