Advertisement

ಕಾಂಗ್ರೆಸ್ ಪಕ್ಷದವರೇ ಹೀಗೆ, ದೇಶದ್ರೋಹಿಗಳು! ಪ್ರದಾನಿ ಮೋದಿಯವರು ಅದೆಷ್ಟೇ ಸಾಧಿಸಿದರೂ ಅವರನ್ನು ಸದಾ ಟೀಕಿಸುತ್ತಿರುತ್ತಾರೆ: ಅಂಧಭಕ್ತ

Advertisement

ಇತ್ತೀಚೆಗೆ ಅಂದಭಕ್ತನೊಬ್ಬ ನನ್ನ ಇನ್‌ಬಾಕ್ಸ್‌ಗೆ ಬಂದು 'ಪ್ರದಾನಿ ಮೋದಿಯವರು ದೊಡ್ಡದಾಗಿ ಯೋಚಿಸುವವರು ಹಾಗೆಯೇ ಕೆಲಸ ಮಾಡುವವರು ಆದರೂ, ನೀವು ಮೋದಿಯವರನ್ನು ಸದಾ ಟೀಕಿಸುತ್ತಿರುತ್ತೀರಿ. ಬುದ್ದಿಜೀವಿಗಳು, ಎಡಪಂಥೀಯರು ಮತ್ತು ಕಾಂಗ್ರೆಸ್ ಪಕ್ಷದವರೇ ಹೀಗೆ... ದೇಶದ್ರೋಹಿಗಳು' ಅಂತಂದು ತೀರ್ಪು ಕೊಟ್ಟೆ ಬಿಟ್ಟ. ►►ಭಾರತದಲ್ಲಿ ದಿಢೀರ್‌ ಜನಪ್ರಿಯರಾಗಲು ಇರುವ ಸರಳ ಮಾರ್ಗ ಯಾವುದು ಗೊತ್ತೇ? ಅದಕ್ಕೆ ನಾನಂದೆ 'ಸರಿ ಹಾಗಾದರೆ‌... ಮೋದಿಜಿಯವರು ತನ್ನ ಈ ಎಳೂವರೆ ವರ್ಷಗಳ ಆಡಳಿತಾವಧಿಯಲ್ಲಿ ಲಕ್ಷಾಂತರ ಕೋಟಿ ಬೆಲೆಯ ಸಾರ್ವಜನಿಕ ಆಸ್ತಿಗಳನ್ನು ತನ್ನ ಉಧ್ಯಮಿ ಸ್ನೇಹಿತರುಗಳಿಗೆ ಮೂರು ಕಾಸಿನ ಬೆಲೆಗೆ ಮಾರಾಟ ಮಾಡಿದ್ದು ಬಿಟ್ಟರೆ, ಅವರ ಸರ್ಕಾರ ಮಾಡಿದ ಒಂದೇ ಒಂದು ಜನಪರ ಕಾರ್ಯದ ಹೆಸರು ಹೇಳಬಲ್ಲಿರಾ?' ಎಂದು. ►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ಅದಕ್ಕಾತ ಮರು ಪ್ರಶ್ನೆ ಎಸೆದ 'ಬೇರೇನೂ ಬೇಡ, ಇತ್ತೀಚೆಗಷ್ಟೆ 3ಸಾವಿರ ಕೋಟಿ ರೂ. ವ್ಯಯಿಸಿ ಜಗತ್ತಿನ ಅತಿ ಎತ್ತರದ ಉಕ್ಕಿನ ಮನುಷ್ಯ ಖ್ಯಾತಿಯ ಸರ್ಧಾರ್ ಪಟೇಲ್ ಪ್ರತಿಮೆ ಸ್ಥಾಪಿಸಿದ್ದು ಮರೆತುಬಿಟ್ರಾ ಹಾಗಾದರೆ, ನಿಮ್ಮ ಪ್ರಕಾರ ಅದು ಸಾಧನೆಯೆ ಅಲ್ಲವೇ?' ಎಂದು. 'ಹಾಗಾದರೆ ನಿಮ್ಮ ಪ್ರಕಾರ ಅಂತಹ ಪ್ರತಿಮೆಗಳು ಹಸಿದವರ ಹೊಟ್ಟೆ ತುಂಬಿಸುತ್ತೆ ಅಂತೀರಾ?' ಎಂದೆ ಒಂದಷ್ಟು ಸಿಟ್ಟಿನಿಂದ. ►► ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. 'ಇದೇನು ಮರಾಯರೆ ಹೀಗೆ ಹೇಳುತ್ತೀರಿ? ಸ್ವಾತಂತ್ರ್ಯ ಹೋರಾಟಗಾರರ ಕುರಿತು ಸ್ವಲ್ಪವಾದರೂ ಗೌರವ ಬೇಡವೇ? ಸ್ವಾತಂತ್ರ್ಯಾ ನಂತರ ಭಾರತದ ಒಕ್ಕೂಟದಲ್ಲಿ ಸೇರಲು ನಿರಾಕರಿಸಿದ 562 ತುಂಡು ರಾಜ ಸಂಸ್ಥಾನಗಳ ಅರಸರುಗಳ ಮನ ಒಲಿಸಿ ಆಧುನಿಕ ಭಾರತವನ್ನು ನಿರ್ಮಿಸಿದ ಸರ್ಧಾರ್ ಪಟೇಲರ ಒಗ್ಗೆ ನಿಮಗೆ ಕಾಂಗ್ರೆಸ್ಸಿಗರಿಗೆ ಎಳ್ಳಷ್ಟೂ ಗೌರವವಿಲ್ಲ. ನೀವುಗಳೆಲ್ಲರೂ ದೇಶದ್ರೋಹಿಗಳು' ಎಂದನಾತ ಬಹು ಆಕ್ರೋಶದಲ್ಲಿ. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? 'ನಿಜ ಬ್ರದರ್... ಸರ್ಧಾರ್ ಪಟೇಲರು ಸ್ವಾತಂತ್ರ್ಯ ಹೋರಾಟಗಾರರು, ಸ್ವತಂತ್ರ ಭಾರತದ ಮೊದಲ ಗೃಹಸಚಿವರಾಗಿ, ಮೊದಲ ಉಪಪ್ರಧಾನಿಯಾಗಿ ದೇಶಕಟ್ಟಲು ಪ್ರಧಾನಿ ನೆಹರೂರವರಿಗೆ ಸಾಥ್ ಕೊಟ್ಟವರು. ಎಲ್ಲಕ್ಕಿಂತಲೂ ಮಿಗಿಲಾಗಿ ಮಹಾತ್ಮಾ ಗಾಂದಿಯವರ ಹತ್ಯೆ ನಡೆದ ಕೆಲವೇ ಸಮಯದಲ್ಲಿ ಆರೆಸ್ಸೆಸ್‌ ಅನ್ನು ನಿಷೇಧಿಸಿದ ಉಕ್ಕಿನ ಮನುಷ್ಯ. ಮತ್ತು ಅವರು ಕಾಂಗ್ರೆಸ್ ಪಕ್ಷದ ನಾಯಕರಾಗಿ ದೇಶದ ಮೊದಲ ಗ್ರಹ ಸಚಿವರಾಗಿ ತುಂಡು ರಾಜ್ಯಗಳನ್ನು ಒಕ್ಕೂಟ ವ್ಯವಸ್ಥೆಯೊಳಗೆ ಸೇರಿಸುವ ಕೆಲಸ ಮಾಡಿದ್ದಾರೆಯೇ ಹೊರತೂ ಅವರೆಂದೂ ಬಿಜೆಪಿ ಅಥವಾ ಆರೆಸ್ಸೆಸ್ ನ ಬೆಂಬಲಿಗರಾಗಿರಲಿಲ್ಲ ಎಂಬುವುದನ್ನು ನೆನಪಿಡಿ. ಒಟ್ಟಾರೆಯಾಗಿ ಆ ಸಾಧನೆ ಕಾಂಗ್ರೆಸ್ ಪಕ್ಷದ ಜನಪರ ಸಿದ್ದಾಂತದ ಪ್ರತಿಫಲ ಎಂಬುವುದು ನಿಮಗೆ ಗೊತ್ತಿರಲಿ' ಎಂದೆ. ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? 