Advertisement

FactCheck: ಮೋದಿಯವರು ರಷ್ಯಾದ ಜೊತೆ ಮಾತನಾಡಿದರೆ ಯುದ್ದ ನಿಲ್ಲಿಸಬಹುದು ಎಂದು ಉಕ್ರೇನ್ ಹೇಳಿದ್ದು ನಿಜವೇ?

Advertisement

'ಮೋದಿಯವರು ರಷ್ಯಾದ ಅಧಕ್ಷ ವ್ಲಾದಿಮಿರ್ ಪುತಿನ್ ಜೊತೆ ಮಾತನಾಡಿದರೆ ಯುದ್ದ ನಿಲ್ಲಿಸಬಹುದು ಎಂದು ಉಕ್ರೇನ್ ವಿನಂತಿಸಿದೆ' ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೇಲಿನ ವಿನಂತಿ ನಿಜವೇ ಎಂದು ಕನ್ನಡ ಮೀಡಿಯಾ ಡಾಟ್ ಕಾಂ ವಿವರಗಳನ್ನು ತಡಕಾಡಿದಾಗ ದೊರೆತ ಮಾಹಿತಿಗಳ ಪ್ರಕಾರ 'ಭಾರತದ ಪ್ರಧಾನಿಯವರು ರಷ್ಯಾದ ಅಧ್ಯಕ್ಷರ ಜೊತೆ ಮಾತನಾಡಿ ಯುದ್ಧ ನಿಲ್ಲಿಸುವಂತೆ ವಿನಂತಿಸಬೇಕು' ಎಂಬ ವಿನಂತಿ ಬಂದಿರುವುದು ನಿಜ! ಆದರೆ ಆ ವಿನಂತಿ ಮಾಡಿದ್ದು ಉಕ್ರೇನ್ ಅಧ್ಯಕ್ಷರು ಅಥವಾ ಪ್ರಧಾನಿಯಲ್ಲ. ಬದಲಿಗೆ ಹಾಗೆ ವಿನಂತಿಸಿರುವುದು 'ದೆಹಲಿಯಲ್ಲಿರುವ ಉಕ್ರೇನ್ ರಾಯಬಾರಿ ಇಗೋರ್ ಪೋಲಿಖಾ' ಆಗಿದ್ದಾರೆ! ಆದರೆ ಅದನ್ನು ತಿರುಚಿ ಹರಿಯಬಿಡುವುದರ ಮೂಲಕ ಬಿಜೆಪಿ ಐಟಿ ಸೆಲ್ ಪ್ರಧಾನಿ ಮೋದಿಯನ್ನು ವಿಶ್ವಗುರು ಎಂಬಂತೆ ಬಿಂಬಿಸಲು ಹೊರಟಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ರಾಯಭಾರಿ ಪೊಲಿಖಾರವರು ಹಾಗೆ ವಿನಂತಿ ಮಾಡಿರುವುದರ ಹಿಂದೆ ಅವರಿಗೆ ಅವರ ದೇಶದ ಬಗೆಗಿನ ಪ್ರಾಮಾಣಿಕ ಕಾಳಜಿ ಅಡಗಿದೆ. ಮತ್ತು ಅಂತಹ ಕಾಳಜಿ ಪ್ರತಿಯೊಬ್ಬರಲ್ಲೂ ಇರಲೇಬೇಕು. ಒಬ್ಬ ರಾಯಭಾರಿಯಾಗಿ ಭಾರತದಂತಹ 'ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ'ದಲ್ಲಿದ್ದೂ ಕೂಡ ಇಷ್ಟನ್ನೂ ಮಾಡಲಾಗದಿದ್ದರೆ ಖಂಡಿತವಾಗಿ ಅದು ಆತ ತನ್ನದೇ ದೇಶಕ್ಕೆ ಮಾಡುವ ದ್ರೋಹವಾದೀತು. ಏಕೆಂದರೆ ರಷ್ಯಾದ ಮಿಲಿಟರಿ ಶಕ್ತಿಯ ಎದುರು ಉಕ್ರೇನ್ ಅಷ್ಟೊಂದು ಬಲಿಷ್ಠ ರಾಷ್ಟ್ರವಲ್ಲ ಎಂಬುವುದು ಇಡೀ ವಿಶ್ವಕ್ಕೆ ಗೊತ್ತಿರುವ ವಿಚಾರ. ಆ ಕಾರಣದಿಂದಾಗಿ ಅಂತಹ ಯುದ್ಧದಿಂದ ಅತಿ ಹೆಚ್ಚು ಹಾನಿಗೊಳಗಾಗುವುದು ಉಕ್ರೇನ್ ರಾಷ್ಟ್ರವೇ ಆಗಿದೆ. ಈ ಸತ್ಯದ ಅರಿವು ಹೊಂದಿರುವ ಪೋಲಿಖಾರವರು ಈ ಯುದ್ಧದ ವಾತಾವರಣದಿಂದ ಬಹು ಆತಂಕಿತರಾಗಿದ್ದಾರೆ. ಯಾರಾದರೂ ಮಧ್ಯೆ ಬಂದು ಯುದ್ದ ನಿಲ್ಲಿಸಬಾರದೇ ಎಂಬ ಮಾನವ ಸಹಜ ನಿರೀಕ್ಷೆಯಲ್ಲಿದ್ದಾರೆ. ಅದರ ಫಲಿತಾಂಶವೇ ಈ ಕೋರಿಕೆ. ಉಕ್ರೇನ್ ರಾಯಭಾರಿಗೆ ಭಾರತದ ಕುರಿತು ಏಕಿಷ್ಟು ನಿರೀಕ್ಷೆ? ಭಾರತ ಅಷ್ಟೊಂದು ಪ್ರಭಾವಿಯೇ? ನಿಜ, ಭಾರತ ಹಲವು ದಶಕಗಳಿಂದಲೂ ರಷ್ಯಾ ಜೊತೆಗೆ ಅತ್ಯುತ್ತಮವಾದ ಸಂಬಂಧವನ್ನು ಬೆಳೆಸಿಕೊಂಡು ಬಂದಿದೆ. ಆ ಕಾರಣಕ್ಕಾಗಿ ರಷ್ಯಾ ಭಾರತದ ಕುರಿತು ಅತ್ಯಂತ ಗೌರವದ ಭಾವನೆಯನ್ನು ಹೊಂದಿದೆ. ಇಂತಹ ಸಮಯದಲ್ಲಿ ಭಾರತದ ಪ್ರಧಾನಿಯಾದವರು ವಿನಂತಿಸಿದರೆ ತನ್ನ ದೇಶಕ್ಕೆ ಲಾಭವಾಗಬಹುದು ಎಂಬ ದೂರದೃಷ್ಟಿಯಿಂದ ಉಕ್ರೇನ್ ರಾಯಭಾರಿ ಪೊಲಿಖಾ ಹೇಳಿಕೆ ನೀಡಿದ್ದಾರೆ. ಆದರೆ, ಸುದ್ದಿಯನ್ನು ತಿರುಚಿ ತಮ್ಮ ಪರ ಪ್ರಚಾರ ಪಡೆಯುವಲ್ಲಿ ಬಹು ನಿಪುಣತೆ ಹೊಂದಿರುವ ಬಿಜೆಪಿ ಐಟಿ ಸೆಲ್ ದೆಹಲಿಯಲ್ಲಿರುವ ಉಕ್ರೇನ್ ರಾಯಭಾರಿಯ ತನ್ನ ದೇಶದ ಬಗೆಗಿನ ಪ್ರಾಮಾಣಿಕ ಕಾಳಜಿಯ ಆ ಹೇಳಿಕೆಯನ್ನು 'ಮೋದಿಯವರನ್ನು ಉಕ್ರೇನ್ ಅಧ್ಯಕ್ಷರು ಅಥವಾ ಪ್ರಧಾನಿಯವರೆ ಎರಡೂ ದೇಶಗಳ ಮದ್ಯೆ ಪ್ರವೇಶಿಸಿ ರಷ್ಯಾದ ಹತ್ತಿರ ಯುದ್ದ ನಿಲ್ಲಿಸುವಂತೆ ‌ಹೇಳಬೇಕು' ಎಂದು ವಿನಂತಿಸಿದ್ದಾರೆ ಎಂಬರ್ಥ ಬರುವಂತೆ ಪ್ರಚಾರ ಮಾಡುತ್ತಿರುವುದು ವಿಪರ್ಯಾಸವೇ ಸೈ! ಉಕ್ರೇನ್ ಮೇಲೆ ರಷ್ಯಾ ಬಾಂಬ್, ಕ್ಷಿಪಣಿ, ರಾಕೆಟ್‌ಗಳೊಂದಿಗೆ ಮೂರೂ ದಿಕ್ಕುಗಳಿಂದ ಆಕ್ರಮಣ ಮಾಡಿರುವುದು| ಈ ತನಕ ಉಕ್ರೇನ್ ನ 40ಕ್ಕೂ ಹೆಚ್ಚು ಸೈನಿಕರು ಮೃತರಾಗಿರುವುದು| ಉಕ್ರೇನ್ ಪ್ರತಿದಾಳಿಯಿಂದ ಐದು ರಷ್ಯನ್ ಜೆಟ್‌ಗಳನ್ನು ಪತನಗೊಂಡಿರುವುದು| ರಷ್ಯಾದ ಸೇನಾಕ್ರಮಣಕ್ಕೆ ಜಾಗತಿಕ ನಾಯಕರುಗಳು ಖಂಡನೆ ವ್ಯಕ್ತಪಡಿಸಿರುವುದು ಹಾಗೂ ಕಠಿಣ ಕ್ರಮದ ಎಚ್ಚರಿಕೆ ನೀಡಿರುವುದು| ಉಕ್ರೇನ್ ಗೆ ನರವಾಗಲು ಅಮೇರಿಕಾ ಮತ್ತಿತರ ಪಾಶ್ಚಾತ್ಯ ರಾಷ್ಟ್ರಗಳು ಮುಂದಾದರೆ ಗಂಭೀರ ಪರಿಣಾಮ ಎದುರಿಸಬೇಕಾಗಿ ಬರಬಹುದು ಎಂದು ರಷ್ಯಾ ಎಚ್ಚರಿಕೆ ನೀಡಿರುವುದು| ಒಂದು ವೇಳೆ ಈ ದಾಳಿಗಳು ಮುಂದುವರಿದರೆ ಮೂರನೆಯ ವಿಶ್ವಯುದ್ದ ಎದುರಾಗುವ ಅಪಾಯದ ಕುರಿತು ವಿಶ್ವದ ಬಹುತೇಕ ಶಾಂತಿಪ್ರಿಯ ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿರುವುದರ ನಡುವೆ ಉಕ್ರೇನ್ ನಲ್ಲಿ ವಿಧ್ಯಾರ್ಥಿಗಳು ಸೇರಿದಂತೆ 20ಸಾವಿರಕ್ಕೂ ಹೆಚ್ಚು ಭಾರತೀಯರು ಅಪಾಯದಲ್ಲಿ ಸಿಲುಕಿಕೊಂಡಿದ್ದಾರೆ. ಈ ಸಮಯದಲ್ಲಿ ಹಾಗೆ ಸಿಲಿಕಿಹಾಕಿಕೊಂಡಿರುವ ಭಾರತದ ಪ್ರಜೆಗಳನ್ನು, ವಿಧ್ಯಾರ್ಥಿಗಳನ್ನು ರಕ್ಷಿಸುವುದು ಕೇಂದ್ರ ಸರ್ಕಾರದ ಮೊದಲ ಆಧ್ಯತೆಯಾಗಿರಬೇಕಿತ್ತು. ಆದರೆ ಪ್ರಧಾನಿ ಮೋದಿಯವರು ಈ ಕುರಿತು ಯಾವುದೇ ಕ್ರಮ ಕೈಗೊಳ್ಳದೇ ಚುನಾವಣಾ ರ‌್ಯಾಲಿಯಲ್ಲಿ ಭಾಗವಹಿಸುತ್ತಿರುವುದು ಅವರ ಪಕ್ಷದ ಐಟಿ ಸೆಲ್ ಆ 20ಸಾವಿರ ಜನರ ರಕ್ಷಣೆಗೆ ಮೋದಿಯವರಲ್ಲಿ ವಿನಂತಿಸದೆ ಮೋದಿ ವಿಶ್ವಗುರು ಎಂಬಂತೆ ತಿರುಚಿದ ಸುದ್ದಿಗಳನ್ನು ಹರಡುತ್ತಿರುವುದು ಇವರುಗಳ ಕಪಟತೆಯನ್ನು ಬಿಂಬಿಸುತ್ತದೆ.

Advertisement
Advertisement
Recent Posts
Advertisement