Advertisement

ರಾಧಾಕೃಷ್ಣ ನಾಯಕ್ ಹಿರ್ಗಾನ ಪತ್ರಿಕಾಗೋಷ್ಠಿ: ಕಾರ್ಕಳ ಶಾಸಕರ ವಿರುದ್ದ ಮಾನನಷ್ಟ ಮೊಕದ್ದಮೆ!

Advertisement

ಕಾರ್ಕಳದ ರಾಧಾಕೃಷ್ಣ ನಾಯಕ್ ಹಿರ್ಗಾನರವರು ಆಕ್ಷೇಪಾರ್ಹ ರೀತಿಯಲ್ಲಿ ಸೈನಿಕರ ವಿರುದ್ಧವಾಗಿ, ಒಂದು ವರ್ಷದ ಹಿಂದೆ ಫೇಸ್‌ಬುಕ್‌ ನಲ್ಲಿ ಬರಹ ಪ್ರಕಟಿಸಿದ್ದಾರೆ ಎಂಬ ಅಪಾದನೆಯ ಮೇಲೆ ಕಾರ್ಕಳ ಠಾಣಾಧಿಕಾರಿ ಮಧು ಎಂಬುವವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಅಪಾದಿಸಲಾಗಿತ್ತು. ಹೃದ್ರೋಗಿಯಾಗಿದ್ದ ಹಿರ್ಗಾನ ರವರ ಆರೋಗ್ಯ ಬಿಗಡಾಯಿಸಿದ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದರ ಬೆನ್ನಿಗೇ ಹಲ್ಲೆಯನ್ನು ವಿರೋಧಿಸಿ ಸ್ಥಳೀಯ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್ ಪೂಜಾರಿ,ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದಾಶಿವ ದೇವಾಡಿಗ ಮುಂತಾದ ಪ್ರಮುಖರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಕೂಡ ನಡೆಸಲಾಗಿತ್ತು. 'ರಾಧಾಕೃಷ್ಣ ಅವರು ತಾನು ಅಂತಹ ಯಾವುದೇ ದೇಶದ್ರೋಹದ ಪೋಸ್ಟ್ ಪ್ರಕಟಿಸಿಲ್ಲ, ನನ್ನ ಹೆಸರಲ್ಲಿ ಬೇರೆ ಯಾರೋ ನಕಲಿ ಖಾತೆ ತೆರೆದು ಅಂತಹ ಪೋಸ್ಟ್ ಪ್ರಕಟಿಸಿದ್ದಾರೆ, ಆ ಕುರಿತು ಒಂದು ವರ್ಷದ ಹಿಂದೆಯೇ ಬೆಂಗಳೂರಿನಲ್ಲಿ ದೂರು ದಾಖಲಿಸಿದ್ದು ಅದು ತನಿಖಾ ಹಂತದಲ್ಲಿದೆ ಎಂದು ಬಗೆಬಗೆಯಾಗಿ ವಿನಂತಿಸಿದರೂ ಆ ಕುರಿತು ಸತ್ಯಾಸತ್ಯತೆ ಅರಿಯುವ ಪ್ರಯತ್ನ ಮಾಡದೆ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಖಂಡನೀಯ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ರಕ್ಷಾ ರಾಮಯ್ಯ ಮುಂತಾದ ನಾಯಕರು ಫೇಸ್‌ಬುಕ್‌ ಮತ್ತು ಟ್ವಿಟರ್ ಮೂಲಕ ಘಟನೆಯನ್ನು ಖಂಡಿಸಿ ಹೇಳಿಕೆ ನೀಡಿದ್ದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ರವರು ಕೂಡ ಪತ್ರಿಕಾ ಪ್ರಕಟಣೆಯ ಮೂಲಕ ಘಟನೆಯನ್ನು ಖಂಡಿಸಿ ಹೇಳಿಕೆ ನೀಡಿದ್ದರು. ಈ ನಡುವೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ರವರು, ನಕಲಿ ಮಾಡಿದ್ದಾರೆ ಎನ್ನಲಾಗಿದ್ದ ಮತ್ತು ಯೋಧರನ್ನು ಅವಮಾನಿಸಿದ ಪೋಸ್ಟನ್ನು ಹಿರ್ಗಾನ ಅವರ ಪೂರ್ಣ ಹೆಸರಿನ ಸಮೇತ ಹಾಗೂ ಅದರ ಜೊತೆಗೆ ಹಲ್ಲೆಯನ್ನು ಖಂಡಿಸಿ ಸಿದ್ದರಾಮಯ್ಯ ಮಾಡಿದ ಟ್ವೀಟ್ ಅನ್ನು ಕೊಲಾಜ್ ಮಾಡಿ 'ಸಿದ್ದರಾಮಯ್ಯ ದೇಶದ್ರೋಹಿಗಳ ಪರ' ಎಂಬ ಪೋಸ್ಟನ್ನು ಫೇಸ್‌ಬುಕ್‌ ಮತ್ತು ಟ್ವಿಟರ್ ನಲ್ಲಿ ಪ್ರಕಟಿಸಿದ್ದರು. ಈ ನಡುವೆ ಇದೀಗ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ರಾಧಾಕೃಷ್ಣ ಅವರು ಪತ್ರಿಕಾಗೋಷ್ಠಿ ಕರೆದು ಘಟನೆಯ ನೈಜತೆಯ ಕುರಿತು ವಿವರಗಳು ಮತ್ತು ಶಾಸಕ ಸುನಿಲ್ ಕುಮಾರ್ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವ ಕುರಿತು ವಿವರಿಸಿದ್ದಾರೆ. ಆ ನಿಟ್ಟಿನಲ್ಲಿ ಅವರು ಪತ್ರಿಕೆಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯ ಸಂಪೂರ್ಣ ವಿವರಗಳು ಇಂತಿದೆ: ಮಾನ್ಯ ಪತ್ರಿಕಾ ಬಂಧುಗಳೇ, ತನಿಖೆಯ ನೆಪದಲ್ಲಿ ನನ್ನ ಮೇಲೆ ಕಾರ್ಕಳ ಪೊಲೀಸ್ ಅಧಿಕಾರಿ ಮಧು ಅವರು ಹಲ್ಲೆ ನಡೆಸಿ ದೌರ್ಜನ್ಯ ನಡೆಸಿರುವ ಬಗ್ಗೆ ತಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ಹಲ್ಲೆಯ ಹಿಂದಿರುವ ನಿಗೂಢ ರಹಸ್ಯ ತಮಗೆ ತಿಳಿದಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ ಅದನ್ನು ನಿಮ್ಮ ಮುಂದೆ ಪ್ರಮಾಣೀಕರಿಸಲು ಬಂದಿರುತ್ತೇನೆ. ನಾನು ಕಾರ್ಕಳ ತಾಲ್ಲೂಕಿನ ಹಿರ್ಗಾನ ಎಂಬ ಗ್ರಾಮದಲ್ಲಿ ಹುಟ್ಟಿ ಬೆಳೆದವನು. ನಾನು ಮತ್ತು ನನ್ನ ಕುಟುಂಬ ಬದುಕಿನುದ್ದಕ್ಕೂ ದೇಶ, ದೇಶದ ಸಂವಿಂಧಾನ, ದೇಶದ ಸೈನಿಕರ ಬಗ್ಗೆ ಅಪಾರ ಭಕ್ತಿ ‌ಮತ್ತು ಗೌರವ ಹೊಂದಿದವರು. ದೇಶ ಪ್ರೇಮ ನನ್ನ ರಕ್ತದ ಪ್ರತಿ ಕಣ ಕಣದಲ್ಲೂ ಇದೆ. ನನಗೆ ಯಾವ ವ್ಯಕ್ತಿಯಿಂದಲೂ ದೇಶ ಪ್ರೇಮದ ಪಾಠ ಅಗತ್ಯವಿರುವುದಿಲ್ಲ. ಇದನ್ನು ಹೇಳಲು ಕಾರಣವೇನೆಂದರೆ, ಯಾರೋ ಕಿಡಿಗೇಡಿಗಳು ನನ್ನ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆಯನ್ನು ಸೃಷ್ಟಿಸಿ ಸೈನಿಕರ ಬಗ್ಗೆ ಅವಹೇಳನಕಾರಿ ಪೋಸ್ಟ್ ಗಳ್ಳನ್ನು ಹಾಕಿರುತ್ತಾರೆ. ಈ ಬಗ್ಗೆ ನಾನೇ ಸ್ವತಃ ಬೆಂಗಳೂರಿನ ಉತ್ತರ ಗಂಗಮ್ಮನ ಗುಡಿ ಸೈಬರ್ ಠಾಣೆಯಲ್ಲಿ 26-8-2020 ದೂರು ದಾಖಲಿಸಿ ತನಿಖೆ ನಡೆಸುವಂತೆ ಮನವಿ ಸಲ್ಲಿಸಿರುತ್ತೇನೆ. ನೀವು ನೀಡಿದ ದೂರು ಸರಿಯಾಗಿಲ್ಲ ಮತ್ತೊಮ್ಮೆ ದೂರು ನೀಡಿ ಎಂದು ಅದೇ‌ ಠಾಣೆಯಿಂದ ಕರೆ ಬಂದ ಹಿನ್ನಲೆಯಲ್ಲಿ ದಿನಾಂಕ 04-09-2020 ರಂದು ಮತ್ತೊಮ್ಮೆ ದೂರು ಸಲ್ಲಿಸಿದ್ದ ಕಾರಣ ನನ್ನ ವಿಚಾರಣೆಯನ್ನು ಕೂಡಾ ನಡೆಸಿ ನನಗೆ ನ್ಯಾಯ ಒದಗಿಸಿ ಕೊಡುವ ಭರವಸೆಯನ್ನು ನೀಡಿರುತ್ತಾರೆ. ಈ ಮದ್ಯೆ ನಾನು ಕೆಲಸ ಮಾಡುತ್ತಿದ್ದ ಬೇಕರಿ ಮಾಲೀಕರಿಗೂ ನಕಲಿ ಖಾತೆ ಸೃಷ್ಟಿಸಿದ ಕಿಡಿಗೇಡಿಗಳು ಕರೆ ಮಾಡಿ ನನ್ನ ಬಗ್ಗೆ ಬೇಡದ ಹೇಳಿ ನೀಡಿ ನನ್ನನ್ನು ಕೆಲಸದಿಂದ ತೆಗೆಸುವಲ್ಲಿ ಯಶಸ್ವಿ ಯಾಗಿರುತ್ತಾರೆ. ಇದರಿಂದ ಮನನೊಂದ ನಾನು ಕಾರ್ಕಳಕ್ಕೆ ಬಂದು ಒಂದು ಟೆಂಪೋ ಚಲಾಯಿಸಿಕೊಂಡು ಜೀವನ ಸಾಗಿಸಿಕೊಂಡು ಕುಟುಂಬದ ನಿರ್ವಹಣೆಯನ್ನು ಮಾಡುತ್ತಿದ್ದೇನೆ. ದಿನಾಂಕ 04-04-2021 ರಂದು‌ ನನಗೆ ಎರಡನೇ ಬಾರಿ ಹೃದಯಾಘಾತವಾದ ಕಾರಣ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೃದಯದಲ್ಲಿ ಸ್ಟಂಟ್ ಗಳನ್ನು ಅಳವಡಿಸಿರುತ್ತಾರೆ. ಏಪ್ರಿಲ್ 23‌ ರಂದು ಕಾರ್ಕಳ ನಗರ ಪೊಲೀಸ್ ಠಾಣೆಯಿಂದ ಠಾಣೆಗೆ ಹಾಜರಾಗುವಂತೆ ನನಗೆ ನೋಟೀಸ್ ಬಂದಿದ್ದು ಅದರಂತೆ ನಾನು ಠಾಣೆಗೆ ಹೋಗಿದ್ದು ಆ ಸಂದರ್ಭದಲ್ಲಿ ಠಾಣಾಧಿಕಾರಿ ಶ್ರೀ ಮಧು ರವರು ಇಲ್ಲದಿರುವ ಕಾರಣ ಪೊಲೀಸರು ನನ್ನ ಹೇಳಿಕೆ ಪಡೆದು ಕಳುಹಿಸಿ, ಠಾಣಾಧಿಕಾರಿ ಶ್ರೀ ಮಧು ರವರು ಬಂದ ನಂತರ ಬರುವಂತೆ ವಾಪಸ್ ಕಳುಹಿಸಿರುತ್ತಾರೆ. ಅನಂತರ ಈ ಕಾರಣಕ್ಕಾಗಿ ಎರಡು ಬಾರಿ ಹೋದರು ಅವರು ಸಿಗದ ಕಾರಣ ವಾಪಾಸು ‌ಬಂದಿರುತ್ತೇನೆ‌ ಈ ಎಲ್ಲಾ ಸಂದರ್ಭದಲ್ಲಿಯೂ ಠಾಣೆಯಲ್ಲಿ ಸಂದರ್ಶಕರ ಪುಸ್ತಕಕ್ಕೆ ಸಹಿ ಹಾಕಿರುವುದು ದಾಖಲಾಗಿದೆ. 