Advertisement

ರಾಜ್ಯದ ಅರ್ಧದಷ್ಟು ಅತಿಥಿ ಉಪನ್ಯಾಸಕರನ್ನು ಕೈಬಿಟ್ಟು, ಕೆಲಸದ ಅವಧಿ ದ್ವಿಗುಣಗೊಳಿಸಿ, ವೇತನ ಹೆಚ್ಚಿಸುವುದು ಸಂಕ್ರಾಂತಿಯ ಉಡುಗೊರೆಯೇ?: ಡಾ. ಎಸ್.ಸಿ ಮಹಾದೇವಪ್ಪ ಪ್ರಶ್ನೆ

Advertisement

ಇತ್ತೀಚೆಗೆ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸುದೀರ್ಘವಾಗಿ ಹೋರಾಟ ನಡೆಸಿದ ಅತಿಥಿ ಉಪನ್ಯಾಸಕರಿಗೆ ಶಿಕ್ಷಣ ಸಚಿವರಿಂದ ಸಂಕ್ರಾಂತಿ ಉಡುಗೊರೆ ರೂಪದಲ್ಲಿ ವೇತನ ಹೆಚ್ಚಳವಾದ ಸುದ್ದಿ ಕೇಳಿ ಸಂತೋಷ ಪಡೋಣ ಎಂದುಕೊಳ್ಳುವಾಗಲೇ, ಅಲ್ಲಿ ಒಟ್ಟು 430 ಪದವಿ ಕಾಲೇಜುಗಳಲ್ಲಿ ನಾಲ್ಕು ಲಕ್ಷ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ 14,500 ಅತಿಥಿ ಉಪನ್ಯಾಸಕರಿದ್ದು ಈ ಪೈಕಿ ಮಾನ್ಯ ಉನ್ನತ ಶಿಕ್ಷಣ ಸಚಿವರು 7,500 ಅತಿಥಿ ಉಪನ್ಯಾಸಕರನ್ನು ತೆಗೆದುಹಾಕಿದ್ದು 8 ಗಂಟೆ ಪಾಠ ಮಾಡುತ್ತಿದ್ದ ಉಪನ್ಯಾಸಕರಿಗೆ ಹೆಚ್ಚುವರಿಯಾಗಿ 15 ಗಂಟೆ ಪಾಠ ಮಾಡುವಂತೆ ತಾಕೀತು ಮಾಡಿರುವ ಮಾಹಿತಿ ತಿಳಿಯಿತು. ಪಾಪ, ವೇತನ ಹೆಚ್ಚಳಕ್ಕಾಗಿ ಹೋರಾಟ ನಡೆಸಿದ ಉಪನ್ಯಾಸಕರಲ್ಲಿ 7500 ಜನರನ್ನು ತೆಗೆದುಹಾಕಿ ಅವರ ಸಂಬಳವನ್ನೇ ಇವರಿಗೆ ನೀಡುವಂತಹ ಅತಿ ಬುದ್ಧಿವಂತಿಕೆ ಅಥವಾ ವಂಚನೆಯನ್ನು ಯಾವ ಆಧಾರದ ಮೇಲೆ ಸಂಕ್ರಾಂತಿ ಉಡುಗೊರೆ ಎಂದು ಕರೆದರು ಎಂಬುದೇ ನನಗೆ ಇಲ್ಲಿಯವರೆಗೂ ತಿಳಿಯುತ್ತಿಲ್ಲ ಎಂದು ಮಾಜಿ ಸಚಿವ ಡಾ. ಹೆಚ್.ಸಿ ಮಹಾದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಪೂರಕವಾಗಿ ಹಣಕಾಸು ಇಲಾಖೆಯ ಅನುಮೋದನೆ ಪಡೆಯುವುದು ಎಂದರೆ ಹೀಗೇನಾ? ನನ್ನ ಪ್ರಕಾರ ಪ್ರಸ್ತುತ ರಾಜ್ಯ ಸರ್ಕಾರವು ಹಣಕಾಸು ನಿರ್ವಹಣೆಯಲ್ಲಿ ದಯನೀಯ ವೈಫಲ್ಯ ಕಂಡಿದೆ. ಹಾಗಿಲ್ಲದೇ ಹೋಗಿದ್ದರೆ 14,500 ಅತಿಥಿ ಉಪನ್ಯಾಸಕರ ಬೇಡಿಕೆಯನ್ನು ಈಡೇರಿಸಲು 7500 ಮಂದಿ ಅತಿಥಿ ಉಪನ್ಯಾಸಕರನ್ನು ತೆಗೆದು ಹಾಕುತ್ತಿದ್ದರೇ? ಎಲ್ಲರೂ ಗಮನಿಸಿದಂತೆ ಕೇವಲ ಧರ್ಮ, ದೇವರು, ಕೋಮುವಾದದ ಆಚೆಗೆ ಈ ಸರ್ಕಾರಕ್ಕೆ ಬರಿಕೈಯಲ್ಲಿ ಜನಪರವಾದ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಒಂದೇ ಒಂದು ಜನಪರ ಯೋಜನೆಯನ್ನೂ ನೀಡದಂತೆ ರಾಜ್ಯ ಹಣಕಾಸನ್ನು ನಿಭಾಯಿಸಲು ಸಾಧ್ಯವಾಗದ ಇವರ ದುರ್ಬಲತೆಗೆ ಅತಿಥಿ ಉಪನ್ಯಾಸಕರ ಹೋರಾಟವೂ ಒಂದು ಉದಾಹರಣೆ ಆಗಿದೆ ಎಂದವರು ಹೇಳಿದರು. ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಲಾದ 164 ಯೋಜನೆಗಳಿಗೂ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು ಸಮರ್ಪಕವಾಗಿ ಹಣಕಾಸನ್ನು ನಿಗದಿಗೊಳಿಸುವಂತಹ ವ್ಯವಸ್ಥಿತ ಕೆಲಸವನ್ನು ಮಾಡಿದ್ದರು. 13 ಬಾರಿ ಬಜೆಟ್ ಮಂಡಿಸಿದ ಅವರ ಹಣಕಾಸಿನ ನಿರ್ವಹಣೆಯ ಜಾಣ್ಮೆ ಇದಕ್ಕೆಲ್ಲ ಕಾರಣ. ಪ್ರಸ್ತುತ ಅಂತಹ ಹಣಕಾಸು ನಿರ್ವಹಣೆ ಮತ್ತು ಯೋಜನೆಗಳ ಘೋಷಣೆಯನ್ನು ಮಾಡುವ ಧೈರ್ಯ ಕೇಂದ್ರದ ಬಿಜೆಪಿಗರಿಗೂ ಇಲ್ಲ, ರಾಜ್ಯದ ಬಿಜೆಪಿಗರಿಗೂ ಇಲ್ಲ. ಇವರೆಲ್ಲರೂ ಧರ್ಮದ ಹೆಸರಲ್ಲಿ ಉಸಿರಾಟ ನಡೆಸುತ್ತಿದ್ದಾರೆ ಬಿಟ್ಟರೆ, ಇವರ ಕೈಯಲ್ಲಿ ಜನಪರವಾಗಿ ಒಂದಡಿ ಹೆಜ್ಜೆ ಮುಂದಿಡುವ ಧೈರ್ಯ ಇಲ್ಲ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದವರು ವಿಶ್ಲೇಶಿಸಿದ್ದಾರೆ‌. ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ:

Advertisement
Advertisement
Recent Posts
Advertisement