Advertisement

ಬಿಜೆಪಿಯು ಕಂಡವರ ಮಕ್ಕಳ ಕೈಗೆ ಮಾರಕಾಸ್ತ್ರಗಳನ್ನು ಏಕೆ ಕೊಡುತ್ತಿದೆ? ಅವುಗಳನ್ನು ಹಿಡಿದ ಆ ಮಕ್ಕಳು ಮುಂದೆ ಏನಾಗುವರು?

Advertisement

ಗಾಬರಿಯಾಗಬೇಡಿ... ಈ ಪುಟದಲ್ಲಿ ಪ್ರಕಟವಾಗಿರುವ ಚಿತ್ರಗಳಲ್ಲಿ ಬಿಜೆಪಿಯ, ಸಂಘಪರಿವಾರದ ಅಥವಾ ಸನಾತನಿ ಆರ್ಯರ ಅರ್ಥಾತ್ ವೈದಿಕಶಾಹಿಗಳ ಮನೆಯ ಮಕ್ಕಳು ಯಾರೂ ಇಲ್ಲ. ಅವರೆಲ್ಲರೂ ದೇಶ, ವಿದೇಶಗಳ ಪ್ರತಿಷ್ಠಿತ ಶಾಲೆ, ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರೆಲ್ಲರೂ ಉನ್ನತ ವಿದ್ಯೆ ಪಡೆದು ಮುಸ್ಲಿಂ ರಾಷ್ಟ್ರಗಳಲ್ಲಿನ ಶೇಕ್‌ಗಳ ಕೈಕೆಳಗೆ ಉನ್ನತ ಹುದ್ದೆ ಪಡೆದು ಐಷಾರಾಮಿ ಬದುಕು ಬದುಕುತ್ತಿದ್ದಾರೆ. ನೂರಾರು- ಸಾವಿರಾರು ಎಕರೆ ಭೂಮಿ, ಮಹಾನಗರಗಳಲ್ಲಿ ಬಹುಮಹಡಿ ಕಟ್ಟಡಗಳ ಮಾಲಕತ್ವ ಹೊಂದಿದ್ದಾರೆ. ಸ್ಟಾರ್ ಹೋಟೆಲ್ ಗಳಲ್ಲೇ ತಂಗುತ್ತಿದ್ದಾರೆ. ವಿಮಾನಗಳಲ್ಲೇ ತಿರುಗಾಡುತ್ತಿದ್ದಾರೆ! ನಿಜ, ಈ ಚಿತ್ರಗಳಲ್ಲಿರುವವರು ಬಡವರ ಮನೆಯ ಅದರಲ್ಲೂ ಹಿಂದುಳಿದ ವರ್ಗಗಳ ಮತ್ತು ದಲಿತ ವರ್ಗದ ಮನೆಯ ಮಕ್ಕಳು. ಮಾರಾಕಾಸ್ತ್ರ ಹಿಡಿಯುವುದು ಅಥವಾ ಹೊಂದುವುದು ಶಿಕ್ಷಾರ್ಹ ಅಪರಾಧ. ಪ್ರತಿಯೊಬ್ಬರಿಗೂ ಶಿಕ್ಷಣ ಕಡ್ಡಾಯ ಎಂದು ಸ್ವಾತಂತ್ರ್ಯಾ ನಂತರ ಈ ದೇಶವನ್ನಾಳಿದ ಕಾಂಗ್ರೆಸ್ ಸರ್ಕಾರ ಕಾನೂನುಗಳನ್ನು ಜಾರಿ ಮಾಡಿತ್ತು. ದೇಶದ ಗ್ರಾಮ ಗ್ರಾಮಗಳ, ಮೂಲೆ ಮೂಲೆಗಳಲ್ಲಿ ಶಾಲೆಗಳನ್ನು ನಿರ್ಮಿಸಿ ಉಚಿತ ವಿಧ್ಯಾಭ್ಯಾಸ ನೀಡಿತ್ತು. ಸರ್ಕಾರಿ ಉದ್ಯಮಗಳನ್ನು ಸ್ಥಾಪಿಸಿ ಉದ್ಯೋಗ ನೀಡಿತ್ತು. ಯುವಕರು ಸ್ವಯಂ ಉಧ್ಯಮ ಸ್ಥಾಪಿಸಲು ಬ್ಯಾಂಕ್ ಗಳ ಮೂಲಕ ‌ಸಬ್ಸಿಡಿ ಸಾಲ ನೀಡಿತ್ತು. ಸ್ವಾವಲಂಬಿ ಬದುಕು ಬದುಕಲು ದರಖಾಸ್ತು, ಭೂಸ್ವಾದೀನ ಕಾಯ್ದೆ, ಅಕ್ರಮ ಸಕ್ರಮ ಕಾಯ್ದೆಗಳ ಮೂಲಕ ಕೃಷಿ ಭೂಮಿಯನ್ನು ಹಂಚಿತ್ತು. ಆದರೆ ಸ್ವಯಂ ಘೋಷಿತ ರಾಷ್ಟ್ರಭಕ್ತ ಪಕ್ಷ ಬಿಜೆಪಿ ಸಿಕ್ಕಸಿಕ್ಕವರ ಮನೆಯ ಮಕ್ಕಳನ್ನು ಎಳೆದೆಳೆದು ತಂದು ಸಂಘ, ಶಾಖೆ, ದೇಶಪ್ರೇಮದ ಹೆಸರಲ್ಲಿ ಅವರ ಕೈಗೆ ಮಾರಾಕಾಸ್ತ್ರಗಳನ್ನು ಕೊಡುತ್ತಿದೆ. ಪರ ಧರ್ಮಗಳ ಮೇಲೆ ಧ್ವೇಷ ಕಾರುವುದೇ ಹಿಂದುತ್ವ ಎಂಬಂತೆ ಆ ಮಕ್ಕಳ ತಲೆಯಲ್ಲಿ ವಿಷವನ್ನು ತುಂಬಿಸುತ್ತಿದೆ. ಅದನ್ನೇ ದೇಶಪ್ರೇಮ ಎಂಬಂತೆ ಬಿಂಬಿಸುತ್ತಿದೆ. ಈ ಚಿತ್ರಗಳಲ್ಲಿ ಇರುವವರು ಇತ್ತೀಚೆಗೆ ಶಿವಮೊಗ್ಗದಲ್ಲಿ‌ ಕೊಲೆಯಾದ ಹರ್ಷನಂತಹವರು, ಹೊನ್ನಾವರದಲ್ಲಿ ಹೆಣವಾದ ಪರೇಶ್ ಮೇಸ್ತನಂತಹವರು, ಮೂಡಬಿದರೆಯ ಪ್ರಶಾಂತ ಪೂಜಾರಿಯಂತಹವರು, ಕುಟ್ಟಪ್ಪನಂತಹವರು, ಮೈಸೂರು ರಾಜುನಂತಹವರು, ರಾಜೇಶ್ ಕೋಟ್ಯಾನ್ ನಂತಹವರು, ಪ್ರವೀಣ್ ಪೂಜಾರಿಯಂತಹವರು, ಶರಣ್ ಪೂಜಾರಿಯಂತಹವರು, ವಿಶ್ವನಾಥ ನಂತಹವರು, ರುದ್ರೇಶ್ ನಂತಹವರು, ಶರತ್ ಮಡಿವಾಳನಂತಹವರು ಇತ್ಯಾದಿ, ಇತ್ಯಾದಿ, ಇತ್ಯಾದಿ ರಂತಹವರು ಎಂದರೆ ತಪ್ಪಾಗಲಿಕ್ಕಿಲ್ಲ! ಬೇರೆಬೇರೆ ಜಿಲ್ಲೆಗಳಲ್ಲಿ, ಬೇರೆಬೇರೆ ಸಮಯದಲ್ಲಿ, ಬೇರೆಬೇರೆ ಕಾರಣಗಳಿಗಾಗಿ ಈ ಮೇಲೆ ಹೆಸರಿಸಿದವರುಗಳ ಹತ್ಯೆಯಾದಾಗ ಬಿಜೆಪಿಯು 'ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಹಿಂದೂ ಧರ್ಮ ಅಪಾಯದಲ್ಲಿದೆ. ಹಿಂದೂ ಧರ್ಮ ಉಳಿಯಬೇಕಾದರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು' ಎಂದು