9-7-2021ರಂದು 4ನೇ ಬಾರಿ ನಾನು‌ ಠಾಣೆಗೆ ಬಂದಿದ್ದು ಅಂದು ತನಿಖೆ ನಡೆಸುವ ಸಂದರ್ಭ ಬೆಂಗಳೂರಿನಲ್ಲಿ ದೂರು ನೀಡಿದ ಬಗ್ಗೆ ದಾಖಲೆ ನೀಡುವಂತೆ ಕೇಳಿದಾಗ ಲಾಕ್ ಡೌನ್ ಇದ್ದ ಕಾರಣ ಅಲ್ಲಿ ಹೋಗಿ ತರಲು ಸಾದ್ಯವಾಗಲಿಲ್ಲ ಎಂದು ಹೇಳಿದಾಗ ಯಾವುದೇ ತನಿಖೆ ನಡೆಸದೆ ನನ್ನ ಮೇಲೆ ಹಲ್ಲೆ ನಡೆಸಿ ದೂರುದಾರನ್ನು ಕರೆಸಿ ಅವರನ್ನು ಸಮ್ಮುಖದಲ್ಲಿ ನನ್ನನ್ನು ನೆಲದ ಮೇಲೆ ಕುಳ್ಳಿರಿಸಿ ಅವಾಚ್ಯ ಶಬ್ಧಗಳಿಂದ ಬೈದು ನಿಂದಿಸಿರುತ್ತಾರೆ. ಮಾತ್ರವಲ್ಲದೆ ನನ್ನನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ನನ್ನನ್ನು ವೈದ್ಯಕೀಯ ಪರೀಕ್ಷಿಗೆ ಒಳಪಡಿಸಿ ಮನೆಗೆ ಕಳುಹಿಸಿರುತ್ತಾರೆ. ಅವರಿಂದ ಹಲ್ಲೆಗೊಳಗಾಗಿ ಆಘಾತಕ್ಕೊಳಗಾದ ನನ್ನ ಆರೋಗ್ಯದಲ್ಲಿ ಏರುಪೇರಾದಾಗ‌ ಸಂಬಂಧಿಕರು ಮತ್ತು ಮಿತ್ರರು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಮಧು ಅವರ ಮೇಲೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ನನ್ನ ಮೇಲೆ ಇರುವ ಸುಳ್ಳು ಆಪಾದನೆಗಳಿಂದ ಮನನೊಂದು ಸತ್ಯವನ್ನು ಸಮಾಜಕ್ಕೆ ತಿಳಿಸುವ ನಿಟ್ಟಿನಲ್ಲಿ ಈ ಪತ್ರಿಕಾ ಗೋಷ್ಠಿಯನ್ನು ನಡೆಸುತ್ತಿದ್ದೇನೆ. 1. *ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ*: ನನ್ನ ಮೇಲೆ ರಾಜ್ಯದ ಯಾವುದೇ ಠಾಣೆಯಲ್ಲಿ ದೇಶ ದ್ರೋಹದ ಕೇಸು ದಾಖಲಾಗದಿದ್ದರೂ ಶಾಸಕ ಸುನೀಲ್ ಕುಮಾರ್ ಮತ್ತು ಬಿಜೆಪಿ ಪದಾಧಿಕಾರಿಗಳು ನನ್ನನ್ನು ದೇಶದ್ರೋಹಿ ಎಂದು ಹೇಳಿಕೆ ನೀಡಿ ನನ್ನ‌ ಮಾನಹಾನಿ ಮಾಡಿದ ಬಗ್ಗೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಿದ್ದೇನೆ. 