ಶಿರಾ: ಚುನಾವಣಾ ಪೂರ್ವ ಸಮೀಕ್ಷಾ ವರದಿ

ಇಡೀ ರಾಜ್ಯದ ಗಮನ ಸೆಳೆದಿರುವ ಶಿರಾ ವಿಧಾನಸಭಾ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಿನ್ನೆಯೇ ತೆರೆ ಬಿದ್ದಿದ್ದು ಇಂದು ಮನೆಮನೆ ಪ್ರಚಾರ ನಡೆಯುತ್ತಿದೆ. ಈ ಮಧ್ಯೆ, ಶಿರಾದಲ್ಲಿ ಯಾರು ಗೆಲ್ಲಬಹುದು ಎಂಬ ಕುರಿತು ಹಲವು ಸಮೀಕ್ಷೆಗಳು ನಡೆಯುತ್ತಿದ್ದು www.kannadamedia.com ನಡೆಸಿರುವ ಸಮೀಕ್ಷೆಯಲ್ಲಿ ಶೇಕಡಾ 48.65 ರಷ್ಟು ಮತದಾರರು ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಪರ ಒಲವು ತೋರಿಸಿದ್ದಾರೆ. ಶಿರಾ ವಿಧಾನಸಭಾ ಕ್ಷೇತ್ರದಾದ್ಯಂತ ಬೂತ್ ಮಟ್ಟದಲ್ಲಿ 'ಕನ್ನಡ ಮೀಡಿಯಾ ಡಾಟ್ ಕಾಮ್' ನಡೆಸಿದ ಸಮೀಕ್ಷೆಯಲ್ಲಿ ಶೇಕಡಾ 48.65 ರಷ್ಟು ಜನರು ಕಾಂಗ್ರೆಸ್ ಪರ ಒಲವು ತೋರಿಸಿದ್ದರೆ, ಬಿಜೆಪಿ ಪರ ಶೇಕಡಾ 24.55 ರಷ್ಟು ಜನರು ಒಲವು ವ್ಯಕ್ತಪಡಿಸಿದ್ದಾರೆ ಮತ್ತು ಜೆಡಿಎಸ್ ಪರ ಶೇಕಡಾ 22.10 ರಷ್ಟು ಜನರು ಜನತೆ ಒಲವು ತೋರಿಸಿದ್ದಾರೆ. ಶೇಕಡಾ 4.70 ರಷ್ಟು ಜನ ಇತರ ಅಭ್ಯರ್ಥಿ ಗಳತ್ತ ಒಲವು ವ್ಯಕ್ತಪಡಿಸಿದ್ದಾರೆ. 247ಕಿ.ಮೀ ದೂರದ ಹೇಮಾವತಿಯ ನೀರನ್ನು ಯಾರೂ ಊಹಿಸದ ರೀತಿಯಲ್ಲಿ ತಂದು ಬರದ ನಾಡಾಗಿದ್ದ ಶಿರಾ ತಾಲ್ಲೂಕಿನಲ್ಲಿ ನೀರಿನ ಕ್ರಾಂತಿ ಮಾಡಿದ್ದಕ್ಕಾಗಿ ರಾಜ್ಯಾದ್ಯಂತ ಕೀರ್ತಿ ಪಡೆದಿರುವ ಜಯಚಂದ್ರರವರ ಅವಧಿಯಲ್ಲಿ ಕೃಷಿ ಕ್ಷೇತ್ರದಲ್ಲಿ, ರಸ್ತೆ, ಚರಂಡಿ, ಸೇತುವೆ ಮತ್ತಿತರ ವಿಚಾರದಲ್ಲಿ ಮತ್ತು ಶೈಕ್ಷಣಿಕವಾಗಿ, ದಾರ್ಮಿಕವಾಗಿ ಮುಂತಾದ ವಿಚಾರದಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದನ್ನು ಮತದಾರರು ನೆನಪು ಮಾಡಿಕೊಳ್ಳುತ್ತಿದ್ದಾರೆ ಮತ್ತು ಅವರ ಪರ ಒಲವು ವ್ಯಕ್ತಪಡಿಸಿದ್ದಾರೆ. ಹಿಂದಿನ ಅವಧಿಯಲ್ಲಿ ಶಾಸಕರಾಗಿದ್ದ ಜೆಡಿಎಸ್ ಪಕ್ಷದ ಶಾಸಕ ಬಿ.ಸತ್ಯನಾರಾಯಣರ ಅನಾರೋಗ್ಯ ಮತ್ತು ರಾಜ್ಯದಲ್ಲಿ ಅವರೇ ಪ್ರತಿನಿಧಿಸುವ ಪಕ್ಷ ಅಧಿಕಾರದಲ್ಲಿ ಇದ್ದರೂ ಕೂಡ ಕೆರೆಗೆ ನೀರು ತುಂಬಿಸುವ ಕುರಿತು ಒಲವು ವ್ಯಕ್ತಪಡಿಸದೆ ಉಳಿದು ಇದೀಗ ಚುನಾವಣೆಯ ಸಮಯದಲ್ಲಿ ಬಂದಿರುವ ಜೆಡಿಎಸ್ ನಾಯಕರ ಕುರಿತು ಮತದಾರರು ಬೇಸರ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡರ ದೊಡ್ಡಪ್ಪ ಮೂಡ್ಲೆಗೌಡರು ಶಾಸಕರಾಗಿ ಅವಧಿಯಲ್ಲಿ ಕದ್ರಳ್ಳಿ ಗ್ರಾಮದಲ್ಲಿ ದಲಿತ ಕಾಲೋನಿಗೆ ದುಷ್ಕರ್ಮಿಗಳು ಬೆಂಕಿಯಿಟ್ಟ ಪ್ರಕರಣ ಮತ್ತು ಅದರಲ್ಲಿ ಶಾಸಕರು ಶೋಷಿತರ ಪರ ನಿಲ್ಲದೆ ದುಷ್ಕರ್ಮಿಗಳ ಪರ ನಿಂತಿರುವ ವಿಚಾರದಲ್ಲಿ ಮತ್ತು ಆ ನಂತರ ಬಿಜೆಪಿ ಅಭ್ಯರ್ಥಿ ಯವರ ತಂದೆ ಸಿ.ಪಿ ಮೂಡ್ಲಗಿರಿಯಪ್ಪನಡೆಸಿದ್ದ ಜನವಿರೋದಿ ಕಾರ್ಯಗಳ ಕುರಿತು ಮತ್ತು ನೀರು ತರುವ ವಿಚಾರದಲ್ಲಿ ಕ್ಷೇತ್ರದ ಹಿತಾಸಕ್ತಿ ಮರೆತು ರಾಜಕಾರಣ ಮಾಡಿದ ಕುರಿತು ಬಹಳಷ್ಟು ಜನರಲ್ಲಿ ಅತಿಯಾದ ಬೇಸರ ಇರುವುದು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. 2008 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ 45.02% (60,793) ಓಟು ಪಡೆದು ವಿಜಯಿಯಾಗಿದ್ದರೆ, ಜೆಡಿಎಸ್ ಅಭ್ಯರ್ಥಿ ಬಿ.ಸತ್ಯನಾರಾಯಣ 25.40% (34,297) ಓಟು ಪಡೆದಿದ್ದರು ಮತ್ತು ಬಿಜೆಪಿ ಅಭ್ಯರ್ಥಿ ಬಿ.ಕೆ ಮಂಜುನಾಥ 17.79% (24,025)ಓಟು ಪಡೆದಿದ್ದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ 46.47% (74,089)ಓಟು ಪಡೆದು ವಿಜಯಿಯಾಗಿದ್ದರೆ, ಜೆಡಿಎಸ್‌ನ ಬಿ ಸತ್ಯನಾರಾಯಣ 37.26% (59,408) ಓಟು ಪಡೆದಿದ್ದರು ಮತ್ತು ಬಿಜೆಪಿ ಅಭ್ಯರ್ಥಿ ಬಿ.ಕೆ ಮಂಜುನಾಥ್ 11.84% (18,884) ಓಟು ಪಡೆದಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಬಿ.ಸತ್ಯನಾರಾಯಣ 41.24% (74,338) ಓಟು ಪಡೆದು ವಿಜಯಿಯಾಗಿದ್ದರೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ಬಿ ಜಯಚಂದ್ರರವರು 35.49% (63973)ಓಟು ಪಡೆದು ಪರಾಜಿತರಾಗಿದ್ದರು ಮತ್ತು ಬಿಜೆಪಿಯ ಎಸ್‌.ಆರ್ ಗೌಡ ಕೇವಲ 9.41% (16959) ಓಟು ಪಡೆದಿದ್ದರು. __________________________________ ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com