Advertisement

ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡ್ರು : ಡಿಸಿಎಂ ಗೆ ವ್ಯಂಗ್ಯ ಮಾಡಿದ ಡಿಕೆಶಿ

Advertisement

DK Shivakumar

ಬೆಂಗಳೂರು: ಕಾಂಗ್ರೆಸ್ ನಾಯಕರು ಇದುವರೆಗೂ ಪ್ರವಾಹದ ಬಗ್ಗೆ ಮಾತನಾಡಿಲ್ಲ. ಆದರೂ ಡಿಸಿಎಂ ಅಶ್ವಥ್ ನಾರಾಯಣ ಅವರು ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿಕೊಂಡರು ಎನ್ನುವ ರೀತಿ ಮಾತನಾಡುತ್ತಿದ್ದಾರೆ. ಅವರೇ ಮೈಮೇಲೆ ವಿವಾದ ಎಳೆದುಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದರು.

ಅತಿವೃಷ್ಟಿ ಮತ್ತು ನೆರೆಯಂತಹ ಪ್ರಕೃತಿ ವಿಕೋಪದ ವೇಳೆಯಲ್ಲೂ ಪ್ರತಿಪಕ್ಷ ನಾಯಕರು ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಸರಕಾರಕ್ಕೆ ರಚನಾತ್ಮಕವಾಗಿ ಸಲಹೆ ನೀಡುವುದು ಬಿಟ್ಟು ಕೇವಲ ರಾಜಕೀಯ ಮಾಡಿಕೊಂಡು ಕಾಲಹರಣ ಮಾಡುವುದು ಎಷ್ಟು ಸರಿ ಎಂಬ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರ ಆರೋಪಕ್ಕೆ ಪ್ರತಿಕ್ರಯಿಸಿ ಅವರು ಮಾತನಾಡಿದರು. ಅಧ್ಯಕ್ಷೆ ಶ್ಯಾಮಲಾ ಕುಂದರ್ ವಿಪಕ್ಷ ಸದಸ್ಯರ ಪ್ರಶ್ನೆಗಳ ಸರಮಾಲೆಗೆ ಉತ್ತರಿಸಲಾಗದೆ, ಸದಸ್ಯರ ಒಪ್ಪಿಗೆಯ ಮೇರೆಗೆ ಸಭೆಯನ್ನು ಮುಂದೂಡಿದರು.ಕೆಪಿಸಿಸಿ ನೆರೆ ಬಗ್ಗೆ ಅಧ್ಯಯನ ಮಾಡಲು ಹಾಲಿ ಮಾಜಿ ಶಾಸಕರನ್ನು ಒಳಗೊಂಡ ಒಂದು ತಂಡ ರಚನೆ ಮಾಡುತ್ತೇವೆ. ಸರ್ಕಾರ ನೆರೆಗೆ ಏನು ಮಾಡಿದೆ, ನಾವು ಏನು ಮಾಡಬೇಕು ಎನ್ನುವ ರಿಪೋರ್ಟ್ ಕೊಡಲು ಹೇಳುತ್ತೇವೆ ಎಂದರು. ಕೆಲ ಸಚಿವರು ಇನ್ನೂ ಜಿಲ್ಲೆಗಳಿಗೆ ಹೋಗಿಲ್ಲ ಅವರು ಬೆಂಗಳೂರಿನಲ್ಲಿ ಮಲಗಲಿ ಬಿಡಿ ಎಂದು ಸರ್ಕಾರದ ಸಚಿವರ ವಿರುದ್ಧ ಡಿಕೆ ಶಿವಕುಮಾರ್ ಕಿಡಿಕಾರಿದರು.

Advertisement
Advertisement
Recent Posts
Advertisement