Advertisement

ಯುವಜನತೆಗೆ ಉದ್ಯೋಗ ಕೊಡಿ, NYAY ಯೋಜನೆಯಡಿ ಬಡಕುಟುಂಬಗಳಿಗೆ ತಿಂಗಳಿಗೆ 6 ಸಾವಿರ ಪಾವತಿಸಿ ; ಡಿ.ಕೆ ಶಿವಕುಮಾರ್ ಟ್ವೀಟ್.

Advertisement

DK Shivakumar

ನಿನ್ನೆ ಸೆಪ್ಟೆಂಬರ್ 17 ಪ್ರಧಾನಿ ಮೋದಿಯವರ ಜನ್ಮದಿನವಾಗಿದ್ದು ಆ ಕುರಿತು ದೇಶದ ನಿರುದ್ಯೋಗಿ ಯುವ ಜನತೆ ಸಾಮಾಜಿಕ ಜಾಲತಾಣದಲ್ಲಿ ಹ್ಯಾಶ್‌ಟ್ಯಾಗ್ ಬಳಸಿ ಪ್ರತಿಭಟನಾರ್ಥಕವಾಗಿ ಆಚರಿಸಿದ 'ರಾಷ್ಟ್ರೀಯ ನಿರುದ್ಯೋಗ ದಿನಾಚರಣೆ' ವಿಶ್ವದಾದ್ಯಂತ ಅತಿಹೆಚ್ಚು ಯುವಜನತೆ ಪಾಲ್ಗೊಳ್ಳುವ ಮೂಲಕ ಇಡೀ ದಿನ ನಂಬರ್ ಒನ್ ಸ್ಥಾನದಲ್ಲಿದ್ದು ಟ್ರೆಂಡ್‌ ಸೃಷ್ಟಿಸಿತ್ತು. ಈ ಸಂಧರ್ಭದಲ್ಲಿ (#NationalUnemploymentDay) ಈ ಹ್ಯಾಶ್ ಟ್ಯಾಗ್ ಬಳಸಿ ನಿರುದ್ಯೋಗ ಸಮಸ್ಯೆಗೆ ಕಾರಣವಾದ ಸರ್ಕಾರದ ಹಲವು ಪ್ರಮುಖ ವೈಫಲ್ಯಗಳ ಕುರಿತು ವಿಶ್ಲೇಷಿಸಿ ಟ್ವೀಟ್‌ ಮಾಡುವ ಮೂಲಕ ದೇಶದ ಯುವಜನರ ಪ್ರತಿಭಟನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬೆಂಬಲ ವ್ಯಕ್ತಪಡಿಸಿರುವುದು ಯುವ ಸಮುದಾಯದಲ್ಲಿ ಹೋರಾಟದ ಸ್ಪೂರ್ತಿ ತುಂಬಿಸಿದೆ. 'ದೇಶದ ನಿರುದ್ಯೋಗಿ ಯುವಕರಿಗೆ ಹಾಗೂ ಬಡ ಕುಟುಂಬಗಳಿಗೆ ತಿಂಗಳಿಗೆ ಆರು ಸಾವಿರದಂತೆ ವರ್ಷಕ್ಕೆ 72 ಸಾವಿರ ರೂ. ಪಾವತಿಸುವ ಕಾಂಗ್ರೆಸ್ ಪಕ್ಷ ರೂಪಿಸಿದ ರಾಹುಲ್ ಗಾಂಧಿಯವರ ಕನಸಿನ‌ ಯೋಜನೆಯಾದ 'ನ್ಯಾಯ್' ಯೋಜನೆಯನ್ನು ಕೇಂದ್ರ ಸರ್ಕಾರವು ಈಗಿಂದೀಗಲೇ ಜಾರಿಗೆ ತರಬೇಕು ಮತ್ತು ಖಾಲಿ ಇರುವ ಸರ್ಕಾರಿ ಉದ್ಯೋಗ ಖಾಲಿ ಹುದ್ದೆಗಳನ್ನು ಈ ಕೂಡಲೇ ಭರ್ತಿಮಾಡಬೇಕು ಆದರೆ ನೀವು ನ್ಯಾಯ್ ಯೋಜನೆಯನ್ನು ಅದೇಕೆ ಜಾರಿಗೆ ತರುತ್ತಿಲ್ಲ ಮತ್ತು ಖಾಲಿ ಹುದ್ದೆಗಳನ್ನು ಅದೇಕೆ ಭರ್ತಿ ಮಾಡುತ್ತಿಲ್ಲ' ಎಂದವರು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ. 