'ಓಹೋ... ಹಾಗೋ? ಹಾಗಾದರೆ ಇಷ್ಟರತನಕವೂ ಅದೇಕೆ ನಿಮ್ಮ ಪಕ್ಷ ಪಟೇಲರ ಪ್ರತಿಮೆಯನ್ನು ಸ್ಥಾಪಿಸಿಲ್ಲ? ಪಟೇಲರನ್ನು ಅದೇಕೆ ಕಡೆಗೆಣಿಸಲಾಯಿತು? ಬಹುಶಃ ನೆಹರೂ ಕುಟುಂಬದ ವೈಭವಿಕರಣದ ಮದ್ಯೆ ನಿಮಗೆ ಪುರಸೊತ್ತು ಆಗಿರಲಿಕ್ಕಿಲ್ಲ ಬಿಡಿ' ಎಂದು ಹೇಳಿ ಗಹಗಹಿಸಿ ನಕ್ಕ. ನಂತರ ಮುಂದುವರೆಸಿ 'ಅದಿರಲಿ ಬಿಡಿ ಅಣ್ಣಯ್ಯ... ನೆಹರೂ ಕುಟುಂಬ ಕಳೆದ ಅರವತ್ತು ವರ್ಷಗಳಲ್ಲಿ ಈ ದೇಶಕ್ಕಾಗಿ ಏನು ಮಾಡಿದೆ?' ಎಂದ ಅಷ್ಟೇ ವ್ಯಂಗ್ಯವಾಗಿ. ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! 'ಕಾಂಗ್ರೆಸ್ ಪಕ್ಷ ನೆಹರೂ ಕುಟುಂಬವನ್ನು ಅದೆಲ್ಲಿ ವೈಭವೀಕರಿಸಿದೆ? ಅದೆಲ್ಲಿ ಪಟೇಲರನ್ನು ಕಡೆಗೆಣಿಸಿದೆ? ಇಷ್ಟಾಗಿಯೂ ಕಾಂಗ್ರೆಸ್ ಈ ತನಕ ಪಕ್ಷದ ಯಾವುದೇ ನಾಯಕನ ಪ್ರತಿಮೆಯನ್ನು ಸ್ಥಾಪಿಸಿಲ್ಲ. ಪ್ರತಿಮೆ ಸ್ಥಾಪನೆ ಕಾಂಗ್ರೆಸ್ ಪಕ್ಷದ ಸಿದ್ದಾಂತವೂ ಅಲ್ಲ. ಹಸಿದವರಿಗೆ ಅನ್ನ, ವಿದ್ಯೆ, ಉದ್ಯೋಗ ಸೃಷ್ಟಿ ಮುಂತಾದವುಗಳಿಗೆ ಕಾಂಗ್ರೆಸ್ ಮೊದಲ ಆಧ್ಯತೆ ನೀಡುತ್ತೆ ಮತ್ತು ಅದು ಪಟೇಲರ ರೀತಿಯಾಗಿಯೇ ಮುಂದಾಲೋಚನೆಯ ಯೋಜನೆಗಳನ್ನು ರೂಪಿಸುವ ಮೂಲಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ. ನೀವು ಮತ್ತು ನಿಮ್ಮ ಪಕ್ಷೀಯರು 'ಪ್ರತಿಮೆ ಸ್ಥಾಪನೆ'ಯೇ ಅಭಿವೃದ್ಧಿ ಎಂದುಕೊಂಡಿದ್ದರೋ ಹೇಗೆ? ದೇಶಾದ್ಯಂತ ಜನಸಾಮಾನ್ಯರು ಹೊಟ್ಟೆಗಿಲ್ಲದೆ ಸಾಯುತ್ತಿರಬೇಕಾದರೆ ಸಾರ್ವಜನಿಕರಿಂದ ಸಂಗ್ರಹಿಸಿದ ಟ್ಯಾಕ್ಸ್‌ನ ಹಣವನ್ನು ಈ ರೀತಿಯಾಗಿ ದುಂದು ವೆಚ್ಚ ಮಾಡುವುದು ಅದೆಷ್ಟು ಸರಿ? ಇನ್ನು ಕಳೆದ ಅರವತ್ತು ವರ್ಷಗಳಲ್ಲಿ ಈ ದೇಶಕ್ಕೆ ಕಾಂಗ್ರೆಸ್ ನ ಕೊಡುಗೆ ಏನು ಎಂಬ ಪ್ರಶ್ನೆಗೆ ಉತ್ತರಿಸುವುದಾದರೆ ಈ ದೇಶಕ್ಕೆ ಸ್ವಾತಂತ್ರ್ಯ ಸಿಗುವ ವೇಳೆಗೆ ಕೇವಲ ಒಂದು ಗುಂಡುಸೂಜಿ ತಯಾರಿಸುವ ಸಾಮರ್ಥ್ಯವನ್ನೂ ಹೊಂದಿರದಿದ್ದ ಈ ನಮ್ಮ ಭಾರತ ದೇಶ 2012ರ ಹೊತ್ತಿಗೆ ಆರ್ಥಿಕತೆಯಲ್ಲಿ ವಿಶ್ವದ ಮೂರನೆಯ ಮುಂದುವರಿದ ರಾಷ್ಟ್ರಗಳ ಸಾಲಿಗೆ ಸೇರಲು ಕಾರಣವಾದದ್ದು ಇಲ್ಲಿಯ ತನಕ ಆಳಿದ ಕಾಂಗ್ರೆಸ್ ಪಕ್ಷದ ಜನಪರ ಆಡಳಿತದ ಫಲ ಎಂಬುವುದನ್ನು ಒಪ್ಪಿಕೊಳ್ಳುತ್ತಿರಾ?' ಎಂದೆ. ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? 'ಇರಬಹುದು ಆದರೆ... ನೆಹರೂ ಕುಟುಂಬವನ್ನು ಅದೆಲ್ಲಿ ವೈಭವೀಕರಿಸಲಾಗಿದೆ ಅಂತೀರಲ್ಲ ಸುಮಾರು 5 ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ನೆಹರೂ ಕುಟುಂಬದ ಹೆಸರು ಇಡಲಾಗಿದೆಯಲ್ಲ ಅದು ವೈಭವೀಕರಣ ಅಲ್ಲವೇ?' ಎಂದ ಬಾರಿ ಏನೋ ಸಂಶೋಧನೆ ಮಾಡಿ ಸಾಧಿಸಿದ ಹೆಮ್ಮೆಯಲ್ಲಿ. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? 'ಬ್ರದರ್... ಅದು ಕಾಂಗ್ರೆಸ್ ಸರಕಾರಗಳು ಜನರ ಕಲ್ಯಾಣಕ್ಕಾಗಿ ರೂಪಿಸಿದ ಜನಪರ ಯೋಜನೆಗಳು. ಆ ಕಾರಣಕ್ಕಾಗಿ ತಮ್ಮ ನಾಯಕರುಗಳ ಹೆಸರನ್ನೆ ಇಟ್ಟಿರಬಹುದು. ಆದರೆ ಹಾಗೆ ಹೆಸರು ಇಡುವುದರಿಂದ ನೆಹರೂ ಕುಟುಂಬಕ್ಕೆ ಏನೂ ಲಾಭವಿಲ್ಲ. ಅದನ್ನು ಅರ್ಥ ಮಾಡಿಕೊಳ್ಳಿ... ಹಾಗೆಯೇ ಅಂತಹ ಹೆಸರುಗಳಿಂದ ದೇಶಕ್ಕೇನಾದರೂ ನಷ್ಟವಿದೆಯೇ ಎಂದು ನೀವೇ ಹೇಳಬೇಕು ಇನ್ನು ನೀವೇ ಹೇಳುವ ಪ್ರಕಾರ 5ಸಾವಿರಕ್ಕೂ ಹೆಚ್ಚು ಯೋಜನೆಗಳು ನೆಹರೂ ಕುಟುಂಬದ ಹೆಸರಲ್ಲೆ ಇರುವುದು ಹೌದಾದರೆ ದೇಶಕ್ಕೆ ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ನೀವು ಅಪಾದಿಸುವುದರಲ್ಲಿ ಏನು ಅರ್ಥವಿದೆ?' ಎಂದು ಪ್ರಶ್ನಿಸಿದೆ. .... ಅಂದಭಕ್ತ ನಾಪತ್ತೆಯಾದ. ಆ ನಂತರ ಆತ ಉಸಿರಾಡಿದ ಶಬ್ದ ಕೂಡ ನನ್ನ ಕಿವಿಗೆ ಬಿದ್ದಿಲ್ಲ. ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ:

Advertisement
Advertisement
Recent Posts
Advertisement