2) ರಾಜ್ಯದಲ್ಲಿ ತನ್ನದೇ ಸರಕಾರ ಇರುವುದರಿಂದ ಶಾಸಕರು ನನ್ನ ಮೇಲೆ ಮಾಡಿದ ಗಂಬೀರ ಆರೋಪವನ್ನು ಸಾಬೀತು ಪಡಿಸಿದರೆ ನಾನು ಗಲ್ಲಿಗೇರಲು ಸಿದ್ದ, ಇಲ್ಲವಾದಲ್ಲಿ ಅವಮಾನಕ್ಕೊಳಗಾದ ನಾನು ಅವರ ಮನೆ ಮುಂದೆ ಆತ್ಮಹತ್ಯೆ ಮಾಡುತ್ತೇನೆ. 3 ) ಒಬ್ಬ ಜವಾಬ್ದಾರಿಯುತ ಶಾಸಕನಾಗಿ ರಾಜಧರ್ಮವನ್ನು ಮರೆತು ನನ್ನ ಹೆಸರಿನ ನಕಲಿ ಫೆಸ್ ಬುಕ್ ಖತೆಯ ಬಗ್ಗೆ ತನಿಖೆ‌ ನಡೆಸದೆ ಯಾರೋ ಕಿಡಿಗೇಡಿಗಳು ಸೃಷ್ಟಿಸಿದ ಸುಳ್ಳು ಸುದ್ದಿಗಳನ್ನು ನಂಬಿ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ನನಗೆ ದೇಶದ್ರೋಹಿ ಪಟ್ಟ ಕಟ್ಟಿರುವುದು ನನ್ನ ಕುಟುಂಬ ಹಾಗೂ ನಮ್ಮ ಸಮಾಜಕ್ಕೆ ಮಾಡಿರುವ ಘೋರ ಅನ್ಯಾಯವಾಗಿದೆ. ಇದರಿಂದಾಗಿ ಸಮಾಜದಲ್ಲಿ ನನ್ನ ಇಡೀ ಕುಟುಂಬವೇ ತಲೆ ತಗ್ಗಿಸುವಂತಾಗಿದ್ದು ಮಾಡದಿರುವ ತಪ್ಪಿಗೆ ಇಷ್ಟೊಂದು ಕಠೋರವಾದ ಶಿಕ್ಷೆಯೆ ಅನುಭವಿಸುವಂತಾಗಿದೆ. 4. ಶಾಸಕರೇ, ನಿಮ್ಮ ‌ಮೇಲಿರುವ ಭ್ರಷ್ಟಾಚಾರ ಅರೋಪ ‌ಮತ್ತು ನಿಮ್ಮ ತಪ್ಪು ನಡೆಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದೇನೆ‌‌ ಎನ್ನುವ ಒಂದೇ ಕಾರಣಕ್ಕಾಗಿ ಪ್ರಾಮಾಣಿಕ ಬದುಕು ನಡೆಸುತ್ತಿರುವ ನನ್ನ ಹಾಗೂ ನನ್ನ ಕುಟುಂಬದ ಮೇಲೆ ಈ ರೀತಿಯ ದೌರ್ಜನ್ಯ ನಿಮಗೆ ಶೋಬೆಯೇ ? 5. ಒಂದು ವೇಳೆ ನಾನೇ ಸೈನಿಕರ ವಿರುದ್ಧ ಪೋಸ್ಟ್ ಮಾಡಿದ್ದು ಹೌದಾದರೆ ಬೆಂಗಳೂರಿನ ಠಾಣೆಯಲ್ಲಿ ಹೇಳಿಕೆ ಪಡೆದು ಯಾವುದೇ ಪ್ರಕರಣ ದಾಖಲಿಸದಿರಲು ಕಾರಣವೇನು? 6)ಘಟನೆ ನಡೆದು ಒಂದು ವರ್ಷವಾಗುತ್ತಾ ಬಂದರೂ ನಾನೇ ಖುದ್ದಾಗಿ ಠಾಣೆಗೆ ಬರುವವರೆಗೆ ಪೊಲೀಸರು ಮೌನ ವಹಿಸಿದ್ದು ಯಾಕೆ? 7) ನನ್ನ ತನಿಖೆ ನಡೆಸಿದ ಮಧು ಅವರಿಗೆ ನಾನೇ ತಪ್ಪು ಮಾಡಿದ್ದೇನೆಂದು ಖಚಿತವಾಗಿದ್ದರೆ ನನ್ನ ಮೇಲೆ ಕೇಸು ದಾಖಲಿಸದೆ, ಹೇಳಿಕೆಯನ್ನೂ ಪಡೆಯದ ನನ್ನನ್ನು ಮನೆಗೆ ಕಳುಹಿಸಲು ಕಾರಣವೇನು? 8) ನಾನು ಪೊಲೀಸರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ದಾಖಲಾದ ನಂತರ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದೇನೆಂದು ತಪ್ಪು ದೂರು ದಾಖಲಿಸಲು ಯಾರ ಒತ್ತಡವಿತ್ತು? 