'ದೇಶದಾದ್ಯಂತ 15 ಕೋಟಿ ಜನರು ಉದ್ಯೋಗ ಕಳೆದುಕೊಂಡಿರುವುದು ಹಾಗೂ ದೇಶದ ಜಿಡಿಪಿ ದರವು ಮೈನಸ್ 23.9% ಕುಸಿತ ಕಂಡಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಂಕ್ರಾಮಿಕ ರೋಗ ಕೊರೊನಾ ವನ್ನು ತಪ್ಪಾಗಿ ನಿರ್ವಹಿಸಿವೆ' ಎಂದು ಪ್ರಬಲವಾಗಿ ಪ್ರತಿಪಾದಿಸಿರುವ ಅವರು ಆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಧರ್ಭದಲ್ಲಿ ಇತ್ತೀಚೆಗಷ್ಟೇ ಕೊರೊನಾ ಸೋಂಕು ಹರಡುವಿಕೆಯಲ್ಲಿ ವಿಶ್ವದಲ್ಲೇ ಭಾರತ ಅಮೇರಿಕಾದ ನಂತರದ ಎರಡನೆ ಸ್ಥಾನಕ್ಕೆ ಏರಿರುವುದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಈ ತನಕ ಸಂಘಟಿತ ಮತ್ತು ಅಸಂಘಟಿತ ಎರಡೂ ವಲಯದಲ್ಲಿ ಕೆಲಸ ಮಾಡುವ ಕನಿಷ್ಠ 15 ಕೋಟಿ ಉದ್ಯೋಗಿಗಳು ಉದ್ಯೋಗ ಕಳೆದುಕೊಂಡಿದ್ದಾರೆ. ನಿರುದ್ಯೋಗ ಸಮಸ್ಯೆ ಕಳೆದ 45 ವರ್ಷಗಳಷ್ಟು ಹಿಂದಿನ ಮಟ್ಟಕ್ಕೆ ಕುಸಿತ ಕಂಡಿರುವುದು ಆತಂಕಕಾರಿಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಂಕ್ರಾಮಿಕ ರೋಗ ಕೊರೊನಾವನ್ನು ತಪ್ಪಾಗಿ ನಿರ್ವಹಿಸುವುದರಿಂದ ದೇಶದ ಜಿಡಿಪಿ ತೀವ್ರ ಸ್ವರೂಪದ ಕುಸಿತವನ್ನು ಕಾಣುವಂತಾಗಿದೆ. ಇದು ವಿಶ್ವದ ಅತ್ಯಂತ ಕೆಟ್ಟ ಕಾರ್ಯಕ್ಷಮತೆಯ ಆರ್ಥಿಕ ನಿರ್ವಹಣೆಯಾಗಿದೆ ಮತ್ತು ಭಾರತದ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ನಿರ್ವಹಣೆಯಾಗಿದೆ. ಆ ಮೂಲಕ ಸೃಷ್ಟಿಯಾದ ನಿರುದ್ಯೋಗ ಸಮಸ್ಯೆ ಇಂದು ಭಾರತದ ಅತಿ ದೊಡ್ಡ ಸಮಸ್ಯೆಯಾಗಿದೆ ಮತ್ತು ಅದು ಭಾರತದ ಭವಿಷ್ಯಕ್ಕೆ ಕಂಟಕವಾಗಲಿದೆ. ಆ ಕಾರಣಗಳಿಂದಾಗಿ ಸರ್ಕಾರವು ಈ ಕೂಡಲೇ ಮೊದಲನೆಯದಾಗಿ NYAY ಯೋಜನೆಯನ್ನು ಜಾರಿಗೊಳಿಸಬೇಕು. ಎರಡನೆಯದಾಗಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಮತ್ತು ಮೂರನೆಯದಾಗಿ ಹೊಸ ಉಧ್ಯಮಗಳಿಗೆ ಅವಕಾಶ ಮಾಡಿಕೊಡುವ ಮೂಲಕ ದೇಶದ ಮೂಲೆ ಮೂಲೆಗಳಲ್ಲಿ ಉದ್ಯೋಗ ಸೃಷ್ಟಿಗೆ ಅವಕಾಶ ಮಾಡಿಕೊಡಬೇಕು ಎಂದವರು ಒತ್ತಾಯಿಸಿದ್ದಾರೆ.

Advertisement
Advertisement
Recent Posts
Advertisement