ಭಾವನಾತ್ಮಕವಾಗಿ ಪ್ರಚಾರ ನಡೆಸಿತ್ತು ಮತ್ತದರಲ್ಲಿ ಸಫಲತೆಯನ್ನು ಕೂಡ ಕಂಡಿತ್ತು. (ಗಮನಿಸಿ: ಇದರಲ್ಲಿ ಹೆಚ್ಚಿನವರು ವೈಯಕ್ತಿಕ ಕಾರಣಕ್ಕಾಗಿ ಕೊಲೆಯಾಗಿದ್ದರು ಎಂದು ಕೊಲೆ ನಡೆದ ಹಲವು ವರ್ಷಗಳ ನಂತರ ಬಂದ ತನಿಖಾ ವರದಿಗಳು ಹೇಳುತ್ತದೆ.) ಇಷ್ಟಾಗಿಯೂ ಬಿಜೆಪಿ ಯಾರದ್ದೋ ಮನೆಗಳ ಎಳೆ ಮಕ್ಕಳನ್ನು ದುರ್ಭಳಕೆ ಮಾಡಿಕೊಳ್ಳುತ್ತಿರುವುದು ಸುಳ್ಳಾದರೆ ಈ ಚಿತ್ರಗಳು ಮತ್ತೇನು ಸಂದೇಶ ನೀಡುತ್ತದೆ? ಮಚ್ಚು ಹಿಡಿದು ಯಾರಾದರೂ ಉದ್ಧಾರವಾಗಲು ಸಾಧ್ಯವೇ? ಮಚ್ಚು ಹಿಡಿದು ಒಳ್ಳೆಯ ಉದ್ಯೋಗ ಮಾಡಿ ಗೌರವದ ಬದುಕು ಬದುಕಲು ಸಾಧ್ಯವೇ? ಮಚ್ಚು ಹಿಡಿದು ಹಣ ಸಂಪಾದಿಸಲು ಸಾಧ್ಯವೇ? ಮಚ್ಚು ಹಿಡಿದು ಒಡಹುಟ್ಟಿದ ಸಹೋದರಿಯರಿಗೆ ಒಳ್ಳೆಯ ಮನೆತನದ, ಉದ್ಯೋಗಸ್ಥ ವರರ ಜೊತೆ ಮದುವೆ ಮಾಡಲು ಸಾಧ್ಯವೇ? ಮಚ್ಚು ಹಿಡಿದು ಹೆತ್ತ ತಂದೆತಾಯಿಯರ ವೃದ್ಧಾಪ್ಯದಲ್ಲಿ ನೆಮ್ಮದಿಯ ಬಾಳು ನೀಡಲು ಸಾಧ್ಯವೇ? ಮಚ್ಚು ಹಿಡಿದು ಕಟ್ಟಿಕೊಂಡ ಹೆಂಡತಿಗೆ, ಹುಟ್ಟಿದ ಮಕ್ಕಳಿಗೆ ಗೌರವದ ಬದುಕು ಕೊಡಲು ಸಾಧ್ಯವೇ? ಎಳೆಯ ಅಥವಾ ಹರೆಯದ ಪ್ರಾಯದಲ್ಲಿ ಮಚ್ಚು ಹಿಡಿದ ಹುಡುಗರು ದೊಡ್ಡವರಾದ ಮೇಲೆ ‌ಸಭ್ಯ ಗೃಹಸ್ಥರಾಗಲು ಸಾಧ್ಯವೇ? 1947ರಲ್ಲಿ ಸ್ವಾತಂತ್ರ್ಯ ಸಿಗುವಾಗ ಒಂದು ಸಣ್ಣ ಗುಂಡುಸೂಜಿಯನ್ನು ಕೂಡಾ ಸ್ವತಂತ್ರವಾಗಿ ತಯಾರಿಸುವ ತಂತ್ರಜ್ಞಾನವನ್ನು ಭಾರತ ಹೊಂದಿರಲಿಲ್ಲ. ಶತಶತಮಾನಗಳ ಕಾಲ ಮನುವಾದಿ ವೈದಿಕಶಾಹಿಗಳ ಶೋಷಣೆಗೆ ಬಲಿಯಾದ ಈ ದೇಶದ 90%ಗೂ ಹೆಚ್ಚು ಹಿಂದುಳಿದ ವರ್ಗದ ಮತ್ತು ದಲಿತ ವರ್ಗದ ಜನ ಗುಡಿಸಲಿನಲ್ಲಿ ವಾಸಿಸುತ್ತಿದ್ದರು. 