Advertisement

ಜೈನ ಸಮಾಜದ ವಿರುದ್ಧ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಕಾರ್ಕಳ ಜೈನ ಮಠದ ಸ್ವಾಮೀಜಿ ಆಗ್ರಹ.

Advertisement

ವರದಿ: ಸತೀಶ್ ಕಾರ್ಕಳ ಕ್ರಿ.ಶ. 1545ರಲ್ಲಿ ಭೈರವರಸು ವಂಶದ ಪಾಂಡ್ಯನಾಥ ರಾಜನು ಆನೆಕೆರೆ ಬಸದಿಯನ್ನು ಕಟ್ಟಿಸಿದ್ದಾನೆ. ಅರಮನೆಯ ಆನೆಗಳಿಗೆ ಸ್ನಾನ ಇತ್ಯಾದಿಗಳ ಉದ್ದೇಶದಿಂದ 25ಎಕರೆ ವಿಸ್ತೀರ್ಣದ ಕೆರೆಯನ್ನು ಪಾಂಡ್ಯನಾಥನು ನಿರ್ಮಿಸಿದನು. ಇಮ್ಮಡಿ ಭೈರವನ ಕಾಲದಲ್ಲಿ ನಿರ್ಮಿಸಿದ್ದ ಸುಂದರವಾದ ಜಿನಾಲಯವನ್ನು ವೈಷ್ಣವ ಗುರುಗಳಿಗೆ ಸಮರ್ಪಣೆ ಮಾಡಿ, ತನ್ನ ಗುರುಗಳಿಗೆ ನೋವಾಗದಿರಲಿ ಎಂಬ ಉದ್ದೇಶದಿಂದ ಚಿಕ್ಕ ಬೆಟ್ಟದ ಮೇಲೆ ಅತೀ ಮನೋಹರವಾದ ಚತುರ್ಮುಖ ಬಸದಿಯನ್ನು ನಿರ್ಮಾಣ ಮಾಡುತ್ತಾನೆ. ಹಾಗೆಯೇ ಕಾರ್ಕಳದ ವೀರಭೈರವರಸನ ಮಗನಾದ ರಾಮನಾಥನ ನೆನಪಿಗಾಗಿ ರಾಮಸಮುದ್ರವನ್ನು ನಿರ್ಮಾಣ ಮಾಡಲಾಯಿತು‌. ಇತರ ಧರ್ಮಗಳಿಗೂ ಸಂಬಂಧಿಸಿ ಅನೇಕ ದೇವಸ್ಥಾನ, ಚರ್ಚು, ಮಸೀದಿಗಳಿಗೆ ಸ್ಥಳ ದಾನ ಮಾಡಿದ್ದಾರೆ. ಇದೀಗ ಕೆಲವು ಕಿಡಿಗೇಡಿಗಳು ಅನೆಕೆರೆ ಬಸದಿ ಮೊದಲು ನಮ್ಮ ಪೂಜಾಲಯವಾಗಿತ್ತು ಎಂದು ಅಸಂಬದ್ಧ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸುತ್ತಿದ್ದಾರೆ. ಆದರೆ ಇತಿಹಾಸದಲ್ಲಿ ಸ್ಪಷ್ಟವಾಗಿರುವ ವಿಚಾರವೊಂದನ್ನು ತಿರುಚಿ ಅದು ನಮ್ಮದಾಗಿತ್ತು ಎಂಬ ಸುಳ್ಳನ್ನು ಸೃಷ್ಠಿ ಮಾಡಿ ಸಮಾಜದ ಸಾಮರಸ್ಯವನ್ನು ಹಾಳು ಮಾಡಲೆಂದೇ ಅಥವಾ ದುರುದ್ದೇಶದಿಂದ ಭೈರವರಸರ ಕಾಲದಿಂದ ಮುಂದುವರೆದುಕೊಂಡು ಬಂದಿದ್ದ ಸಾಮರಸ್ಯದ ಭಾಂದವ್ಯಕ್ಕೆ ದಕ್ಕೆ ತರುವಂತಹ ಕಾರ್ಯವನ್ನು ಮಾಡುತ್ತಿರುವುದು ಖಂಡನೀಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಮತೀಯ ಸಾಮರಸ್ಯವನ್ನು ಕೆಡಿಸುವಂತಹ ಸುಳ್ಳು ಸಂದೇಶಗಳನ್ನು ಹರಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾರ್ಕಳ ಜೈನ ಮಠದ ಪರಮಪೂಜ್ಯ ಸ್ವಸ್ತಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ. ಕಾರ್ಕಳದ ನೈಜ ಇತಿಹಾಸವನ್ನು ತಿರುಚುವ ಪ್ರಯತ್ನ: ದಕ್ಷಿಣಕನ್ನಡ ಜೈನ ಯುವಜನ ಸಂಘ ರಿ., ಕಾರ್ಕಳ ಖಂಡನೆ ಪವಿತ್ರ ಸಾಮರಸ್ಯದ ಭೂಮಿಯಾದ ಕಾರ್ಕಳದಲ್ಲಿ ಧಾರ್ಮಿಕ, ಸಾಮಾಜಿಕ ಸಮನ್ವಯತೆಯನ್ನು ಹಾಳು ಮಾಡಲು ಕೆಲವು ಕಿಡಿಗೇಡಿಗಳು ಪ್ರಯತ್ನಿಸುತ್ತಿದ್ದು ಕಾರ್ಕಳದ ಆನೆಕೆರೆ ಬಸದಿ ಅದು ಜೈನರದ್ದಲ್ಲ, ಅದು