9)ಒಬ್ಬ ಸಾಮಾನ್ಯ ವ್ಯಕ್ತಿ ಪೊಲೀಸ್ ಸ್ಟೇಷನ್ ಒಳಗೆ ಅದೂ ಅಷ್ಟೊಂದು ಪೋಲೀಸರ ಮದ್ಯೆ ಠಾಣಾಧಿಕಾರಿಯವರಿಗೆ ಹಲ್ಲೆ ನಡೆಸಲು ಸಾಧ್ಯವೇ? ಪೋಲೀಸರು ಅಷ್ಟು ದುರ್ಬಲರೇ? 10) ನಾನು ಹೇಳಿದ್ದಂತೆ ನನ್ನ ಮೇಲೆ ಹಲ್ಲೆ ಮಾಡದ್ದಿದ್ದರೆ ನನ್ನ‌ ವೈದ್ಯಕೀಯ ತಪಾಸಣೆ ಮಾಡಲು‌ ಕಾರಣವೇನು? 11)‌ನನ್ನ ನಕಲಿ ಫೆಸ್ ಬುಕ್ ಖಾತೆಯ ಬಗ್ಗೆ ದೂರು ನೀಡಿ ವರ್ಷವಾಗುತ್ತಾ ಬಂದರೂ ಆ ಬಗ್ಗೆ ಯಾಕೆ ತನಿಖೆಯಾಗುತ್ತಿಲ್ಲ? 12) ನಾನು ನಾಲ್ಲು ಬಾರಿಗೆ ಠಾಣೆಗೆ ಹಾಜರಾದ ಸಂದರ್ಭ ಒಂದು ಬಾರಿ ನನ್ನ ಹೇಳಿಕೆಯನ್ನು ಪಡೆದಿದ್ದು ಪ್ರತೀ ಬಾರಿಯೂ ಸಂದರ್ಶಕರ ಪುಸ್ತಕದಲ್ಲಿ ಸಹಿಯನ್ನು ಹಾಕಿದ್ದರೂ ನಾನು ತಲೆಮರೆಸಿಕೊಂಡಿದ್ದೆ ಎಂದು ಶಾಸಕರು ಸುಳ್ಳು ಹೇಳಲು ಕಾರಣವೇನು? ನಾನೇನಾದಾರೂ ದೇಶ ದ್ರೋಹದ ಕೆಲಸ ಅಥವಾ ಸೈನಿಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಗಳನ್ನು ಹಾಕಿದ್ದು ಸಾಬೀತಾದರೆ ಯಾವುದೇ ಶಿಕ್ಷೆ ಎದುರಿಸಲು ಸಿದ್ದನಿದ್ದೇನೆ. ಆದರೆ ಶಾಸಕರು ಅಥವಾ ಅವರ ಯಾರೇ ಪದಾದಿಕಾರಿಗಳು‌ ಯಾವುದೇ ಪವಿತ್ರ ಸ್ಥಳದಲ್ಲಿ ಪ್ರಮಾಣಿಸಲು ಸಿದ್ದರಿದ್ದರೆಯೇ ಎಂದು ನನ್ನ ಸವಾಲು. ಇಂತಿ, ರಾಧಾಕೃಷ್ಣ ನಾಯಕ್. ಸಂಬಂಧಿತ ಸುದ್ದಿಗಳು ►►ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಸೈನಿಕರ ವಿರುದ್ಧ ಪೋಸ್ಟ್ ಮಾಡಿದ್ದು ನಿಜವೇ? ಇಲ್ಲಿದೆ ಸತ್ಯಾಂಶ! ►►ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತನ ಮೇಲಿನ ಪೋಲಿಸ್ ದೌರ್ಜನ್ಯ ಖಂಡನೀಯ: ಕೊಡವೂರು ►►ಕಾಂಗ್ರೆಸ್ ಕಾರ್ಯಕರ್ತನ ಹೆಸರಿನಲ್ಲಿ ಸೃಷ್ಟಿಸಲಾದ ಸೈನಿಕರ ವಿರುದ್ಧದ ಪೋಸ್ಟ್‌ ನ ರೂವಾರಿ ಕಾರ್ಕಳ ಶಾಸಕರೇ? ►►ಇದನ್ನೂ ಓದಿ: ►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?

Advertisement
Advertisement
Recent Posts
Advertisement