Advertisement

ಪಕ್ಷದೊಳಗಿನ ಬಿನ್ನಮತ ಶಮನಗೊಳಿಸಲಾಗದ ಬಿಜೆಪಿ, ಕೊರೊನಾ ಕೊನೆಗೊಳಿಸುವುದೇ? ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಶ್ನೆ.

Advertisement

ಕೊರೊನಾ ಎರಡನೇ ಅಲೆಯ ಪರಿಣಾಮವನ್ನು ತಜ್ಞರು ಮೊದಲೇ ತಿಳಿಸಿದ್ದರೂ ಕೇಂದ್ರದ ಹಾಗೂ ರಾಜ್ಯದ ಬಿಜೆಪಿ ಸರಕಾರಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದರಿಂದಾಗಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಲು ಕಾರಣವಾಯಿತು. ಸೋಂಕು ಉಲ್ಬಣಕ್ಕೆ ಚುನಾವಣಾ ರ‌್ಯಾಲಿ ಹಾಗೂ ಕುಂಭ ಮೇಳವೇ ಕಾರಣ ಎಂಬುದು ಈಗಾಗಲೇ ದೃಡಪಟ್ಟಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರಕಾರವು ತನ್ನ ವೈಫಲ್ಯವನ್ನು ಮರೆಮಾಚಲು ಟೂಲ್‍ಕಿಟ್ ಹೆಸರಲ್ಲಿ ಆರೋಪ ಹೊರಿಸಿ ಕಾಂಗ್ರೆಸನ್ನು ಹಣಿಯಲು ಪ್ರಯತ್ನಪಟ್ಟು ವಿಫಲಗೊಂಡಿದೆ. ಟ್ವಿಟರ್ ಸಂಸ್ಥೆ ಈಗಾಗಲೇ ಆ ಟೂಲ್‍ಕಿಟ್‍ ಅಸಲಿಯಲ್ಲ, ಅದೊಂದು ತಿರುಚಲಾದ ಸುಳ್ಳು ಸುದ್ದಿ ಎಂದು ಸ್ಪಷ್ಟ ಪಡಿಸಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ನಕಲಿ ಲೆಟರ್ ಹೆಡ್ ಬಳಸಿ ಟೂಲ್‍ಕಿಟ್‍ ಒಂದನ್ನು ಸೃಷ್ಟಿಸಿದ ಆರೋಪದ ಮೇರೆಗೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಮಣ್ ಸಿಂಗ್ ಮತ್ತು ವಕ್ತಾರ ಸಂಬಿತ್ ಪಾತ್ರ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗಿದೆ. ಇಷ್ಟಿದ್ದೂ ಬಿಜೆಪಿಯ ಉಡುಪಿ ಜಿಲ್ಲಾ ನಾಯಕರು ಟೂಲ್‍ಕಿಟ್‍ ಜಪ ಮಾಡುತ್ತಿರುವುದು ನಾಚಿಕೆಗೇಡು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಭಾಸ್ಕರ್ ರಾವ್ ಕಿದಿಯೂರು ಟೂಲ್‍ಕಿಟ್ ಬಗ್ಗೆ ಜಿಲ್ಲಾ ಬಿಜೆಪಿ ಮುಖಂಡರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಯು.ಪಿ.ಎ. ಸರಕಾರದ ಅವಧಿಯಲ್ಲಿ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರತೀ ಬ್ಯಾರಲ್‍ಗೆ 140-150 ಡಾಲರ್ ಇದ್ದಾಗ ದೇಶದಲ್ಲಿ ಪೆಟ್ರೋಲ್ ಬೆಲೆ ಕೇವಲ 83 ರೂಪಾಯಿ ಇತ್ತು. ಆದರೆ ಇದೀಗ ಕಚ್ಚಾ ತೈಲ ಬೆಲೆ ಬ್ಯಾರಲ್‍ಗೆ 59.35 ಡಾಲರ್‍ ಗೆ ಕುಸಿದಿದ್ದು, ದೇಶದಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿಗೆ ಜಿಗಿದಿದೆ. 