ಹನುಮಂತ ದೇವಸ್ಥಾನವಾಗಿತ್ತು, ಅರಮನೆ ಆನೆಗಳು ನೀರು ಕುಡಿಯಲು ಮತ್ತು ಪಕ್ಷಿಗಳ ನೀರಡಿಕೆಗಾಗಿ ನಿರ್ಮಾಣವಾದ ಆನೆಕೆರೆ ಜೈನರದ್ದಲ್ಲ ಎಂದೂ, ಕಾರ್ಕಳ ಮತ್ತು ವೇಣೂರಿನ ಬಾಹುಬಲಿ ಕೆತ್ತಿರುವ ಐತಿಹಾಸಿಕ ಘಟನೆ ತಪ್ಪಿದೆಯೆಂದು ಉಲ್ಲೇಖಿಸಿ, ಕಾರ್ಕಳದ ನೈಜ ಇತಿಹಾಸವನ್ನು ತಿರುಚಿ ಬರೆದು ಸಾಮಾಜಿಕ ಜಾಲತಾಣಗಳ ಮೂಲಕ ಹರಿಯಬಿಟ್ಟು, ಮತಭೇದವನ್ನೂ, ಜಾತಿವೈಷಮ್ಯವನ್ನೂ ಹುಟ್ಟುಹಾಕುವ ಮೂಲಕ ಸಮಾಜವನ್ನು ತುಂಡರಿಸುವ ಕಾರ್ಯವನ್ನು ಮಾಡುತ್ತಿದ್ದು, ರಾಷ್ಟ್ರಹಿತದ ಕಾರ್ಯ ಮಾಡುತ್ತಿರುವ ಹಿಂದೂ ಸಂಘಟನೆಯ ಹೆಸರಿನಲ್ಲಿ, ಆ ಸಂಘಟನೆಯ ದ್ಯೇಯಗಳಿಗೂ ಮಸಿ ಬಳಿಯುವ ರೀತಿಯಲ್ಲಿ ಉದ್ದೇಶಪೂರ್ವಕವಾಗಿ ಜೈನ ಧರ್ಮವನ್ನು ಗುರಿಯಾಗಿಸಿಕೊಂಡು ಜೈನರ ಬಸದಿಗಳನ್ನು ತಮ್ಮವೆಂದು ಪ್ರತಿಪಾದಿಸುವ ಕುಕೃತ್ಯದ ವಿರುದ್ಧ ಜೈನ ಸಮಾಜ ಪತ್ರಿಕಾ ಪ್ರಕಟಣೆಯ ಮೂಲಕ ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ ಸಾವಿರಾರು ವರ್ಷಗಳಿಂದಲೂ ಜೈನಧರ್ಮ ಮತ್ತು ಆಳ್ವಿಕೆ ನಡೆಸಿದ ಜೈನ ರಾಜರು ಎಲ್ಲಾ ಧರ್ಮಗಳನ್ನು ಗೌರವಿಸಿ, ಪೋಷಿಸಿ, ಸರ್ವಧರ್ಮ ಸಮನ್ವಯತೆಯನ್ನು ಕಾಪಾಡಿಕೊಂಡು ಬಂದು ಈ ರಾಷ್ಟ್ರವು ಅನೇಕತೆಯಲ್ಲಿ ಏಕತೆಯೊಂದಿಗೆ ಇರುವಲ್ಲಿ ಶ್ರಮಿಸಿರುತ್ತಾರೆ. ಕಾರ್ಕಳದ ಇತಿಹಾಸವನ್ನು ನೋಡಿದಾಗಲೂ ಭೈರವರಸರ ವಂಶದಲ್ಲಿ ಬಂದ ಎಲ್ಲಾ ರಾಜರೂ, ಎಲ್ಲಾ ಧರ್ಮಗಳನ್ನೂ ಪೋಷಿಸಿ, ಸರ್ವಧರ್ಮ ಸಮನ್ವಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿರುತ್ತಾರೆ. ಅದಕ್ಕಾಗಿ ಸ್ವಧರ್ಮೀಯರೊಡನೆ ಯುದ್ಧವನ್ನು ಮಾಡಿರುವ ಸಂಗತಿಗಳು ಕೂಡಾ ಇವೆ. ಕಾರ್ಕಳವನ್ನು ಕಟ್ಟಿ ಬೆಳೆಸಿದ ಬೈರವರಸರು, ತಮ್ಮ ಸೀಮೆಯಲ್ಲಿ ಅನೇಕ ಬಸದಿಗಳು ಮತ್ತು ದೇವಸ್ಥಾನಗಳು, ಚರ್ಚ್‌ಗಳು, ಮಸೀದಿಗಳ ನಿರ್ಮಾಣಕ್ಕೆ ಸಹಕಾರ ನೀಡಿ, ಬಸದಿ, ದೇವಸ್ಥಾನಗಳ ನಿರ್ವಹಣೆಗೆ ಭೂಮಿಗಳನ್ನು ಉಂಬಳಿ ಬಿಟ್ಟ ಇತಿಹಾಸವೂ ಇದೆ. ಈ ಕುರಿತು ಇಂತಹ ಸುಳ್ಳು ಸಂದೇಶ ರವಾನೆಯ ವಿರುದ್ಧ ಕಾರ್ಕಳದ ಮತ್ತು ಜಿಲ್ಲೆಯ ಎಲ್ಲಾ ಜೈನ ಸಂಘ ಸಂಸ್ಥೆಗಳು, ಸಮಾಜದ ಹಿರಿಯರು, ವಿದ್ವಾಂಸರು, ಇತಿಹಾಸಕಾರರು ತೀವೃ ವಿರೋಧವನ್ನು ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ___________________________________________ ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement