Advertisement

ವಿಚಿತ್ರ ಆದರೂ ನಿಜ: ಕೋವಿಡ್ ನಿಂದ ಮೃತಪಟ್ಟವರನ್ನು ಸಕಲ ಸರ್ಕಾರಿ ಮರ್ಯಾದೆಯೊಂದಿಗೆ ಅಂತ್ಯಸಂಸ್ಕಾರ ಮಾಡಲು ಜಿಲ್ಲಾಡಳಿತ ವತಿಯಿಂದ ವ್ಯವಸ್ಥೆ?

Advertisement

ಹೀಗೊಂದು ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿವರಗಳನ್ನು ಅಗತ್ಯವಾಗಿ ಓದಿಕೊಳ್ಳಿ, ಆ ನಂತರವಷ್ಟೇ ಆ ಕುರಿತು ವಿಮರ್ಶಿಸೋಣ! ಇದಕ್ಕೆ ನಾವು ಕೊಟ್ಟಿರುವ ಶೀರ್ಷಿಕೆ: ಹೀಗೂ ಉಂಟೇ? 'ಕೋವಿಡ್‌ನಿಂದ ಮೃತಪಟ್ಟವರ ಉಚಿತ ಅಂತ್ಯ ಸಂಸ್ಕಾರಕ್ಕೆ ಗಿಡ್ಡೇನಹಳ್ಳಿಗೆ ಹೋಗುವ ದಾರಿ → ಕೋವಿಡ್ ನಿಂದ ಮೃತಪಟ್ಟವರನ್ನು ಸಕಲ ಸರ್ಕಾರಿ ಮರ್ಯಾದೆಯೊಂದಿಗೆ ಅಂತ್ಯಸಂಸ್ಕಾರ ಮಾಡಲು ಜಿಲ್ಲಾಡಳಿತ ವತಿಯಿಂದ ವ್ಯವಸ್ಥೆ ಮಾಡಿರುವ ಈ ಕಾರ್ಯಕ್ಕೆ ಉಚಿತವಾಗಿ ನೀರು, ಕಾಫಿ, ತಿಂಡಿ, ಊಟದ ವ್ಯವಸ್ಥೆಯನ್ನು ಯಲಹಂಕ ಕ್ಷೇತ್ರದ ಜನಪ್ರಿಯ ಶಾಸಕರಾದ ಹಾಗೂ ಬಿಡಿಎ ಅಧ್ಯಕ್ಷರಾದ ಶ್ರೀ ಎಸ್‌.ಆರ್ ವಿಶ್ವನಾಥ್ ರ ಮಾರ್ಗದರ್ಶನದಲ್ಲಿ ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಸ್. ಮಲ್ಲಯ್ಯನವರ ನೇತೃತ್ವದಲ್ಲಿ ವ್ಯವಸ್ಥೆ ಮಾಡಿರುತ್ತಾರೆ'... ಇದು ಈ ಕೆಳಗಿನ ಪೋಸ್ಟರ್‌ನಲ್ಲಿರುವ ವಿವರಗಳು. ಬಹುಶಃ ಈ ತನಕ ಆಡಳಿತ ನಡೆಸಿದ ಯಾವುದೇ ಸರ್ಕಾರಗಳ ಅವಧಿಯಲ್ಲಿ ಈ ತೆರನಾದ ವ್ಯವಸ್ಥೆ ಖಂಡಿತವಾಗಿಯೂ ಇದ್ದಿರಲಾರದು. ವ್ಯವಸ್ಥೆ ಎಂದರೆ ಚಿಲ್ಲರೆ ವ್ಯವಸ್ಥೆ ಎಂದುಕೊಂಡಿದ್ದೀರಾ? ಮೊದಲನೆಯದಾಗಿ ಸಕಲ ಸರ್ಕಾರಿ ಮರ್ಯಾದೆಯೊಂದಿಗೆ ಉಚಿತ ಅಂತ್ಯ ಸಂಸ್ಕಾರ. (ವಾವ್, ವಾವ್ ಎಂತಹ ಬಂಪರ್ ಆಫರ್ರೀ ಇದು? ಸಕಲ ಸರ್ಕಾರಿ ಗೌರವದೊಂದಿಗೆ ಶವಸಂಸ್ಕಾರ! ಅಯ್ಯೋ, ಸತ್ತರೆ ಈಗಲೇ ಸಾಯಬೇಕು ಕಣ್ರೀ, ಕೊರೊನಾ ಬಂದೇ ಸಾಯಬೇಕು ಕಣ್ರೀ! ಎಂತಹ ಗೌರವ? ಎಂತಹ ಸ್ಥಾನಮಾನ? ) ಎರಡನೆಯದಾಗಿ ಶವಸಂಸ್ಕಾರಕ್ಕೆ ಬಂದವರಿಗೆ ಉಚಿತವಾಗಿ ಕಾಫಿ, ತಿಂಡಿ, ನೀರು, ಊಟದ ವ್ಯವಸ್ಥೆ. ( ವಾವ್, ವಾವ್ ಶವ ಸಂಸ್ಕಾರಕ್ಕೆ ಬಂದವರಿಗೆ ಎಲ್ಲಾದರೂ ನೀರು ಸಿಗುತ್ತದೆಯೇ? ಎಲ್ಲಾದರೂ ಕಾಫಿ, ತಿಂಡಿ, ಊಟ ಸಿಗುತ್ತದೆಯೇ? ಹಾಗೆ ಸಿಕ್ಕಿದ್ದು ಇತಿಹಾಸದಲ್ಲಿ ಎಲ್ಲಾದರೂ ನೀವು ಕೇಳಿದ್ದೀರಾ? ಈ ತನಕ ಶವಸಂಸ್ಕಾರಕ್ಕೆ ಬಂದವರೆಲ್ಲ ನೀರು, ಕಾಫಿ, ತಿಂಡಿ, ಊಟ ಸಿಗದೆ ಸಾಯುತ್ತಿದ್ದರು ಅಲ್ಲವೇ?) ಇಷ್ಟೆಲ್ಲಾ ವ್ಯವಸ್ಥೆ ಇದ್ದೂ ಕೊರೊನಾ ಬಂದು ಸಾಯದಿದ್ದರೆ ಈ ಬದುಕು ಸಾರ್ಥಕವೇನ್ರೀ? ಹಾಗೆ ಸತ್ತವರ ಶವಸಂಸ್ಕಾರಕ್ಕೆ ಹೋಗಿ ನೀರು, ಕಾಫಿ, ತಿಂಡಿ, ಊಟ ಮಾಡದಿದ್ದರೆ ಬದುಕಿದ್ದು ಏನ್ರೀ ಪ್ರಯೋಜನ? ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡಲಾಗದ, ಆಕ್ಸಿಜನ್ ಪೂರೈಸಲಾಗದ, ಕನಿಷ್ಠ ಪಕ್ಷ ಬೇಡಿಕೆ ಇರುವಷ್ಟು ವ್ಯಾಕ್ಸಿನ್ ನೀಡಲಾಗದ ಇವರುಗಳ ಆಡಳಿತದಲ್ಲಿ ಇದಕ್ಕಿಂತ ಬೇರೇನು ನಿರೀಕ್ಷಿಸುವುದು ಸಾಧ್ಯ? 'ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ಮಾಡುವೆವು' ಎನ್ನುವ ಇವರು 'ಕೋವಿಡ್ ಪೀಡಿತರನ್ನು ಅದೇ ಸರ್ಕಾರದ ಸವಲತ್ತುಗಳನ್ನು ಉಪಯೋಗಿಸಿಕೊಂಡು ಬದುಕಿಸುವೆವು' ಎಂದಿದ್ದರೆ ನಾವು ಅವರನ್ನು ಗೌರವಿಸಬಹುದಾಗಿತ್ತು.ಇದು ಇವರುಗಳ ಬೇಜವಾಬ್ದಾರಿತನದ, ದುರಹಂಕಾರದ, ಷಂಡತನದ, ಮೂರ್ಖತನದ, ಪ್ರಚಾರದ ಹಪಾಹಪಿಯ ಅಸಲಿ ಮುಖವಾಗಿದೆ. ಹೌದು.... ಇದು ಪ್ರಜಾಪ್ರಭುತ್ವದ ಮತ್ತೊಂದು ಮುಖ! ಬೇಜಾರಾಗಬೇಡಿ... ಮುಂದಿನ ಪೀಳಿಗೆಗೆ ನೀವು ಎದೆ ತಟ್ಟಿ ಹೇಳಬಹುದು ' ನಾನು ಎಂತೆಂತಹ ನೀಚರನ್ನೆಲ್ಲಾ ನೋಡಿದೀನಿ ಗೊತ್ತಾ?' ಎಂದು.

Advertisement
Advertisement
Recent Posts
Advertisement