ಉಡುಪಿ

ಉಡುಪಿ ಜಿಲ್ಲಾ ಕಾಂಗ್ರೆಸ್: ರಾಜೀವ್‍ ಗಾಂಧಿ ಪುಣ್ಯತಿಥಿ ಕಾರ್ಯಕ್ರಮ

ಮಾಜಿ ಪ್ರಧಾನಿ ದಿವಂಗತ ರಾಜೀವ್‍ ಗಾಂಧಿಯವರ ಪುಣ್ಯತಿಥಿ ದಿನಾಚರಣೆ ಕಾರ್ಯಕ್ರಮ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕಾಂಗ್ರೆಸ್ ಭವನದಲ್ಲಿ ಇಂದು ಜರುಗಿತು.ರಾಜೀವ್‍ಗಾಂಧಿಯವರ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಮಾಜಿ ಸಚಿವರಾದ ಶ್ರೀ ವಿನಯಕುಮಾರ್ ಸೊರಕೆಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ರಾಜೀವ್‍ ಗಾಂಧಿಯವರು ಪಂಚಾಯತ್‍ರಾಜ್ ಮಸೂದೆಗೆ ತಿದ್ದುಪಡಿ ತಂದು ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತು ಕೊಟ್ಟು ತಳಮಟ್ಟದ ಗ್ರಾಮ ಪಂಚಾಯತ್‍ಗಳಿಗೆ ಹೆಚ್ಚಿನ ಅಧಿಕಾರ ಸಿಗುವಂತೆ ಮಾಡಿದರು. ಪಕ್ಷದ ವಿದ್ಯಾರ್ಥಿ ಸಂಘಟನೆ (ಎನ್.ಎಸ್.ಯು.ಐ) ಹಾಗೂ ಯುವ ಕಾಂಗ್ರೆಸ್ ಸಂಘಟನೆಯಲ್ಲಿಕಾರ್ಯ ನಿರ್ವಹಿಸಿದ ತನ್ನನ್ನು ಸೇರಿ ಹಲವರು ಜನ ಪ್ರತಿನಿಧಿಗಳಾಗಲು ರಾಜೀವ್‍ ಗಾಂಧಿಯವರೇ ಕಾರಣೀಕರ್ತರು ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಕಾಂಗ್ರೆಸ್‍ ಅಧ್ಯಕ್ಷರಾದ ಅಶೋಕ್‍ ಕುಮಾರ್‍ ಕೊಡವೂರು ಅವರು ಮಾತನಾಡುತ್ತಾ ವಿದೇಶದಲ್ಲಿದ್ದ ಸ್ಯಾಮ್ ಪಿತ್ರೋಡರವರನ್ನು ಭಾರತಕ್ಕೆ ಆಹ್ವಾನಿಸಿ ಮಾಹಿತಿ ತಂತ್ರಜ್ಞಾನದ ಯುಗವನ್ನು ಪ್ರಾರಂಭಿಸಿ ಆಧುನಿಕ ಭಾರತಕ್ಕೆ ತನ್ನ ಕೊಡುಗೆ ನೀಡಿದವರು ದಿ. ರಾಜೀವ್‍ ಗಾಂಧಿಯವರು ಎಂದರು. ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ವ್ಯಾಕ್ಸಿನ್ ಸಂಶೋಧನೆಗಾಗಿ ತನ್ನ ಅವಧಿಯಲ್ಲಿ 300 ಕೋಟಿ ರೂಪಾಯಿಯ ನಿಧಿಯನ್ನು ಮೀಸಲಿಡುವ ಮೂಲಕ ಜನರ ಆರೋಗ್ಯ ಕಾಪಾಡಲು ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿದ್ದರು ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಕುಶಲ್ ಶೆಟ್ಟಿ ಸ್ವಾಗತಿಸಿದರು. ಸಭೆಯಲ್ಲಿಕೆ.ಪಿ.ಸಿ.ಸಿ. ಸಂಯೋಜಕರಾದ ಮುರಳಿ ಶೆಟ್ಟಿ, ಜಿಲ್ಲಾಯುವ ಕಾಂಗ್ರೆಸ್‍ ಅಧ್ಯಕ್ಷರಾದ ದೀಪಕ್‍ಕೋಟ್ಯಾನ್, ಜಿಲ್ಲಾ ಎನ್.ಎಸ್.ಯು.ಐ.ಅಧ್ಯಕ್ಷರಾದ ಸೌರಭ್ ಬಲ್ಲಾಳ್, ಜಿಲ್ಲಾ ಸೇವಾದಳದ ಅಧ್ಯಕ್ಷರಾದ ಕಿಶೋರ್‍ಕುಮಾರ್ ಎರ್ಮಾಳ್,ಜಿಲ್ಲಾ ಕಾನೂನು ಘಟಕದ ಅಧ್ಯಕ್ಷರಾದ ಹರೀಶ್ ಶೆಟ್ಟಿ ಪಾಂಗಾಳ, ಜಿಲ್ಲಾ ಸೋಶಿಯಲ್ ಮೀಡಿಯಾ ಸೆಲ್‍ ಅಧ್ಯಕ್ಷರಾದ ರೋಶನ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಅಣ್ಣಯ್ಯ ಶೇರಿಗಾರ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕೀರ್ತಿ ಶೆಟ್ಟಿ, ಕೃಷ್ಣಮೂರ್ತಿ ಆಚಾರ್ಯ, ಉದ್ಯಾವರ ನಾಗೇಶ್‍ ಕುಮಾರ್, ನಗರಸಭೆಯ ವಿರೋಧ ಪಕ್ಷದ ನಾಯಕರಾದ ರಮೇಶ್‍ಕಾಂಚನ್, ಸದಾಶಿವ ಅಮೀನ್‍ ಕಟ್ಟೆಗುಡ್ಡೆ, ನಾರಾಯಣ ಕುಂದರ್, ಜಯಶ್ರೀ ಶೇಟ್, ಗಿರೀಶ್‍ ಕುಮಾರ್, ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್ ನಿರ್ವಹಿಸಿದರು.

__________________________________

►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG (ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.