ಉಡುಪಿ

ಉಡುಪಿ ಜಿಲ್ಲಾ ಕಾಂಗ್ರೆಸ್; ಚಂಡಮಾರುತ ದಿಂದ ಆದ ದುಷ್ಪರಿಣಾಮಗಳ ವೀಕ್ಷಣೆ, ಸ್ಥಳೀಯರಿಗೆ ಸಾಂತ್ವಾನ!

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ರವರ ನೇತೃತ್ವದಲ್ಲಿ ಚಂಡಮಾರುತ ದಿಂದ ಉಡುಪಿ ಜಿಲ್ಲೆಯ ಕಾಪು ಪರಿಸರದಲ್ಲಿ ಆದ ದುಷ್ಪರಿಣಾಮಗಳ ವೀಕ್ಷಣೆಯನ್ನು ಮಾಡಿ ಜಿಲ್ಲಾಧಿಕಾರಿಯವರಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಹಾಯ ಅಗತ್ಯವಿದ್ದರೆ ಸಿದ್ಧವಿದ್ದೇವೆ ಎಂದು ತಿಳಿಸಲಾಯಿತು. ಸ್ಥಳೀಯರಿಗೆ ಸಾಂತ್ವಾನ ಹಾಗೂ ಧೈರ್ಯ ತುಂಬಲಾಯಿತು.ಈ ಸಂಧರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ಸಿನ ಕಾನೂನು ಘಟಕದ ಅಧ್ಯಕ್ಷರಾದ ಹರೀಶ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ಪ್ರಶಾಂತ ಜತ್ತನ್ನ, ಸೇವಾದಳದ ಮುಖ್ಯ ಸಂಘಟಕ ಕಿಶೋರ್ ಎರ್ಮಾಳ್ ಮುಂತಾದವರು ಇದ್ದರು.