2014ರ ಮುಂಚೆ ಕೇಂದ್ರ ಸರಕಾರದ ತೆರಿಗೆ ರೂ. 9.48 ಇದ್ದರೆ 2021ರಲ್ಲಿ 31.83 ರೂಪಾಯಿಗೆ ಏರಿಕೆ ಕಂಡಿದೆ. ಇದರಿಂದ ಪೆಟ್ರೋಲ್ ಬೆಲೆ ಹೆಚ್ಚಳ ಎಂಬುದು ಸರಕಾರದ ತೆರಿಗೆ ಮೂಲಕ ಹೊರತು ಪೆಟ್ರೋಲ್‍ ಉತ್ಪಾದನೆ ವೆಚ್ಚದ ಏರಿಕೆಯಿಂದ ಅಲ್ಲ ಎಂಬುದು ಸ್ಪಷ್ಟಗೊಂಡಿದೆ. ಯು.ಪಿ.ಎ. ಆಡಳಿತಾವಧಿಯಲ್ಲಿ ತೈಲ ಬೆಲೆ ಕೇವಲ 10 ಪೈಸೆ ಏರಿಕೆ ಕಂಡಾಗ ಬೀದಿಯಲ್ಲಿ ನಿಂತು ರಂಪ ಮಾಡಿದವರು ಇಂದು ಅದೇಕೆ ಮೌನಕ್ಕೆ ಶರಣಾಗಿದ್ದಾರೆ? ಹಾಗಾದರೆ ಬಿಜೆಪಿ ಅಧಿಕಾರ ಪಡೆದ ಕೂಡಲೇ ಜನರ ಸಂಕಷ್ಟಕ್ಕೆ ಸ್ಪಂದಿಸುವ ಗುಣವನ್ನೂ ಕಳೆದುಕೊಂಡಿದೆಯೇ? ಆ ಮೂಲಕ ಈ ಹಿಂದೆ ತೈಲಬೆಲೆ ಏರಿಕೆಗೆ ಬಿಜೆಪಿ ಪ್ರತಿಭಟಿಸುತ್ತಿದ್ದುದು ಕೇವಲ ಅಧಿಕಾರ ಪಡೆಯಲು ಮತ್ತು ಆಡಳಿತ ವೈಫಲ್ಯಗಳನ್ನು ಮರೆಮಾಚಲು ಇವರು ಸದಾ ಪಾಕಿಸ್ತಾನ ಜಪ ಮಾಡುತ್ತಿರುತ್ತಾರೆ ಮತ್ತು ಇದರ ಹಿಂದೆ ಜನರ ದಿಕ್ಕು ತಪ್ಪಿಸುವ ಹುನ್ನಾರ ಅಡಗಿದೆ ಎಂಬುದು ಸ್ಪಷ್ಟಗೊಂಡಿದೆ. ಕೊರೋನಾ ಸಂಕಷ್ಟ ಕಾಲದಲ್ಲಿ ಜನರ ಸಂಕಷ್ಠಕ್ಕೆ ಸ್ಪಂದಿಸುವ ಬದಲು ನಾಯಕತ್ವ ಬದಲಾವಣೆಗಾಗಿ ಬಿಜೆಪಿಯಲ್ಲಿ ಆಂತರಿಕ ಕಲಹ ತಾರಕಕ್ಕೆ ಏರಿರುವುದು ನಾಚಿಕೆಗೇಡುˌ ಕೇವಲ ಪಕ್ಷದೊಳಗಿನ ಬಿನ್ನಮತ ಕೊನೆ ಗೊಳಿಸಲಾಗದ ಬಿಜೆಪಿ ಕೊರೊನಾ ಕೊನೆಗೊಳಿಸುವುದೇ ಎಂದವರು ಪತ್ರಿಕಾ ಪ್ರಕಟಣೆಯ ಮೂಲಕ ಪ್ರಶ್ನಿಸಿದ್ದಾರೆ. ►►ಇದನ್ನೂ ಓದಿ: ►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►► ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ►► ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►► ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►► ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►► ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?

Advertisement
Advertisement
Recent Posts
Advertisement