Advertisement

ಅತ್ಯಾಚಾರವಾಗಿರುವುದು ಪ್ರಜಾಪ್ರಭುತ್ವದ ಮೌಲ್ಯಗಳದ್ದು, ಪಲ್ಲಂಗದಲ್ಲಿ ಬೆತ್ತಲಾಗಿದ್ದು ಇವತ್ತಿನ ಮಾನಗೆಟ್ಟ ರಾಜಕೀಯ ವ್ಯವಸ್ಥೆ!

Advertisement

ಬರಹ- ದಿನೇಶ್ ಕುಮಾರ್ ಎಸ್.ಸಿ (ಲೇಖಕರು ಸಾಮಾಜಿಕ ಚಿಂತಕರು) ನಿಜ, ಇಬ್ಬರು ಪ್ರಾಪ್ತ ವಯಸ್ಕರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಅದು ಅಪರಾಧವಲ್ಲ. ಇಲ್ಲಿ ಇವರಿಬ್ಬರ ನಡುವೆ ಸಮ್ಮತಿಯ ಸೆಕ್ಸೇ ನಡೆದಿರುವ ಹಾಗಿದೆ. ಒಪ್ಪೋಣ. ಆದರೆ ಇದನ್ನು ಮೀರಿದ ಅಸಹ್ಯಗಳು ಇಲ್ಲಿ ಜರುಗಿವೆ. ಅತ್ಯಾಚಾರವಾಗಿರುವುದು ಪ್ರಜಾಪ್ರಭುತ್ವದ ಮೌಲ್ಯಗಳದ್ದು, ಕರ್ನಾಟಕದ ಅಂತಃಸಾಕ್ಷಿಯದ್ದು.. ಪಲ್ಲಂಗದಲ್ಲಿ ಬೆತ್ತಲಾಗಿದ್ದು ಇವತ್ತಿನ ಮಾನಗೆಟ್ಟ ರಾಜಕೀಯ ವ್ಯವಸ್ಥೆ. ಅವನು ಮಾತಾಡಿದ್ದನ್ನು ಕೇಳಿದಿರಾ? ತನ್ನ ಅರ್ಧವಯಸ್ಸಿನ ಹೆಣ್ಣುಮಗಳ ಜತೆ ಬೆತ್ತಲಾಗಿ ಅವನು ಇಡೀ ದೇಶದ ವಿಷಯವನ್ನೇ ಮಾತಾಡುತ್ತಾನೆ. ಮುಖ್ಯಮಂತ್ರಿ ಭ್ರಷ್ಟ, ಅವನನ್ನು ಬದಲಿಸುತ್ತೇನೆ ಎನ್ನುತ್ತಾನೆ. ಬೆಳಗಾವಿಯೇ ಒಂದು ರಾಜ್ಯ ಎನ್ನುತ್ತಾನೆ. ಕನ್ನಡಿಗರು ಬೋಳಿಮಕ್ಕಳು ಎನ್ನುತ್ತಾನೆ. ಅಧಿಕಾರವೆಂಬುದು, ಮಂತ್ರಿಗಿರಿಯೆಂಬುದು, ಸರ್ಕಾರವೆಂಬುದು ಇವನ ಹಾಸಿಗೆಯಲ್ಲಿ ಬೆತ್ತಲಾಗಿ ಬಿದ್ದಿದೆಯೆಂಬಂತೆ ಇವನು ಮಾತಾಡುತ್ತಾನೆ. ಏನಂತೀರಿ ಇದಕ್ಕೆಲ್ಲ? ಹಣ ಮತ್ತು ಅಧಿಕಾರದ ದುರಹಂಕಾರ ಹೀಗೆಲ್ಲ ಮಾಡಿಸುತ್ತದಾ? ಇದಕ್ಕಿಂತ ಮೀರಿದ ವಿಷಯಗಳೇನಾದರೂ ಇರಬಹುದಾ? ಇಡೀ ರಾಜ್ಯವೇ ಅವನಿಗೆ ಭೋಗದ ವಸ್ತು. ಯಾರನ್ನು, ಯಾವುದನ್ನು, ಹೇಗೆ, ಎಲ್ಲಿ ಬೇಕಾದರೂ ಕೆಡವಿ ತೀಟೆ ತೀರಿಸಿಕೊಳ್ಳುವ ಚಟ. ಒಂದು ಮಾನಗೆಟ್ಟ ರಾಜಕೀಯ ಪಕ್ಷ ಒಂದು ರಾಜ್ಯದ ಅಧಿಕಾರ ಹಿಡಿಯಲು ಯಾವ ನೀಚ ಹಂತಕ್ಕಾದರೂ ತಲುಪಲು ಸಿದ್ಧವಿರುವಾಗ ಇಂಥ ದುರಹಂಕಾರಿಗಳು ಹುಟ್ಟಿಕೊಳ್ಳುತ್ತಾರೆ. ಇವನು ಸರ್ಕಾರ ನನ್ನ ಸೊಂಟದ ಕೆಳಗಿನ ಕೂದಲು ಎನ್ನುತ್ತಾನೆ. ಕೆಡವಿದ ಸರ್ಕಾರವನ್ನೂ, ತಾನೇ ಅಧಿಕಾರಕ್ಕೆ ತಂದ ಸರ್ಕಾರವನ್ನೂ! ನಾವಾದರೂ ಹೇಗಿದ್ದೇವೆ ಹೇಳಿ. ಭವ್ಯ ಕರ್ನಾಟಕದ ಹೆಮ್ಮೆಯ ಪ್ರಜೆಗಳು. ಹಿಂದೆ ಥರಾವರಿ ಅತ್ಯಾಚಾರಗಳ‌ನ್ನು ಮಾಡಿ ಬೆತ್ತಲಾದವರನ್ನು ಮತ್ತೆ ಮತ್ತೆ ಗೆಲ್ಲಿಸಿದವರಲ್ಲವೇ ನಾವು? ಅವನ್ಯಾರದ್ದೋ ಬರ್ತ್ ಡೇ ದಿನ ಕೊಡಪಾನಗಟ್ಟಲೆ ಹಾಲು ಸುರಿದು ಅಭಿಷೇಕ ಮಾಡಿದವರಲ್ಲವೇ ನಾವು? ನಾವೇ ಹೀಗಿರುವಾಗ ಅವರಿಗೆ ಇನ್ಯಾವ ಭೀತಿ ಹೇಳಿ? ಕಳೆದ ಚುನಾವಣೆ ಸಂದರ್ಭದಲ್ಲಿ ಸರಿಯಾಗಿ ಮತದಾನದ ಹಿಂದಿನ ದಿನ ಒಬ್ಬನ ಆಡಿಯೋ ವೈರಲ್ ಆಗಿತ್ತು. ಜನ ನೈತಿಕವಾಗಿ ಯೋಚಿಸಿದ್ದರೆ ಅವನ ಡಿಪಾಸಿಟ್ ಹೋಗಬೇಕಿತ್ತು. ಹಾಗಾಯಿತಾ? ಇಲ್ಲ, ಮತ್ತೆ ಅವನೇ ಗೆದ್ದು ಬಂದ. ಇನ್ನಷ್ಟು ಅಸಹ್ಯ ಮಾಡು ಎಂದು ಅವನಿಗೆ ನಾವೇ ಕೊಟ್ಟ ಪರವಾನಗಿಯಲ್ಲವೇ ಇದು? ಈ 'ಸಾಹುಕಾರ'ನ ಕಥೆಯೂ ಅಷ್ಟೆ. ಆಪರೇಷನ್ ಕಮಲದ ಸಂದರ್ಭದಲ್ಲೇ ಇವನ ಆಡಿಯೋ ಹೊರಟಿತ್ತು. ಯಾರೂ ಏನೂ ಮಾಡಲಾಗಲಿಲ್ಲ. ಇಂಥವೆಲ್ಲ ಅವನಿಗೆ ಕೊರಳಿಗೆ ಬಿದ್ದ ಪದಕ ಎನಿಸಿರಬೇಕು. ಸರ್ಕಾರ ಕೆಡವಿ ಮಂತ್ರಿಯಾದ ಮೇಲೂ ಅದನ್ನೇ ಮುಂದುವರೆಸಿದ. ಇವನ ಕ್ಷೇತ್ರದ ಜನರೂ ಹಾಗೇ ಇದ್ದಾರಲ್ಲವೇ? ಇವನಂಥವರಿಗೆ ಮಂಡಿಯೂರಿ ಕುಳಿತು ಪರಾಕು