Advertisement

ಬಿಜೆಪಿಯ 'ಎ' ಮತ್ತು 'ಬಿ' ತಂಡಗಳು ತಮ್ಮ ರಾಜಕೀಯ ದುರುದ್ದೇಶಕ್ಕೆ ಎರಡೂ ಕಡೆಯ ವಿಧ್ಯಾರ್ಥಿಗಳನ್ನು ಬಲಿಕಾ ಬಕ್ರಾ ಆಗಿಸುತ್ತಿವೆ: ಮುನೀರ್ ಕಾಟಿಪಳ್ಳ

Advertisement

"ನಾವಿನ್ನೂ ಉಡುಪಿಯ ಹಿಜಾಬ್ ವಿಷಯಕ್ಕೆ ಎಂಟ್ರಿ ಕೊಟ್ಟಿಲ್ಲ, ಕೊಟ್ಟರೆ ಆ ಮೇಲೆ ಅದರ ಕತೆಯೇ ಬೇರೆ" ಎಂದು SDPI ರಾಜ್ಯಾಧ್ಯಕ್ಷ ಮಜೀದ್ ತೊಡೆತಟ್ಟಿದ್ದರು. ಈಗ ಬಿಜೆಪಿ ಮುಖಂಡ ಯಶ್ಪಾಲ್ ಸುವರ್ಣ "ಹಿಜಾಬ್ ವಿವಾದ ನಿಲ್ಲಿಸುವುದು ಹಿಂದುತ್ವ ಸಂಘಟನೆಗಳಿಗೆ ಐದು ನಿಮಿಷದ ಕೆಲಸ" ಎಂದು ಕಣ್ಣು ಕೆಕ್ಕರಿಸಿದ್ದಾರೆ ಎಂದು DYFI ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳರವರು ಹೇಳಿದ್ದಾರೆ. 'ಇಲ್ಲಿ ವಿಷಯ ಸ್ಪಷ್ಟ. ಎ ತಂಡ ಹಾಗೂ ಬಿ ತಂಡ ಯೋಜನಾ ಬದ್ದವಾಗಿ ಪೂರ್ವನಿರ್ಧರಿತ ಆಟ ಆಡುತ್ತಿವೆ. ವಿದ್ಯಾರ್ಥಿಗಳು, ಪೋಷಕರು, ಬೆಂಬಲಿಗರು ಕೊನೆಗೆ ಎರಡೂ ಧರ್ಮೀಯರು ಬಲಿಕಾ ಬಕ್ರ ಆಗುತ್ತಿದ್ದಾರೆ. ಕರಾವಳಿ ಜಿಲ್ಲೆಗಳು ಈ ಎರಡೂ ಬಣದ ಪ್ರಯೋಗ ಶಾಲೆಯಾಗಿ ಬಿಟ್ಟಿದೆ.' ಎಂದವರು ಖೇಧ ವ್ಯಕ್ತಪಡಿಸಿದ್ದಾರೆ. ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ:

Advertisement
Advertisement
Recent Posts
Advertisement