95%ಗೂ ಹೆಚ್ಚು ಜನ ಅನಕ್ಷರಸ್ಥ ರಾಗಿದ್ದರು. 40%ಗೂ ಹೆಚ್ಚು ಜನ ಪೌಷ್ಟಿಕಾಹಾರದ ಕೊರತೆಯಿಂದಲೇ ಭಾಲ್ಯ, ಯೌವನದಲ್ಲೆ ಸಾವನ್ನಪ್ಪುತ್ತಿದ್ದರು. ಈ ದೇಶದಲ್ಲಿ ಅಲ್ಲೊಂದು ಇಲ್ಲೊಂದು ಬಿಟ್ಟರೆ ಹೆಚ್ಚಿನೆಡೆ ಸೇತುವೆಗಳಿರಲಿಲ್ಲ, ವಿದ್ಯುತ್ ಉತ್ಪಾದನೆ ಮತ್ತು ಸಂಪರ್ಕಗಳು ಇರಲಿಲ್ಲ, ಶಾಲೆಗಳಿರಲಿಲ್ಲ, ಆಸ್ಪತ್ರೆಗಳಿರಲಿಲ್ಲ, ಉದ್ಯೋಗಾವಕಾಶಗಳಿರಲಿಲ್ಲ... ಆದರೆ ಅದೆಲ್ಲವನ್ನು, ಅದಕ್ಕಿಂತ ಹೆಚ್ಚಾಗಿ ಅದರ ಮಹತ್ವವನ್ನು ಆ ಅವಿದ್ಯಾವಂತ ಜನರಿಗೆ ಮನವರಿಕೆ ಮಾಡಿ ಹಂತಹಂತವಾಗಿ ಅನುಷ್ಠಾನ ಗೊಳಿಸಿದವರು ಈ ನಮ್ಮನ್ನಾಳಿದ ನೆಹರೂ, ಶಾಸ್ತ್ರಿ, ಇಂದಿರಾ, ರಾಜೀವ್, ಪಿವಿಎನ್, ಮನಮೋಹನ್ ಸಿಂಗ್ ಮುಂತಾದವರು ಎಂದರೆ ಅದು ಅತಿಶಯೋಕ್ತಿ ಆಗಲಾರದು. ಈ ದೇಶವನ್ನಾಳಿದ ಈ ಎಲ್ಲಾ ನಾಯಕರುಗಳ ಆ ದೂರಾಲೋಚನೆಯ ಫಲವಾಗಿ ಭಾರತ ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿ 2012ರ ಹೊತ್ತಿಗೆ ಮೂರನೆಯ ಸ್ಥಾನ ಪಡೆಯುವಂತಾಯಿತು. ಐಟಿ, ಬಿಟಿಯಲ್ಲಿ ಭಾರತ ಗಳಿಸಿದ ಸಾಧನೆಗಾಗಿ ಅಮೆರಿಕಾದ ಆಗಿನ ಅಧ್ಯಕ್ಷರಾಗಿದ್ದ ಬರಾಕ್ ಒಬಾಮರವರು ಭಾರತವನ್ನಾಳಿದ ನಾಯಕರ ಈ ಸಾಧನೆ ಶ್ಲಾಘನೀಯ ಎಂದು ವಿಶ್ವಸಂಸ್ಥೆಯ ಸಮಾರಂಭವೊಂದರಲ್ಲಿ ಹೊಗಳಿದ್ದನ್ನು ನೀವು ಮರೆತಿರಲಾರಿರಿ. ಮಾಜಿ ಪ್ರಧಾನಿ, ವಿಶ್ವದ ಸರ್ವ ಶ್ರೇಷ್ಟ ಆರ್ಥಿಕತಜ್ಞ ಖ್ಯಾತಿಯ ಮನಮೋಹನ್ ಸಿಂಗ್ ಆಡಳಿತಾವಧಿಯಲ್ಲಿ ಈ ಸ್ಥಾನಮಾನ ಕೀರ್ತಿ ಲಭಿಸಿದ್ದನ್ನು ಭಾರತೀಯರಾದ ನಾವು, ನೀವು ಹೆಮ್ಮೆ ಯಿಂದ ಹೇಳಿಕೊಳ್ಳಬೇಕಾದ ವಿಚಾರವಾಗಿದೆ. ಇಂದು ವಿಜ್ಞಾನ ,ತಂತ್ರಜ್ಞಾನ, ಶಿಕ್ಷಣ, ಆರೋಗ್ಯ ಮುಂತಾದ ವಿಚಾರಗಳಲ್ಲಿ ವಿಶ್ವದ ಅಭಿವೃದ್ಧಿ ಹೊಂದಿದ, ಹೊಂದುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ ಸರಿಸಮವಾಗಿ ನಮ್ಮ ದೇಶ ನಿಲ್ಲುವಂತಾಗಲು ಅದು ಈ 1947 ರಿಂದ 2014ರ ನಡುವಿನ ಅವಧಿಯಲ್ಲಿ ನಮ್ಮನ್ನಾಳಿದ ನಾಯಕರು ಆರೋಗ್ಯ, ಶಿಕ್ಷಣ , ಉದ್ಯೋಗ, ರಕ್ಷಣೆ ಮುಂತಾದವುಗಳಿಗೆ ನೀಡಿದ ಹೆಚ್ಚಿನ ಒತ್ತು ಕಾರಣ, ಮತ್ತು ಇದು ಆ ನಾಯಕರುಗಳ ದೂರದೃಷ್ಟಿಯ ಪ್ರತಿಫಲ ಎಂಬ ಅಂಶವನ್ನು ನಾವು ಮರೆಯುವಂತಿಲ್ಲ. ಆದರೆ ಇತ್ತೀಚೆಗಿನ ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಒಂದು ಕೋಮಿನವರ ಮೇಲೆ ಮತ್ತೊಂದು ಕೋಮಿನವರನ್ನು ಎತ್ತಿ ಕಟ್ಟುತ್ತಿರುವ ಆ ಮೂಲಕ ಆ ಎಳೆ ಮಕ್ಕಳನ್ನು ದುರ್ಭಳಕೆ ಮಾಡಿಕೊಳ್ಳುತ್ತಿರುವ ಘಟನೆಗಳನ್ನು ಅವಲೋಕಿಸಿದಾಗ 'ಈ ದೇಶವಿಂದು ಮತ್ತೇ ಶಿಲಾಯುಗದತ್ತ ಚಲಿಸುತ್ತಿದೆ' ಎಂದೆನಿಸದೆ ಇರದು. ಹಾಗೆಯೇ ದೇಶಪ್ರೇಮದ ಭ್ರಮೆಯಲ್ಲಿ ತಮ್ಮ ಮಕ್ಕಳನ್ನು ಕಟುಕರ ಕೈಗೆ ಕೊಟ್ಟು ನಿಶ್ಚಂತರಾಗಿ ಕುಳಿತಿರುವ ಹೆತ್ತವರು ಇನ್ನಾದರೂ ಎಚ್ಚೆತ್ತುಕೊಳ್ಳಲಿ, ಬಿಜೆಪಿಯ ಈ ಷಢ್ಯಂತ್ರದ ವಿರುದ್ಧ ಪ್ರತಿಭಟಿಸಲಿ, ಕನಿಷ್ಠಪಕ್ಷ ತಮ್ಮತಮ್ಮ ಮನೆಯ ಮಕ್ಕಳನ್ನು ಆ ಕಟುಕರ ಕೈಯಿಂದ ಪಾರುಮಾಡಿ ಅವರಿಗೆ ಉತ್ತಮ ವಿಧ್ಯಾಭ್ಯಾಸ ಕೊಟ್ಟು ಉತ್ತಮ ಬಾಳು ನೀಡಲು ಶ್ರಮಿಸಲಿ ಎಂಬುವುದು ಈ ಲೇಖನದ ಆಶಯವಾಗಿದೆ. ನಮಸ್ಕಾರ

Advertisement
Advertisement
Recent Posts
Advertisement