ಹೇಳುತ್ತಲೇ ಇರುತ್ತಾರೆ. ಹೀಗಾಗಿ ಇವನ ಕೂದಲು ಯಾರೂ ಕಿತ್ತುಕೊಳ್ಳಲಾಗದು. ಸಾರ್ವಜನಿಕವಾಗಿ ನಮಗೆ ಯಾವುದು ಹೇಸಿಗೆ ಎನಿಸುತ್ತದೋ ಅದನ್ನೇ ಗರ್ವದಿಂದ ಹೇಳಿಕೊಳ್ಳುವ ಜನರೂ ಇದ್ದಾರೆ. ಮೇಲಾಗಿ ಇವನನ್ನು ಸಾರಾಸಗಟಾಗಿ ಕೊಂಡುಕೊಂಡಿರುವ ಪಕ್ಷದವರಿಗೂ ಇವನ ಅನಿವಾರ್ಯತೆ ಇದೆ. ಇವನ ಫರ್ಮಾನುಗಳನ್ನು ಸ್ವೀಕರಿಸುವ ಒಂದು ಡಜನ್ ಎಂಎಲ್ಎಗಳು ರಾಜೀನಾಮೆ ಕೊಟ್ಟು ಸರ್ಕಾರ ಕೆಡವಿಬಿಟ್ಟರೆ ಎಂಬ ಭೀತಿ ಅವರಿಗೆ. ಕೊನೆಗೆ ಇದೆಲ್ಲ ಎಲ್ಲಿಗೆ ಬಂದು ತಲುಪುತ್ತದೆ ಗೊತ್ತಾ? ಇದೆಲ್ಲ ಗಬ್ಬು ಗಲೀಜುಗಳೆಲ್ಲ ಸಾಮಾನ್ಯವಾಗಿಹೋಗುತ್ತವೆ. ಇವತ್ತು ಇವನು, ನಾಳೆ ಇನ್ನೊಬ್ಬ, ಇನ್ನೊಂದು ದಿನ ಇನ್ನೊಬ್ಬ. Everything is going to be normalized. ಕೊನೆಗೆ ಇದೂ ಕೂಡ ಒಂದು ಥರ್ಡ್ ಗ್ರೇಡ್ ಪಾರ್ನ್ ಸರಕಾಗಿ ಉಳಿಯುತ್ತದೆ. ಇಂಥ ಸಾಹುಕಾರರು ಇಂಥ ವಿಡಿಯೋಗಳ ಕಾಪಿ ರೈಟ್ ಕ್ಲೇಮ್ ಮಾಡಿ ಸಂಭಾವನೆಗೆ ಹಲ್ಲುಗಿಂಜಿ ನಿಲ್ಲಬಹುದು ಮುಂದೊಂದು ದಿನ. ಕೊನೆಗೊಂದು ಮಾತು: ಪ್ರೇಮವೆಂಬುದು ಒಂದು ಸುಂದರ ಅನುಭೂತಿ. ಇವನಿಗೆ ಪ್ರೇಮವೆಂಬುದು ಗೊತ್ತಿರಲು ಸಾಧ್ಯವೇ ಇಲ್ಲ. ಅದು ಹಾಳಾಗಿ ಹೋಗಲಿ. ಈತ ಕಾಮವನ್ನೂ ಅಪಮಾನಿಸಿದ್ದಾನೆ. - ದಿನೇಶ್ ಕುಮಾರ್ ಎಸ್.ಸಿ __________________________________ ►► ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG-) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►► ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement