Advertisement

'ಕನ್ಹಯ್ಯಕುಮಾರ ಕಾಂಗ್ರೆಸ್ ಸೇರ್ಪಡೆ- ದೇಶದ ಯುವಕರಲ್ಲಿ ಗರಿಗೆದರಿದ ಉತ್ಸಾಹ'

Advertisement

ಬರಹ: ಡಾ. ಜೆ. ಎಸ್ ಪಾಟೀಲ (ಲೇಖಕರು ಜನಪರ ಚಿಂತಕರು) ಕಳೆದ ವಾರ ಗುಜರಾತಿನ ಸ್ವತಂತ್ರ ಶಾಸಕ ಜಿಗ್ನೇಶ್ ಜೊತೆಗೂಡಿ ಬಿಹಾರಿನ ಕನ್ಹಯ್ಯಕುಮಾರ ಕಮ್ಯುನಿಸ್ಟ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದಾನೆ. ಆತ ಕಾಂಗ್ರೆಸ್ ಸೇರಿದ ಮೇಲೆ ಒಂದುಕಡೆ ಕಾಂಗ್ರೆಸ್ ಪಕ್ಷದ ಯುವ ಸಮೂಹ ಅತ್ಯಂತ ಆತ್ಮವಿಶ್ವಾಸದಿಂದ ಬೀಗುತ್ತಿದ್ದರೆˌ ಇನ್ನೊಂದು ಕಡೆ ಕಮ್ಯುನಿಸ್ಟ್ ಕರ್ಮಠರು ಕನ್ಹಯ್ಯನ ಮೇಲೆ ಕತ್ತಿ ಮಸೆಯುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮೂರು ದಶಕಕ್ಕೂ ಹೆಚ್ಚು ಅವಧಿ ಅಧಿಕಾರ ಅನುಭವಿಸಿರುವ ಕಮ್ಯುನಿಸ್ಟರು ಅಲ್ಲಿ ಹೇಳ ಹೆಸರಿಲ್ಲದಂತಾಗಿದ್ದಾರೆ. ಕಮ್ಯುನಿಸ್ಟ್ ಸಿದ್ಧಾಂತವೆಂದರೆ ಕೇವಲ ಟ್ರೇಡ್ ಯುನಿಯನ್ ಚಟುವಟಿಕೆಯ ಮಟ್ಟಕ್ಕಿಳಿಸಿದ ಆ ಪಕ್ಷದ ನಾಯಕರು ಪ್ರಾಯೋಗಿಕ ಅಧಿಕಾರ ರಾಜಕಾರಣಕ್ಕೆ ವ್ಯತಿರಿಕ್ತವಾಗಿ ವರ್ತಿಸುತ್ತ ಅತಿಯಾದ ಸೈದ್ಧಾಂತಿಕ ಭಾರದಿದ ಕುಸಿದುಹೋಗಿದ್ದಾರೆ. ಕಮ್ಯುನಿಸ್ಟ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲದ ಪರಿಸ್ಥಿತಿ ಇರುವುದನ್ನು ಮತ್ತು ಅಧಿಕಾರ ರಾಜಕೀಯದಿಂದ ವಿಮುಖಗೊಂಡ ಹಳೆ ತಲೆಗಳ ಯಜಮಾನಿಕೆಯು ಅಲ್ಲಿ ಯುವಕರನ್ನು ಉಸಿರುಗಟ್ಟಿಸಿದ್ದು ನಿಜ. ಕನ್ಹಯ್ಯನ ವಿವಿ ಕ್ಯಾಂಪಸ್ ಶೈಲಿಯ ರಾಜಕೀಯವು ಕಾಂಗ್ರೆಸ್‌ ಪಕ್ಷಕ್ಕೆ ಯುವಕರನ್ನು ಸೆಳೆಯಬಲ್ಲುದೆ ಎನ್ನುವುದು ಈಗ ನಮ್ಮೆಲ್ಲರೆದುರಿಗಿರುವ ಪ್ರಶ್ನೆ. ಬಿಹಾರದಲ್ಲಿ ಕಳೆದ ಮೂರು ದಶಕಗಳಿಂದ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಕನ್ಹಯ್ಯ ಆಗಮನದಿಂದ ಅನುಕೂಲವಾಗಬಲ್ಲುದೆ ಎನ್ನುವ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು. ಒಂದು ಕಾಲದಲ್ಲಿ ಪಾಟ್ನಾದ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯಾದ ಸಡಕತ್ ಆಶ್ರಮದ ಕಾಂಗ್ರೆಸ್ ಪಕ್ಷದ ಕಚೇರಿ ಹರಿಯುವ ಗಂಗೆಯಂತೆ ಗೋಚರಿಸುತ್ತಿತ್ತು. ಕಳೆದ ಮೂರು ದಶಕಗಳಲ್ಲಿ ಪಕ್ಷದ ಕಚೇರಿ ಬಹುತೇಕ ನಿರ್ಜನವಾಗಿದೆ. ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿನ ಮೂರು ದಶಕಗಳ ಹಿಂದಿನ ವಾತಾವರಣ ಈಗ ಬಿಜೆಪಿ, ಜೆಡಿಯು ಮತ್ತು ಆರ್‌ಜೆಡಿ ಕಚೇರಿಗಳಿರುವ ಬೀರ್ ಚಂದ್ ಪಟೇಲ್ ಪಥಕ್ಕೆ ಸ್ಥಳಾಂತರಗೊಂಡಿದೆ. ಆದರೆ ದೀರ್ಘ ಕಾಲದ ನಂತರ ಇದೇ ಮೊದಲ ಬಾರಿಗೆ, ಸಡಕತ್ ಆಶ್ರಮವು ದೇಶದ ಗಮನ ಸೆಳೆಯುತ್ತಿದೆ. ಕಾಂಗ್ರೆಸ್ ಪಕ್ಷದ ಕಚೇರಿಯು ಕನ್ಹಯ್ಯನ ಪ್ರವೇಶಕ್ಕಾಗಿ ಕಾಯುತ್ತಿರುವಂತಿದೆ. ದಿಲ್ಲಿಯ ಪ್ರತಿಷ್ಠಿತ ಜೆಎನ್ ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷನಾಗಿರುವ ಕನ್ಹಯ್ಯಕುಮಾರನನ್ನು ದಿಲ್ಲಿ ಪೋಲಿಸರು ಫೆಬ್ರವರಿ 2016 ರಂದು ದೇಶದ್ರೋಹದ ಪ್ರಕರಣದಲ್ಲಿ ಬಂಧಿಸಿದ್ದರು. ಆನಂತರದ ದಿನಗಳಲ್ಲಿ ಮೋದಿ ಸರಕಾರದ ದಮನಕಾರಿ ನೀತಿಗಳ ವಿರುದ್ಧ ಕನ್ಹಯ್ಯ ಮೊಳಗಿಸಿದ ಅಜಾದಿ ಘೋಷಣೆ ದೇಶದಾದ್ಯಂತ ಸಂಚಲನವನ್ನೇ ಉಂಟುಮಾಡಿತ್ತು. ಸೆಪ್ಟೆಂಬರ್ ೨೮ ರಂದು ದಿಲ್ಲಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದ ದಿನ ಮಾಧ್ಯಮಗಳೊಂದಿಗೆ ಮಾತನಾಡಿದ ಕನ್ಹಯ್ಯ "ನಾನು ದೇಶದ ಅತ್ಯಂತ ಹಳೆಯ ಹಾಗು ಪ್ರಜಾಪ್ರಭುತ್ವವಾದಿ ಪಕ್ಷವನ್ನು ಆರಿಸಿಕೊಂಡಿದ್ದೇನೆ. ಕಾಂಗ್ರೆಸ್ ಪಕ್ಷ ಇಲ್ಲದಿದ್ದರೆ ಈ ದೇಶವೂ ಇರುವುದಿಲ್ಲ ಎಂದು ಅನೇಕ ಯುವಕರು ಭಾವಿಸುತ್ತಾರೆ”ಎಂದು ಹೇಳಿದ್ದಾನೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮೇಲೆ ದಾಳಿ ಮಾಡುವ ಸುತ್ತ ಸುತ್ತಿಕೊಂಡಿರುವ ಎಡ ಪಕ್ಷಗಳಲ್ಲಿ ಒಂದು ನಿರ್ದಿಷ್ಟ ನಿರ್ವಾತ ಸೃಷ್ಟಿಯಾಗಿದ್ದಂತೂ ನಿಜ. ಬಿಹಾರ ರಾಜ್ಯದ "ಮಿನಿ ಮಾಸ್ಕೋ" ಅಥವಾ "ಬಿಹಾರದ ಲೆನಿನ್ಗ್ರಾಡ್" ಎಂದು ಕರೆಯಲಾಗುತ್ತಿದ್ದ ಬೇಗುಸರಾಯಿಯ ಈ ಹುಡುಗ ಭಾರತೀಯ ಕಮ್ಯುನಿಸ್ಟ್ ಪಾರ್ಟಿ (ಸಿಪಿಐ) ಈ ಪ್ರದೇಶದ ಮೇಲೆ ಹೊಂದಿದ ಹಿಡಿತವನ್ನು ಕಾಂಗ್ರೆಸ್ ಪಕ್ಷ ಸೇರುವ ಮೂಲಕ ಒಂದೇ ಏಟಿಗೆ ಸಡಿಲುಗೊಳಿಸಿಬಿಟ್ಟ. ಶಾಲಾ ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯ ಕ್ಷೇತ್ರಕ್ಕೆ ಪರಿಚಯಿಸಲ್ಪಟ್ಟ ಕನ್ಹಯ್ಯ ಪಾಟ್ನಾದ ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ. ಕನ್ಹಯ್ಯ ೨೦೦೪ ರಲ್ಲಿ ತನ್ನ ಪದವಿ ವ್ಯಾಸಂಗಕ್ಕಾಗಿ ಪಾಟ್ನಾದ ವಾಣಿಜ್ಯ, ಕಲೆ ಮತ್ತು ವಿಜ್ಞಾನ ಕಾಲೇಜಿಗೆ ಸೇರುವ ಮುನ್ನ ಬೆಗುಸರಾಯಿಯ ಬರೌನಿಯಲ್ಲಿರುವ ಆರ್ ಕೆ ಸಿ ಪ್ರೌಢಶಾಲೆಯಲ್ಲಿ ಓದು ಮುಗಿಸಿದ್ದ. ೨೦೧೫ ರಲ್ಲಿ ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ಆಯ್ಕೆಯಾದಾಗ ಕನ್ಹಯ್ಯ ತನ್ನ ರಾಜಕೀಯ ಆಸಕ್ತಿಯ ಕುರಿತು ಹೇಳಿಕೊಂಡಿದ್ದ. ಐಪಿಟಿಎ (ಇಂಡಿಯಾ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್) ಆಯೋಜಿಸುತ್ತಿದ್ದ ಅನೇಕ ನಾಟಕಗಳಲ್ಲಿ ನಟಿಸುವಾಗ ಅಧ್ಯಯನ ಮಾಡುವ ಅವಕಾಶ ದೊರೆತ ಬಗ್ಗೆ ಹಾಗು ಮಾರ್ಕ್ಸ್‌ವಾದದ ಪರಿಚಯವಾದ ಬಗ್ಗೆ ಕನ್ಹಯ್ಯ ಹೇಳಿಕೊಂಡಿದ್ದ. ತಾನು ಸಾಮಾಜಿಕ ಹಾಗು ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಲು ಆರಂಭಿಸಿದಾಗ ಎಐಎಸ್‌ಎಫ್ (ಅಖಿಲ ಭಾರತ ವಿದ್ಯಾರ್ಥಿ ಫೆಡರೇಶನ್, ಸಿಪಿಐನ ಯುವ ಘಟಕ) ಕಾರ್ಯಕರ್ತರ ಸಂಪರ್ಕಕ್ಕೆ ಬಂದುˌ ಮುಂದೆ ೨೦೦೨ ರಲ್ಲಿ ಶಾಲಾ ದಿನಗಳಲ್ಲಿ ಆ ವಿದ್ಯಾರ್ಥಿ ಸಂಘಟನೆಯ ಸದಸ್ಯನಾಗಿರುವ ಕುರಿತು ಕನ್ಹಯ್ಯ ೨೦೧೫ ರಲ್ಲಿ ಪತ್ರಿಕೆಗಳಿಗೆ ಹೇಳಿದ್ದ. ನಳಂದ ಮುಕ್ತ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ನಂತರ, ಕನ್ಹಯ್ಯಾ ದೆಹಲಿಗೆ ತೆರಳಿದ ತರುವಾಯ ೨೦೧೧ ರಲ್ಲಿ ಆಫ್ರಿಕನ್ ಅಧ್ಯಯನ ಕೇಂದ್ರದಲ್ಲಿ ಎಂಫಿಲ್‌ ಪದವಿಗಾಗಿ ಜೆಎನ್‌ಯು ಸೇರಿದ. ೨೦೧೯ ರಲ್ಲಿ ಆತ "ದಕ್ಷಿಣ ಆಫ್ರಿಕಾದಲ್ಲಿ ವಸಹಾತುಶಾಹಿ ವಿಮೋಚನೆ ಮತ್ತು ಸಾಮಾಜಿಕ ಪರಿವರ್ತನೆಯ ಪ್ರಕ್ರಿಯೆ, ೧೯೯೪-೨೦೧೫" ಎಂಬ ವಿಷಯದ ಮೇಲೆ ಪ್ರಬಂಧ ಮಂಡಿಸಿ ತನ್ನ ಪಿಎಚ್‌ಡಿ ಪದವಿಯನ್ನು ಪೂರ್ಣಗೊಳಿಸಿದ್ದ. ಈಗ ಕನ್ಹಯ್ಯ ಭಾರತದ ರಾಜಕೀಯ ಕ್ಷೇತ್ರದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಯುಥ್ ಐಕಾನ್ ಎಂದೇ ರಾಜಕೀಯ ವಿಶ್ಲೇಷಕರು ಭಾವಿಸಿದ್ದಾರೆ. ಸಿಪಿಐ ತ್ಯಜಿಸಿ ಈಗ ಕಾಂಗ್ರೆಸ್ ಸೇರಿರುವ ಕನ್ಹಯ್ಯ ಆ ಪಕ್ಷದಲ್ಲಿ ತನ್ನ ಸ್ವಾಭಾವಿಕ ವೃತ್ತಿಜೀವನದ ಪ್ರಗತಿಯನ್ನು ಅರಸುತ್ತಿದ್ದಾನೆ. ಕಾಂಗ್ರೆಸ್ ಪಕ್ಷದಲ್ಲಿ ಆತನ ಯಶಸ್ಸು ಕೇವಲ ಆತನ ವಾಕ್ ಚಾತುರ್ಯವನ್ನಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಬಿಜೆಪಿಯ ಅವನತಿಯ ಘಟನೆಗಳನ್ನು ಕೂಡ ಅವಲಂಬಿಸಿದೆ. ೧೯೬೦ ರ ದಶಕದ ಮಧ್ಯಭಾಗದಿಂದ ೧೯೯೦ ರ ದಶಕದ ಅಂತ್ಯದವರೆಗೆ ಸಿಪಿಐ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಬಿಹಾರದಲ್ಲಿ ತುರುಸಿನ ಸ್ಪರ್ಧೆ ಇರುತ್ತಿತ್ತು. ಆದರೆ ಬದಲಾದ ರಾಜಕೀಯ ಸಮೀಕರಣಗಳನುಸಾರ ಈಗ ಎರಡೂ ಪಕ್ಷಗಳು ಪರಸ್ಪರ ಸಹಜ ಒಡಂಬಡಿಕೆ ಹೊಂದಿವೆ. ಬಿಜೆಪಿ ದೇಶಾದ್ಯಂತ ತನ್ನ ಪ್ರತಿಗಾಮಿತನˌ ಕೋಮುವಾದ ಮತ್ತು ತೀವ್ರ ಬಂಡವಾಳಶಾಹಿ ದೋರಣೆಯಿಂದ ಜನಹಿತಕ್ಕೆ ಮಾರಕವಾಗಿ ಪರಿಣಮಿಸಿರುವಾಗ ಕಾಂಗ್ರೆಸ್ ಮತ್ತು ಎಡಪಕ್ಷಗಳಿಗೆ ರಾಜಕೀಯ ಹೊಂದಾಣಿಕೆ ಆ ಉಭಯ ಪಕ್ಷಗಳ ಅಸ್ತಿತ್ವ , ದೇಶದ ಜನತಂತ್ರ ಹಾಗು ಸಂವಿಧಾನಗಳ ಅಸ್ತಿತ್ವಕ್ಕಾಗಿ ಅನಿವಾರ್ಯ ಕೂಡ. ಜೆಎನ್‌ಯುನಲ್ಲಿ ಕನ್ಹಯ್ಯನ ಅನೇಕ ಸಮಕಾಲೀನ ವಿದ್ಯಾರ್ಥಿ ಮಿತ್ರರು ಹಾಗು ಆತ ವಾಸವಾಗಿದ್ದ ಬ್ರಹ್ಮಪುತ್ರ ಹಾಸ್ಟೆಲ್‌ನಲ್ಲಿ ಆತನ ನಿಕಟವರ್ತಿಗಳಾಗಿದ್ದ ಅನೇಕರು ಕನ್ಹಯ್ಯಕುಮಾರನ ಕಾಂಗ್ರೆಸ್‌ ಪಕ್ಷ ಸೇರ್ಪಡೆ ಕುರಿತು ಅರ್ಥಮಾಡಿಕೊಂಡಿದ್ದಾರೆ. ಅಂದು ಕನ್ಹಯ್ಯ ನೇತೃತ್ವದಲ್ಲಿ ನಡೆದ ಚಳುವಳಿಗೆ ಸಿಕ್ಕ ಬೆಂಬಲವು ವಿವಿ ಆವರಣ ಅಥವಾ ನಿರ್ದಿಷ್ಟ ವಿದ್ಯಾರ್ಥಿ ಸಂಘಟನೆಗಳನ್ನು ಮೀರಿ ವಿಸ್ತರಿಸಿತ್ತು. ಆ ವಿಶಾಲವಾದ ಪ್ರಗತಿಪರ ಕಾರ್ಯಸೂಚಿಯ ನಿರೂಪಕರೆಂದು ಗುರುತಿಸಿಕೊಂಡಿರುವ ವಿವಿಯ ಮಾಜಿ ವಿದ್ಯಾರ್ಥಿ ನಾಯಕರು ಆ ಪ್ರಗತಿಪರ ದೃಷ್ಟಿಕೋನವನ್ನು ಕನ್ಹಯ್ಯ ಹೊಂದಿರುವ ವರೆಗೆ ನಾವು ಕನ್ಹಯ್ಯನಿಗೆ ಶುಭ ಹಾರೈಸುತ್ತೇವೆ ಎನ್ನುತ್ತಾರೆ. ಕನ್ಹಯ್ಯನ ಹಾಸ್ಟೆಲ್ ಸಹಪಾಠಿ ಮತ್ತು ಸ್ನೇಹಿತನೊಬ್ಬ "ಕನ್ಹಯ್ಯ ಅತ್ಯಂತ ಮಹತ್ವಾಕಾಂಕ್ಷಿ ವ್ಯಕ್ತಿ, ಮತ್ತು ಆತನ ಸಾಮರ್ಥ್ಯಕ್ಕೆ ತಕ್ಕ ಮಹತ್ವಾಕಾಂಕ್ಷೆ ಆತ ಹೊಂದುವುದು ಸಹಜ. ಕಳೆದ ೪-೫ ವರ್ಷಗಳಲ್ಲಿ, ವಿಶೇಷವಾಗಿ ಆತ ವಿವಿ ಕ್ಯಾಂಪಸ್‌ನಿಂದ ಹೊರಬಂದು ನೆಲದ ನೈಜತೆಯನ್ನು ನೋಡಲಾರಂಭಿಸಿದ ನಂತರ, ಪಕ್ಷದ (ಸಿಪಿಐ) ರಚನೆ ಮತ್ತು ಅದರ ಸೈದ್ಧಾಂತಿಕ ಬಿಗಿತದ ಕುರಿತು ಆತನಲ್ಲಿ ಸ್ವಲ್ಪ ನಿರಾಶೆ ಉಂಟಾಗಿತ್ತು" ಎಂದಿದ್ದಾನೆ. ಕನ್ಹಯ್ಯ ಬಯಸಿದಂತೆ ಸಮಾಜದಲ್ಲಿ ಬದಲಾವಣೆಗಳನ್ನು ಮಾಡಲು ಆ ಪಕ್ಷದಲ್ಲಿ ಆತನಿಗೆ ಸಾಧ್ಯವಾಗಲಿಲ್ಲ ಎನ್ನುತ್ತಾರೆ ಆತನ ಅನೇಕ ಮಿತ್ರರು. ಕನ್ಹಯ್ಯನ ಆಪ್ತ ಸ್ನೇಹಿತ ಮತ್ತು ಹಾಸ್ಟೆಲ್ ಸಹಪಾಠಿಗಳಲ್ಲಿ ಒಬ್ಬನಾದ ಅನ್ಶುಲ್ ತ್ರಿವೇದಿ ಕೂಡ ಕನ್ಹಯ್ಯನ ಜೊತೆಗೆ ಇದೇ ಸೆಪ್ಟೆಂಬರ್ ೨೮ ರಂದು ಕಾಂಗ್ರೆಸ್ ಪಕ್ಷ ಸೇರಿದ್ದಾನೆ. ಕೆಲವು ಪತ್ರಿಕಾ ವರದಿಗಳ ಪ್ರಕಾರ ಕನ್ಹಯ್ಯ ಕಾಂಗ್ರೆಸ್ ಪಕ್ಷ ಸೇರುವ ನಿರ್ಧಾರವನ್ನು ತ್ರಿವೇದಿ ಹೀಗೆ ಹೇಳುತ್ತಾನೆ, "ದೇಶದ ಸುಮಾರು ೨೦೦ ಸಂಸದೀಯ ಕ್ಷೇತ್ರಗಳಲ್ಲಿ, ಕಾಂಗ್ರೆಸ್ ಪಕ್ಷ ಮಾತ್ರ ಬಿಜೆಪಿಗೆ ಸರಿಸಮವಾಗಿ ವಿರೋಧಿಸುವ ಕ್ಷಮತೆ ಹೊಂದಿದೆ. ಈಗ ಕಾಂಗ್ರೆಸ್ ಪಕ್ಷವನ್ನು ಬಲಪಡಿಸದೆ ಜನವಿರೋಧಿ ಬಿಜೆಪಿ ಆಡಳಿತವನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ." ಇದೇ ರೀತಿಯಾಗಿ ಇನ್ನೂ ಅನೇಕ ಜನರು "ವಾಸ್ತವವಾಗಿ, ಕನ್ಹಯ್ಯಾ ಮತ್ತು ಕಾಂಗ್ರೆಸ್ ಒಂದಾಗುವುದು ಒಂದು ಅನಿವಾರ್ಯ ನೈಸರ್ಗಿಕ ಕ್ರೀಯೆ ಎಂದು ಸೂಚಿಸಿದ್ದಾರೆಂದು ಪತ್ರಿಕಾ ವರದಿಗಳು ಹೇಳುತ್ತಿವೆ. ಕನ್ಹಯ್ಯನಿಗೆ ಕಾಂಗ್ರೆಸ್ ಸೇರಲು ಉಳಿದಿದ್ದ ಏಕೈಕ ಆಯ್ಕೆ ಏಕಾಗಿತ್ತು ಎಂದರೆ ಬಿಜೆಪಿ ಆತನ ಪ್ರಮುಖ ಸೈದ್ಧಾಂತಿಕ ಎದುರಾಳಿ, ಮತ್ತು ಬಿಹಾರದ ಎರಡು ಸಮಾಜವಾದಿ ಹಿನ್ನೆಲೆಯ ಪಕ್ಷಗಳಾದ ಜೆಡಿಯು ಮತ್ತು ಆರ್‌ಜೆಡಿ, ಮೇಲ್ಜಾತಿಯ ನಾಯಕರನ್ನು ಬೆಳೆಸುವುದಿಲ್ಲ, ಸಿಪಿಐ ಬಹುತೇಕ ಅಸ್ತಿತ್ವದಲ್ಲಿಲ್ಲದಿರುವುದು. ಕನ್ಹಯ್ಯನಂತ ಮಹತ್ವಾಕಾಂಕ್ಷೆಯ ನಾಯಕನನ್ನು ಎಲ್ಲಾ ಮೂರು ಎಡಪಕ್ಷಗಳಾದ ಸಿಪಿಐ (ಎಂ), ಸಿಪಿಐ (ಎಂಎಲ್) ಮತ್ತು ಸಿಪಿಐಗಳು ಸರಿಯಾಗಿ ಬಳಸಿಕೊಳ್ಳೊಲಿಲ್ಲ. ೨೦೨೦ ರ ಬಿಹಾರ ವಿಧಾನಸಭಾ ಚುನಾವಣೆಯಲ್ಲೂ ಕೂಡ ಕನ್ಹಯ್ಯನನ್ನು ಎಡ ಪಕ್ಷಗಳು ಸಮರ್ಥವಾಗಿ ಬಳಸದಿದ್ದಾಗ ಆತ ಅತಂತ್ರನಾಗಿ ಕೊನೆಗೆ ಕಾಂಗ್ರೆಸ್ ಪಕ್ಷ ಸೇರಲು ನಿರ್ಧರಿಸಿದ ಎನ್ನುವುದು ಅನೇಕ ಸಿಪಿಐ ನಾಯಕರ ಅಂಬೋಣವಾಗಿದೆ. ಬಿಹಾರದಲ್ಲಿ ಕನ್ಹಯ್ಯನ ಎಡಪಕ್ಷಗಳು ದುರ್ಬಲವಾಗಿದ್ದರೆ ಕಾಂಗ್ರೆಸ್ ಪಕ್ಷ ಪ್ರಬಲ ನಾಯಕನ ಕೊರತೆ ಎದುರಿಸುತ್ತಿತ್ತು. ೧೯೯೦ ರಲ್ಲಿ ರಾಜ್ಯದಲ್ಲಿ ಕೊನೆಯದಾಗಿ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷವು ಮೂರು ದಶಕಗಳ ರಾಜಕೀಯ ಜಡತ್ವದಿಂದ ಹೊರಬರಲು ತಡಕಾಡುತ್ತಿತ್ತು. ಈಗ ಕಾಂಗ್ರೆಂಸ್ ಪಕ್ಷಕ್ಕೂ ಮತ್ತು ಕನ್ಹಯ್ಯನಿಗು ತಮ್ಮ ಅಸ್ತಿತ್ವ ಪ್ರದರ್ಶಿಸಲು ಸೂಕ್ತ ಅವಕಾಶ ಒದಗಿ ಬಂದಿದೆ. ಕನ್ಹಯ್ಯ ಬಿಜೆಪಿಯನ್ನು ಸೈದ್ಧಾಂತಿಕವಾಗಿ ಎದುರಿಸುವ ಸಾಮರ್ಥ್ಯ ಹೊಂದಿದ್ದಾನೆ. ಆತ ತನ್ನ ರಾಜಕೀಯ ಎದುರಾಳಿಯನ್ನು ಮಣಿಸುವ ಎಲ್ಲ ಪಟ್ಟುಗಳನ್ನು ಬಲ್ಲವನಾಗಿದ್ದಾನೆ. ಒಕ್ಕೂಟದ ಉದ್ದೇಶಿತ ಸಿಎಎ ಮತ್ತು ಎನ್‌ಆರ್‌ಸಿ ವಿಧೇಯಕಗಳ ವಿರುದ್ಧ ಕಾಂಗ್ರೆಸ್ ಅಥವಾ ಸಮಾಜವಾದಿ ಪಕ್ಷಗಳಿಗಿಂತ ಕನ್ಹಯ್ಯ ಸಮರ್ಥವಾಗಿ ಜನ ಜಾಗ್ರತೆಯನ್ನು ಮಾಡಿದ್ದಾನೆ. ಆತ ಬಿಜೆಪಿಯ ಈ ಜನವಿರೋಧಿ ಕಾನೂನುಗಳ ವಿರುದ್ಧ ಅರಾರಿಯಾ, ಪೂರ್ಣಿಯಾ, ಕಟಿಹಾರ್ ಮತ್ತು ಕಿಶನ್ ಗಂಜಗಳನ್ನೊಳಗೊಂಡ ಸೀಮಾಂಚಲ ಪ್ರದೇಶದಲ್ಲಿ ಸರಣಿ ಸಭೆಗಳನ್ನು ಆಯೋಜಿಸಿದ್ದನು. ಆತನ ಸಭೆಗಳು ಭಾರೀ ಪ್ರಮಾಣದ ಜನಸಂದಣಿಯನ್ನು ಸೆಳೆದಿತ್ತು. ಆತನ ಪೂರ್ಣಿಯಾ ಸಮಾವೇಶಕ್ಕೆ ಅಂದಾಜು ಒಂದು ಲಕ್ಷ ಜನರು ಸೇರಿದ್ದರು. ಕನ್ಹಯ್ಯ ಆಯೋಜಿಸಿದ್ದ ಸಭೆಗಳಿಂದ ಸಿಪಿಐ ಕಾರ್ಯಕರ್ತರನ್ನು ಹೊರತುಪಡಿಸಿ ಉಳಿದ ರಾಜಕೀಯ ಪಕ್ಷಗಳು ದೂರ ಉಳಿದಿದ್ದವು. ಆ ಸಭೆಗಳಲ್ಲಿ ಕನ್ಹಯ್ಯಾ ಜೊತೆ ವೇದಿಕೆಯನ್ನು ಹಂಚಿಕೊಂಡ ಏಕೈಕ ಕಾಂಗ್ರೆಸ್ಸಿಗ ಎಂದರೆ ಜೆಎನ್ ಯು ಮಾಜಿ ವಿದ್ಯಾರ್ಥಿ ಶಕಿಲ್ ಅಹಮದ್ ಖಾನ್ ಮಾತ್ರ. ಆಗ ಬಿಹಾರದ ಕಾಂಗ್ರೆಸ್ ನಾಯಕರೊಬ್ಬರು ಕೆಲವು ದಲಿತ ಮತ್ತು ಮುಸ್ಲಿಮ್ ಯುವಕರನ್ನು ಹೊರತುಪಡಿಸಿ ಕನ್ಹಯ್ಯ ಬೇರೆ ಯಾರನ್ನೂ ವೇದಿಕೆಗೆ ತರುತ್ತಿಲ್ಲ ಎಂದು ಅಪಾದಿಸಿದ್ದರು. ಈಗ ಕನ್ಹಯ್ಯ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಂತೆ ತನ್ನ ಅತಿದೊಡ್ಡ ಶಕ್ತಿ ಮತ್ತು ಸಾಮರ್ಥ್ಯವನ್ನು ಅರಿತುಕೊಂಡಿದ್ದಾನೆ. ಬಿಜೆಪಿಯ ಹುಸಿ ರಾಷ್ಟ್ರೀಯತೆ ಮತ್ತು ವಿಭಜಕ ಹಿಂದುತ್ವ ರಾಜಕಾರಣಕ್ಕೆ ಕನ್ಹಯ್ಯನ ಆಕ್ರಮಣಕಾರಿ ನಿಲುವು ಕಾಂಗ್ರೆಸ್ ಪಕ್ಷಕ್ಕೆ ಒಂದು ಶಕ್ತಿಯನ್ನು ತುಂಬಬಲ್ಲದು. ಆದರೆ ವಿಶೇಷವಾಗಿ 'ಕಾಂಗ್ರೆಸ್‌ನಲ್ಲಿರುವ ಬಿಜೆಪಿ ಮನಸ್ಥಿತಿಯ ಹಿರಿಯ ತಲೆಗಳು' ಕನ್ಹಯ್ಯನ ಪಕ್ಷ ಸೇರ್ಪಡೆಯಿಂದ ತತ್ತರಿಸಿಹೋಗಿವೆ. ಈ ಬಿಜೆಪಿ ಪರವಾಗಿರುವ ಮುದಿ ಎತ್ತುಗಳನ್ನು ಬಿಜೆಪಿ ಪ್ರಾಯೋಜಿತ ಗೋಶಾಲೆಗಳಿಗೆ ಕಾಂಗ್ರೆಸ್ ಪಕ್ಷ ಕಳುಹಿಸಬೇಕಿದೆ. ಹಿಂದೆ ಝಾನ್ಸಿ ರಾಣಿಯ ವಿರುದ್ಧ ಬ್ರಿಟೀಷರಿಗೆ ನೆರವಾದ ಮತ್ತು ಗಾಂಧಿ ಕೊಲೆಗೆ ಬಂದೂಕು ನೀಡಿದ ಸಂಶಯಾಸ್ಪದ ಆರೋಪಕ್ಕೆ ಗುರಿಯಾಗಿರುವ ಗ್ವಾಲಿಯರ್ ರಾಜಮನೆತನದ ಜ್ಯೋತಿರಾದಿತ್ಯ ಸಿಂಧಿಯಾರಂತ ಪ್ಯೂಡಲ್ ಹಿನ್ನೆಲೆಯ ಯುವಕರು ಅಧಿಕಾರದಾಸೆಗೆ ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ. ಕನ್ಹಯ್ಯ ಕಾಂಗ್ರೆಸ್ ಸೇರ್ಪಡೆಯನ್ನು ಟೀಕಿಸುವ ಕಾಂಗ್ರೆಸ್ಸಿಗರು ತಮ್ಮ ಸ್ವಂತ ಸ್ಥಾನವನ್ನು ಗೆಲ್ಲಲು ಸಾಧ್ಯವಾಗದವರು. ಈಗ ಕನ್ಹಯ್ಯ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾನೆ. ಪಕ್ಷದ ಹಿರಿಯ ನಾಯಕರನ್ನು ಎದುರಿಸುವುದು ಆತನ ತಕ್ಷಣದ ಸವಾಲಾಗಿದೆ. ಆದಾಗ್ಯೂ, ಕನ್ಹಯ್ಯ ನೇರವಾಗಿ ಹೈಕಮಾಂಡ್ ಮೂಲಕ ಪಕ್ಷಕ್ಕೆ ಸೇರಿಸಿಕೊಂಡಿರುವುದರಿಂದ ಆತ ಹೆಚ್ಚಿನ ಸವಾಲುಗಳನ್ನು ಎದುರಿಸಲಿಕ್ಕಿಲ್ಲ. ಕನ್ಹಯ್ಯನ ಜೊತೆಗೆ ಗುಜರಾತ ವಿಧಾನಸಭಾ ಸದಸ್ಯ ಜಿಗ್ನೇಶ್ ಮೇವಾನಿ ಕೂಡ ಕಾಂಗ್ರೆಸ್ ಸೇರಿದ್ದಾನೆ. ಕಳೆದ ಗುಜರಾತ ವಿಧಾನಸಭಾ ಚುನಾವಣೆಯಲ್ಲಿ ಈ ಜಿಗ್ನೇಶ್ˌ ಹಾರ್ದಿಕ್ ಪಟೇಲ್ ಮತ್ತು ಭೀಮ್ ಆರ್ಮಿಯ ಚಂದ್ರಶೇಖರ ಆಝಾದ್, ಈ ಮೂರು ಜನ ಯುವಕರು ಮೋದಿ ಪಟಾಲಮ್ ನ ಭಧ್ರ ಕೋಟೆಯನ್ನು ಅಲ್ಲಾಡಿಸಿ ಬಿಟ್ಟಿದ್ದರು. ಮೋದಿಯ ತವರು ನೆಲದಲ್ಲಿಯೇ ಮೋದಿ ಪಕ್ಷ ಎದುರುಸಿರು ಬಿಟ್ಟು ಗೆದ್ದಿತ್ತು. ಕನ್ಹಯ್ಯ ಒಬ್ಬ ಅತ್ಯುತ್ತಮ ವಾಗ್ಮಿ ಮತ್ತು ನಿಜವಾದ ಅರ್ಥದಲ್ಲಿ ಸ್ಟಾರ್ ಪ್ರಚಾರಕ. ಬಹಳ ಸಮಯದ ನಂತರ, ಕಾಂಗ್ರೆಸ್ ಸಭೆಗಳಿಗೆ ಜನರು ಸೇರುವುದನ್ನು ಆ ಪಕ್ಷದ ಕಾರ್ಯಕರ್ತರು ಎದುರು ನೋಡುತ್ತಿದ್ದಾರೆ. ಕನ್ಹಯ್ಯಕುಮಾರˌ ಹಾರ್ದಿಕ ಪಟೇಲ್ˌ ಚಂದ್ರಶೇಖರ್ ಆಝಾದ್ ರಂತ ಬಿಸಿ ರಕ್ತದ ಯುವಕರು ಬಿಜೆಪಿಯಂತ ಪ್ರತಿಗಾಮಿ ಶಕ್ತಿಯನ್ನು ಬಗ್ಗುಬಡಿಯಲು ಒಂದು ಸೂರಿಗಡಿಯಲ್ಲಿ ಸೇರುವ ಅಗತ್ಯವಿದೆ. ಅಂದು ಬ್ರಿಟೀಷರಿಗೆ ಒಡೆದಾಳುವ ನೀತಿಯನ್ನು ಕಲಿಸಿಕೊಟ್ಟಿದ್ದು ಬಿಜೆಪಿಯ ತಾಯಿ ಬೇರುಗಳು. ಇಂದೂ ಕೂಡ ಅದೇ ತಂತ್ರಗಳಿಂದ ಜಾತ್ಯಾತೀತ ಮತವಿಭಜನೆಯ ಮೂಲಕ ಬಿಜೆಪಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ. ಕಣ್ಣ ಮುಂದೆ ಬಿಜೆಪಿ ಎಂಬ ಕಾಡುಮೃಗಯೊಂದು ಆಹುತಿ ತೆಗೆದುಕೊಳ್ಳಲು ನಿಂತಿರುವಾಗ ಅದರಿಂದ ರಕ್ಷಣೆ ಪಡೆಯುವ ಮಾರ್ಗ ಹುಡುಕುವುದು ಬಿಟ್ಟು ಕಾಂಗ್ರೆಸ್ ಎಂಬ ದೂರದ ಹಳೆಯ ಹಾವನ್ನು ದೂಷಿಸುತ್ತ ಎಡಪಂಥಿಯರು ಪ್ರತಿನಿತ್ಯ ಕನಲುತ್ತಿದ್ದಾರೆ. ಇಡೀ ದೇಶಾದ್ಯಂತ ಬಹುತೇಕ ಸಂಸದಿಯ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಪಡೆ ಹೊಂದಿರುವ ಏಕೈಕ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷವನ್ನು ಉಳಿದ ಸಮಾನಮನಸ್ಕ ಪ್ರಾದೇಶಿಕ ಪಕ್ಷಗಳು ಬೆಂಬಲಿಸದೆ ಹೋದರೆ ಮುಂದೊಂದು ದಿನ ಒಕ್ಕೂಟ ವ್ಯವಸ್ಥೆˌ ಸಂವಿಧಾನˌ ಜನತಂತ್ರಗಳು ಈ ದೇಶದಲ್ಲಿ ಇಲ್ಲವಾಗುವ ಅಪಾಯವನ್ನು ಅವು ಅರಿತುಕೊಳ್ಳಬೇಕಿದೆ. ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ: ►► ನೀವು ಈ ಕೆಳಗಿನ ಲೇಖನಗಳನ್ನು ಓದಿಲ್ಲವೇ? ಅಗತ್ಯವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►►ಎಳೆಮಕ್ಕಳ, ವಿದ್ಯಾರ್ಥಿಗಳ ಪ್ರಾಣಕ್ಕೆ ಮಾರಕವಾದ ಟೇಸ್ಟಿಂಗ್ ಪೌಡರ್ ಅನ್ನು ಸರ್ಕಾರ ಅದೇಕೆ ನಿಷೇಧಿಸುತ್ತಿಲ್ಲ? ►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಭಾರತದಲ್ಲಿ ದಿಢೀರ್‌ ಜನಪ್ರಿಯರಾಗಲು ಇರುವ ಸರಳ ಮಾರ್ಗ ಯಾವುದು ಗೊತ್ತೇ? ►► ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►► *ಸ್ವಯಂ ಘೋಷಿತ ರಾಷ್ಟ್ರೀಯವಾದಿ ಸಂಘಟನೆ ಆರೆಸ್ಸೆಸ್, ಸ್ವಾತಂತ್ರ್ಯಾ ನಂತರ ಬರೋಬ್ಬರಿ ಮೂರು ಬಾರಿ ನಿಷೇಧಕ್ಕೊಳಗಾಗಲು ಕಾರಣಗಳೇನು?* ►► *ನೋಟುಬ್ಯಾನ್ ಮಾಡಿದ ನಂತರ ಪ್ರಧಾನಿ ಮೋದಿಯವರು, ಟೋಕಿಯೋದಲ್ಲಿ ಭಾರತದ ಜನರನ್ನು ಗೇಲಿಮಾಡಿ ಮಾಡಿದ ಭಾಷಣದ ಅಪರೂಪದ ವಿಡಿಯೋ.* ►►ಸಂಘಿಬಾನಿಗಳ ಆಡಳಿತದಲ್ಲಿ ಸಂವಿಧಾನ ಬದಲಾಗುತ್ತಾ? ಬದಲಾದರೆ ಏನೇನಾಗುತ್ತೆ ? ಮಿಸ್ ಮಾಡ್ದೆ ಈ ಲೇಖನ ಓದಿ.. ವಿಡಿಯೋ ನೋಡಿ! ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಸ್ವಾತಂತ್ರ ಹೋರಾಟವನ್ನು ಹತ್ತಿಕ್ಕಲು ಬ್ರಿಟೀಷರು, ಸಾವರ್ಕರ್ ರನ್ನು ದಾಳವಾಗಿ ಬಳಸಿದ್ದರೇ? ►►9 ಜನ್ಮದಲ್ಲಿ ಸ್ವರ್ಗಸುಖ ಸಿಗುತ್ತದೆ ಎಂದು ಗೌರಿಯನ್ನು ಕೊಲೆ ಮಾಡಿದ್ದ ಹಂತಕರು.. ತಾಲೀಬಾನ್, ಐಸಿಸ್ ಗಿಂತಲೂ ಅಸಹ್ಯವಾದ ಸಿದ್ದಾಂತವೇ ಕೊಲೆಗೆ ಕಾರಣ ►►ಸ್ವತಂತ್ರ ಭಾರತದ ಇತಿಹಾಸದಲ್ಲಿ ದಾಖಲೆಯಾಗುಳಿವ ಮೋದಿ ಸಾಧನೆಗಳು: ಮೋದಿ ವಿರೋಧಿಗಳು ಮತ್ತು ಬೆಂಬಲಿಗರು ತಿಳಿದುಕೊಳ್ಳಲೇ ಬೇಕಾದ ನಗ್ನಸತ್ಯಗಳು! ►►ಕಾಂಗ್ರೆಸ್‌ನಲ್ಲಿ ಪ್ರಮೋಷನ್‌ ಸಿಗಬೇಕಾದರೆ ಜೈಲಿಗೆ ಹೋಗಬೇಕು’ ಎಂದಿರುವ ಬಿಜೆಪಿ ನಾಯಕ ಸಿ.ಟಿ ರವಿಗೊಂದು ಬಹಿರಂಗ ಪತ್ರ ►►ಅಫ್ಘಾನಿಸ್ತಾನದ ಬೆಳವಣಿಗೆಗಳು ಸಾಬೀತುಪಡಿಸುತ್ತಿರುವುದು ಮೋದಿ ಸರ್ಕಾರದ ಸಿಎಎ ಕಾಯಿದೆಯ ದೂರದೃಷ್ಟಿಯನ್ನೋ ಅಥವಾ ಸಂಘೀಬಾನಿಗಳ ಧೂರ್ತತನವನ್ನೋ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ವಿದ್ಯುತ್ ತಿದ್ದುಪಡಿ ಮಸೂದೆ- 2021; ಕಾರ್ಪೊರೇಟ್ ಲಾಭ ಪ್ರಖರ – ರೈತ, ಕಾರ್ಮಿಕ ಬದುಕು ಬರ್ಬರ! ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ಜಿಎಸ್‌ಟಿ ಕಟ್ಟಬೇಡಿ’- ದೇಶದ ವರ್ತಕರಿಗೆ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕರೆ! ►►ಬುರ್ಖಾ, ಜನಿವಾರ, ಮೂಲಭೂತವಾದ, ಕೋಮುವಾದ ಮತ್ತು ಸಮಾನತಾವಾದ ►►ಪತ್ರಕರ್ತರೇ ಎಚ್ಚರ: ಮೋದಿ ಸರ್ಕಾರದ ವೈಫಲ್ಯಗಳ ವಿರುದ್ದ ಬರೆದರೆ ಐಟಿ ದಾಳಿ ನಡೆಯಲಿದೆ ಹುಷಾರ್! ►►ಆರ್ ಎಸ್ ಎಸ್ ಸಿದ್ದಾಂತವನ್ನು ಒಪ್ಪುವವರು ಕಾಂಗ್ರೆಸ್ ಪಕ್ಷಕ್ಕೆ ಅಗತ್ಯ ಇಲ್ಲ. ಬಿಜೆಪಿಗೆ ಹೆದರುವವರು ಪಕ್ಷದಿಂದ ಹೊರಟು ಹೋಗಬಹುದು! ►►ಅಂಬೇಡ್ಕರ್ ಸಂವಿಧಾನದ ವಿರೋಧಿಗಳು ಸಂವಿಧಾನಾತ್ಮಕ ಹುದ್ದೆಯಲ್ಲಿರುವುದು ದೇಶದ ಭವಿಷ್ಯಕ್ಕೆ ಬಹು ಅಪಾಯಕಾರಿ

Advertisement
Advertisement
Recent Posts
Advertisement